ಸುರರು ಕಿನ್ನರರು ಕಿಂಪುರುಷರೆಂಬವರನಾರು ಬಲ್ಲರು?
ಎನ್ನ ಚಿತ್ತವು ನಿಮ್ಮ ಮೇಲೆ, ಸಂಗಯ್ಯಾ;
ಎನ್ನ ಚಿತ್ತವು ನಿಮ್ಮ ಮೇಲೆ, ಲಿಂಗಯ್ಯಾ.
ಕೂಡಲಸಂಗಮದೇವಾ,
ಅನ್ಯವೆಂಬುದನರಿಯೆನಯ್ಯಾ.
Transliteration Suraru kinnararu kimpuruṣarembavaranāru ballaru?
Enna cittavu nim'ma mēle, saṅgayya;
enna cittavu nim'ma mēle, liṅgayya.
Kūḍalasaṅgamadēvā,
an'yavembudanariyenayyā.
Manuscript
English Translation 2 Who knows the angels, demigods,
And the musicians of the air?
My heart's on Thee alone,
O Saṅga Lord!
My heart's on Thee alone,
O Liṅga Lord!
O Kūḍala Saṅgama Lord,
I do not know what else there be!
Translated by: L M A Menezes, S M Angadi
Hindi Translation सुर किन्नर किंपुरुष को कौन जानता है?
मेरा मन तुम पर है संगमदेव
मेरा मन त्वल्लीन है लिंगदेव
मैं और कुछ नहीं जानता
कूडलसंगमदेव ॥
Translated by: Banakara K Gowdappa
Telugu Translation సురల కిన్నరుల కింపురుషలను వారి
నెవ్వరు చూచిరి; నా చిత్తము నీ మీదనే దేవా
నా చిత్తము నీ మీదనే శివా
అన్యమేమో! తెలుయనయ్యా సంగయ్యా!
Translated by: Dr. Badala Ramaiah
Tamil Translation சுரர், கின்னரர், கிம்புருஷர் என்போரை யாரறிவர்?
சங்கய்யனே, என் மனம் உம்மிடம்
சங்கய்யனே என் மனம் உம்மிடம்
கூடல சங்கம தேவனே வேறொன்றை அறியேனையனே.
Translated by: Smt. Kalyani Venkataraman, Chennai
Marathi Translation
सुरकिन्नर, किंपुरुषांना कोण जाणतो?
माझे चित्त तुमच्यावर आहे लिंगदेवा.
माझे चित्त तुमच्यावर आहे लिंगदेवा.
कूडलसंगमदेवा, दुसऱ्या कोणालाही जाणत नाही.
Translated by Shalini Sreeshaila Doddamani
ಶಬ್ದಾರ್ಥಗಳು ಕಿಂಪುರುಷ = ; ಕಿನ್ನರ = ; ಚಿತ್ತ = ; ಸುರ = ;
ಕನ್ನಡ ವ್ಯಾಖ್ಯಾನ ತಲೆ ಮಾನವರದಾಗಿ ಮೈ ಮೃಗವಾದವರು ಕಿನ್ನರರು, ತಲೆ ಮೃಗದ್ದಾಗಿ ಮೈ ಮಾನವರಾದವರು ಕಿಂಪುರುಷರು. ಹೀಗೆ ವಿವಿಧಾಕಾರದ ಯಕ್ಷರು ರಕ್ಷರು ಗಂಧರ್ವರು ವಿದ್ಯಾಧರರು ಅಪ್ಸರರು ಪಿಶಾಚರು ಗುಹ್ಯಕರು ಸಿದ್ಧರು ಭೂತಗಳು ಬೇತಾಳಗಳು-ಅತ್ತ ಅಚ್ಚದೇವತಾವರ್ಗಕ್ಕಾಗಲಿ, ಇತ್ತ ಅಚ್ಚ ಮಾನವ ವರ್ಗಕ್ಕಾಗಲಿ ಸೇರದ ಅತಿಮಾನವ ಅರೆದೈವಗಳು. ಈ ಕ್ಷುದ್ರ ದೇವತೆಗಳಿಗೆ ಮೂಢನಂಬಿಕೆಯ ಜನ ಪೂಜೆ ಸಲ್ಲಿಸುವರು.
ಆದರೆ ಬಸವಣ್ಣನವರು ತಾವು ಪೂಜಿಸುವುದು ಕೂಡಲ ಸಂಗಮದೇವರನ್ನು ಮಾತ್ರವೆಂದೂ-ಆ ಲಿಂಗದೇವರಲ್ಲೇ ಅವರ ಚಿತ್ತ ನಟ್ಟಿದೆಯೆಂದೂ-ಅನ್ಯದೈವವೊಂದೂ ಅವರಿಗೆ ತಿಳಿದೇ ಇಲ್ಲವೆಂದೂ ಹೇಳುತ್ತಿರುವರು.
ಜೈನರಲ್ಲಿ ಯಕ್ಷಯಕ್ಷಿಣಿಯರಿಗೆ ಪೂಜೆ ಸಲ್ಲಿಸುವುದು ಪ್ರಸಿದ್ಧವೇ ಇದೆ. ಭಾರತದ ಕಾಲಕ್ಕೂ ಗಂಧರ್ವರು ಅತಿಮಾನವರೆಂದು ಗಣನೆಗೊಂಡಿದ್ದರು. ಮನುಷ್ಯನು ಮಾಡಿದ ಪುಣ್ಯವಿಶೇಷದಿಂದ ಆಕಾಶಗಮನಾದಿ ಮಹಿಮೆಗಳನ್ನು ಪಡೆದು ವಿದ್ಯಾಧರನಾಗುವನೆಂಬುದು ಜೈನ ಪುರಾಣಗಳಿಂದ ತಿಳಿದುಬರುವುದು. ಕೇರಳ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಮುಂತಾದೆಡೆ ಜಾನಪದರಲ್ಲಿ ತುಂಬಿಕೊಂಡಿರುವ ನೃತ್ಯರಾಧನೆಗಳು ಈ ಭೂತಗಳನ್ನೂ ಬೇತಾಳಗಳನ್ನೂ ಕುರಿತುವೇ ಆಗಿವೆ.
ತಾನು ಪೂಜಿಸುವ ದೇವರು ಯಾವುದೋ ಅದರ ಗುಣಗಳನ್ನು ಅಳವಡಿಸಿಕೊಳ್ಳುವುದೇ ಭಕ್ತನು ಮಾಡುವ ಪೂಜೆಯ ಉದ್ದೇಶವಾದುದರಿಂದ-ಕ್ಷುದ್ರ ದೇವತೆಗಳನ್ನು ಬಿಟ್ಟು ಮಹಾದೇವನಾದ ಶಿವನೊಬ್ಬನಿಗೇ ಪೂಜೆ ಸಲ್ಲಿಸಬೇಕೆಂಬುದು ಬಸವಣ್ಣನವರು ಬೋಧಿಸಿದ ಆರಾಧನೆಯ ಮುಖ್ಯತತ್ತ್ವವಾಗಿದೆ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು