•  
  •  
  •  
  •  
Index   ವಚನ - 498    Search  
 
ಭಕ್ತನ ಶರಣಸ್ಥಲ - ನೆನಹು
ಎನಗೆ ನಿಮ್ಮ ನೆನಹಾದಾಗಲೆ ಉದಯ: ಎನಗೆ ನಿಮ್ಮ ಮರಹಾದಾಗಲೆ ಅಸ್ತಮಾನ! ಎನಗೆ ನಿಮ್ಮ ನೆನೆಹವೆ ಜೀವನ: ಎನಗೆ ನಿಮ್ಮ ನೆನಹವೆ ಪ್ರಾಣ, ಕಾಣಾ, ತಂದೇ, ಸ್ವಾಮಿ! ಎನ್ನ ಹೃದಯದಲ್ಲಿ ನಿಮ್ಮ ಚರಣದುಂಡಿಗೆಯನೊತ್ತಯ್ಯಾ: ವದನದಲ್ಲಿ ಷಡಕ್ಷರಿಯ ಬರೆಯಯ್ಯಾ, ಕೂಡಲಸಂಗಮದೇವಾ.
Transliteration Enage nim'ma nenapāgale udaya: Enage nim'ma marahādāgale astamāna! Enage nim'ma nenehave jīvana: Enage nim'ma nenahave prāṇa, kāṇā, tandē, svāmi! Enna hr̥dayadalli nim'ma caraṇaduṇḍigeyanottayyā: Vadanadalli ṣaḍakṣariya bareyayya, kūḍalasaṅgamadēvā.
Manuscript
Music Courtesy: Vachananjali Part -1 Sri Taralabalu Jagadguru Brihanmath Sirigere, Music: H K Narayana Singer: Kasthuri Shankar
English Translation 2 When I remember Thee is dawn to me, When I forget, my set of day! When I remember Thee is life to me, When I remember Thee is breath to me, My Father and my Lord! Print on my heart the impress of Thy feet! Write on my tongue Thy Six Syllables, O Kūḍala Saṅgama Lord! Translated by: L M A Menezes, S M Angadi
Hindi Translation मेरे लिए तव स्मरण ही उदय है; मेरे लिए तव विस्मरण ही अस्त है; मेरे लिए तव स्मरण ही जीवन है, मेरे लिए तव स्मरण ही प्राण है प्रभो मेरे हृदय में निज चरणों को अंकित करो स्वामी मेरे वदन पर षडक्षरी मंत्र लिख दो कूडलसंगमदेव ॥ Translated by: Banakara K Gowdappa
Telugu Translation నిను తలచినప్పుడే నాకు ప్రొద్దు పొడుచు; నిను మఱచి నప్పుడే నాకు ప్రొద్దు క్రుంకు; నిను తలచుటే బ్రతుకు నాకు నిను తలచుటే ప్రాణము నాకు అయ్యా! నీ కాలి ముద్ర నా యెద ముద్రింపుమయ్యా ప్రభూ! వదనమున షడక్షరి వ్రాయుమయ్యా! Translated by: Dr. Badala Ramaiah
Tamil Translation எனக்கு உம் நினைவு ஆகும்பொழுது உதயம் எனக்கு உம்மை மறக்கும்பொழுது அத்தமனம் எனக்கு உம்மை நினைவதே வாழ்வாகும். எனக்கு உம்மை நினைவதே உயிர், காணாய், தந்தையே சுவாமி, என் இயத்தில் உம் திருவடியின் முத்திரையை ஒற்றுவாய் ஐயனே முகத்தில் ஆறெழுத்தை எழுதுவாய் ஐயனே கூடல சங்கம தேவேன. Translated by: Smt. Kalyani Venkataraman, Chennai
Marathi Translation तुझ्या स्मरणात माझा साठला उदय तुझे विस्मरण हेचि मन अस्त होय तुझ स्मरण हेचि माझे पवित्र जीवन तुझे स्मरणचि जाण माझे पंचप्राण ऐका स्वामी माझे तुम्ही कूडलसंगमदेवा पदकमल चिन्हांकित हृदयी असावा वदनि षडाक्षरी मंत्र टाकि लिहोनिया संगशरण संगसहित संगअंग व्हावा अर्थ - हे प्रभो! तुझे स्मरण म्हणजेच माझा उदय आणि तुझे विस्मरण म्हणजेच माझा अस्त होय. तसेच तुझे स्मरण हेच माझे जीवन व तुझे स्मरण हेच माझे पंचप्राण जाणावे. हे कूडलसंगमदेवा! (परमेश्वरा) माझ्या हृदयात तुझे चरणकमल चिन्ह अंकीत करून सदैव माझ्या हृदयी निवास कर. ज्यामुळे मला अन्य कसलेही चिंतन घडणार नाही. तसेच माझ्या जिव्हेवर षडाक्षर मंत्र लिहून ठेव व अशा स्वरुपात माझे वदनी तूच भरुन राहा. ज्यामुळे माझी जिव्हा अन्य कसल्याही कार्यासाठी उरणार नाही. Translated by Rajendra Jirobe, Published by V B Patil, Hirabaug, Chembur, Mumbai, 1983 मला तुमचे स्मरण हाच उदय आहे. मला तुमचे विस्मरण हाच अस्त आहे. मला तुमचे स्मरण हेच जीवन आहे. मला तुमचे स्मरण हेच प्राण आहे, पहा पिता. प्रभू मम हृदयी तुमचे चरणचिन्ह उमटवावे देवा. वदनात षडक्षरी लिहावी देवा कूडलसंगमदेवा. Translated by Shalini Sreeshaila Doddamani
ಶಬ್ದಾರ್ಥಗಳು ಅಸ್ತಮಾನ = ಮುಳುಗುವುದು; ಉಂಡಿಗೆ = ; ಉದಯ = ; ನೆನಪು = ; ಮರಹು = ; ವದನ = ; ಷಡಕ್ಷರಿ = ;
ಕನ್ನಡ ವ್ಯಾಖ್ಯಾನ ಸೂರ್ಯೋದಯವಾಯಿತೋ ಹೊಟ್ಟೆಯ ಹಸಿವು, ಸೂರ್ಯಸ್ತವಾಯಿತೋ ಕಾಮದ ಹಸಿವು-ಬೆಳಗಿಂದ ಬೈಗಿನವರೆಗೆ, ಬೈಗಿಂದ ಬೆಳಗಿನವರೆಗೆ ಕಾಯವಿಡಿದವರಿಗೆ ಹಸಿವು ತೃಷೆ ಕಾಮಲೋಭದಲ್ಲೇ ಕಾಲ ಕಳೆದುಹೋಗುತ್ತದೆ. ಬಸವಣ್ಣನವರಿಗಾದರೋ-ಶಿವಧ್ಯಾನವಾದರೆ ಬೆಳಗು ಹರಿದಂತೆ ಮನೋಹರ, ಶಿವಧ್ಯಾನ ನಿಂತರ ಕತ್ತಲು ಕವಿದಂತೆ ಬಲು ಭಯಂಕರ. ಅವರಿಗೆ ಕೂಡಲ ಸಂಗಮದೇವನು ಒಲಿವನೋ ಒಲಿಯನೋ ಎಂಬುದೇ ಚಿಂತೆ-ಅದೇ ಅವರ ಜೀವನ ಶೈಲಿ, ಪ್ರಾಣದ ಜೀವಾಳ. ಈ ಗಾಢವಾದ ಶಿವಭಾವಸ್ಥಿತಿ ತಮ್ಮಲ್ಲಿ ಮತ್ತಷ್ಟು ಗಡುತರವಾಗಿ ನೆಲೆಗೊಳ್ಳುವಂತಾಗಲು-ತಮ್ಮ ಎದೆಯ ಮೇಲೆ ಶಿವಪಾದಾಂಕಿತವನ್ನು ಮುದ್ರೆಯೊತ್ತಿ, (ನಾಲಗೆಯ ಮೇಲೆ ಅಥವಾ) ಮುಖದ ಮೇಲೆ ಓಂ ನಮಶ್ಶಿವಾಯವೆಂಬ ಶಿವಮಂತ್ರಾಕ್ಷರಗಳನ್ನು ಬರೆಯಬೇಕೆಂದು-ತಾವೊಂದು ಪಶುವೆಂಬಂತೆ-ಪಶುಪತಿಯಾದ ಶಿವನನ್ನು ಪ್ರಾರ್ಥಿಸುತ್ತಿರುವರು. ನೋಡಿ ವಚನ-84,85,86.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು