•  
  •  
  •  
  •  
Index   ವಚನ - 499    Search  
 
ಭಕ್ತನ ಶರಣಸ್ಥಲ - ನಾದಬೃಹ್ಮ
ಎನ್ನ ಕಾಯವ ದಂಡಿಗೆಯ ಮಾಡಯ್ಯಾ; ಎನ್ನ ಶಿರವ ಸೋರೆಯ ಮಾಡಯ್ಯಾ; ಎನ್ನ ನರವ ತಂತಿಯ ಮಾಡಯ್ಯಾ, ಎನ್ನ ಬೆರಳ ಕಡ್ಡಿಯ ಮಾಡಯ್ಯಾ; ಬತ್ತೀಸ ರಾಗವ ಹಾಡಯ್ಯಾ, ಉರದಲೊತ್ತಿ ಬಾರಿಸು, ಕೂಡಲಸಂಗಮದೇವಾ.
Transliteration Enna kāyava daṇḍigeya māḍayya; enna śirava sōreya māḍayya; enna narava tantiya māḍayya, enna beraḷa kaḍḍiya māḍayya; battīsa rāgava hāḍayya, uradalotti bārisu, kūḍalasaṅgamadēvā.
Manuscript
Music Courtesy:
English Translation 2 Make of my body the beam of a lute of my head the sounding gourd of my nerves the strings of my fingers the plucking rods.

Translated by: A K Ramanujan
Book Name: Speaking Of Siva
Publisher: Penguin Books
----------------------------------
Clutch me close and play your thirty-two songs O lord of the meeting rivers ! Make of my body, Lord, the pole; Make of my head, the gourd; Make of my nerves the wires, O Lord, And of my fingers the plectrum make; Intone Thy two-and-thirty notes; Press my heart and play, O Kūḍala Saṅgama Lord! Translated by: L M A Menezes, S M Angadi

Hindi Translation स्वामी मेरी देह को डाँड बनाओ, मेरे शिर को तूँबा बनाओ, मेरी स्नायु को तंत्रि बनाओ, मेरी उँगली को मिजराब बनाओ, बत्तीस राग गाओ स्वामी मेरा उर दबाकर बजाओ कूडलसंगमदेव ॥ Translated by: Banakara K Gowdappa
Telugu Translation నాకాయమును దండిని సేయుమయ్యా నాశిరమును కాయను సేయుమయ్యా నానరము తంతిని సేయుమయ్యా నావ్రేలు కడ్డిని సేయుమయ్యా బత్తీశరాగముల పాడుమయ్యా ఎదనొ త్తి మ్రోయింపుమయ్యా సంగయ్యా! Translated by: Dr. Badala Ramaiah
Tamil Translation என் உடலைத் தண்டாக்குவாய் ஐயனே என் தலையை சுரையாக்குவாய் ஐயனே என் நரம்பைத் தந்தியாக்குவாய் ஐயனே என் விரலைக் குச்சியாக்குவாய் ஐயனே முப்பத்து இரண்டு பண்களாக்குவாய் ஐயனே மார்பில் ஒற்றி இசைப்பாய், கூடல சங்கமதேவனே. Translated by: Smt. Kalyani Venkataraman, Chennai
Marathi Translation माझ्या शरीराचा, दांडा तो करावा भोपळा करावा, मस्तकाचा माझिया नाड्याचे करावेत तंतू बोटे काडी कर तू, छेडणारे कूडलसंगमदेवा ! वीणा तो छातीस लावूनी बत्तीस, आळवावे अर्थ - हे नश्वर शरीर ईश्वराला समर्पण झाल्याविणा सार्थक होणार नाही. वाया जाणारे हे शरीर देववाणीला श्रुती होण्यास साधन व्हावे अशी महात्मा बसवेश्वरांची परमेश्वर चरणी प्रार्थना आहे. म्हणून ते आपल्या वचनात म्हणतात की, देवा! माझ्या देहाचा दांडा करावा. माझ्या डोक्यास त्या विण्याचा भोपळा करावा. माझ्या शरीरातील नाड्यांच्या छेडण्यासाठी तारा म्हणून उपयोग करावा. माझ्या हाताच्या बोटांची काटकं काडी करावी आणि तो वीणा आपल्या छातीस लावून बत्तीस राग आळवावेत. अशा तऱ्हेने माझे शरीर तुझ्या हातात वीणा होऊन राहू दे. प्रभूच्या करकमलातील वीणा होऊन राहण्यातच सर्वस्व समर्पण होय व सर्वसमर्पणाशिवाय देहरुपी वीणा नाद छेडणार नाही. नाद न देणारी वीणा इतरांना आनंद देऊ शकणार नाहीच. शिवाय स्वतःही समाधानी होणार नाही. Translated by Rajendra Jirobe, Published by V B Patil, Hirabaug, Chembur, Mumbai, 1983 माझ्या देहाचा दांडा करावा देवा. माझ्या शिराचा भोपळा करावा देवा. माझ्या शिरांच्या तारा कराव्या देवा. माझी बोटे वाजविणाऱ्या काड्या कराव्या देवा. कूडलसंगमदेवा, बत्तीस राग गावे, पोटाला लावून वाजवावे. Translated by Shalini Sreeshaila Doddamani
Urdu Translation جسم کی ڈانڈ تواس سرکا بنادو تونبہ تارکے واسطے حاضر ہیں مری ساری رگیں اوریہ انگلیاں موزوں ہیں برائے مضراب یوں بناکرمرےاعضا کا حسیں تنبورہ تم مری جان مرے کوڈلا سنگم دیوا اپنےسینےسےلگا کراِسےہرلمحہ بجاؤ اورپھرجھوم کربتیس سُروں میں گاؤ Translated by: Hameed Almas
ಶಬ್ದಾರ್ಥಗಳು ಉರದ = ; ಕಾಯ = ; ದಂಡಿಗೆ = ; ನರ = ; ಬತ್ತೀಸ = ; ರಾಗ = ; ಸೋರೆ = ;
ಕನ್ನಡ ವ್ಯಾಖ್ಯಾನ ದಂಡಿಗೆ ಎಂಬ ಒಂದು ತಂತೀವಾದ್ಯದ ಕಲ್ಪನೆ ಈ ವಚನದಲ್ಲಿದೆ : ಒಂದು (ಮುಂಡದುದ್ದ) ದಂಡ. ಅದರ ಮೇಲ್ತುದಿಗೆ (ತಲೆಗಾತ್ರದ) ಒಂದು ಸೋರೆಯ ಬುರುಡೆ, ಉದ್ದಕ್ಕೂ ಎಳೆದಿರುವ ತಂತಿ(ಗಳು?). ಇದನ್ನು ಎದೆಗೆ ಅವಚಿಕೊಂಡು (ಬೆರಳುದ್ದದ) ಕಡ್ಡಿ(ವಾದನದಂಡ)ದಿಂದ ಚಿಮ್ಮಿ ಬಾರಿಸುತ್ತ ಮೂವತ್ತೆರಡೂ ರಾಗಗಳನ್ನು ನುಡಿಸಬಹುದು. ಈ ಪ್ರಕಾರವಾದ ತಂತೀವಾದ್ಯವು ಕಿನ್ನರಿಯೋ ತುಂಬುರು ವೀಣೆಯೋ ಸಾರಂಗವೀಣೆಯೊ (ಮತ್ತಾವುದೋ) ತಿಳಿಯದು. ಈ ವೀಣೆಯ ದಂಡವನ್ನು ದೇಹಕ್ಕೂ, ಬುರುಡೆಯನ್ನು ತಲೆಗೂ, ತಂತಿಯನ್ನು ನರಕ್ಕೂ, ಬಾರಿಸುವ ಕಡ್ಡಿಯನ್ನು ಬೆರಳಿಗೂ ಹೋಲಿಸಲಾಗಿದೆ. ಒಟ್ಟಿನಲ್ಲಿ ಶಿವನ ಕೈಯಲ್ಲಿ ತಮ್ಮ ದೇಹವೊಂದು ದಂಡಿಗೆಯಾಗಲೆಂದು, ಅದನ್ನವನು ಎದೆಗವಚಿ ಬಾರಿಸಿದಾಗ-ಅಪಸ್ವರ ಹೊರಡದೆ ಇಂಚರ ಹೊಮ್ಮಿ ಶ್ರೋತೃಗಳಿಗೆ ಸುಖವಾಗುವಂತಾಗಲೆಂದೂ ಹಾರೈಸುತ್ತಿರುವರು ಬಸವಣ್ಣನವರು. ನಾನು ವೀಣೆ ಶಿವನು ವೈಣಿಕನೆಂಬ ಈ ಶಿವಸಮರ್ಪಿತ ಜೀವನದ ಗತಿಗಮಕವು ಸಾಮಾನ್ಯರಲ್ಲಿಯೂ ಅಸಾಮಾನ್ಯವನ್ನು ಮೊಳಗಿಸುವಂಥದು. ಬಸವಣ್ಣನವರು ಉತ್ತಮವಾದ ಒಬ್ಬ ವಾಗ್ಗೇಯಕಾರರೂ ಹೌದು. ಅವರು ಯಾವ ವಾದ್ಯವನ್ನು ಅತಿ ಪ್ರಿಯವಾಗಿ ಪರಿಣತಿಯಿಂದ ಬಳಸುತ್ತಿದ್ದರೆಂಬುದನ್ನೂ ಈ ವಚನದಿಂದ ಊಹಿಸಬಹುದು. ವಿ: ಬತ್ತೀಸರಾಗ: ನಾಟಿ ಬೌಳಿ ಕಾಂಬೋದಿ ಭೈರವಿ ಗುಂಡಕ್ರೀ ಮಲಹರಿ ಧನ್ಯಾಸಿ ಆಹರಿ ಗೌಳ ಶಂಕರಾಭರಣ ದೇಶಾಕ್ಷ ಆರಭಿ ಮುಂತಾದ ಮೂವತ್ತೆರಡು ರಾಗಗಳು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು