•  
  •  
  •  
  •  
Index   ವಚನ - 500    Search  
 
ಭಕ್ತನ ಶರಣಸ್ಥಲ - ಭಾವಶುದ್ಧಿ
ಕುರುಳು ಬೆರಳು ಮುಡುಹು ಮುಂಬಲ್ಲ ಕೊಳ್ಳಾ; ನಿರಿಯನಿಕ್ಕಿ ದಾಂಟಿದರೆ ಅಂತೆನ್ನ ನಂಬಾ! ಪರಪುರುಷರ ಮುಖವ ನೋಡದಂತೆ ಮಾಡಾ; ಬಳಿಕ ನೀ ಹೇಂಗಿರಿಸಿದಂತೆ ಇರಿಸಾ! ಎನ್ನುರದಲ್ಲಿ ಕೂಡಲಸಂಗಯ್ಯನೆಂದು ಬರೆಯಾ: ಹರಿಬ್ರಹ್ಮರಿಗೆರಗದಂತೆ ಬಳಿನೀರನೆರೆಯಾ!
Transliteration Kuruḷu beraḷu muḍ'̔uhu mumballa koḷḷā; niriyanikki dāṇṭidare antenna nambā! Parapuruṣara mukhava nōḍadante māḍā; baḷika nī hēṅgirisidante irisā! Ennuradalli kūḍalasaṅgayyanendu bareya: Haribrahmarigeragadante baḷinīranereyā!
Manuscript
English Translation 2 Seize my hair, fingers, shoulders, seize My front teeth too; You believe me!.. Only when I loosen my waist-band and advance. Make me that I do not look At face of any other man; Then make me go as Thou Would'st have me go; inscribe 'Kūḍala Saṅga' on my breast; Pour ritual water upon me, That I refuse to know Hari and Brahma! Translated by: L M A Menezes, S M Angadi
Hindi Translation विश्वास करो, यदि मैं वस्त्र-विन्यास कर बाहर जाऊँ तो मेरे केश, उँगलियाँ, भुजाँए, आगे के दांत खींच लो ऐसा करो मैं पर पुरुषों के मुख न देखूँ बाद में तुम अपने इच्छानुसार रखो मेरे उर पर कूडलसंगमेश लिखो मंत्र-जल छिढकाओ जिससे हरि ब्रह्म को नमन न करूँ ॥ Translated by: Banakara K Gowdappa
Telugu Translation కురులు (వేలు మూపు పై పెదవి నందుకొనుమా చెక్కిన నెఱులు చెదర నందాక నమ్ముమా నను పరపురుషుని మొగమెత్తి చూడనట్లు చేయుమా నీ యిచ్చవచ్చినటు నిల్పుకొనుమా నను స్వామీ నా ఱొమ్ముపై ‘‘సంగయ్య’’ యని వ్రాయుమా హరి విరించులు కన్నెత్తి చూడనట్లు జలము ప్రోక్షింపుమా కూడల సంగయ్యా! Translated by: Dr. Badala Ramaiah
Tamil Translation கூந்தல், விரல், தோள், முன்பல்லைக் கொள்ளான் மடிப்புள்ள துணியை விரித்து தாண்டினன் என நம்பான் பிற ஆடவரின் முகத்தைக் காணாதவாறு செய்வாய் பிறகு நீ எந்த முறையிலாவது இருத்துவாய் என் மார்பில் கூடல சங்கமதேவன் என எழுதான் ஹரி பிரம்மரை வணங்காதவாறு மந்திர நீரை இறையான் ஐயனே. Translated by: Smt. Kalyani Venkataraman, Chennai
Marathi Translation केस, बोटे, खांदे, पुढचे दात घ्यावे. ध्येयप्राप्ती केली तर विश्वास ठेवावे. परपुरुषाचे मुख पाहू नये असे करावे. तुम्हाला हवे तसे ठेवावे. माझ्या हृदयी `कूडलसंगमदेवा` नाव लिहावे. हरिब्रह्मासमोर नतमस्तक होऊ नये म्हणून ज्ञानानंद जल शिंपडावे. Translated by Shalini Sreeshaila Doddamani
ಶಬ್ದಾರ್ಥಗಳು ಎರಗು = ; ಕುರುಳು = ; ನಿರಿ = ; ಬಳಿ = ; ಮುಡುಹು = ; ಹರಿ = ; ಹೇಂಗಿಂಸು = ;
ಕನ್ನಡ ವ್ಯಾಖ್ಯಾನ “ನನ್ನ ಸುಂದರವಾದ ಕೂದಲು, ನೀಳವಾದ ಬೆರಳು, ನಯವಾದ ಹೆಗಲು, ಮುತ್ತಿನಂಥ ಮುಂದಣ ಹಲ್ಲು-ಎಲ್ಲಾ ನಿನಗೆ ಮೀಸಲು. ಈ ಮಾತನ್ನು ನಾನು “ನಿರಿಯಿಕ್ಕಿದಾಂಟಿ” ಪ್ರಮಾಣಮಾಡಿ ಹೇಳುತ್ತೇನೆ-ಆಗಲಾದರೂ ನೀನು ನಂಬುವೆಯಲ್ಲಾ ? ಪರಪುರುಷರ ಮುಖವನ್ನು ನಾನು ಕಣ್ಣೆತ್ತಿಯೂ ನೋಡದಂತೆ ನೀನೇ ನನ್ನನ್ನು ಜೋಪಾನವಾಗಿಸು-ನೀನು ಹೇಗಿರಿಸಿದರೆ ಹಾಗಿರುತ್ತೇನೆ ನಾನು. ನನ್ನ ಎದೆಯ ಮೇಲೆ “ಕೂಡಲ ಸಂಗಯ್ಯ[ನ ಧರ್ಮಪತ್ನಿಯಿವಳು]” ಎಂದು ಹಚ್ಚೆ ಹೊಯ್ದು ಬರೆದುಬಿಡು. ಹರಿಬ್ರಹ್ಮರೆಂಬ ಅನ್ಯಪುರುಷರಿಗೆ ನನ್ನ ಮನ ಎರಗದಂತೆ-ಬಳಿನೀರನ್ನು ಕುಡಿಸಿ-ಪ್ರಮಾಣಮಾಡಿಸು”-ಎಂಬುದು ಈ ವಚನದ ಸರಳಾನುವಾದ. ಶಿವೇತರವಾದ ಯಾವ ದೈವಕ್ಕೂ ಎರಗದ ಸಂಕಲ್ಪ ತಮ್ಮದೆಂದೂ-ಆ ತಮ್ಮ ಸಂಕಲ್ಪದ ಸಾಚಾತನದ ಬಗ್ಗೆ ಶಿವನಿಗೆ ನಂಬಿಕೆಯಿಲ್ಲವಾದರೆ ಅವಕ್ಕೆ ತಕ್ಕ ಜೋಪಾನವನ್ನು ಆತನು ತನ್ನಿಂದ ಆಣೆ ಮುಂತಾದುವನ್ನು ಇಡಿಸುವುದರ ಮೂಲಕ ಮಾಡಬಹುದೆಂದೂ-ಬಸವಣ್ಣನವರು ಕೂಡಲ ಸಂಗಮೇಶ್ವರನಿಗೆ ಮನವರಿಕೆ ಮಾಡಿಕೊಡುತ್ತಿರುವರು. ಈ ವಚನದುದ್ದಕ್ಕೂ ಇರುವ ಕೆಲವು ಸಾಂಸ್ಕೃತಿಕ ಸಂದರ್ಭಗಳು ನಮಗೆ ಪರಿಚಯವಾಗಬೇಕಾಗಿದೆ : ಅವು ಈ ಮುಂದಿನಂತಿವೆ : (1) ಕುರುಳು ಬೆರಳು ಮುಡುಹು ಮುಂಬಲ್ಲ ಕೊಳ್ಳಾ. (2) ನಿರಿಯನಿಕ್ಕಿ ದಾಂಟಿದರೆ ಅಂತೆನ್ನ ನಂಬಾ (3) ಎನ್ನ ಉರದಲ್ಲಿ ಕೂಡಲ ಸಂಗಯ್ಯನೆಂದು ಬರೆಯಾ (4) ಹರಿಬ್ರಹ್ಮರಿಗೆರಗದಂತೆ ಬಳಿನೀರನೆರೆಯಾ. ಇವಕ್ಕೆ ಈ ಮುಂದಿನಂತೆ ಸ್ವಲ್ಪ ವಿವರವನ್ನು ಕೊಡಬಹುದು : (1) ದೇವರಿಗೆ ಆತ್ಮ ಸಮರ್ಪಣ ಸಂಕೇತವಾಗಿ ಮುಡಿಯನ್ನು ಕೊಡುವುದು ಇಂದಿಗೂ ಉಳಿದುಬಂದಿದೆಯಾದರೂ-ಹಿಂದೆ ಬೆರಳನ್ನು ಕತ್ತರಿಸಿ ಕೊಡುವುದು, ಮುಂದಣ ಹಲ್ಲನ್ನು ಕಿತ್ತುಕೊಡುವುದು [ಭುಜದ ಮೇಲೆ ತಪ್ತಾಂಕನ ಮಾಡಿಸಿಕೊಳ್ಳುವುದು] ರೂಢಿಯಲ್ಲಿತ್ತಾಗಬಹುದು. (2) ದೇವ-ದೇವತೆಗಳ ಉಟ್ಟ ಬಟ್ಟೆಯನ್ನು ಅಡ್ಡಹಾಸಿ-ತಾನು ಅಪರಾಧಿಯಲ್ಲವೆಂದು ಆಣೆಯಿಡುತ್ತ ಆ ಬಟ್ಟೆಯನ್ನು ದಾಟುವುದು (3) ಗಂಡಸರು ತಮ್ಮ ಹೆಂಡಿರ ಎದೆಯ ಮೇಲೆ ತಮ್ಮ ಹೆಸರನ್ನು ಹಚ್ಚೆಹೊಯ್ಸಿ ಬರೆಸುತ್ತಿದ್ದರು-ಪರಪುರುಷರು ಅವಳನ್ನು ಆಲಿಂಗಿಸಲು ಬಂದಾಗ ಅದು ಅವರಿಗೆ ಒಂದು ಎಚ್ಚರಿಕೆಯ ಸಾವಾಲಾಗಿರಲೆಂಬಂತೆ ! (4) ನಿಷಿದ್ಧವಾದೊಂದು ಕೃತ್ಯವನ್ನು ಮಾಡುವುದಿಲ್ಲವೆಂದು ದೇವರ ಮೇಲೆ ಆಣೆಯಿಟ್ಟುಕೊಂಡು ಪೂಜಾರಿ ಕೊಟ್ಟ ತೀರ್ಥವನ್ನು ಕುಡಿಯುವುದು-ಎಂದು ಮುಂತಾಗಿ. ಈ ಸಾಂಸ್ಕೃತಿಕ ಸಂದರ್ಭಗಳ ಜಟಿಲತೆಯನ್ನು ಇನ್ನೂ ಸ್ವಲ್ಪ ಸಡಿಲಗೊಳಿಸುವ ಈ ಮುಂದಿನ ಉಲ್ಲೇಖವನ್ನೂ ಗಮನಿಸಿರಿ. ಅದರ ಸಂದರ್ಭ : ಯಾವ ದೇವರ ಮೇಲಾಗಲಿ ಏನಾದರೂ ಆಣೆಯಿಟ್ಟು ಪ್ರಮಾಣಮಾಡುವುದರಿಂದ-ಏನೂ ಅಪಾಯವಾಗುವುದಿಲ್ಲವೆಂದೂ, ಆದ್ದರಿಂದ ಸ್ವಲ್ಪವೂ ಹಿಂಜರಿಯದೆ ಆಣೆ ಪ್ರಮಾಣಮಾಡಿ ವಿಟರಿಂದ ದುಡ್ಡು ಕೀಳಬೇಕೆಂದೂ ತನ್ನ ಹರೆಯದ ಮಗಳಿಗೆ ಮುದಿಸೂಳೆಗುಂಟಣಿಯೊಬ್ಬಳು ಬುದ್ಧಿ ಹೇಳುತ್ತಿರುವ ಮಾತು ಈ ಮುಂದಿನಂತಿದೆ : “ಆಣೆಯಿಟ್ಟು ದಾಟಿದರೆ ಉಟ್ಟ ನಿರಿ ಕಚ್ಚುವುದಿಲ್ಲ, ಆಣೆಯಿಡುತ್ತ ದೇವರ ಪ್ರತಿಮೆಯನ್ನು ಮುಟ್ಟಿದರೆ ಬೆರಳು ಅದಕ್ಕೆ ಬಿಡದೆ ಕಚ್ಚಿಕೊಳ್ಳುವುದಿಲ್ಲ, ಆಣೆಯಿಟ್ಟು ಬಳಿನೀರನ್ನು ಕುಡಿದರೆ ನಿನ್ನ ಹೊಟ್ಟೆಯೇನೂ ಕತ್ತರಿಸಿಹೋಗುವುದಿಲ್ಲ, ಆಣೆಯಿಡುತ್ತ ನೆಲವನ್ನು ಅಪ್ಪಿಕೊಂಡರೆ ಆ ನೆಲವೇನೂ ನಿನ್ನನ್ನೂ ನುಂಗುವುದಿಲ್ಲ, [ನಾನು ಇದನ್ನು ಮಾಡಿದ್ದೆ ಆದರೆ]ತಾಯನ್ನು ಕೊಂದಂತೆ ಎಂದರೆ ತಾಯಾದ ನಾನು ಸಾಯುವೆನೇನು? [ನಾನು ಇದನ್ನು ಮಾಡಿದ್ದೇ ಆದರೆ] ನಾನು ನನ್ನ ಅಣ್ಣತಮ್ಮಂದಿರ ಮೇಲೆ ಕಣ್ಣಿಟ್ಟವಳೆಂದರೆ ಕಣ್ಣಿಟ್ಟಂತಾಗುವುದೇನು? ಏನಾಗಲಿ ಸಿಕ್ಕಾಬಟ್ಟೆ ಆಣೆಯಿಟ್ಟು ಬಂದವನ ಬಾಯಿಮುಚ್ಚಿಸಿ ನಂಬಿಸಿ ಅವನಿಂದ ಹಣ ಕೀಳುವುದನ್ನು ಕಲಿ”(ನೋಡಿ ಹರಿಶ್ಚಂದ್ರಕಾವ್ಯ 4-25)

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು