•  
  •  
  •  
  •  
Index   ವಚನ - 501    Search  
 
ಭಕ್ತನ ಶರಣಸ್ಥಲ - ಮನಸ್ಸು
ಕಂಡ ಕನಸು, ನಿಧಾನವ ಕಂಡೆನಯ್ಯಾ: ಬಿಡಲಾರದ ನಿಧಾನವ ಕಂಡೆನಯ್ಯಾ; ಕೂಡಲಸಂಗಯ್ಯನೆಂಬ ನಿಧಾನವ ಕಂಡು ಬಿಡಲಾರೆನಯ್ಯಾ.
Transliteration Kaṇḍa kanasu, nidhānava kaṇḍenayyā: Biḍalārada nidhānava kaṇḍenayyā; kūḍalasaṅgayyanemba nidhānava kaṇḍu biḍalārenayyā.
Manuscript
English Translation 2 I;ve found the treasure that I saw in dream! I've found the treasure that must not be lost! Now that I found The treasure Kūḍala Saṅga, I cannot let it go! Translated by: L M A Menezes, S M Angadi
Hindi Translation स्वप्न में दृष्ट निधि मैंने पाई, अत्याज्य निधि मैंने पाई कूडलसंगमदेव जैसे निधि देख मैं त्याग नहीं सकता ॥ Translated by: Banakara K Gowdappa
Telugu Translation కంటి కలగంటి పెన్నిధి కంటినయ్యా విడలేను పెన్నిథి విడలేనయ్యా, సంగయ్యయను పెన్నిధిగంటి నీ గంటు విడలేనుకదయ్యా! Translated by: Dr. Badala Ramaiah
Tamil Translation கண்ட கனவு புதையலைக் கண்டேன் ஐயனே விடக்கூடாத புதையலைக் கண்டேன் கூடல சங்கம தேவன் எனும் புதையலைக் கண்டு விடுவேனோ ஐயனே! Translated by: Smt. Kalyani Venkataraman, Chennai
Marathi Translation गुप्तनिधी पाहिला मी माझिया स्वप्नात सोडू ये न गुप्त ऐसी सत्यता तयात कूडलसंगमदेव रूपी गुप्त निधी सत्य हाचि डोळा पाहिले मी कांती ती तयात अर्थ - हे प्रभो! मला स्वप्नात गुप्त निधीचे दर्शन घडले. आणि त्यातील कधीही सोडता न येणारी सत्यरुपी गुप्तता मी माझ्या या डोळ्यांनी पाहिली म्हणून कूडलसंगम देवरूपी गुप्तनिधीची साक्ष मला पटली. त्यातील ज्ञानविज्ञानरुप कांतीमान ते स्वरूप पाहून मी पुलकीत व पावन झालो. Translated by Rajendra Jirobe, Published by V B Patil, Hirabaug, Chembur, Mumbai, 1983 स्वप्नात गुप्तनिधी पाहिला देवा. सोडू नये अशी संपत्ती पाहिली देवा कूडलसंगमदेवरुपी गुप्तनिधी पाहून सोडणार नाही देवा. Translated by Shalini Sreeshaila Doddamani
ಶಬ್ದಾರ್ಥಗಳು ನಿಧಾನ = ;
ಕನ್ನಡ ವ್ಯಾಖ್ಯಾನ ಕನಸಿನಲ್ಲಿ ಕಂಡ ನಿಧಿಯನ್ನು ನಿಜವಾಗಿಯೂ ಕಂಡೆ, ಕಂಡು ಬಿಡಲಾಗದ ನಿಧಿಯನ್ನು ಕಂಡೆ. ಕೂಡಲ ಸಂಗಯ್ಯನೆಂಬ ನಿಧಿಯನ್ನು ಕಂಡ ಮೇಲಿನ್ನು ಬಿಡಲಾರೆನೆಂದು-ಬಸವಣ್ಣನವರು ಬಾಗೇವಾಡಿಯಿಂದ ಕೂಡಲ ಸಂಗಮಕ್ಕೆ ಹೋಗಿ ಆ ಸಂಗಮೇಶ್ವರಲಿಂಗವನ್ನು ಕಂಡು ಪುಲಕಿತರಾಗಿ ಹಾಡಿದ ವಚನವಿದು. ಹೀಗೆ ತಮ್ಮ ಹದಿನಾರರ ತಾರುಣ್ಯದಲ್ಲೇ ಕೂಡಲ ಸಂಗಮನಾಥನನ್ನು ಕಂಡ ಬಸವಣ್ಣನವರು-ಅವನ ಸಾನ್ನಿಧ್ಯದಲ್ಳೇ ಜೀವನಪರ್ಯಂತ ಇದ್ದುಬಿಡುವ ರಭಸದಲ್ಲಿದ್ದರು. ಆದರೆ ಆ ದೇವರೇ ಬಸವಣ್ಣನವರ ಕನಸಿನಲ್ಲಿ ಬಂದು ಕಲ್ಯಾಣಕ್ಕೆ ಹೋಗಬೇಕೆಂದು ಅಪ್ಪಣೆಕೊಟ್ಟಾಗ-ಅವರು ಅಲ್ಲಿಂದ ಕಲ್ಯಾಣಕ್ಕೆ ಹೊರಡಲು ಏನೊಂದು ಅಗಲಿಕೆಯ ನೋವನ್ನು ತಿಂದರೆಂಬುದನ್ನು ಹರಿಹರನು ತನ್ನ ಬಸವರಾಜದೇವರ ರಗಳೆಯ ನಾಲ್ಕನೇ ಸ್ಥಳದಲ್ಲಿ ಕರುಳು ಹಿಂಡುವಂತೆ ವರ್ಣಿಸಿರುವನು. ಬಸವಣ್ಣನವರು ಹೀಗೆ ಮೊದಲನೇ ಬಾರಿಗೆ ಕೂಡಲ ಸಂಗಮಕ್ಕೆ ಬರುವ ಮುನ್ನವೇ, ತಮ್ಮ ಏಳನೇ ವಯಸ್ಸಿಗಿಂತ ಹಿಂದೆಯೇ ಕೂಡಲ ಸಂಗಮಕ್ಷೇತ್ರದ ಬಗ್ಗೆ ದಿವ್ಯ ಕಲ್ಪನೆಗಳನ್ನು ಇಟ್ಟುಕೊಂಡಿದ್ದರಾಗಬಹುದು. ಆ ಅವಧಿಯಲ್ಲೇ ಕೂಡಲ ಸಂಗಮಕ್ಕೆ ಬಾರೆಂದು ಆ ದೇವರು ಬಸವಣ್ಣನವರನ್ನು ಕನಸಿನಲ್ಲಿ ಕಾಣಿಸಿಕೊಂಡು ಕರೆದಿದ್ದನಾಗಬಹುದು. ಆದುದರಿಂದಲೇ ಈ ವಚನದಲ್ಲಿ ಬರುವ-“ಕಂಡ ಕನಸು ನಿಧಾನವ ಕಂಡೆನಯ್ಯ”ಎಂಬ ಮಾತು ಚಾರಿತ್ರಿಕವಾಗಿ ದಾಖಲಾಗಬೇಕಾದ ಮಾತಾಗಿದೆ. ಹೀಗೆ ಬಾಗೇವಾಡಿಯಿಂದ ಕೂಡಲ ಸಂಗಮಕ್ಕೆ, ಆ ಕೂಡಲ ಸಂಗಮದಿಂದ ಕಲ್ಯಾಣಕ್ಕೆ ಬಸವಣ್ಣನವರು ಹೋದುದು ಶಿವನ ಪ್ರೇರಣೆಯಿಂದಲೇ ಆಗಿ-ಅವರು ತಮ್ಮ ಅಪರ ವಯಸ್ಸಿನಲ್ಲಿ ಆ ಕಲ್ಯಾಣದಿಂದ ಕೂಡಲ ಸಂಗಮಕ್ಕೆ ಮರಳಿ ಹೋದುದೂ ಅಂಥ ಮತ್ತೊಂದು ಶಿವಪ್ರೇರಣೆಯಿಂದಲೇ ಹೊರತು-ಹಲವರು ಕಥೆ ಕಟ್ಟಿರುವಂತೆ ಭಯಭೀತಿ ಕೋಪತಾಪ ಪಶ್ಚಾತ್ತಾಪದಿಂದಲ್ಲ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು