ಹೊನ್ನ ಹಾವುಗೆಯ ಮೆಟ್ಟಿದವನ, ಮಿಡಿಮುಟ್ಟಿದ ಕೆಂಜೆಡೆಯವನ;
ಮೈಯಲ್ಲಿ ವಿಭೂತಿಯ ಧರಿಸಿದವನ, ಕರದಲ್ಲಿ ಕಪಾಲವ ಪಿಡಿದವನ,
ಅರ್ಧನಾರಿಯಾದವನ, ಬಾಣನ ಬಾಗಿಲ ಕಾಯ್ದವನ;
ನಂಬಿಗೆ ಕುಂಟಣಿಯಾದವನ,
ಚೋಳಂಗೆ ಹೊನ್ನಮಳೆಯ ಕರೆದವನ;
ಎನ್ನ ಮನಕ್ಕೆ ಬಂದವನ, ಸದ್ಭಕ್ತರ ಹೃದಯದಲಿಪ್ಪವನ;
ಮಾಡಿದ ಪೂಜೆಯಲೊಪ್ಪುವನ, ಕೂಡಲಸಂಗಯ್ಯನೆಂಬವನ!
Transliteration Honna hāvugeya meṭṭidavana, miḍimuṭṭida ken̄jeḍeyavana;
maiyalli vibhūtiya dharisidavana, karadalli kapālava piḍidavana,
ardhanāriyādavana, bāṇana bāgila kāydavana;
nambige kuṇṭaṇiyādavana,
cōḷaṅge honnamaḷeya karedavana;
enna manakke bandavana, sadbhaktara hr̥dayadalippavana;
māḍida pūjeyaloppuvana, kūḍalasaṅgayyanembavana!
Manuscript
English Translation 2 Him, the golden-sandalled one,
Him of the reddish tresses reaching down to heel,
Him smeared all over with sacred ash,
Him who holds in his hand the skull,
Him who become half-woman, him
Who watched at Bana's door;
Him who played bawd to Nambi;
Him who poured a shower of gold for Cola;
Him, the captor of my heart, who lives
In the heart of all true devotees;
Him who dwells in worship done;
Him who is called Kūḍala Saṅg:
Find him and bring him, Mother mine!
Translated by: L M A Menezes, S M Angadi
Hindi Translation जिह्नोंने स्वर्ण-पादुकाएँ पहनी हो,
जो एड़ी तक हलके लाल रंग की जटा से युक्त हो,
जिह्नोंने शरीर पर विभूति धारण की हो,
जिनके कर में कपाल हो,
जो अर्धनारीश्वर हो,
जिह्नोंने बाण के द्वार की रखवाली की थी,
जो नंबी की कुटनी बने थे,
जिह्नोंने चोळ पर स्वर्ण-वृष्टी की थी;
जो मेरे प्रिय हैं सद्भक्त हृदयवासी हैं
जो पूजा से सुंदर लगते हैं वे कूडलसंगमदेव हैं ॥
Translated by: Banakara K Gowdappa
Telugu Translation పొన్ను చెప్పులు తొడగిన వాడు
మిన్నుముట్టు కెంజడల వాడు
మేనిపై బూది నలమినవాడు
చేత కపాలము బట్టినవాడు
అర్ధనారి jైునవాడు
బాణుని వాకిలి కాయువాడు
నంబికి కుంటెన jైునవాడు
చోళునికి పైడి వర్షించువాడు
నా మదికి నచ్చినవాడు
సద్భక్తుల మనసుల నుండువాడు
చేసిన పూజల చేకొనువాడు
వాడు వాడేనయ్యా నా సంగయ్య:
Translated by: Dr. Badala Ramaiah
Tamil Translation பொற் பாதுகையை அணிந்தவனை!
நாகமணிந்த செஞ்சடையனை !
மெய்யில் திருநீற்றைப் பூசியவனை!
கரத்தில் கபாலத்தை ஏந்தியவனை!
இடப்பக்கத்தில் உமையைத் தரித்தவனை!
பாணனின் வாயிலைக் காத்தவனை!
நம்பிக்கு நங்கையைக் காட்டியவனை!
சோழனுக்குப் பொன்மழை பொழிந்தவனை!
என் மனத்தில் உள்ளவனை!
நல்ல பக்தர்களின் இதயத்தில் உறைபவனை!
செய்த பூசையை ஏற்பவனை!
கூடல சங்கமன் என்பவனைக் கண்டேன்!
Translated by: Smt. Kalyani Venkataraman, Chennai
Marathi Translation
सोनियाच्या पादुकां घातलेला देव
टाचे पावेतो जटांना, सोडलेला देव ।। १।।
सर्वांगात चर्चिलेली, विभुती तो देव
कमंडलू तो हातात बाळगितो देव ।। २ ।।
अर्धनारी नटेश्वर नटलेला देव
द्वारपाल त्या बाणाचा जाहलेला देव ।।३।।
नंबीअण्णांचा कुंटणी, जाहलेला देव
सोनियाची करी वृष्टी चोळ राजास्तव ।।४।।
माझे मनी व्यापलेला, आवडता तो देव
भक्त हृदयो नांदे ऐसा, माझा संगदेव ।।५।।
कूडलसंगम करी मान्य केली तैसी पूजा
वेड्या वाकुड्याच्या भावा अंगीकारी देवा ।।६।।
अर्थ - सोन्याच्या पादुका, टाचे पर्यंत जटा, अंगावर विभूती, हातात कमंडलू, धारण केलेला अर्धनारी नटेश्वर राजा बाणाचा द्वारपाल व नंबीअण्णाचा कुंटण झालेला, चोळ राजासाठी सुवर्णदृष्टी केलेला व सदैव सद्भक्त हृदयी राहणारा सर्व वैभवानी युक्त व सर्वगुणसंपन्न असा माझा देव प्रिय आहे. मी करीन त्या व तशा पूजेस जसेच्या तसे मान्य करणारा माझा कूडलसंगमदेव माझी वेडी वाकडी पूजा अंगीकारल्याशिवाय राहणार नाही.
Translated by Rajendra Jirobe, Published by V B Patil, Hirabaug, Chembur, Mumbai, 1983
सोन्याची पादुका घातलेले !
टाचेला स्पर्श करणाऱ्या जटा !
अंगभर विभूती लावलेली !
हातात कपाल घेतलेले !
अर्धनारीश्वर बनलेले !
बाणाचे द्वारपाल झालेले !
नंबिचा कुटणारा झालेला !
चोळावर सुवर्णाचा पाऊस पाडणारे !
माझ्या मनात वसणारे! सद्भक्ताच्या हृदयात बसणारे !
केलेल्या पूजेत सुशोभित होणारे!
कूडलसंगमदेव एक आहे, याला पाहिले तर सोडणार नाही !!
Translated by Shalini Sreeshaila Doddamani
ಶಬ್ದಾರ್ಥಗಳು ಕಪಾಲ = ; ಕರ = ; ಕುಂಟಣಿ = ; ಕೆಂಚೆಡೆ = ; ಚೋಳ = ; ಮಿಡಿ = ; ಹಾವುಗೆ = ; ಹೂಸಿ = ; ಹೊನ್ನು = ;
ಕನ್ನಡ ವ್ಯಾಖ್ಯಾನ ಈ ವಚನವು ಹಿಂದಿನ ವಚನದ ಮುಂದುವರಿದ ಭಾಗವೇ ಆಗುವುದು-ಇಲ್ಲ. ಅದರ ಕಟ್ಟಕಡೆಯ “ಕಂಡು ಬಿಡಲಾರೆನಯ್ಯ” ಎಂಬ ವಚನಖಂಡವನ್ನಾದರೂ ಈ ವಚನದ ಕೊನೆಗೆ ಪಠಿಸಬೇಕಾಗುವುದು.
ಬಸವಣ್ಣನವರು ತಮ್ಮ ಶಿವಯೋಗನಿದ್ರೆಯಲ್ಲಿ ಕಂಡ ಶಿವನ ಬಂದು ಸ್ವಪ್ನಸುಂದರ ಚಿತ್ರವನ್ನು ಈ ವಚನದಲ್ಲಿ ಕೊಟ್ಟಿರುವರು : ಶಿವನು ಚಿನ್ನದ ಪಾದುಕೆಯನ್ನು ಮೆಟ್ಟಿದ್ದಾನೆ. ಅವನ ಪಿಂಗಳವರ್ಣದ ಜಟಾಜೂಟ ಹಿಮ್ಮಡಿಯವರೆಗೆ ಇಳಿಬಿದ್ದಿದೆ. ಮೈಯಲ್ಲಿ ಧರಿಸಿದ ವಿಭೂತಿಯ ಶ್ವೇತಪ್ರಭೆ ದಶದಿಕ್ಕಿಗೂ ಮಾರ್ಪೊಳೆದಿದೆ. ಕೈಯಲ್ಲಿ ಬ್ರಹ್ಮಕಪಾಲವಿದೆ. ಉಗ್ರ ತಾಪಸಿಯಾದರೂ ಅವನ ನಖಶಿಖಾಂತ ಮಧುರಭಾವ ಸಂಚಾರವಿದೆಯೆಂಬಂತೆ-ಆ ಶಿವನ ಅರ್ಧದೇಹದ ಉದ್ದಗಲಕ್ಕೂ ಪಾರ್ವತಿದೇವಿ ಕಡೆದು ಜೋಡಣೆಗೊಂಡು ನಿಂತಿದಾಳೆ. ಅವನು ವಿಶ್ವನಾಥನಾದರೂ ಬಾಣನ ಮನೆಯ ಬಾಗಿಲನ್ನು ಕಾದು ಭಕ್ತರ ಮೈಮನಗಳನ್ನು ದುಷ್ಟ ಶಕ್ತಿಗಳಿಂದ ರಕ್ಷಿಸಿದ ಕೃಪಾಳುವಾಗಿ ಕಂಗೊಳಿಸುತ್ತಿದ್ದಾನೆ. ನಂಬಿಯಣ್ಣನಿಗೆ ಕುಂಟಣಿಯಾಗುವುದರ ಮೂಲಕ ಭಕ್ತರ ದೈನಂದಿನ ಪ್ರೇಮಜೀವನವನ್ನು ಕುದುರಿಸುವ ಕಾಮಕಲ್ಪವೂ ಅವನೇ ಆಗಿದ್ದಾನೆ. ಚೋಳನಿಗೆ ಹೊನ್ನಿನ ಮಳೆಯನ್ನು ಸುರಿಸಿ ನೆಚ್ಚಿದವರಿಗೆ ಕೊರತೆಯೇನೂ ಇಲ್ಲದಂತೆ ನೋಡಿಕೊಳ್ಳುವ ತವನಿಧಿ ಸುವರ್ಣನೂ ಅವನೇ ಆಗಿದ್ದಾನೆ. ಹೀಗೆ ಇಹಪರದ ಸಾರದಲ್ಲೇ ಸಮೆದು ಮಾಡಿದ ಶಿವನ ಈ ರೂಪವನ್ನು ಬಸವಣ್ಣನವರು ವರ್ಣಿಸುತ್ತ-ಆ ಶಿವರೂಪವೇ ತಮಗೆ ಇಷ್ಟವೆಂದೂ, ಅದನ್ನೇ ಎಲ್ಲ ಶಿವಭಕ್ತರೂ ಹೃದಯದಲ್ಲಿ ಇಟ್ಟುಕೊಂಡು ಪೂಜಿಸುತ್ತಿರುವರೆಂದೂ ಬಿನ್ನಹ ಮಾಡಿಕೊಳ್ಳುತ್ತಿರುವರು.
ಶಿವನ ಇಪ್ಪತ್ತೈದು ಲೀಲೆಗಳಲ್ಲಿ ಕೆಲವು ಈ ವಚನದಲ್ಲಿ ಸೂಚನೆ ಪಡೆದಿರುವವು. ಅರ್ಧನಾರೀಶ್ವರಲೀಲೆ : ಉಮೆಯು ಮಹಾಕಾಳಿಯಾಗಿ, ಮಹೇಶ್ವರನು ಮಹಾರುದ್ರನಾಗಿ ಜಂಟಿಯಾದುದೇ ಅರ್ಧನಾರೀಶ್ವರಲೀಲೆ.ಮಹಾಕಾಳಿಯದು ಕಪ್ಪು ಬಣ್ಣ, ರುದ್ರನದು ಕೆಂಪು ಬಣ್ಣ; ಕಾಳಿಯದು ಅದ್ಭುತ,ರುದ್ರನದು ರೌದ್ರ. ಈ ಅರ್ಧನಾರೀಶ್ವರನು ನೀಲಲೋಹಿತ ಮುಂತಾದ ಪ್ರಮಥನಾಯಕರಿಗೆ ಬಲವಿಕರಣಿ ಮುಂತಾದ ಶಕ್ತಿಯರನ್ನು ಕೂಡಿ-ಅವರನ್ನೆಲ್ಲ ತನ್ನ ಪರಿವಾರವನ್ನಾಗಿ ಮಾಡಿಕೊಂಡು-ತನ್ನನ್ನೂ ತನ್ನ ಪರಿವಾರವನ್ನೂ ಬ್ರಹ್ಮನಿಗೆ ತೋರಿ-“ಈ ಪರಿಯಲಿನ್ನು ನೀಂ ಸಮನಿಪುದು ದಂಪತಿಸಮೇತ ಸೃಷ್ಟಿಯನು” ಎಂದನು.ಬ್ರಹ್ಮನು ಸೃಷ್ಟಿಮಾಡಿದ್ದು ಶಿವನ ಈ ಬಗೆಯ ದಿಗ್ದರ್ಶನದಿಂದಲೇ.
ಭಿಕ್ಷಾಟನಲೀಲೆ: ಬ್ರಹ್ಮನು ತನಗೂ ಐದು ತಲೆಯಿದೆಯೆಂದೂ ಶಿವನೊಡನೆ ಸೆಣಸಲು-ಆ ಶಿವನು ಭೈರವಾಕಾರವನ್ನು ತಳೆದು ಬ್ರಹ್ಮನ ಐದನೇ ತಲೆಯನ್ನು ಚಿವುಟಿಹಾಕಿದ. ಆ ತಲೆಯ ಚಿಪ್ಪನ್ನು ಭಿಕ್ಷಾಪಾತ್ರೆಯಾಗಿ ಹಿಡಿದು ವಿಷ್ಣು ಇಂದ್ರ ವರುಣ ಮೊದಲಾದವರಲ್ಲಿ ಭಿಕ್ಷೆಬೇಡಿದ.ಅವರು ಗಡಗಡ ನಡುಗಿ ಭಿಕ್ಷೆನೀಡಿ ಶರಣಾಗರಾದರು.
ದಕ್ಷಿಣಾಮೂರ್ತಿಲೀಲೆ: ಶಿವನು ಹಿಮಾಲಯದ ಮುನಿಗಳ ಮನಸ್ಸನ್ನು ಪರೀಕ್ಷಿಸಲು ಹಾವುಗೆ ಜಟಾವಳಿ ಭಸ್ಮಧರಿಸಿ ಕಾಮನಂತೆ ಸುಂದರಾಂಗನೂ ಆಗಿ-ಭೂತಗಣಸಮೇತನಾಗಿ ಭಿಕ್ಷೆಯನ್ನು ಬೇಡುತ್ತ ಹೊರಟ. ಡಮರುಗವನ್ನು ಬಾರಿಸುತ್ತಾ ಹಾಡುತ್ತಾ ಕುಣಿಯುತ್ತ ಬಂದ ಅವನನ್ನು ಮುನಿಸತಿಯರು ಕಂಡು ವ್ಯಾಮೋಹಗೊಂಡರು. ಕೃದ್ಧರಾದ ಋಷಿಗಳು ಶಿವನು ಸಾಯಲೆಂದು ಮಾರಣಹೋಮ ಮಾಡಿದರು, ಆ ಹೋಮಕುಂಡದಿಂದ ಹೊರಹೊಮ್ಮಿ ಮೇಲೆರಗಿದ ಟಂಕ-ಶೂಲ-ಖಡ್ಗ-ಗದೆ-ವಜ್ರ-ಪಾಶ-ಅಂಕುಶಗಳನ್ನು ಶಿವನು ತನ್ನ ಹಸ್ತಭೂಷಣಗಳನ್ನಾಗಿ ಮಾಡಿಕೊಂಡನು. ವ್ಯಾಘ್ರನನ್ನು ಸಿಗಿದು ಅದರ ಚರ್ಮವನ್ನು ಧೋತ್ರವಾಗಿ ಉಟ್ಟನು, ಸರ್ಪವನ್ನು ಕಂಕಣವಾಗಿ ತೊಟ್ಟನು,ಮೃಗವನ್ನು ಲೀಲಾಕುಸುಮದಂತೆ ಹಿಡಿದನು. ಕೊನೆಯದಾಗಿ ಜಿಗಿದು ಮೇಲೆ ಬಿದ್ದ ಅಪಸ್ಮಾರವನ್ನು ಮೆಟ್ಟಿ ಅದರ ಮೇಲೆ ತಾಂಡವ ನೃತ್ಯವನ್ನು ಮಾಡಿದ. ಆ ವೇಳೆಗೆ ಶರಣಾಗತರಾದ ಋಷಿಸಮೂಹಕ್ಕೆ ಪ್ರಸನ್ನವಾದನು. (ನೋಡಿ ಶಿವತತ್ತ್ವ ಚಿಂತಾಮಣಿ-6, 8, 9, 20ನೇ ಸಂಧಿಗಳು).
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು