•  
  •  
  •  
  •  
Index   ವಚನ - 503    Search  
 
ಭಕ್ತನ ಶರಣಸ್ಥಲ - ಶರಣಸತಿ-ಲಿಂಗಪತಿ
ಮನಕ್ಕೆ ಮನೋಹರವಲ್ಲದ ಗಂಡರು ಮನಕ್ಕೆ ಬಾರರು, ಕೇಳವ್ವಾ ಕೆಳದೀ. ಪನ್ನಗಭೂಷಣರಲ್ಲದ ಗಂಡರು ಇನ್ನೆನಗಾಗದ ಮೊರೆ, ನೋಡವ್ವಾ! ಕನ್ನೆಯಂದಿನ ಕೂಟ: ಚಿಕ್ಕಂದಿನ ಬಾಳುವೆ, ನಿಮ್ಮಾಣೆಯಯ್ಯಾ ಕೂಡಲಸಂಗಮದೇವಾ!
Transliteration Manakke manōharavallada gaṇḍaru manakke bararu, keḍavva kēḷadi. Pannagabhūṣanarallada gaṇḍaru innāgada mōre, nōḍavvā! Kanneyaṇḍina kūṭa: Sikkaṇḍina bāḷuve, nim'māṇeyayya kūḍalasangamadēvā!
Manuscript
English Translation 2 Listen to me, my friends: No men but he who charms the heart Call to my heart; The love of all men but He, the snake-decked, I hate, you see! O Kūḍala Saṅgama Lord, I swear by You: I joined you when a maiden I was; We lived together since childhood! Translated by: L M A Menezes, S M Angadi
Hindi Translation सुनो सखी, जो पुरुष मन को मनोहर नहीं वे मन को भाते नहीं देखो पन्नगभूषण के आतिरिक्त अन्य पुरुष मेरे लिए अप्रिय, हैं। कन्यावस्था का मिलन है, बाल्यावस्था से सहजीवन है, तव सौगंध है कूडलसंगमदेव ॥ Translated by: Banakara K Gowdappa
Telugu Translation మదికి మనోహరముగాని మగలు మనసుకు రారు కదవే? పన్నగ భూషణులుగాని భర్తలు నా మదిబట్ట రే చెలీ! ఏమందునే సఖీ! నా మొఱ లాలింపవే! కన్నెఱికపు కూటమి పిన్న నాటి బ్రతుకు సంగమదేవుడే సాక్షి సఖీ! Translated by: Dr. Badala Ramaiah
Tamil Translation மனம் விரும்பாத கணவர் மனத்திலே நிற்பதில்லை கேள்அம்மா நாகத்தை அணிகலனாக அணியாத கணவர் எனக்கு ஆகாத எல்லை அம்மா காண்அம்மா சிறுவயதிலரும்பிய அன்பு இளமைக்கால வாழ்வு உம்மாணை ஐயனே கூடலசங்கமதேவனே. Translated by: Smt. Kalyani Venkataraman, Chennai
Marathi Translation मनाला मोहीत न करणारे पुरुष, मनाला पसंत पडत नाहीत ऐक ग सखी. नागभूषणाविना असणारे पुरुष मला पसंत नाही सखी. कन्यावस्थेपासून मिलन, बालपणीचा सांगाती. तुमची शपथ कूडलसंगमदेवा, Translated by Shalini Sreeshaila Doddamani
ಶಬ್ದಾರ್ಥಗಳು ಆಣೆ = ಪ್ರಮಾಣ, ಸಾಕ್ಷಿ; ಕೂಟ = ; ಕೆಳದಿ = ; ಪನ್ನಗ = ; ಮನೋಹರ = ;
ಕನ್ನಡ ವ್ಯಾಖ್ಯಾನ ಶರಣಸತೀಭಾವದಿಂದ ಬಸವಣ್ಣನವರು ಶಿವಪತಿಯಲ್ಲದೆ ಯಾರೂ ತಮಗೆ ಮನೋಹರವಲ್ಲವೆನ್ನುತ್ತಿರುವರು. ಯಾರ ಮನಸ್ಸಿಗಾಗಲಿ ಘನತೆ ಬರುವುದು ಹೀಗೆ ಒಂದು ಮಹಾಧ್ಯೇಯಕ್ಕೆ ಬದ್ಧವಾದಾಗಲೇ-ಕಳ್ಳಕಾಕರಿಗೆಲ್ಲ ಮನಸೋತಾಗಲಲ್ಲ. ಹಿಂದಿನ ವಚನದಲ್ಲಿ ವರ್ಣಿತವಾಗಿರುವ ದಕ್ಷಿಣಾಮೂರ್ತಿ ಶಿವನೇ ಬಸವಣ್ಣನವರಿಗೆ ಪ್ರಾಣಪ್ರಿಯ. ಮಿಕ್ಕ ಯಾವ ದೇವತೆಯೂ ಶಕ್ತಿಯೂ ಅವರಿಗೆ ಆರಾಧ್ಯವಲ್ಲ. ತಮಗೂ ಶಿವನಿಗೂ ಇರುವ ಈ ಅನ್ಯೋನ್ಯಬಂಧ ತಾವಿನ್ನೂ ಎಳವೆಯಲ್ಲಿದ್ದಾಗಲೇ ಏರ್ಪಟ್ಟಿತೆಂದು ಅಂದಿನಿಂದಲೂ ಶಿವನೊಡನೆ ತಾವು ದಿವ್ಯಸಂಸಾರ ನಡೆಸುತ್ತ ಬಂದಿರುವುದಾಗಿಯೂ ಅರಿಕೆ ಮಾಡಿಕೊಳ್ಳುತ್ತಿರುವರು. ಈ ವಚನ ನಿರೂಪಣೆಯ ಹಿನ್ನಲೆಗೆ ಬಾಲ್ಯವಿವಾಹದ ಪ್ರತಿಮೆಯಿದೆ. ಬಸವಣ್ಣನವರು ತಮ್ಮ ಚಿಕ್ಕಂದಿನಲ್ಲೇ ಶಿವಕ್ಕೆ ತೆಕ್ಕೆಬಿದ್ದುದನ್ನು ಈ ಪ್ರತಿಮೆ ಚೊಕ್ಕವಾಗಿ ಮಾರ್ದನಿಸುತ್ತಿರುವುದು. ಈ ವಚನವ್ಯಾಜದಿಂದಲೇ ಬಸವಣ್ಣನವರು ತಮ್ಮ ಬಾಲ್ಯದಲ್ಲೇ ನಡೆದುಹೋದ ತಮ್ಮ ಮದುವೆಯನ್ನು ನೆನೆಯುತ್ತಿರಬಹುದು. ಪಾಲ್ಕುರಿಕೆ ಸೋಮನಾಥನ ಪ್ರಕಾರವಾಗಿಯಾದರೂ ಬಿಜ್ಜಳನ ಭಂಡಾರಿಯಾಗಿದ್ದ ಬಲದೇವನ ಸುಪುತ್ರಿ ಗಂಗಾಬಿಕೆಯನ್ನು ಬಸವಣ್ಣನವರು ಮದುವೆಯಾಗಿದ್ದು ತಮ್ಮ ಏಳನೇ ವಯಸ್ಸಿನಲ್ಲಿಯೇ ಮತ್ತು ಅವರು ಕೂಡಲ ಸಂಗಮಕ್ಕೆ ಹೋಗುವ ಮುನ್ನವೇ. ಮೊರೆ : ಆಶ್ರಯ, ವಂಶ, ಸಂಬಂಧ, ಕುಲವಾಚಿ (ಕೇಶಿರಾಜ-143)

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು