ಭಕ್ತನ ಶರಣಸ್ಥಲ - ಶರಣಸತಿ-ಲಿಂಗಪತಿ
ಜಗವೆಲ್ಲಾ ಅರಿಯಲು ಎನಗೊಬ್ಬ ಗಂಡನುಂಟು:
ಆನು ಮುತ್ತೈದೆ, ಆನು ನಿಟ್ಟೈದೆ.
ಕೂಡಲಸಂಗಯ್ಯನಂತಪ್ಪ ಎನಗೊಬ್ಬ ಗಂಡನುಂಟು!
Transliteration Jagavellā ariyalu enagobba gaṇḍanuṇṭu:
Ānu muttaide, ānu niṭṭaide.
Kūḍalasaṅgayyanantappa enagobba gaṇḍanuṇṭu!
Manuscript
English Translation 2 So may the whole world know,
I have a mate:
A married woman I,
Married for one and aye.
Lord Kūḍala Saṅga is my mate!
Translated by: L M A Menezes, S M Angadi
Hindi Translation समस्त जग जानता है मेरे एक पति हैं;
मैं सुहागिन हूँ आजीवन सुहागिन हूँ
कूडलसंगमदेव जैसे मेरे एक पति हैं ॥
Translated by: Banakara K Gowdappa
Telugu Translation జగమంతా తెలియ నాకొకభర్త కలడు
నేను ముత్తైదువ సదా ముత్తైదువ
కూడల సంగయ్య యను నా కొక మగడుండెనమ్మా!
Translated by: Dr. Badala Ramaiah
Tamil Translation உலகெலாம் அறிய
எனக்கொரு கணவன் உள்ளான்
நான் சுமங்கலி, தீர்க்க சுமங்கலி
கூடலசங்கமதேவன் என்பவன் அம்மா
எனக்கொரு கணவன் உள்ளான்
Translated by: Smt. Kalyani Venkataraman, Chennai
Marathi Translation
अखंड सुहासिनी मी पतिव्रता जाण
जाणे जग सारे यास तोचि माझा प्राण
प्रतिव्रते पति एक तोचि प्राणलिंग
जाणि अंगअंग त्याचे करी अंग संग
कूडलसंगमदेव माझा पति असे थोर
विश्वस्वरुप उणे तेथे साराचेही सार
अर्थ - स्त्री जातीस एकमेव पतिच तिचे पूजनीय असे भूषण होय. तिला पतिव्रता किंवा सुहासिनी अशी नावे येतात. अगदी त्याच प्रमाणे सद्भक्त भक्तसखा परम पवित्र परमेश्वरासच एकमेव आपला पति मानतो. पतिपत्नीचे नाते भक्त-देवात दाखवून अभंग प्रितीचे दर्शन घडविणारे महात्मा बसवेश्वरही आपल्या कूडलसंगमदेवास (परमेश्वरास) आपला प्राणपति परमेश्वर मानतात. आणि सुहासिनीचे भाग्य लाभल्याचे समाधान अनुभवितात.
Translated by Rajendra Jirobe, Published by V B Patil, Hirabaug, Chembur, Mumbai, 1983
जग सगळे जाणते मला एक पती आहे.
मी पतिव्रता आहे, मी सौभाग्यवती आहे.
कूडलसंगमदेवासारखे माझे पती आहे.
Translated by Shalini Sreeshaila Doddamani
ಶಬ್ದಾರ್ಥಗಳು ನಿಟ್ಟೈದೆ = ; ಮುತ್ತೈದೆ = ;
ಕನ್ನಡ ವ್ಯಾಖ್ಯಾನ ಪತಿವ್ರತೆಗೆ ಗಂಡನೊಬ್ಬನೇ-ಆ ಗಂಡನೂ ಇಂಥವನೆಂಬುದು ಎಲ್ಲರಿಗೂ ತಿಳಿದ ವಿಷಯವೇ ಆಗಿರುವುದು. ಬಸವಣ್ಣನವರಾದರೂ ನಂಬಿದ್ದು ಮೈದುಂಬಿ ಸೇವಿಸಿದ್ದು ಶಿವನೊಬ್ಬನನ್ನೇ ಆ ಶಿವನೋ ಮಹಾದೇವನೆಂಬುದು ಮೂರುಲೋಕಕ್ಕೂ ತಿಳಿದ ವಿಷಯವೇ ಆಗಿದೆ. ಹೀಗೆ ಎಲ್ಲರಿಗೂ ಎತ್ತರವಾದವನ ಕೈಹಿಡಿದು ದೀರ್ಘಕಾಲ ಸಾರ್ಥಕವಾದ ಬಾಳನ್ನು ನಡೆಸಿ ಈಗ ವಯೋವೃದ್ಧರು ಆಗಿರುವುದಾಗಿ ಈ ವಚನದಲ್ಲಿ ತಮ್ಮ ತೃಪ್ತಿಯನ್ನು ವ್ಯಕ್ತಪಡಿಸಿರುವರು. ಹೀಗಾಗಿ 32ರ ಹರೆಯದಲ್ಲೆ ಮೃತರಾದರೆಂಬುದು ಕಟ್ಟುಕತೆಯಷ್ಟೆ. ಈ ವಚನವನ್ನು ಬಸವಣ್ಣನವರು ಬರೆದುದು ತಮ್ಮ ವೃದ್ಧಾಪ್ಯದಲ್ಲಿ-ಕೂಡಲ ಸಂಗಮದಲ್ಲಿ. ಮುತ್ತೈದೆ : ವೃದ್ಧ ಸುಮಂಗಲೆ, ನಿಟ್ಟೈದೆ : ದೀರ್ಘ ಸುಮಂಗಲೆ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು