ಭಕ್ತನ ಶರಣಸ್ಥಲ - ಶರಣಸತಿ-ಲಿಂಗಪತಿ
ಸಂಸಾರವೆಂಬ ಶ್ವಾನನಟ್ಟಿ, ಮೀಸಲ ಬೀಸರ ಮಾಡದಿರಯ್ಯಾ.
ಎನ್ನ ಚಿತ್ತವು ನಿಮ್ಮ ಧ್ಯಾನವಯ್ಯಾ.
ನೀವಲ್ಲದೆ ಮತ್ತೇನನೂ ಅರಿಯನು.
ಕನ್ಯೆಯಲ್ಲಿ ಕೈವಿಡಿದೆನು, ನಿಮ್ಮಲ್ಲಿ ನೆರೆದೆನು,
ಮನ್ನಿಸು, ಕಂಡಾ, ಮಹಾಲಿಂಗವೇ,
ಸತಿಯಾನು, ಪತಿ ನೀನು ಅಯ್ಯಾ:
ಮನೆಯೊಡೆಯ ಮನೆಯ ಕಾಯ್ದಿಪ್ಪಂತೆ
ನೀನೆನ್ನ ಮನವ ಕಾಯ್ದಿಪ್ಪ ಗಂಡನು!
ನಿಮಗೋತ ಮನವನನ್ಯಕ್ಕೆ ಹರಿಸಿದರೆ
ನಿನ್ನಭಿಮಾನಕ್ಕೆ ಹಾನಿ, ಕೂಡಲಸಂಗಮದೇವಾ.
Transliteration ಸಂಸಾರವೆಂಬ ಶ್ವಾನನಟ್ಟಿ, ಮೀಸಲ ಬೀಸರ ಮಾಡದಿರಯ್ಯಾ.
ಎನ್ನ ಚಿತ್ತವು ನಿಮ್ಮ ಧ್ಯಾನವಯ್ಯಾ.
ನೀವಲ್ಲದೆ ಮತ್ತೇನನೂ ಅರಿಯೆನು.
ಕನ್ಯೆಯಲ್ಲಿ ಕೈವಿಡಿದೆನು, ನಿಮ್ಮಲ್ಲಿ ನೆರೆದೆನು,
ಮನ್ನಿಸು, ಕಂಡಾ, ಮಹಾಲಿಂಗವೇ,
ಸತಿಯಾನು, ಪತಿ ನೀನು ಅಯ್ಯಾ:
ಮನೆಯೊಡೆಯ ಮನೆಯ ಕಾಯ್ದಿಪ್ಪಂತೆ
ನೀನೆನ್ನ ಮನವ ಕಾಯ್ದಿಪ್ಪ ಗಂಡನು!
ನಿಮಗೋತ ಮನವನನ್ಯಕ್ಕೆ ಹರಿಸಿದರೆ
ನಿಮ್ಮ ಅಭಿಮಾನಕ್ಕೆ ಹಾನಿ, ಕೂಡಲಸಂಗಮದೇವಾ.
Manuscript
English Translation 2 Do not defile the undefiled,
Chasing me with this dog, the world.
My mind is all one thought of Thee;
Nothing I know save Thee;
I wed Thee in my maidenhood,
And was conjoined with Thee.
Pray heed me, O Great Liṅga :
Thy wife am I, and Thou my Lord.
Even as the master guards his house,
Thou art the guardian of my heart!
Should my heart that has known Thy love
Stray otherwhere,
It is Thy honour that is lost,
O Kūḍala Saṅgama Lord.
Translated by: L M A Menezes, S M Angadi
Hindi Translation संसार श्वान को पीछे लगाकर
मन्नत दूषित मत करो प्रभो,
मेरे चित्त में तव ध्यान है।
तुम्हारे सिवा मैं और कुछ नहीं जानती ।
मैं कन्यावस्था में पाणिग्रहण कर तुमसे मिली,
हे लिंगदेव मुझे क्षमा करो,
मैं सती हूँ तुम पति हो
जैसे घर का स्वामी घर की रक्षा करता है,
वैसे तुम मेरे मन के रक्षक पति हो,
त्वल्लीन मन को अन्यत्र जाने दो,
तो तव प्रतिष्टा की हानि होगी कूडलसंगमदेव ॥
Translated by: Banakara K Gowdappa
Telugu Translation సంసారమను కుక్కను పోద్రోలుమా?
కట్టిన ముడుపు నుముట్ట నీకుమా
నా మనసు నిన్నే ధ్యానించు
నినుదప్ప అన్య మేదియూ తెలియ
కన్నెఱికమున చేయిసట్టితి
నిన్ను కలిసితి మన్నింపుమో ననుమహాదేవ!
సతినేను పతినీవు కదరా!
యజమాని తన యిల్లు చూచుకొనినటు
ననుగాచు మగవాడు నీవేరా!
నీకై న మనసు పరులపై పడనీకుమ
పడని త్తువా నీ యభిమానమునకే చేటు
కూడల సంగమదేవా!
Translated by: Dr. Badala Ramaiah
Tamil Translation வாழ்க்கை எனும் நாயைப் பின்தொடர்ந்து
படையல் பயனற்றதைச் செய்யாதீர் ஐயனே
என் மனம் உம்மைத் தியானிக்கிறது
உன்னைத் தவிர வேறொன்றையும் அறியேன்
கன்னியாகக் கைபிடித்தேன், உம்மொடு இணைந்தேன்
மன்னிப்பாய், கண்டாய், மகாலிங்கமே
நான் மனைவி, நீ கணவன் ஐயனே
வீட்டின் உடையன் வீட்டைக் காப்பதனைய
நீ என் மனத்தைக் காக்கும் கணவன்
உன்னை விரும்பிய மனத்தை, வேற்றிடத்தில் செலுத்தின்
உம் மதிப்பிற்குக் கேடன்றோ, கூடல சங்கமதேவனே.
பக்தனின் ஐக்கியத்தலம்
Translated by: Smt. Kalyani Venkataraman, Chennai
Marathi Translation
संसाररुपी श्वानस्पर्शाने, जीवनरुपी
नैवेद्य कलंकीत होऊ देवू नये देवा.
माझे चित्त तुमच्या ध्यानी लागले देवा.
तुमच्याविना काहीही जाणत नाही.
कन्यावस्थेत तव पाणिग्रहण केले,
तुमच्यात समरसले. क्षमा करावी
महालिंगदेवा, सती मी, पती आपण.
घराचा मालक घराची राखण करतो
तसे तू माझे मन राखावे देवा.
तुमच्यावर मोहीत झालेले मन दुसरीकडे आसक्त झाले.
तर तुमच्या अभिमानाची हानी होईल कूडलसंगमदेवा.
Translated by Shalini Sreeshaila Doddamani
ಶಬ್ದಾರ್ಥಗಳು ಕನ್ಯೆ = ; ಚಿತ್ತ = ; ಧ್ಯಾನ = ; ನೆರೆ = ; ಬೀಸರ = ; ಮನ್ನಿಸು = ; ಮೀಸಲು = ; ಶ್ವಾನ = ;
ಕನ್ನಡ ವ್ಯಾಖ್ಯಾನ ಚಿಕ್ಕಂದಿನಲ್ಲೇ ಶಿವನಿಗೆ ಮೀಸಲಿಟ್ಟ ತಮ್ಮ ಮನಸ್ಸನ್ನು ಸಂಸಾರದ ನಾಯಿ ಮುಟ್ಟಿ ಮೈಲಿಗೆಯಾಗದಂತೆ, ಮತ್ತು ಆ ತಮ್ಮ ಮನ ಶಿವನಲ್ಲಿಯೇ ಸದಾಕಾಲಕ್ಕೂ ನಿಷ್ಠವಾಗಿರುವಂತೆ ಮಾಡಬೇಕೆಂದು ಆ ಶಿವನನ್ನೇ ಪ್ರಾರ್ಥಿಸುತ್ತಿರುವರು ಬಸವಣ್ಣನವರು. ಅನಾದಿ ಪರಶಿವಲಿಂಗವು ವೃದ್ಧ ಪುರುಷನಾದರೆ ಬಸವಸತಿ ಕಿರಿಯ ಹರೆಯದ ಹೆಂಡತಿಯಂತೆ ಅವಳ ಶೀಲ ಹಾಳಾದರೆ ಮಾನ ಹಾನಿಯಾಗುವುದು ಆ ಶಿವನಿಗೇ ಎಂಬ ವಾದವನ್ನು ಹೂಡಿ-ಮನೆಗೆ ಒಡೆಯನಾದವನು ಮನೆಯನ್ನು ರಕ್ಷಿಸುವಂತೆ-ತಮ್ಮ ಮನಕ್ಕೆ ಶಿವನೇ ಒಡೆಯನಾಗಿರುವುದರಿಂದ ಅದನ್ನು ರಕ್ಷಿಸುವ ಹೊಣೆಯೂ ಆ ಶಿವನದೆ ಆಗಿರುವುದೆಂದು ಅರಿಕೆ ಮಾಡಿಕೊಳ್ಳುತ್ತಿರುವರು.
(ಓತ : ಪ್ರೀತಿಸಿದ)
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು