ನೀನೊಲಿಯಿತ್ತೇ ಪುಣ್ಯ, ನೀನೊಲ್ಲದುದೇ ಪಾಪ, ಕಂಡಯ್ಯಾ.
ಸಕಲ ಜಗದೊಳಗೆ ಅನುಶ್ರುತನಾಗಿಪ್ಪೆಯಯ್ಯಾ.
ನೀನೊಲಿದವನೇ ನಿಮ್ಮನರಿವನು:
'ಪ್ರಸಾದಾದ್ದೇವತಾಭಕ್ತಿಃ| ಪ್ರಸಾದೋ ಭಕ್ತಿಸಂಭವಃ
ಯಥಾಂಕುರತೋವಾ ಬೀಜಂ ಬೀಜತೋವಾ ಯಥಾಂಕುರಂ.ʼ
ನೀನೊಲಿದವನೆ ಧನ್ಯ, ಜಗಕ್ಕೆ ಪಾವನ
ಕೂಡಲಸಂಗಮದೇವಾ.
Transliteration Nīnoliyitte puṇya, nīnolladudē pāpa, kaṇḍayya.
Sakala jagadoḷage anuśrutanāgippeyayya.
Nīnolidavanē nim'manarivanu:
'Prasādāddēvatābhaktiḥ| prasādō bhaktisambhavaḥ
yathāṅkuratōvā bījaṁ bījatōvā yathāṅkuraṁ.ʼ
nīnolidavane dhan'ya, jagakke pāvana
kūḍalasaṅgamadēvā.
Manuscript
English Translation 2 Mark you, O Lord:
That thou dost love me, my merit is,
That thou dost not, my sin.
In the whole world, O Lord,
Thou dwell'st for ever and aye;
He only knows Thee
Whom Thou dost love:
'Devotion comes of Grace,
Grace of Devotion, as
From sprout the seed, seed from the sprout.'
He alone is fortunate,
And holy to the world,
Whom Thou hast loved,
O Kūḍala Saṅgama Lord!
Translated by: L M A Menezes, S M Angadi
Hindi Translation तव सुमुखता ही पुण्य है
तव विमुखता ही पाप है
सारे जग में तुम अनुश्रुत हो
तव कृपा-पात्र ही तुम को जानता है
प्रसादाद्रदेवता भक्तिः प्रसादो भक्तिसंभवः
यथैवांकुरतो बीजं बीजतो वा यथांकुरम्
तव कृपापात्र ही धन्य है
जग के लिए पावन है कूडलसंगमदेव ॥
Translated by: Banakara K Gowdappa
Telugu Translation నీవు వలచుటే పుణ్యము నీవు విడుచుటే పాపముకదయ్యా
సకల జగంబుముల ననుశ్రుతుడవై యుంటివయ్యా
నీవు మెచ్చినవాడే నిన్ను తెలియును
‘‘ప్రసాదా ర్దేవతా భక్తిః; ప్రసాదో భక్తి సంభవః!
యధాంకురతోవా జీజం; బీజతోవా యథాంకురః’’
నీవు మెచ్చువాడే ధన్యుడు జగత్పావనుడు
కూడల సంగమదేవా!
Translated by: Dr. Badala Ramaiah
Tamil Translation நீ விரும்புவதே புண்ணியம்
நீ விரும்பாதது பாவம்
உலகெங்கிலும் பரந்து விரிந்து உள்ளான்
நீ விரும்புவோனே உன்னை அறிந்தவன்
“ப்ரசாதாத்தேவதாபக்தி ப்ரஸாதோ பக்திஸம்பவ: |
யதை வாங்குரதோ பீஜம் பீஜதோ வா யதாம்குர: ||
நீ விரும்புபவனே புண்ணியசாலி
உலகத்திலே புனிதமானவன், கூடல சங்கமதேவனே.
Translated by: Smt. Kalyani Venkataraman, Chennai
Marathi Translation
तुझी प्रसन्नता पूर्ण पाप अप्रसन्नता
जयावरी तू प्रसन्न
तोचि तुझा जाणता
"" प्रसादादेवता भक्ति: प्रसादी भक्तिसंभवः ।
यथावांकुरती बीजं बीजतो वा पथांकुरः""
सत्य तोचि धन्य तोचि
तू प्रसन्न ज्यावरी
कूडलसंगमदेव जगती
प्रसन्न पावन करी
अर्थ - परमेश्वरी प्रसन्नता म्हणजे पुण्य आणि त्याची अप्रसन्नता हेच पाप होय. हे प्रभो ! तुझी प्रसन्न उपस्थिती सर्व संसारात व्यापून असल्याकारणाने ज्याना हे वळते तोच तुला मिळवू शकतो अन्याना ते शक्य नाही. म्हणून कूडलसंगमदेवा (परमेश्वरा) तु ज्यांच्यावर प्रसन्न होतोस तोच या जगात खरा पावन ठरतो. आणि तोच खरा धन्य होय.
Translated by Rajendra Jirobe, Published by V B Patil, Hirabaug, Chembur, Mumbai, 1983
तुमची प्रसन्नता हे पुण्य, अप्रसन्नता हे पाप.
सर्व जगात आपण भरून राहिला.
तुम्हाला प्रसन्न करणारा तुम्हा जाणतो.
प्रसादाद्देवता भक्तिः प्रसादो भक्तिसंभवः।
यथैवांककुरतो बीजं बीजतो वा यथांकूर।
तुम्हाला प्रसन्न करुन घेणारा धन्य,
जगाला पावन कूडलसंगमदेवा.
Translated by Shalini Sreeshaila Doddamani
ಶಬ್ದಾರ್ಥಗಳು ಅನುಶ್ರುತ = ಪ್ರಖ್ಯಾತ ನಿರಂತರ; ಜಗ = ; ಧನ್ಯ = ; ಪಾವನ = ; ಪ್ರಸಾದ = ; ಯಧೈ = ; ವಾಂಕುರ = ; ಸಂಭವ = ;
ಕನ್ನಡ ವ್ಯಾಖ್ಯಾನ ಶಿವನೇ ನೀನು ಯಾರಿಗೆ ಒಲಿಯುವೆಯೋ ಅವರೇ ಪುಣ್ಯವಂತರು, ಯಾರಿಗೆ ಒಲಿಯುವುದಿಲ್ಲವೋ ಅವರೇ ಪಾಪಿಷ್ಠರು.
ಸಕಲವಾದ ಈ ಜಗತ್ತಿನಲ್ಲಿ ನೀನು ಹಾಸುಹೊಕ್ಕಾಗಿ ಹೆಣೆದುಕೊಂಡಿರುವೆಯಾದರೂ-ನೀನು ಯಾರಿಗೆ ಕುರಿತು ಪ್ರಸನ್ನವಾಗಿವೆಯೋ ಅವರು ಭಕ್ತಲಲಾಮರೆನಿಸುವರು : ಅಂಕುರದಿಂದ ಬೀಜ, ಬೀಜದಿಂದ ಅಂಕುರವಾಗುವಂತೆ-(ಆ ನಿನ್ನ ಪ್ರಸಾದಿಂದ ಭಕ್ತಿ, ಆ ಭಕ್ತಿಯಿಂದ ಪ್ರಸಾದ ಉಂಟಾಗುವುದೆಂಬುದು ಸೂಕ್ತಿ. ಅಂತೆ-ನೀನೊಲಿದವನೇ ಭಕ್ತ, ಆ ಭಕ್ತನಿಂದಲೇ ಈ ಜಗತ್ತು ಪಾವನವಾಗುವುದು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು