•  
  •  
  •  
  •  
Index   ವಚನ - 507    Search  
 
ಭಕ್ತನ ಐಕ್ಯಸ್ಥಲ - ನಿರಹಂಕಾರ
ಅಷ್ಟವಿಧಾರ್ಚನೆ ಷೋಡಶೋಪಚಾರವ, ಅಂದಂದಿನ ಕೃತ್ಯವನಂದಂದಿಗೆ ಆನು ಮಾಡಿ ಶುದ್ಧನಯ್ಯಾ! ಹಂಗು ಹರಿಯಿಲ್ಲದ ಕಾರಣ, ಕೂಡಲಸಂಗಮದೇವ ನಿಷ್ಫಲದಾಯಕನಾಗಿ, ಆನು ಮಾಡಿ ಶುದ್ಧನಯ್ಯಾ!
Transliteration Nīnoliyittu puṇya, nīnolladudē pāpa, kaṇḍayya. Sakala jagadoḷage anuśrutanāgippeyayya. Nīnolidavane nim'ma manarivanu: 'Prasādāddēvatābhaktiḥ| prasādō bhaktisambhavaḥ yathāṅkuratōvā bījaṁ bījatōvā yathāṅkurāṁ.ʼ nīnolidavane dhana'ya, jagakke pāvana kūṭalasaṅgamadēva.
Manuscript
English Translation 2 Because I had no obligation or sunderance Having done The eightfold worship, service sixteenfold, Each day the duty of the day O, Lord, I am pure! Because Kūḍala Saṅgama Is giver of no fruit, Having done I am pure! Translated by: L M A Menezes, S M Angadi
Hindi Translation अष्टविधार्चन षोडशोपचार के दैनंदिन कर्म कर मैं परिशुद्ध हूँ। अनुग्रह की आशा नहीं के कारण कूडलसंगमदेव निष्फलदायक है, अतः मैं निज आचरण से शुद्ध हूँ ॥ Translated by: Banakara K Gowdappa
Telugu Translation అష్ట విధార్చన షోడశోపచార మప్పటప్పటి కృత్యము నప్పడప్పుడే చేయు శుచిని నే నయ్యా! దయా దాక్షిణ్యములు లేని కారణమున సంగడు నిష్ఫలదాయకుడయ్యె కాని నే నో శుచినై తినయ్యా: Translated by: Dr. Badala Ramaiah
Tamil Translation எண்வித அர்ச்சனை, பதினாறு உபசாரங்களை அந்த அந்த நாளின் செயலை, அன்றன்றே நான் பயனை எதிர்நோக்காது கூடலசங்கமதேவனே. உறவினர் பிறர் தொடர்பின்றி செய்த தூய்மையோன் நான் ஐயனே Translated by: Smt. Kalyani Venkataraman, Chennai
Marathi Translation अष्टविद्यार्चन, षडशोपचार नित्याचा आचार, परि शुद्ध निस्वार्थ ती भक्ति, निर्विकल्प करी फलाशा न धरी, कोणतेही कूडलसंगमदेवा ! तुझ्या पूजनाने तनाने मनाने, शुद्ध झालो अर्थ - आठ प्रकारची अर्चना, षोडशोपचार विधी नित्य नियमाने करीत राहिल्याने माझे तन व मन शुद्ध झाले. त्यात परमेश्वराकडून कसली ही फळाची आशा बाळगली नाही. म्हणून हे कूडलसंगमदेवा! ( परशिवा) तुझ्या निर्विकल्प भक्तीमुळे मी पुनित पावन झालो. Translated by Rajendra Jirobe, Published by V B Patil, Hirabaug, Chembur, Mumbai, 1983 अष्टविधार्चन षोडशोपचार नित्यनियमाने करतो म्हणून मी शुध्द आहे देवा. कसली अपेक्षा नसल्याने प्रतिफलाच्या आशेविना पूजा केल्याने मी शुध्द आहे कूडलसंगमदेवा. Translated by Shalini Sreeshaila Doddamani
ಶಬ್ದಾರ್ಥಗಳು ಅರ್ಚನೆ = ಪೂಜೆ; ಕೃತ್ಯ = ; ನಿಷ್ಛಬ = ; ಷೋಡಶ = ; ಹಂಗು = ; ಹರಿ = ;
ಕನ್ನಡ ವ್ಯಾಖ್ಯಾನ ಅಂದಂದಿನ ಶಿವಪೂಜಾಕಾರ್ಯವನ್ನು ಮಾಡುತ್ತೇನೆ. ಆ ಮಾಡಿದ ಪೂಜೆಗೆ ಪ್ರತಿಫಲವನ್ನೇನೂ ಸಾಮೀಪ್ಯಸಾರೂಪ್ಯಾದಿ ಪದವಿಗಳ ರೂಪದಲ್ಲಿ ನನಗೆ ನೀನು ಕೊಡಬೇಕಾಗಿಲ್ಲವಾಗಿ-ನಿನಗೆ ನಾನು ಯಾವ ಹಂಗು ಅವಲಂಬನೆಯವನಲ್ಲ-ಅಲಕ್ ನಿರಂಜನ್ ಶುದ್ಧವಾಗಿದ್ದೇನೆ-ಎಂದಿರುವರು ಬಸವಣ್ಣನವರು. ಭಕ್ತನು ಮಾಡಿದ ಪೂಜೆಗೆ ಫಲವಿಲ್ಲವೆಂದಾಗಲಿ, ಅದನ್ನು ಭಕ್ತನಿಗೆ ಶಿವನು ಕೊಡುವುದಿಲ್ಲವೆಂದಾಗಲಿ ಇದರ ಅಭಿಪ್ರಾಯವಲ್ಲ. ಫಲಪದವಿಗಳೆಂಬವು ಆಗುವ ಮಾನಸಿಕ ಹದವೇ ಹೊರತು-ಹೊರಗಿಂದ ಪಡೆವ ದಾನದತ್ತಿಗಳಲ್ಲ. ಹೀಗಾಗಿ ಬಸವಣ್ಣನವರಿಗೆ ಶಿವನು ಪ್ರತಿಫಲದಾಯಕನಾಗುತ್ತಿಲ್ಲ. ಅಂದರೆ ಶಿವನು ನಿಷ್ಪಲದಾಯಕನಾದರೂ-ಅವನ ಪೂಜಾದಿಗಳು ಯಾವ ಫಲಪದವಿಗಳಿಂದಲೂ ದೊರೆಯದ ನಿರಾಲಂಬ ಮಹಿಮೆಯನ್ನು ತನಗೆ ತಾನೇ ಭಕ್ತನ ಹೃದಯಾಂತರಾಳದಲ್ಲಿ ಆವಿರ್ಭವಿಸುವಂತೆ ಮಾಡುವವು. ಹೀಗಾಗಬೇಕಲ್ಲದೆ ಏನಾದರೊಂದು ನಿರೀಕ್ಷಣೆಯಲ್ಲೇ ಸ್ವಾಮಿಯನ್ನು ಸೇವಿಸುವುದರಲ್ಲಿ ಭಕ್ತಿಯೇನಿದೆ? ಭಕ್ತಿಯು ಸ್ವಯಮಾನಂದ ಶುದ್ಧ ಸ್ವರೂಪಿಣಿ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು