ಭಕ್ತನ ಐಕ್ಯಸ್ಥಲ - ವಿಷಯವಾಸನೆ
ಮಾಟ-ಕೂಟ, ಫಲ ಪ್ರಾಪ್ತಿ ಎಂಬ ಮಾತ ಕೇಳಲಾಗದು, ಶಿವ ಶಿವಾ
ನಿಮ್ಮ ಭಕ್ತರಿಗೆ ʼಮಾಡಿದೆʼನೆನ್ನದಿರೆಂದು
ಶ್ರೀ ಗುರುಲಿಂಗವು ಕೃಪೆಯ ಮಾಡಿದ ಕಾರಣ,
ಅಲ್ಲಿ ಮಾಡುವರೂ ಮಾಡಿಸಿಕೊಂಬವರೂ ನೀವೇ,
ಕೂಡಲಸಂಗಮದೇವಾ.
Transliteration Māṭa-kūṭa, phala prāpti' emba māta kēḷalāgadu, śiva śiva
nim'ma bhaktarige `māḍide`nennadirendu
śrī guruliṅgavu kr̥peya māḍida kāraṇa,
alli māḍidarū māḍisikombavarū nīvē,
kūḍalasaṅgamadēvā.
Manuscript
English Translation 2 Good God! such words as 'works'
'Union' and 'acquisition of reward'
I cannot bear to hear!
As the holy Guru and Liṅga have
So blessed me that I cannot say
'This for Thy bhaktas have I done'
Herein, the giver and reciiver Thou,
Ay, Thou alone,
O Kūḍala Saṅgama Lord!
Translated by: L M A Menezes, S M Angadi
Hindi Translation कर्म मिलन, फलप्राप्ति यह सुना नहीं जाता शिव शिव!
श्रीगुरुलिंग के कृपानुसार मत कहो कि तव भक्तार्थ मैंने किया
इसलिए कि वहाँ करनेवाले, लेनेवाले तुम ही हो कूडलसंगमदेव ॥
Translated by: Banakara K Gowdappa
Telugu Translation చేత - చేరిక - ఫలప్రాప్తి యను మాటలు
శివశివా వినరాదు నీ భక్తులకు
చేసినది చెప్పకుమని శ్రీ గురు లింగము
కృప చెప్పు కారణమున చేయువాడు
చేయించుకొనువాడూ నీవేనయ్యా సంగయ్యా.
Translated by: Dr. Badala Ramaiah
Tamil Translation செயல், இணைதல், பயன், பெற்றது என்னும்
பேச்சைக் கேட்கலாகாது ஐயனே
சிவனே, சிவனே, உம் பக்தருக்கு செய்தேன்
என்று கூறாதிருப்பாய் என ஸ்ரீகுரு
இலிங்கத்தை அருளிய காரணத்தால்
அங்கு செய்பவரும், செய்வித்துக் கொள்பவரும்
நீங்கள்தான் கூடல சங்கம தேவனே.
Translated by: Smt. Kalyani Venkataraman, Chennai
Marathi Translation
समरसभक्ती फलप्राप्ती` हे शब्द ऐकवत नाही शिवशिवा !
तुमच्या भक्तांची सेवा केली असे म्हणू नये.
श्रीगुरुलिंगाचा असा आदेश केल्याने
तेथे तुम्हीच आहात कर्ता करविता कूडलसंगमदेवा,
Translated by Shalini Sreeshaila Doddamani
ಶಬ್ದಾರ್ಥಗಳು ಕೂಟ = ; ಕೃಪೆ = ; ಪ್ರಾಪ್ತಿ = ;
ಕನ್ನಡ ವ್ಯಾಖ್ಯಾನ ಶಿವಭಕ್ತರಿಗೆ ಮಾಡಿದ ಸೇವೆಗೆ, ಶಿವನಿಗೆ ಮಾಡಿದ ಪೂಜೆಗೆ-ಫಲವನ್ನು ನಿರೀಕ್ಷಿಸಬಾರದು. ಆ ನಿರೀಕ್ಷಣೆ ಭಕ್ತಿ ಸಾಮ್ರಾಜ್ಯದಲ್ಲಿ ಕಿವಿಯಿಂದ ಕೇಳಲೂ ಬಾರದ ಹೀನ ಅಪರಾಧ-ಎನ್ನುವ ಅರ್ಥದಲ್ಲಿ ಗುರುವು ಭಕ್ತರಿಗೆ ದೀಕ್ಷೆ ಕೊಡುವಾಗ “ಶಿವಭಕ್ತರಿಗೆ ಸೇವೆ ಮಾಡು, ಮಾಡಿದೆನೆಂದು ಮನದಲ್ಲಿ ಎಣಿಸದಿರು”ಎಂದು ಹೇಳುವ ಉಪದೇಶವನ್ನು ಬಸವಣ್ಣನವರು ಈ ವಚನದಲ್ಲಿ ಪ್ರಸ್ತಾಪಿಸಿರುವರು.
ಅದರ ಪ್ರಕಾರ ಬಸವಣ್ಣನವರ ಕಾಲಕ್ಕೆ ಲಿಂಗದೀಕ್ಷೆ ಕೊಡುವಾಗ ಗುರುವಾದವನು ಭಕ್ತನಿಗೆ ಮಾಡುತ್ತಿದ್ದ ಉಪದೇಶದಲ್ಲಿ ನಿಷ್ಕಾಮಕರ್ಮವೂ ಒಂದಂಶವಾಗಿತ್ತೆಂಬುದನ್ನು ನಾವಿಲ್ಲಿ ಗಮನಿಸಬೇಕು,
ಹೀಗೆ ಭಕ್ತನು ಮಾಡುವ ದಾಸೋಹಕರ್ಮ ನಿಷ್ಕಾಮವಾದಾಗ-ಅವನು ಮಾಡುವ ಶಿವಪೂಜೆ ಆತ್ಮಪೂಜೆಯಾಗುತ್ತದೆ-ಅವನೇ ಶಿವನಾಗುತ್ತಾನೆ. ಇಂಥ ಸೇವೆಯನ್ನೂ ಪೂಜೆಯನ್ನೂ ಮಾಡಿದವನು ಸೇವ್ಯನೂ ಪೂಜ್ಯನೂ ಆಗುವನು. ಶಿವನೂ ಭಕ್ತನೂ ಒಂದಾಗುವುದು ಈ ಮಾಟ-ಕೂಟದ ಅಚ್ಚಬೇಟದಲ್ಲೇ.
ಮಾಟ : ದಾಸೋಹ, ಕೂಟ : ಶಿವಪೂಜೆ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು