•  
  •  
  •  
  •  
Index   ವಚನ - 512    Search  
 
ಭಕ್ತನ ಐಕ್ಯಸ್ಥಲ - ಲಿಂಗನಿಷ್ಥೆ
ತನುಸಾರಾಯರ, ಮನಸಾರಾಯರ, ಜ್ಞಾನಸಾರಾಯರ ತೋರಯ್ಯಾ, ನಿಮ್ಮ ಧರ್ಮ! ಭಾವಸಾರಾಯರ ಭಕ್ತಿಸಾರಾಯರ ತೋರಯ್ಯಾ, ನಿಮ್ಮ ಧರ್ಮ! ಕೂಡಲಸಂಗಮದೇವಯ್ಯಾ, ನಿಮ್ಮನರಿಯದವಗುಣಿಗಳ ತೋರದಿರಯ್ಯಾ, ನಿಮ್ಮ ಧರ್ಮ!
Transliteration Tānusārāyara, manasārāyara, jñānasārāyara tōrayya, nim'ma dharma! Bhāvasārāyara bhaktisārāyara tōrayya, nim'ma dharma! Kūḍalasaṅgamadēvayya, nim'manariyada avaguṇigaḷa tōradirayyā, nim'ma dharma!
Manuscript
English Translation 2 Be it Thy grace, O Lord, To show me those Whose body is glorified, Whose mind is glorified, Whose knowledge is glorified, Be it Thy grace, O Lord, To show me those Whose will is glorified, Whose piety is glorified! But show me not The vicious ones who know Thee not Of the impossible, possible! Out of Thy charity, O Kūḍala Saṅgama Lord, Translated by: L M A Menezes, S M Angadi
Hindi Translation तन के तत्वविदों को, मन के तत्वविदों को, ज्ञान के तत्वविदों को, दया कर दिखाओ स्वामी। भाव के तत्वविदों को भक्ति के तत्वविदों को, दयाकर दिखाओ प्रभो। कूडलसंगमदेव तुम से अनभिज्ञ अवगुणियों को दयाकर मत दिखाओ ॥ Translated by: Banakara K Gowdappa
Telugu Translation శరీర సారుల; సుమనోసారుల; జ్ఞానసారుల; చూపుమయ్యా నాకు ధర్మరతా! భావసారుల భక్తి సారుల; నారుల భక్తి సారుల; చూపుమయ్యా నీ కృపగల్గ సంగమదేవా నిన్ను తెలియని అజ్ఞుల నాకు చూపకయ్యా! దయామయా! Translated by: Dr. Badala Ramaiah
Tamil Translation உடலை, மனத்தை, ஞானத்தை உணர்ந்தோரை காட்டுவீர் ஐயனே, உம் அறம் தெளிந்த எண்ணம், தெளிந்தபக்தி உடையோரைக் காட்டுவீர் ஐயனே, உம் அறம் கூடல சங்கமதேவனே, உம்மை அறியாத நல்லியல்பற்றோரை காட்டாதீர் ஐயனே, உம் அறம் Translated by: Smt. Kalyani Venkataraman, Chennai
Marathi Translation तनात गुरु संबंध, मनाचे संबंध, ज्ञानात जंगमसंबंध जाणणाऱ्यांना दाखविणे आपला धर्म देवा. भावाचे मर्म, भक्तीचे मर्म जाणणाऱ्यांना दाखविणे आपला धर्म देवा. कूडलसंगमदेवा तुम्हाला न जाणणाऱ्या अवगुणींना न दाखविणे तुमचा धर्म देवा. Translated by Shalini Sreeshaila Doddamani
ಶಬ್ದಾರ್ಥಗಳು ಅವಗುಣಿ = ಕೆಟ್ಟಗುಣವುಳ್ಳವ; ತನು = ; ಭಾವ = ; ಸಾರಾಯ = ;
ಕನ್ನಡ ವ್ಯಾಖ್ಯಾನ ತನುಶುದ್ಧಿಯ ಮೂಲಕ ಮನವನ್ನೂ, ಮನಶುದ್ಧಿಯ ಮೂಲಕ ಜ್ಞಾನವನ್ನೂ, ಜ್ಞಾನಶುದ್ಧಿಯ ಮೂಲಕ ಭಾವವನ್ನೂ, ಭಾವಶುದ್ಧಿಯ ಮೂಲಕ ಅಚ್ಚಭಕ್ತಿಯನ್ನು ಸಾಧಿಸಿ ಸಿದ್ಧಪುರುಷರಾದ ಶರಣರನ್ನು ನಾನು ಕಾಣಬೇಕು-ಅಲ್ಲದವರು ನನಗೇಕೆ ಬೇಕು-ಎಂದು ಬಸವಣ್ಣನವರು ತಮ್ಮ ದಿವ್ಯಜೀವನಮಾರ್ಗದುದ್ದಕ್ಕೂ ಆತ್ಮಶೋಧನ ವಿಧಾನವನ್ನೇ ಅನುಸರಿಸುವುದಾಗಿ ಶಿವನಲ್ಲಿ ಅರಿಕೆಮಾಡಿಕೊಳ್ಳುತ್ತಿರುವರು. ಮಾನಸಲೋಕದ ಅಂತರತಮ ಭಾಗವನ್ನು ಭಾವವೆಂದು ಬಸವಣ್ಣನವರು ಗುರುತಿಸುವರು. ಅದು ಶುದ್ಧವಾದ ಹೊರತು ಭಕ್ತಿಯಿಲ್ಲ. ಆ ಭಾವ ಶುದ್ಧವಾಗಲು ಜ್ಞಾನ (ನಮ್ಮ ಸಂವೇದನೆಗಳು) ಶುದ್ಧವಾಗಬೇಕು. ಅದಕ್ಕೆ ತನು ಮನಗಳು ಸೋಪುಸೀಗೆಯಂತೆ ವರ್ತಿಸುವವೆಂಬುದು ಬಸವಣ್ಣನವರ ಅಭಿಪ್ರಾಯವೆಂದು ಊಹಿಸಬಹುದು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು

C-575 

  Thu 09 Jan 2025  

 https://savithru.blogspot.com/2025/01/blog-post_9.html


  ಸವಿತೃ
Karnataka