•  
  •  
  •  
  •  
Index   ವಚನ - 513    Search  
 
ಭಕ್ತನ ಐಕ್ಯಸ್ಥಲ - ಪ್ರಾರ್ಥನೆ
ಸಂಚಲವಿಲ್ಲದ, ಭಕ್ತಿವಂಚನೆಯಿಲ್ಲದ ಮಹಾಂತನ ತೋರಾ. ತನುಶುಚಿಗಳ ಮನಶುಚಿಗಳ ತೋರಾ, ಇಂತಪ್ಪ ಶಿವಲಿಂಗೈಕ್ಯರ ತೋರಿ, ಬದುಕಿಸು, ಕೂಡಲಸಂಗಮದೇವಾ.
Transliteration San̄calavillada, bhaktivan̄caneyillada mahāntana tōra. Tanuśucigaḷa manaśucigaḷa tōrā, intappa śivaliṅgaikyara tōri, badukisu, kūḍalasaṅgamadēvā.
Manuscript
English Translation 2 Show me, O Lord, A noble soul who is Free from deceit, nor yet A sanctimonious fraud. Show me. O Lord, Such as are pure of heart. Show me such as are merged In Śivaliṅga , O Lord Kūḍala Saṅgama, and let me live! Translated by: L M A Menezes, S M Angadi
Hindi Translation चलन रहित, भक्ति-वचंना रहित महंतों को दर्शाओ स्वामी, निर्मल तन, निर्मल मनवालों को दर्शाओ, ऐसे शिवलिंगैक्य संपन्नों को दिखाकर रक्षा करो कूडलसंगमदेव ॥ Translated by: Banakara K Gowdappa
Telugu Translation కామ సంగము ద్రెంచి అనుభావ సంగమున బడు వారిని విడలేను సదాశివుని ప్రేమించువారిని విడలేను విడలేను కూడల సంగమదేవా! Translated by: Dr. Badala Ramaiah
Tamil Translation மனம் அலையாத, பக்தியில் வஞ்சனையற்ற பெரியோரைக் காட்டுவாய் உடல் தூய்மை, மனத்தூய்மை உள்ளோரைக் காட்டுவாய் இலிங்கத்துடன் ஒன்றிய இத்தகையோரைக் காட்டி வாழ்விப்பாய் கூடல சங்கமதேவனே Translated by: Smt. Kalyani Venkataraman, Chennai
Marathi Translation चंचलतारहित, भक्त वंचना नसलेल्या महात्मांना दाखवावे. तनशुध्द, मनशुध्द असणारे दाखवावे. अशा शिवलिंगैक्यांना दाखवून रक्षण करावे कूडलसंगमदेवा. Translated by Shalini Sreeshaila Doddamani
ಶಬ್ದಾರ್ಥಗಳು ತನು = ; ಲಿಂಗೈಕ್ಯ = ; ವಂಚನೆ = ; ಸಂಚಲ = ;
ಕನ್ನಡ ವ್ಯಾಖ್ಯಾನ ಶಿವಲಿಂಗೈಕ್ಯಭಾವವುಳ್ಳ ಮಹಂತರನ್ನು ಕುರಿತು ಬಸವಣ್ಣನವರು ಕೊಂಡಾಡುತ್ತಿರುವರು. ಆ ಮಹಂತರು ತನುಶುಚಿಯುಳ್ಳವರು, ಮನಶುಚಿಯುಳ್ಳವರು. ಅವರು ಧನಶುಚಿಯುಳ್ಳವರು ಕೂಡ-ಅಂದರೆ ಐಶ್ವರ್ಯವನ್ನು ಸಂಚಯನ ಮಾಡುವವರಲ್ಲವೆಂದರ್ಥ. ಐಶ್ವರ್ಯವನ್ನು ಕೂಡಿಹಾಕುವ ಲೋಭಕ್ಕೆ ಸಿಕ್ಕಿ ಜನ ಭಕ್ತಿ ವಂಚನೆ ಮಾಡುವರು. ಹೀಗೆ ಮಾಡುವವರಲ್ಲ ಮಹಂತರು. ಅವರಲ್ಲಿ ಐಶ್ವರ್ಯ ರಾಶಿ ರಾಶಿಯಾಗಿ ಸುರಿದಿಲ್ಲದಿದ್ದರೂ ಬಂದ ತತ್ಕಾಲಕ್ಕೆ ನೀಡಿ ತೃಪ್ತಿಪಡಿಸಲುಂಟು ನೋಡಿ ವಚನ 327.(ಮಹಂತರೆಂದರೆ ಶರಣರು).

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು