•  
  •  
  •  
  •  
Index   ವಚನ - 514    Search  
 
ಭಕ್ತನ ಐಕ್ಯಸ್ಥಲ - ಭಕ್ತಿಮಾರ್ಗ
ಕಾಮಸಂಗವಳಿದು ಅನುಭಾವಸಂಗದಲುಳಿದವರ ಅಗಲಲಾರೆನು. ಶಿವಂಗೆ ಮಿಗೆಯೊಲಿದವರನು ನಾನು ಅಗಲಲಾರೆನು, ಕಾಣಾ, ಕೂಡಲಸಂಗಮದೇವಾ.
Transliteration Kāyasaṅgavaḷidu anubhāvasaṅgadaluḷidavara agalalārenu. śivaṅge migeyolidavaranu nānu agalalārenu, kāṇā. kūḍalasaṅgamadēvā.
Manuscript
English Translation 2 I cannot part from them In whom all intercourse with Lust Being dead, those Now harb our God. Mark you, Kūḍala Saṅgama Lord, I cannot part from them Who dote on Him. Translated by: L M A Menezes, S M Angadi
Hindi Translation काम संगमुक्त अनुभावसंगयुतों से मैं पृथक नहीं रह सकता। शिव के श्रद्धा भाजनों से मैं पृथक नहीं रह सकता, कूडलसंगमदेव ॥ Translated by: Banakara K Gowdappa
Telugu Translation కామ సంగము ద్రెంచి అనుభావ సంగమున బడు వారిని విడలేను సదాశివుని ప్రేమించువారిని విడలేను విడలేను కూడల సంగమదేవా! Translated by: Dr. Badala Ramaiah
Tamil Translation உடல் தொடர்புஅற்ற, சிவஞானமடைந்தோரை விட்டு அகலேன், சிவனை மிகுதியாக விரும்புவோரை விட்டு, நான் அகலேன் காணாய் கூடல சங்கம தேவனே. Translated by: Smt. Kalyani Venkataraman, Chennai
Marathi Translation कामसंग नष्ट केलेल्या अनुभावसंगीना सोडून राहू शकत नाही. शिवाला प्रेमाने आपलेसे करणाऱ्यांना सोडून राहू शकत नाही कूडलसंगमदेवा. Translated by Shalini Sreeshaila Doddamani
ಶಬ್ದಾರ್ಥಗಳು ಅನುಭಾವ = ನಿಜದ ಅಥವಾ ಪರಮಾತ್ಮನ ಅನುಭವ ಅಥವಾ ಸಾಕ್ಷತ್ಕಾರ; ಅಳಿದು = ; ಕಾಮ = ; ಮಿಗೆ = ; ಸಂಗ = ;
ಕನ್ನಡ ವ್ಯಾಖ್ಯಾನ ಶರಣರು ನಶ್ವರ ಚಪಲಗಳಿಗೆ ಬದಲಾಗಿ ಅನುಭಾವಸಂಗಕ್ಕೆ ಒಲಿದವರು. (ಅನುಭಾವಸಂಗವೆಂದರೆ ಸುಜ್ಞಾನ ಮತ್ತು ಸತ್ಕಾರ್ಯ ನಿಬಿಡವಾದ ದಿವ್ಯ ಜೀವನ ವಿಚಾರ). ಆ ಶರಣರು ಶಿವನಿಗೆ ಮಿಗೆ ಒಲಿದವರು-ಬಸವಣ್ಣನವರಾದರೋ ಆ ಶಿವಶರಣರಿಗೆ ಮಿಗೆ ಒಲಿದವರು. ಕಾಮಿಯೊಬ್ಬ ಕಾಮಿನಿಯನ್ನು ಕಾಮಿಸುವುದಕ್ಕೆ ಒಂದು ಮಿತಿಯಿರಬಹುದು-ಆದರೆ ಶಿವಕಾಮಿಯಾದ ಬಸವಣ್ಣನವರು ಶಿವಶರಣರ ಸಂಗಕ್ಕಾಗಿ ತಹತಹಿಸುತ್ತಿದ್ದುದು-ಆಸ್ಖಲಿತವಾಗಿ ಅವಿಶ್ರಾಂತವಾಗಿ ಮತ್ತು ಅವಿಚ್ಛಿನವಾಗಿ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು