ಇಂದು ಹುಟ್ಟಿದ ಕೂಸಿಂಗೆ ಇಂದೆ ಜವ್ವನವಾಯಿತ್ತಯ್ಯಾ!
ಆ ಕೂಸು ಬೀದಿಯಲ್ಲಿ ಒತ್ತೆಗೊಳ್ಳಲು ನಿಂದಿತ್ತಯ್ಯಾ!
ಇದರ ಸಂಗಸುಖದನುಭಾವವನು
ಕೂಡಲಸಂಗಮದೇವ ತಾನೇ ಬಲ್ಲ!
Transliterationಇಂದು ಹುಟ್ಟಿದ ಕೂಸಿಂಗೆ ಇಂದೆ ಜವ್ವನವಾಯಿತ್ತಯ್ಯಾ!
ಆ ಕೂಸು ಬೀದಿಯಲ್ಲಿ ಒತ್ತೆಗೊಳ್ಳಲು ನಿಂದಿತ್ತಯ್ಯಾ!
ಇದರ ಸಂಗಸುಖದನುಭಾವವನು
ಕೂಡಲಸಂಗಮದೇವ ತಾನೇ ಬಲ್ಲ!
Manuscript
MusicCourtesy:
English Translation 2Lo, that a baby born today
Should just today have grown to youth!
That baby now has taken its stand
Upon the street, soliciting!
But Lord Kūḍala Saṅgama alone can tell
How happy the experience of their love!
Translated by: L M A Menezes, S M Angadi
Hindi Translationआज ही जन्मे शिशु को आज ही यौवन प्राप्त हुआ
वह शिशु पथ पर वेश्या-शुल्क लेने खडी थी
इसका संगसुखानुभाव
कूडलसंगमदेव स्वयं जानता है ॥
Translated by: Banakara K Gowdappa
Telugu Translationఇప్పుడు పుట్టిన బిడ్డకు
ఇప్పటి కప్పుడే వయసు వచ్చి
విటద్రవ్యమునకై వీథి నిలచె
దాని యాసంగ సౌఖ్యానుభూతి
సంగమదేవుడే తెలియునయ్య!
Translated by: Dr. Badala Ramaiah
Tamil Translationஇன்று பிறந்த குழந்தை இன்றே ஞானம் எய்தியது
அக்குழந்தை வீதியிலே செல்வம் பெறுவதற்கு
நின்று கொண்டிருந்தது ஐயனே. இந்த பேரின்ப
நிலையின் உணர்வை கூடல சங்கம தேவனே அறிவான்.
Translated by: Smt. Kalyani Venkataraman, Chennai
Marathi Translationआज जन्मलेल्या शिशुला आजच यौवनावस्था प्राप्त झाली.
तो शिशु बाजारात प्रेमव्यवहार करु लागला प्रभू,
संगसुखाचा अनुभाव कूडलसंगम जाणे.
Translated by Shalini Sreeshaila Doddamani
ಶಬ್ದಾರ್ಥಗಳುಅನುಭಾವ = ನಿಜದ ಅಥವಾ ಪರಮಾತ್ಮನ ಅನುಭವ ಅಥವಾ ಸಾಕ್ಷತ್ಕಾರ; ಒತ್ತೆ = ; ಜವ್ವನ = ; ಸಂಗ = ;
ಕನ್ನಡ ವ್ಯಾಖ್ಯಾನಇವತ್ತು ಹುಟ್ಟಿದ ಹೆಣ್ಣುಮಗುವಿಗೆ ಇವತ್ತೇ ಯೌವನವಾಗಿದೆ. ಆಗಲೇ ಅದು ಬೀದಿಯಲ್ಲಿ ನಿಂತು ಕಂಡವರ ಕಡೆ ಕಣ್ಣು ಹೊಡೆಯತೊಡಗಿದೆ. ಆ ಚೆಲುವಬಾಲೆಯ ಸಂಗಸುಖವನ್ನು ಶಿವನೇ ಬಲ್ಲ-ಎಂಬುದು ವಚನದ ಸರಳ ವಿವರ.
ಇದರ ಧಾಟಿಯಿಂದ-ವೇಶ್ಯಾವಾಟಿಕೆಯಲ್ಲಿ ವಿಟರ ಅನ್ವೇಷಣೆಯಲ್ಲಿ ತೊಡಗಿರುವ ಒಬ್ಬ ಬಾಲಮುಗ್ದೆಯ ಚಿತ್ರ ಥಟ್ಟನೆ ಮೂಡುವುದಾದರೂ-ಇಂದೇ ಹುಟ್ಟಿದ ಕೂಸಿಂಗೆ ಇಂದೇ ಜವ್ವನವಾಯಿತ್ತು ಎಂಬ ಅಘಟಿತ ಘಟನೆಯಿಂದ ಅದರ ಸುತ್ತಲೂ ಅಲೌಕಿಕ ವಾತವರಣವೊಂದು ಏರ್ಪಟ್ಟು ಇಂದು ಎಂದರೆ ಈ ಜನ್ಮವೆಂದೂ, ಕೂಸು ಎಂದರೆ ಸಾಧಕನೆಂದೂ, ಜವ್ವನವೆಂದರೆ ವಿವೇಕೋದಯವೆಂದೂ, ಬೀದಿಯೆಂದರೆ ಶಿವಧರ್ಮ ಮಾರ್ಗವೆಂದೂ, ಒತ್ತೆ ಎಂದರೆ ಶಿವದೀಕ್ಷೆಯೆಂದೂ, ಅಂಗಸುಖವೆಂದರೆ ಲಿಂಗಾಂಗ ಸಾಮರಸ್ಯವೆಂದೂ, ಅನುಭಾವವೆಂದರೆ ದಿವ್ಯಸ್ಥಿತಿಯೆಂದೂ ಥಟ್ಟನೆ ಮಾರ್ಪಟ್ಟು ಹೊಳೆದು-ಶಿವಕಾಮಿಯಾದ ಭಕ್ತನೊಬ್ಬನ ವರ್ಣಚಿತ್ರವಾಗಿ ಮಾರ್ಪಟ್ಟು ಕಂಗೊಳಿಸುವುದು.
ಒತ್ತೆಗೊಳ್ ಎಂದರೆ ಸೂಳೆಯೊಬ್ಬಳು ವಿಟನಿಂದ ಮುಂಗಡವನ್ನು ಸ್ವೀಕರಿಸಿ ಅಗಲಿರುವ ಸಂಗಕ್ಕೆ ಮಾಡಿಕೊಳ್ಳುವ ಒಂದು ಒಪ್ಪಂದ ಜವ್ವನ<ಯೌವ್ವನ. “ಇದರಂಗಸುಖದನು ಭಾವವನು ಕೂಡಲ ಸಂಗಮದೇವ ತಾನೇ ಬಲ್ಲ”ನೆಂದರೆ ಬ್ರಹ್ಮಾನಂದವು ಅನಿರ್ವಚನೀಯವೆಂದರ್ಥ.
- ವ್ಯಾಖ್ಯಾನಕಾರರು ಡಾ.ಎಲ್. ಬಸವರಾಜು
ವಚನಕಾರ ಮಾಹಿತಿ
ಬಸವಣ್ಣ
ಅಂಕಿತನಾಮ:
ಕೂಡಲಸಂಗಮದೇವ
ವಚನಗಳು:
1409
ಕಾಲ:
12ನೆಯ ಶತಮಾನ
ಕಾಯಕ:
ಪ್ರಧಾನಮಂತ್ರಿ-ಶಿವಯೋಗ ಜೀವನ ಬೋಧನೆ
ಜನ್ಮಸ್ಥಳ:
ಇಂಗಳೇಶ್ವರ-ಬಾಗೇವಾಡಿ, ವಿಜಯಪುರ ಜಿಲ್ಲೆ.
ಕಾರ್ಯಕ್ಷೇತ್ರ:
ಕೂಡಲಸಂಗಮ-ಮಂಗಳವೇಢೆ-ಕಲ್ಯಾಣ
ತಂದೆ:
ಮಾದರಸ
ತಾಯಿ:
ಮಾದಲಾಂಬಿಕೆ
ಸತಿ/ಪತಿ:
ಗಂಗಾಂಬಿಕೆ ಮತ್ತು ನೀಲಾಂಬಿಕೆ
ಐಕ್ಯ ಸ್ಥಳ:
ಕೂಡಲಸಂಗಮ, ಹುನಗುಂದ ತಾಲ್ಲೂಕು, ಬಾಗಲಕೋಟೆ ಜಿಲ್ಲೆ.
ಪೂರ್ವಾಶ್ರಮ:
ಆಗಮಿಕ ಶೈವಬ್ರಾಹ್ಮಣ
ಸಂಕ್ಷಿಪ್ತ ಪರಿಚಯ:
ಬಸವಣ್ಣ ಭಾರತದ 12 ನೇ ಶತಮಾನದ ಧಾರ್ಮಿಕ ಕ್ರಾಂತಿ ಪುರುಷ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.