ಸಕ್ಕರೆಯ ಕೊಡನ ತುಂಬಿ ಹೊರಗೆ ಸವಿದರೆ ರುಚಿಯುಂಟೆ?
ತಕ್ಕೈಸಿ ಭುಜತುಂಬಿ ಲಿಂಗಸ್ಪರ್ಶನವ ಮಾಡದೆ
ಅಕ್ಕಟಾ! ಸಂಸಾರ ವೃಥಾ ಹೋಯಿತ್ತಲ್ಲಾ!
ಅದೇತರ ಭಕ್ತಿ? ಅದೇತರ ಯುಕ್ತಿ?
ಕೂಡಿಕೋ, ಕೂಡಲಸಂಗಮದೇವಾ.
Transliteration Sakkareya koḍana tumbi horage savidaḍe ruciyuṇṭe?
Takkaisi bhujatumbi liṅgasparśanava māḍade
akkaṭā! Sansāra vr̥thā hōyittallā!
Adētara bhakti? Adētara yukti?
Kūḍikō, kūḍalasaṅgamadēvā.
Manuscript
English Translation 2 Suppose you fill a pot
With sugar and lick it outwardly,
Would it taste sweet?
Unless you hold the Liṅga
And hug it round and round,
Alas, this world is gone in vain!
What sort of piety is it?
What sort of discipline?
O Kūḍala Saṅgama Lord,
Come, come, into my heart!
Translated by: L M A Menezes, S M Angadi
Hindi Translation घड़े में शक्कर भरकर
बाहर चाटने से स्वाद मिलेगा?
गाढालिंगन से लिंगदेव का स्पर्श न कर
हाय, जीवन व्यर्थ चला गया।
वह कैसे भक्ति है? कैसी युक्ति है?
आ मिलो कूडलसंगमदेव ॥
Translated by: Banakara K Gowdappa
Telugu Translation పాత్ర నిండుగ చక్కెర నింపి
పై పై రుచిచూడ ఫలమున్నదే?
శివుని చేతులార కౌగిలింపక
కటా! సంసారము వృథాపోయె కదరా!
అది యెట్టి భక్తి యో! అది యెట్టి యుక్తి యో!
కూడుకొనుమా కూడల సంగమదేవుని.
Translated by: Dr. Badala Ramaiah
Tamil Translation சர்க்கரையை குடத்தில் நிறைத்து
புறத்திலே சுவைத்தால் சுவைக்குமோ?
தோளில் அணைத்து இலிங்கத்தை உணராமல்
அடடா வாழ்க்கை வீணாயிற்று அன்றோ
அது எத்தகைய பக்தி? அது எத்தகைய யுக்தி?
கூடிக் கொள்வாய், கூடல சங்கம தேவனே.
Translated by: Smt. Kalyani Venkataraman, Chennai
Marathi Translation
साखरेने भरलेला डेरा बाहेरुन चाखलातर रुची कळेल?
मिठीत घेऊन लिंगस्पर्श केल्याविना
हायरे ! संसार हा व्यर्थ गेला देवा.
ती कसली भक्त ? ती कसली युक्ती ?
माझ्यात सामावून जावे कूडलसंगमदेवा.
Translated by Shalini Sreeshaila Doddamani
ಶಬ್ದಾರ್ಥಗಳು ಅಕ್ಕಟಾ = ದುಃಖ ಸೂಚಕ; ತಕ್ಕೈಸಿ = ; ವೃಥಾಯ = ; ಸವಿ = ;
ಕನ್ನಡ ವ್ಯಾಖ್ಯಾನ ಕೊಡದ ಒಳಗೆ ಸಕ್ಕರೆಯನ್ನು ತುಂಬಿಟ್ಟು ಹೊರಗಿಂದ ಆ ಕೊಡವನ್ನು ನೆಕ್ಕಿದರೆ ಆ ಸಕ್ಕರೆಯ ಸ್ವಾದ ಹತ್ತುವುದೇ ? ಶಿವಲಿಂಗವಿರುವ ಗುಡಿಯನ್ನು ಸುತ್ತಿ ಆ ಗುಡಿಗೆ ನಮಸ್ಕರಿಸಿದರೆ ಸಾಕೆ ? ಅದೇತರ ಭಕ್ತಿ ? ಶಿವಲಿಂಗವನ್ನು ತೋಳುಚಾಚಿ ಭುಜತುಂಬಿ ತಬ್ಬಿ ಆದ ಸ್ಪರ್ಶಸುಖದಿಂದ ಐಕ್ಯಾನಂದವನ್ನು ಆಸ್ವಾದಿಸಬೇಕು. ಇಲ್ಲದಿದ್ದರೆ ಅದೇತರ ಭಕ್ತಿ ? ಇದನ್ನು ತಿಳಿಯದ ನನ್ನ ಜೀವನ ವ್ಯರ್ಥವಾಯಿತು. ಎಲೆ ಶಿವನೇ ನೀನೇ ನನ್ನನ್ನು ನಡೆಸಿಕೋ ಕೂಡಿಕೋ ಎಂದು ಬಸವಣ್ಣನವರು ತಮ್ಮ ಭಕ್ತಿಸಾಮರ್ಥ್ಯವನ್ನು ಶಿವನಿಗೇ ನಿರ್ವಹಿಸಿ ಕೊಟ್ಟು-ಅವನೇ ತಮ್ಮನ್ನು ಪಾರವೈದಿಸಲೆಂದು ಪ್ರಾರ್ಥಿಸುತ್ತಿದ್ದಾರೆ.
ವಚನದಲ್ಲಿ ಬರುವ-“ತರ್ಕೈಸಿ ಭುಜತುಂಬಿ ಲಿಂಗಸ್ಪರ್ಶನವ ಮಾಡದೆ ಅಕಟಾ ಸಂಸಾರ ವೃಥಾ ಹೋಯಿತ್ತಲ್ಲಾ”ಎಂಬ ಮಾತಿನಿಂದ-ಬಸವಣ್ಣನವರು ಶಿವಾಲಯದ ಶಿವಲಿಂಗವನ್ನು ಕುರಿತಿರುವರೆನ್ನುವುದು ಸ್ಪಷ್ಟವೇ ಇದೆ-ಅಂಗೈಯ ಇಷ್ಟಲಿಂಗವನ್ನು ಭುಜತುಂಬಿ ತಬ್ಬುವುದೆಲ್ಲಿ ಸಾಧ್ಯ ? ಆದ್ದರಿಂದ ಶಿವಾಲಯವನ್ನಾಗಲಿ, ಅಲ್ಲಿರುವ ಶಿವಲಿಂಗವನ್ನಾಗಲಿ ಬಸವಣ್ಣನವರು ಅವಗಣನೆ ಮಾಡುವರೆಂಬ ನಂಬಿಕೆ ನಿರಾಧಾರವಾದುದು. ಮತ್ತು ಮೇಲೆ ಉಲ್ಲೇಖಿಸಿರುವ ವಚನಖಂಡದ ಸಂದರ್ಭದಲ್ಲಿ-ಯಮನು ಬಂದೆಳೆದಾಗ ಶಿವಲಿಂಗವನ್ನು ತಬ್ಬಿಹಿಡಿದು ಮೃತ್ಯುವನ್ನು ಜಯಿಸಿ ಅಮೃತತ್ವವನ್ನು ಪಡೆದನೆಂಬ ಮಾರ್ಕಂಡೇಯನ ನೆನಪಾಗಿರಬೇಕು ಬಸವಣ್ಣನವರಿಗೆ. ತರ್ಕೈಸಿ<ತಳ್ಕೈಸಿ : ತಬ್ಬಿ, ಸಂಸಾರ : ಜನ್ಮ, ಲೋಕ, ಜೀವನ. ಯುಕ್ತಿ : ಕೂಟ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು