•  
  •  
  •  
  •  
Index   ವಚನ - 518    Search  
 
ಭಕ್ತನ ಐಕ್ಯಸ್ಥಲ - ದೇವರು
ಕಾಳಿದಾಸಂಗೆ ಕಣ್ಣನಿತ್ತೆ, ಓಹಿಲಯ್ಯನ ನಿಜಪುರಕ್ಕೊಯ್ದೆ: ನಂಬಿ ಕರೆದೋಡೋ ಎಂದೆ, ತೆಲುಗು ಜೊಮ್ಮಯ್ಯಂಗೆ ಒಲಿದೆ, ದೇವಾ, ಕೂಡಲಸಂಗಮದೇವಾ, ಎನ್ನನೇಕೆ ಒಲ್ಲೆಯಯ್ಯಾ?
Transliteration Kāḷidāsaṅge kaṇṇanitte, ōhilayyana nijapurakkoyde: Nambi karedoḍo ende, telugu jom'mayyaṅge olide, dēvā, kūḍalasaṅgamadēvā, ennanēke olleyayya?
Manuscript
English Translation 2 To Kāḷidāsa you gave eyes, Carried Ōhilayya to Thy seat; When Nambi called, you answered him; Telugu Jommayya, too, you loved: Why do you spurn me only, Lord, Kūḍala Saṅgama? Translated by: L M A Menezes, S M Angadi
Hindi Translation कालिदास को नेत्र दिये ओहिलय्या को निजपुर ले गये, नंबी की पुकार का उत्तर दिया, तेलुगु जोम्मय्या पर प्रसन्न हुए देव, मुझे क्यों नहीं चाहते कूडलसंगमदेव? Translated by: Banakara K Gowdappa
Telugu Translation కన్ను లిచ్చితి కాళిదాసుకు నిజపురము చేర్చితి ఓహిలయ్యను ఓ యంటి నమ్బిపిలువ; తెలుగు జోమ్మయ్యను మెచ్చితి దేవ! నన్నేల నొల్ల వయ్యా! Translated by: Dr. Badala Ramaiah
Tamil Translation காளிதாசனுக்கு கண் அளித்தாய் ஓகிலய்யனை கைலாசத்திற்குக் கொண்டு ஏகினை நம்பி அழைத்த உடனே வந்தாய் தெலுங்கு ஜொம்மய்யனுக்கு அருளினாய் கூடல சங்கமதேவனே எனக்கு ஏன் அருளாய்? Translated by: Smt. Kalyani Venkataraman, Chennai
Marathi Translation कालीदासाला दृष्टी दिली, ओहिलय्याला कैलासाला नेले. नंबीची हाक ऐकली, तेलगू जोम्मयाला प्रसन्न झाला. कूडलसंगमदेवा, मज का आपलेसे करीत नाही ? Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಶಿವನೇ, ನಿನಗೆ ಕಣ್ಣನ್ನರ್ಪಿಸಿಕೊಂಡ ಕಾಳಿದಾಸನಿಗೆ ದೃಷ್ಟಿಯನ್ನು ಕೊಟ್ಟು ದ್ರಷ್ಟಾರನನ್ನಾಗಿ ಮಾಡಿದೆ. ನಿನಗೆ ಗುಗ್ಗುಳವಾಗಿ ತನ್ನ ದೇಹವನ್ನೇ ಸುಟ್ಟುಕೊಂಡ ಓಹಿಲಯ್ಯನನ್ನು ಕಾಯಬೆರಸಿ ಕೈಲಾಸಕ್ಕೆ ಕರೆದೊಯ್ದೆ. ನಂಬಿಯಣ್ಣನಿಗೆ ತಂದೆಯಾಗಿ ಅವನೆಂದುದಕ್ಕೆಲ್ಲಾ ಓಯೆಂದು ವಾತ್ಸಲ್ಯದಿಂದ ಅವನನ್ನು ಸಲಹಿದೆ. ಅವನಾದರೂ ಅಂಗಾತ ಮಲಗಿದ್ದ ಪ್ರಿಯತಮೆಯ ಉನ್ನತ ಸ್ತನಗಳು ಜವಳಿಲಿಂಗವಾಗಿ ಕಾಣಿಸಲು ಭಕ್ತಿಪರವಶನಾಗಿ ತಾಳವನ್ನು ಹಿಡಿದು ಶಿವನಾಮಸಂಕೀರ್ತನೆ ಮಾಡಿದನು. ಎಲೆ ಶಿವನೇ ನಾನೂ ನಿನ್ನನ್ನು ವರ್ಣಿಸಿ ಹಾಡುತ್ತೇನೆ. ನನ್ನ ತನುವನ್ನೇ ಅಲ್ಲ, ಪ್ರಾಣ ಅಭಿಮಾನವನ್ನೂ ದಕ್ಷಿಣೆಯಾಗಿಟ್ಟು ನಿನ್ನ ಶರಣರ ಸೇವೆ ಮಾಡುತ್ತಿದ್ದೇನೆ. ಸ್ವಾತಿಗಲ್ಲದೆ ಬಾಯಿದೆರೆಯದ ಮುತ್ತಿನ ಚಿಪ್ಪಿನಂತೆ ನಿನಗಲ್ಲದನ್ಯಕ್ಕೆ ನಾನು ಮನದೆರೆಯುವುದಿಲ್ಲ-ನನಗೇತಕ್ಕೆ ಪ್ರಸನ್ನನಾಗುತ್ತಿಲ್ಲ ಎಂದು ಬಸವಣ್ಣನವರು ಶಿವನನ್ನು ಪ್ರಾರ್ಥಿಸುತ್ತಿರುವರು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು