ಪರ ಚಿಂತೆ ಎನಗೇಕಯ್ಯಾ ನಮ್ಮ ಚಿಂತೆ ನಮಗೆ ಸಾಲದೆ?
ʼಕೂಡಲಸಂಗಯ್ಯ ಒಲಿದಾನೊ ಒಲಿಯನೊʼ ಎಂಬ ಚಿಂತೆ
ಹಾಸಲುಂಟು, ಹೊದೆಯಲುಂಟು!
Transliteration Para cinte enagēkayyā nam'ma cinte namage sālade?
ʼkūḍalasaṅgayya olidāno oliyanoʼ emba cinte
hāsaluṇṭu, hodeyaluṇṭu!
Manuscript
English Translation 2 Why should I mind another’s business, Lord?
Is not mine own enough for me ?
Whether Kūḍala Saṅga loves me or no,
Is business enough and even to spare!
Translated by: L M A Menezes, S M Angadi
Hindi Translation परचिंता हमें क्यों?
हमारी चिंता हमें पर्याप्त नहीं ?
कूडलसंगमदेव की अनुग्रह प्रप्ति की चिंता यथेष्ट है ॥
Translated by: Banakara K Gowdappa
Telugu Translation పరచింత నా కేలనయ్యా!
నా చింత నాకు చాలదే!
సంగయ్య మెచ్చునో, మెచ్చడో, యన్నదే చింత
తలబోసుకో దగినంత కలదయ్య నాకు:
Translated by: Dr. Badala Ramaiah
Tamil Translation பிறரைப்பற்றிய எண்ணம் நமக்கு எதற்கு ஐயனே?
நம்மைப் பற்றிய எண்ணம் நமக்குப் போதாதோ?
கூடல சங்கமதேவன் அருளினானோ, அருள்வனோ
என்னும் எண்ணத்தை போர்த்திக் கொண்டுள்ளேன்
Translated by: Smt. Kalyani Venkataraman, Chennai
Marathi Translation
दुजियांची चिंता, काय तिचे काज
पुरे आहे मज, माझी चिंता
कूडलसंगमदेव, होई का प्रसन्न
हिच चिंता जाण, मजलागी
चिंता अथरुण, चिंता पांघरूण
तव स्मरण चिंतन, चिंता माझी
अर्थ - अनावश्यक चिंतेत वेळ का घालवावा. कारण आम्हाला आमचीच चिंता करण्यास हा जन्म पुरणार नाही. आम्हास कूडलसंगमदेव (परमात्मा) या जन्मी पावणार की नाही हीच चिंता सदैव लागली आहे. म्हणून इतर चिंतेसाठी माझ्याजवळ वेळ कोठे आहे. आम्हाला याच जन्मी मोक्ष मिळविणे आहे.
महात्मा बसवेश्वरांनी श्रम व परमेश्वराच्या चिंतनात संपूर्ण वेळ (जीवन) घालविण्याचा व मानवाने चिंता सोडून चिंतनात मग्न व्हावे असा संदेश दिला. मनुष्याला काम करण्यास न वेळ मिळत गेल्यास त्याच्या मनात वाईट कृत्य करण्याचा विचार येण्याचा संभव असतो.
Translated by Rajendra Jirobe, Published by V B Patil, Hirabaug, Chembur, Mumbai, 1983
पर चिंता आम्हाल कशाला देवा ?
आमची चिंता आम्हा पुरेशी नाही का?
कूडलसंगमदेव
मला प्रसन्न होतील की नाही ही मला चिंता.
चिंताच अंथरुन, चिंताच पांघरुन.
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಪರರು ನಮಗೇನು ಅನ್ಯಾಯ ಮಾಡುವರೋ ಎಂಬ ಚಿಂತೆಗಿಂತ-ನಮಗಿರಬೇಕಾದ ಬಲವತ್ತರವಾದ ಚಿಂತೆಯೆಂದರೆ-ನಾವು ಇನ್ನೊಬ್ಬರಿಗೆ ಅನ್ಯಾಯ ಮಾಡುವ ಚಿಂತೆ ನಮಗಾಗದಂತೆ ನಮ್ಮ ಮನಸ್ಸನ್ನು ನಾವು ಶುದ್ಧೀಕರಿಸಿಕೊಂಡು ಅಲ್ಲಿ ಸರ್ವಜೀವದಯಾಗುಣವನ್ನು ತುಂಬಿಕೊಳ್ಳಬೇಕು. ಇಲ್ಲದಿದ್ದರೆ ಲೋಕವಿರಲಿ ನಾವು ಉದ್ಧಾರವಾಗಲು ಸಾಧ್ಯವಾಗುವುದಿಲ್ಲ.
ಆತ್ಮೋದ್ಧಾರದ ಚಿಂತೆ ಯಾವನಿಗಿರುವುದಿಲ್ಲವೋ ಅವನಿಗೆ ಪರರ ಉದ್ಧಾರವನ್ನು ಸಹಿಸುವ ಚಿಂತೆಯೂ ಇರುವುದಿಲ್ಲ. ಪರರನ್ನು ಖಂಡಿಸುವ ದಂಡಿಸುವ ನಿರ್ನಾಮಮಾಡುವ ರಚ್ಚಿನ ಚಿಂತೆಯೇ ಅವನಿಗೆ. ಅಂಥವರಿಗೆ ಆತ್ಮವಿಲ್ಲ. ಆತ್ಮಚಿಂತನೆಯಿಲ್ಲ. ಅಂಥವರನ್ನು ಕಂಡು ಬಸವಣ್ಣನವರಿಗೆ ಜಿಗುಪ್ಸೆ, ಅವರಿಂದ ಸಹಜೀವಿಗಳಿಗಾಗಬಹುದಾದ ಹಾನಿಯನ್ನು ಕಲ್ಪಿಸಿಕೊಂಡರೂ ಭಯ ಅವರಿಗೆ. ಈ ಲೋಕದ ಬದುಕು ಹದವಾಗಲೆಂದು ಹಾರೈಸುವ ಬಸವಣ್ಣನವರಿಗೆ-ಈ ಭಯವು ಭಕ್ತಿಯಾಗಿ, ಜಿಗುಪ್ಸೆಯು ವೈರಾಗ್ಯವಾಗಿ ಮೊದಲು ತಮ್ಮ ಅಂತರಂಗವನ್ನೇ ತಡಕಿನೋಡಿಕೊಳ್ಳುವರು.
ವ್ಯಷ್ಟಿಸಿದ್ದಿಯ ಈ ಹಂತದಲ್ಲಿ ಬಸವಣ್ಣನವರು ಕೂಡಲ ಸಂಗಮದಲ್ಲಿ ಮಾಡಿರಬಹುದಾದ ನಿತ್ಯ ತಪಸ್ಸಿನಿಂದ ಅವರ ಅಂತರಂಗದಲ್ಲಿ ಲೋಕಕಾರುಣ್ಯ ಬಹುಮುಖವಾಗಿ ಹುತ್ತಕಟ್ಟಿತು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು