ಭಕ್ತನ ಐಕ್ಯಸ್ಥಲ - ಶರಣಸತಿ-ಲಿಂಗಪತಿ
ಕಣ್ಣ ಕೋಪಕ್ಕೆ ಮುಂದರಿಯದೆ ನುಡಿದೆ!
ಮನಮೆಚ್ಚಿ ಮರುಳಾದೆ, ನೋಡವ್ವಾ !
ಕೇಳು, ಕೇಳವ್ವಾ ,ಕೆಳದೀ,
ಸಖಿಯರಿಲ್ಲದೆ ಸುಖವ ಬಯಸುವರುಂಟೆ? ಹೇಳಾ.
ಎನ್ನ ಮುನಿಸು ಎನ್ನಲ್ಲಿಯೆ ಅಡಗಿತ್ತು;
ಇನ್ನು ಬಾರಯ್ಯಾ, ಕೂಡಲಸಂಗಮದೇವಾ.
Transliteration Kaṇṇa kōpakke mundariyade nuḍide!
Manamacci maruḷāde, nōḍavvā!
Kēḷu, kēḷavvā,keḷadī,
sakhiyarillade sukhava bayasuvaruṇṭe? Hēḷā.
Enna munisu ennalliye aḍagittu;
innu bārayya, kūḍalasaṅgamadēvā.
Manuscript
English Translation 2 Without forethought, I blurted out
Losing my temper at first sight:
With all my heart, mark you,
I loved Him, was a fool for Him!
Tell me, do tell me lady, friend:
Would anybody seek joy apart from the lover?
My anger vanished in myself:
Come, then Kūḍala Saṅgama Lord,
Come, come!
Translated by: L M A Menezes, S M Angadi
Hindi Translation क्रोध के कारण बिना सोचे बोल उठी,
मैं मनसा प्रेम कर पागल बनी।
सुनो सखी सखियों के बिना
सुख चाहने पर प्राप्त हो सकता है?
मेरा कोप मुझमें ही छिप गया
अब आ जाओ कूडलसंगमदेव ॥
Translated by: Banakara K Gowdappa
Telugu Translation ముందు తెలియక కోపించి ఏమోయంటినమ్మా
చూడవే మది మెచ్చ వెఱ్ఱినై పోతినమ్మా
వినువినుమమ్మా! సఖులవిడిచి సుఖ మాసింపకల్గునే!
నా కోపము నాలో చల్లబడె
ఇక రమ్మనవే సంగయ్యను!
Translated by: Dr. Badala Ramaiah
Tamil Translation எழும் சினத்தினால் விளைவினை அறியாது
மொழிந்தேன் மனத்தை நயந்து மருளானேன் காணாய்
கேட்பாய், கேள் அம்மா
துணையின்றி இன்பத்தை விரும்பின்
கிடைக்குமோ, கூறுவாய்
என் சினம் என்னிடமே அடங்கியது
இனி வருவாய் கூடல சங்கமதேவனே.
Translated by: Smt. Kalyani Venkataraman, Chennai
Marathi Translation
डोळे लाल केले, मागचा-पुढचा विचार न करीता
मनाला येईल तसे वेड्यासम बोलले ग सखी.
ऐक सखी, सखीविना सुखाची अपेक्षा केली तरमिळे का सुख सांग?
माझा राग माझ्यातच दडला, आता तरी यावे देवा कूडलसंगमदेवा.
Translated by Shalini Sreeshaila Doddamani
ಶಬ್ದಾರ್ಥಗಳು ಕೆಳದಿ = ; ಕೋಪ = ; ಮರುಳ = ; ಸಖಿ = ;
ಕನ್ನಡ ವ್ಯಾಖ್ಯಾನ ನಲ್ಲನು ಒಲಿಸುತ್ತ ಕಣ್ಣೆದುರಿನಲ್ಲೇ ಸುಳಿದಾಡಿದಾಗ-ಮುನಿದು ಮುಂದುಗಾಣದೆ ಆಕ್ಷೇಪಣೆಯ ಮಾತನಾಡಿ ಕೋಪತಳೆದೆ. ನಿರಾಶನಾಗಿ ಪ್ರಿಯನು ಅತ್ತ ಹೋದ ಮೇಲೆ-ಇತ್ತ ನಾನು ಮನಸೋತು ವಿರಹದಿಂದ ಹುಚ್ಚಿಯಾಗಿದ್ದೇನೆ-ಎಂದು ತನ್ನ ಗೆಳತಿಯಲ್ಲಿ ದುಃಖವನ್ನು ತೋಡಿಕೊಳ್ಳುತ್ತಿರುವ ವಿರಹಚಿತ್ರದ ಹಿನ್ನೆಲೆಯಲ್ಲಿ ಬಸವಣ್ಣನವರೂ ತಮ್ಮ ದಿವ್ಯವಿರಹವನ್ನು ನಿವೇದಿಸಿಕೊಳ್ಳುತ್ತಿರುವರು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು