•  
  •  
  •  
  •  
Index   ವಚನ - 521    Search  
 
ಭಕ್ತನ ಐಕ್ಯಸ್ಥಲ - ಹುಟ್ಟು-ಸಾವು
ಲಜ್ಜೆಗೆಟ್ಟೆನು, ನಾಣುಗೆಟ್ಟೆನು; ಕುಲಗೆಟ್ಟೆನು, ಛಲಗೆಟ್ಟೆನು: ಸಂಗಾ, ನಿನ್ನ ಪೂಜಿಸಿ ಭವಗೆಟ್ಟೆನು ನಾನಯ್ಯಾ! ಕೂಡಲಸಂಗಮದೇವಯ್ಯಾ ನಿಮ್ಮ ಮುಟ್ಟಿ ಹುಟ್ಟುಗೆಟ್ಟೆನು ನಾನು!!
Transliteration Lajjegeṭṭenu, nāṇugeṭṭenu; kulageṭṭenu, chalageṭṭenu: Saṅga, ninna pūjisi bhavageṭṭenu nānayyā! Kūḍalasaṅgamadēvayya nim'ma muṭṭi huṭṭugeṭṭenu nānu!!
Manuscript
English Translation 2 I lost all shame and bashfulness; I lost all pride of class and self; Having adored Thee, O Saṅgā I lost this wordly life; Attaining thee, O Kūḍala Saṅgama Lord, I lost my wheel of births! Translated by: L M A Menezes, S M Angadi
Hindi Translation मैं लज्जाहीन हुआ, शीलहीन हुआ। कुलहीन हुआ और छलहीन॥ संगमेश तव पूजा कर मैं भवहीन हुआ, तव स्पर्श कर मैं जन्म-मुक्त हुआ कूडलसंगमदेव॥ Translated by: Banakara K Gowdappa
Telugu Translation సిగ్గు చెడె, లజ్జ చెడె; కులము చెడె; ఛలము చెడె నిను దలచి శివా! జన్మయే చెడె కదయ్యా! సంగా నిను ముట్ట నా పుట్టువే చెడెనయ్యా! Translated by: Dr. Badala Ramaiah
Tamil Translation வெட்கம் கெட்டேன், நாணம் கெட்டேன் குலம் கெட்டேன், உறுதி கெட்டேன் சங்கனே உம்மைப் பூசித்து, பிறவியகற்றினேன் கூடல சங்கம தேவனே உம்மை அடைந்து பிறவியை அகற்றினேன் ஐயனே. Translated by: Smt. Kalyani Venkataraman, Chennai
Marathi Translation लज्जेसि सोडिले, अहं ते दवडले गर्व सांडियिले, कुलगोत्र तुझी उपासना, कूडलसंगमदेवा बंध रहित भावा, पावलो मी तुझ्या चरण स्पर्शे कूडलसंगमदेवा निर्जक्या पावलो, सहजासहजी अर्थ - हे कूडलसंगमदेवा ! (परमेश्वर) तुझ्या चरण स्पर्शाने माझी लज्जा, गर्व, अहंता कूलगोत्र इत्यादि नष्ट झाले आणि जन्म बंधन रहित झाली म्हणजेच निजैक्या पावलो. तेही सहजासहजी. सत्याच्या सामर्थ्याला यथार्थ जाणल्यामुळे व तुझ्यावर पूर्ण विश्वासून राहिल्यामुळे मी तुझ्या चरणकमली लीन झालो. Translated by Rajendra Jirobe, Published by V B Patil, Hirabaug, Chembur, Mumbai, 1983 लाज सोडली, शरम सोडली, कुल सोडले, गर्व सोडला. लिंगदेवा तुमच्या पूजेने भवबंधन माझे तुटले देवा. कूडलसंगमदेवा, तुमच्या स्पर्शाने जन्मबंधन माझे तुटले. Translated by Shalini Sreeshaila Doddamani
ಶಬ್ದಾರ್ಥಗಳು ಕುಲ = ; ನಾಣು = ; ಭವ = ; ಲಜ್ಜೆ = ;
ಕನ್ನಡ ವ್ಯಾಖ್ಯಾನ ಚೆನ್ನಿಯು ಚೆನ್ನಿಗನೊಬ್ಬನನ್ನು ಎಷ್ಟು ಪ್ರೀತಿಸುವಳೆಂದರೆ-ಆ ಸಂಬಂಧವನ್ನು ಒಪ್ಪದ ತಾಯಿ ತಂದೆ ಮುಂತಾಗಿ ಯಾರನ್ನೂ ತೊರೆದುಕೊಂಡಾಳೇ ಹೊರತು ಆ ಚೆನ್ನಿಗನನ್ನು ಮಾತ್ರ ಬಿಡಲಾರಳು-ಬಿಟ್ಟು ಬದುಕಿರಲಾರಳು, ಜನ ಆಡಿಕೊಳ್ಳಲಿ, ಮರ್ಯಾದೆ ಹೋಗಲಿ, ಪ್ರಾಣಭಯವಿರಲಿ ಆ ಪ್ರೇಮಿಯನ್ನು ಪ್ರೇಮಿಸದೆ ಇರಲಾರಳು. ತನ್ನನ್ನು ಕುಲದಿಂದ ಹೊರಗೆ ಹಾಕಲಿ, ಅದುವರೆಗೆ ಅವಳೇ ರಕ್ಷಿಸಿಕೊಂಡು ಬಂದಿದ್ದ ಆತ್ಮಾಭಿಮಾನವೆಲ್ಲ ಚೂರಾಗಲಿ-ಅವಳು ಪ್ರೇಮದೀವಿಗೆಯನ್ನು ಜೀವನಪ್ರವಾಹದಲ್ಲಿ ತೇಲಿಬಿಡದೆ ನಿಲ್ಲಳು. ಇದು ಈ ಜೀವದ ಪ್ರೇಮಕಥೆ. ಭಕ್ತಿಯ ಕಥೆ ಮತ್ತಷ್ಟು ಅದ್ಭುತವಾಗಿಯೇ ನಡೆದೀತು. ಶಿವನಿಗೆ ಮಾರುಹೋದ ಜೀವಾತ್ಮವು ತನ್ನ ಸಾಧನೆಯ ಮಾರ್ಗದಲ್ಲಿ ಭೌತಿಕವಾದುದೆಲ್ಲವನ್ನೂ ಮುಡಿಪಿಟ್ಟು ಮಿಗಿಲಾಗಿ ಅಚಲವಾಗಿ ನಿಲ್ಲದೆ ಬಿಡದು. ಆ ಚೆನ್ನಿಯು ಪ್ರೇಮ ಭವದಲ್ಲಿ ಏಳುವ ದಳ್ಳುರಿಯಾದರೆ-ಈ ಜೀವಾತ್ಮದ ಭಕ್ತಿಪ್ರೇಮ ಆ ಭವದಾಚೆಯ ಅಂಚಿನ ಅಭವನಲ್ಲಿ ಒಂದಾಗಲು ಧಗಧಗಿಸುವ ಶುದ್ಧ ಧವಳಜ್ವಾಲೆ ! ಆ ಪ್ರೇಮದ ಮತ್ತು ಈ ಭಕ್ತಿಯ ಕೇಂದ್ರ ಒಂದೇ ಆದರೂ ಪರಿಧಿಗಳು ಉತ್ತರೋತ್ತರ ವಿಸ್ತೃತವಾಗಿ ಮಾಯಾಮಯವೆಂದು ನಿರಾಮಯವೆಂದು ತೀರ ಭಿನ್ನ ಭಿನ್ನ. ಇಂಥ ಭಕ್ತಿದರ್ಶನವನ್ನು ಪ್ರೇಮ ನಿದರ್ಶನದಲ್ಲಿ ಪಡಿಮೂಡಿಸಿರುವರು ಬಸವಣ್ಣನವರು. ಬ್ರಾಹ್ಮಣರಾಗಿ ಹುಟ್ಟಿದ ಬಸವಣ್ಣನವರು ಶಿವಪಂಥಕ್ಕೆ ಸೇರಿದ ಸಂದರ್ಭದಲ್ಲಿ ಏನೆಲ್ಲ ಮಾನಸಿಕ ಸಾಮಾಜಿಕ ನೋವನ್ನು ತಿಂದರೆಂಬುದನ್ನು ಇಲ್ಲಿ ಮಾತುಮಾತಿಗೂ- ಆ ಮಾತನ್ನು ಹೊರಳಿಸಿ ನೋಡಿ ಕಾಣಬಹುದು. ಬಸವಣ್ಣನವರು ಈ ಮತಾಂತರದ ಹಾದಿಯಲ್ಲಿ ಉಂಡ ನೋವು ಎಷ್ಟೇ ದಾರುಣವಾದರೂ-ಅವರು ಮುಂದುವರಿದು ಪಡೆದ ಆತ್ಮತೃಪ್ತಿಯನ್ನು ಈ ವಚನದಲ್ಲಿ ಮನಗಾಣಬಹುದಾಗಿದೆ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು