•  
  •  
  •  
  •  
Index   ವಚನ - 522    Search  
 
ಭಕ್ತನ ಐಕ್ಯಸ್ಥಲ - ಭಕ್ತ
ಮಾಡುವ ಭಕ್ತನ ಕಾಯ ಬಾಳೆಯ ಕಂಭದಂತಿರಬೇಕು: ಮೆಲ್ಲಮೆಲ್ಲನೆ ಹೊರೆಯೆತ್ತಿ ನೋಡಿದರೆ ಒಳಗೆ ಕೆಚ್ಚಿಲ್ಲದಿರಬೇಕು. ಮೇಲಾದ ಫಲವ ನಮ್ಮವರು ಬೀಜಸಹಿತ ನುಂಗಿದರು; ಎನಗಿನ್ನಾವ ಭವವಿಲ್ಲ, ಕಾಣಾ, ಕೂಡಲಸಂಗಮದೇವಾ.
Transliteration Māḍuva bhaktana kāya bāḷeya kambadantirabēku: Mellamellane horeyetti nōḍidare oḷage keccilladirabēku. Mēlāda phalava nam'mavaru bījasahita nuṅgidaru; enaginnāva bhavavilla, kāṇā, kūḍalasaṅgamadēvā.
Manuscript
English Translation 2 The body of an active devotee Must be even as the trunk Of a plantain-tree: When, peel by peel, you strip Its outer tegument, There must not be a core behind... Our own have swallowed The excellent fruit, Along with the seed itself. Mark you, Kūḍala Saṅgama Lord, No more a birth for me! Translated by: L M A Menezes, S M Angadi
Hindi Translation आचारशील भक्त की देह कदली सी होनी चाहिए; क्रमशः परते हटाकर देखने पर भीतर कुछ सार नहीं होना चाहिए। स्वजनों ने ऊपर को फल बीज सहित निगले मुझे आगे कोई भय नहीं है, कूडलसंगमदेव ॥ Translated by: Banakara K Gowdappa
Telugu Translation కొలచు భకుని కాయము అరటి కంభముగా నుండవలె; పొరలెత్తి చూచిన సెగ తగలరాదు; పై పండ్ల ను మా వారు గింజలతో మ్రింగెదరు; జన్మ లేదురా యిట పై సంగమదేవా! Translated by: Dr. Badala Ramaiah
Tamil Translation செய்யும் பக்தனின் உடல் வாழைத்தண்டைப் போல இருத்தல் வேண்டும். மெல்லமெல்ல பட்டையை விலக்கிக் காணின் வன்மையாக இருக்கலாகாது மேலே வந்த பழத்தை நம்மவர் விதையுடன் விழுங்கினர். எனக்கு இனி எந்தப் பிறவியும் இல்லை காணாய், கூடல சங்கமதேவனே. Translated by: Smt. Kalyani Venkataraman, Chennai
Marathi Translation भक्ताची काया केळीच्या खुंटाप्रमाणे असली पाहिजे. हळुहळू वरील पदर काडून पाहता आत काहीही असू नये. वरचे फळ बीजासहित गिळले शरणांनी. कूडलसंगमदेवा, मला आता कसले भय नाही पहा. Translated by Shalini Sreeshaila Doddamani
ಶಬ್ದಾರ್ಥಗಳು ಕಾಯ = ; ಕೆಚ್ಚು = ; ಹೊರೆ = ;
ಕನ್ನಡ ವ್ಯಾಖ್ಯಾನ ಭಕ್ತಿವ್ರತವನ್ನು ಕೈಗೊಂಡ ಭಕ್ತನ ನಿರಹಂಕಾರಸ್ಥಿತಿಯನ್ನೂ ಅದರ ಪರಿಣಾಮವನ್ನೂ ಬಾಳೆಯ ದಿಂಡಿನ ಮತ್ತು ಹಣ್ಣಿನ ನಿದರ್ಶನದಿಂದ ಈ ವಚನದಲ್ಲಿ ವಿವರಿಸಲಾಗಿದೆ. ಬಾಳೆಯ ದಿಂಡಿನಲ್ಲಿ ಪೊರೆಯಾದ ಮೇಲೆ ಪೊರೆಯನ್ನು ಸುಲಿದು ನೋಡಿದರೆ ಒಳಗೆ ಕೆಚ್ಚಿನ ಗಡುಸುಭಾಗವೇ ಸಿಗುವುದಿಲ್ಲ. ಹಾಗೆಯೇ ಸೇವಾ ಸಂದರ್ಭದಲ್ಲಿ ಭಕ್ತನ ತನುಮನಧನವನ್ನು ಶರಣರು ಸುಲಿದು ನೋಡಿದರೆ ನಾನು ಮಾಡಿದೆನೆಂಬ ಅಹಂಕಾರ ಅಲ್ಲಿ ಯಾವ ಸ್ತರದಲ್ಲೂ ಕಾಣಬರುವುದಿಲ್ಲ. ಆ ಭಕ್ತನ ಸೇವಾವಿಸ್ತಾರವೆಲ್ಲ ವಿನಯದಿಂದ ಅರ್ಪಣಭಾವದಿಂದ ಕೃತಕೃತ್ಯತೆಯಿಂದ ನಿರಂಜನವಾಗಿರುತ್ತದೆ. ಅಂಥ ಭಕ್ತನಿಗೆ ಮರುಜನ್ಮವಿಲ್ಲದೆ ಶಿವನಲ್ಲಿ ಸ್ಥಿರಸೇಸೆಯಾಗುವುದು-ಇದನ್ನು ಕುರಿತೇ-“ಮೇಲಾದ ಫಲವ ನಮ್ಮವರು ಬೀಜಸಹಿತ ನುಂಗಿದರು” ಎಂದಿರುವರು ಬಸವಣ್ಣನವರು. ಕೆಚ್ಚಿಲ್ಲದ ಬಾಳೆಗೆ ಬೀಜವಿಲ್ಲದ ಫಲವೆಂಬ ಈ ಕಲ್ಪನೆಯು ನಿಷ್ಕಾಮಕರ್ಮ(ದಾಸೋಹ)ದ ಮಹಂತಿಕೆಯನ್ನು ಭಗವದ್ಗೀತೆಗಿಂತಲೂ ಶುಭ್ರಶ್ಯಾಮಲವಾಗಿ ಹಸಿರುಹೊಂಬಣ್ಣವಾಗಿ ಹೆಚ್ಚು ಉಜ್ವಲವಾಗಿ ಚಿತ್ರಿಸಲಾಗಿದೆ-ಈ ವಚನದಲ್ಲಿ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು