•  
  •  
  •  
  •  
Index   ವಚನ - 523    Search  
 
ಭಕ್ತನ ಐಕ್ಯಸ್ಥಲ - ಲಿಂಗ-ಜಂಗಮ
ಜಂಗಮವ ಕೂಡಿಕೊಂಡು ಲಿಂಗಾರ್ಚನೆಯ ಮಾಡುವುದು ಲೇಸಯ್ಯಾ ಭಕ್ತಂಗೆ, ಆ ಭಕ್ತನ ಕೂಡಿಕೊಂಡು ಲಿಂಗಾರ್ಚನೆಯ ಮಾಡುವುದು ಲೇಸಯ್ಯಾ ಜಂಗಮಕ್ಕೆ ಆ ಜಂಗಮದ ಕರ್ತವ್ಯವೆ ಆ ಭಕ್ತಂಗೆ ದಾಸೋಹ! ಆ ಭಕ್ತನ ಕಿಂಕಲವೆ ಆ ಜಂಗಮಕ್ಕೆ ದಾಸೋಹ! ಆ ಭಕ್ತನೊಳಗೆ ಜಂಗಮವಡಗಿ, ಆ ಜಂಗಮದೊಳಗೆ ಭಕ್ತನಡಗಿ- ಇದೇನೆಂದು ಹವಣಿಸುವೆನಯ್ಯಾ, ಎರಡೊಂದಾದ ಘನವ? ಇದೇನೆಂದುಪಮಿಸುವೆನಯ್ಯಾ, ತೆರಹಿಲ್ಲದ ಘನವ? ಈ ಎರಡಕ್ಕೆ ಭವವಿಲ್ಲೆಂದು ಕೂಡಲಸಂಗಯ್ಯಾ, ನಿಮ್ಮ ಶ್ರುತಿಗಳು ಹೇಳಿದುವಾಗಿ, ನಿಮ್ಮ ಕರುಣವೆನಗಾಯಿತ್ತು.
Transliteration Jaṅgamava kūḍikoṇḍu liṅgārcaneya māḍuvudu lēsayyā bhaktaṅge, ā bhaktana kūḍikoṇḍu liṅgārcaneya lēsayya jaṅgamakke māḍuvudu ā jaṅgamada kartavyave ā bhaktaṅge dāsōha! Ā bhaktana kiṅkalave ā jaṅgamakke dāsōha! Ā bhaktanoḷage jaṅgamavaḍagi, ā jaṅgamadoḷage bhaktanaḍagi- idēnendu havaṇisuvenayyā, eraḍondāda ghanava? Idēnendupamisuvenayyā, terahillada ghanava? Ī eraḍakke bhavavillendu kūḍalasaṅgayya, nim'ma śrutigaḷu hēḷidaru, nim'ma karuṇavenagāyittu.
Manuscript
English Translation 2 Good for Bhakta if he worships Liṅga alone with Jaṅgama ; Good for the Jaṅgama if he worships Liṅga along with the Bhakta ,too; The duty itself of the Jaṅgama Becomes the Bhakta's humbleness; The Bhakta's humbleness, in its turn, Becomes theJaṅgama's When Jaṅgama is merged in Bhakta And Bhakta merged in Jaṅgama, What way could I describe, O Lord, The glory of the two made one? To what shall I compare, O Lord, This glory of union indivisible? Even as Thy Śrutis have revealed, These two are free from birth; Therefore,Thy grace descended upon me, O Kūḍala Saṅga Lord! Translated by: L M A Menezes, S M Angadi
Hindi Translation जंगम से मिलकर भक्त को लिंगार्चन करना अच्छा है । भक्त से मिलकर जंगम को लिंगार्चन करना अच्छा है। जंगम का कर्तव्य ही, भक्त का दासोह है। नम्रता ही किंकरता , जंगम का दासोह है। भक्तों में जंगम के समाने और जंगम में भक्त के समाने का वर्णन कैसे करूँ प्रभो? दो के एक होने की महिमा का उस अखंड महिमा का उपमान क्या दूँ स्वामी? कूडलसंगमदेव तव श्रृतियाँ कहती हैं इन दोनों के लिए भव नहीं है यों मुझ पर तव करुणा हुई ॥ Translated by: Banakara K Gowdappa
Telugu Translation జంగముని గూడి లింగమును గొల్చుట మంచిదయ్యా భక్తునకు; భక్తుని గూడి లింగార్చన సేయుట మంచిదయ్యా జంగమునకు జంగమ కర్తవ్యమే భక్తునకు దాసోహము; భక్తుని కైంకర్యమే జంగమ దాసోహము భక్తునిలో జంగముడు; జంగమునిలో భక్తుడు; కలియు కలియక నేమని యుపమింతునయ్య? ద్వంద్వ మేకమౌఘనత దేనితో నుపమింతు తెలిపి లేని ఘనత నీ యిద్దరికీ మఱి జన్మ లేదని సంగని శ్రుతి దెల్పుచుండె, స్వామి దయ కల్గెనయ్యా నాకు Translated by: Dr. Badala Ramaiah
Tamil Translation பக்தனிற்கு ஜங்கமனுடன் கூடிக்கொண்டு இலிங்கத்தை அர்ச்சிப்பது நல்லது அந்த பக்தனைக் கூடிக் கொண்டு இலிங்கத்தை அர்ச்சிப்பது ஜங்கமனுக்கு நல்லது அந்த ஜங்கமனுக்குத் தொண்டாற்றுவதே அந்தபக்தன் ஜங்கமனுக்கீயும் விருந்தாம் அந்த பக்தனின் தொண்டுதான் ஜங்கமனுக்கு விருந்தாம் அந்த பக்தனிடம் அந்த ஜங்கமன் அடங்கி அந்த ஜங்கமனிடம் அந்த பக்தன் அடங்கி இதனை எப்படி ஒப்பிடுவேன் ஐயனே? இடையீடற்ற மேன்மையை? இந்த இரண்டிற்கும் பிறவி இல்லை என்று கூடல சங்கமதேவனே சுருதிகள் கூறுவதால் உம் அருள் எனக்குக் கைகூடியது. Translated by: Smt. Kalyani Venkataraman, Chennai
Marathi Translation जंगमासंगे लिंगार्चना करणे भक्ताला चांगले आहे देवा. त्या भक्तासंगे लिंगार्चना करणे जंगमाला चांगले आहे. त्या जंगमाचे कर्तव्य भक्ताचा दासोह. त्या भक्ताची सेवा जंगमाचा दासोह. त्या भक्तात तो जंगम समरस झाला. त्या जंगमात तो भक्त समरस झाला कसे वर्णन करु देवा, दोनाचे एक झालेल्या घनाचे? कसली उपमा देवू देवा या सांद्रधनाला? हे दोघे भव विरहीत आहे असे तुमची श्रुती सांगते. तुमची कृपा माझ्यावर झाली कूडलसंगमदेवा. Translated by Shalini Sreeshaila Doddamani
ಶಬ್ದಾರ್ಥಗಳು ಅರ್ಚನೆ = ಪೂಜೆ; ಕರ್ತೃತ್ವ = ; ಕಿಂಕಲ = ; ಜಂಗಮ = ; ದಾಸೋಹ = ; ಭಕನ = ; ಲೇಸು = ;
ಕನ್ನಡ ವ್ಯಾಖ್ಯಾನ ಭಕ್ತನು ಜಂಗಮವನ್ನು ಕೂಡಿಕೊಂಡು ಶಿವಪೂಜೆ ಮಾಡಬೇಕು. ಆ ಜಂಗಮವಾದರೂ ಭಕ್ತನನ್ನು ಕೂಡಿಕೊಂಡೇ ಶಿವಪೂಜೆ ಮಾಡಬೇಕು. ಇದು ಪರಸ್ಪರ ಒಪ್ಪುವುದು. ಅಂದರೆ ಜಂಗಮವು ಭಕ್ತವೃಂದಕ್ಕೆ ಸಂಬಂಧಿಸಿದಂತೆ ಮಾಡಬೇಕಾದ ಕರ್ತವ್ಯ-ಆ ಭಕ್ತನನ್ನು ಕೂಡಿಕೊಂಡು ಲಿಂಗಾರ್ಚನೆಯನ್ನು ಮಾಡುವುದು ಎಂದಂತಾಯಿತು. ಮತ್ತು ಭಕ್ತನು ಜಂಗಮಕ್ಕೆ ಸಂಬಂಧಿಸಿದಂತೆ ಮಾಡಬೇಕಾದ ಕರ್ತವ್ಯ-ಆ ಜಂಗಮವನ್ನು ಕೂಡಿಕೊಂಡು ಲಿಂಗಾರ್ಚನೆಯನ್ನು ಮಾಡುವುದು ಎಂದಂತಾಯಿತು. ಈ ಉಭಯ ಸಂದರ್ಭದಲ್ಲಿಯೂ ಜಂಗಮನಿಗೆ ಭುಕ್ತಿ, ಭಕ್ತನಿಗೆ ಭಕ್ತಿ ಎಂದಂತೆ ಆಯಿತು. ಈ ವಚನವನ್ನು ಮುಂದುವರಿದು ಪರಿಶೀಲಿಸಿದರೆ : ಭಕ್ತನು ಮಾಡಬೇಕಾದ ದಾಸೋಹವೆಂದರೆ ಜಂಗಮವನ್ನು ಕೂಡಿಕೊಂಡು ಲಿಂಗಾರ್ಚನೆ ಮಾಡುವುದು. ಜಂಗಮ ಮಾಡಬೇಕಾದ ದಾಸೋಹವೆಂದರೆ ಭಕ್ತನನ್ನು ಕೂಡಿಕೊಂಡು ಲಿಂಗಾರ್ಚನೆ ಮಾಡುವುದು ಎಂದಂತಿದೆ. ಈ ಸಂದರ್ಭದಲ್ಲಿ-ಜಂಗಮವು ಭಕ್ತನ ಸಂಬಂಧವಾಗಿ ಮಾಡಬೇಕಾದ ಕೆಲಸ(ಲಿಂಗಾರ್ಚನೆ)ಕ್ಕೆ “ಕಿಂಕಿಲ”(ಕೈಂಕರ್ಯ) ಎಂದಿರುವುದು-ಒಬ್ಬ ಜಾತಿ ಜಂಗಮನು ಹೊಟ್ಟೆಪಾಡಿನ ದೃಷ್ಟಿಯಿಂದ ಮಾಡಬೇಕಾದ ಲಿಂಗಾರ್ಚನೆಗೆ ಅನ್ವಯಿಸೀತೇ ಹೊರತು ಶುದ್ಧ ಲಿಂಗಾರ್ಚನೆಗಲ್ಲ. ಈ ವಚನದಲ್ಲಿ ಮತ್ತೆಯೂ ಮುಂದುವರಿದರೆ-ಭಕ್ತ-ಜಂಗಮವೆರಡಕ್ಕೂ ಭವವಿಲ್ಲವೆನ್ನುತ್ತ-ಜಂಗಮಕ್ಕೆ ‘ಭವ’(ಪುನರ್ಜನ್ಮ)ವಿಲ್ಲವೆಂಬಂಥ ಹೇಳಬೇಕಾಗಿಲ್ಲದ ಮಾತುಗಳನ್ನು ಹೇಳಿ ಆ ಹೇಳಿದವನು ಅಪ್ರಬುದ್ಧನೆಂಬುದನ್ನು ಸ್ಥಾಪಿಸುವುದು. ಇದು ಬಸವಣ್ಣನವರ ವಚನವಲ್ಲ. ಪ್ರತಿಯೊಬ್ಬ ಭಕ್ತನೂ ಪ್ರತಿದಿನವೂ ಪ್ರತಿಸಲವೂ ಕೂಡಿಕೊಂಡು ಲಿಂಗಾರ್ಚನೆ ಮಾಡಲು ಒದಗುವಂತೆ ಎಲ್ಲೆಲ್ಲೂ ಬಿದ್ದಿರುವ ಒಂದು ಅಗ್ಗವಾದ ವಸ್ತುವಲ್ಲ ಜಂಗಮವೆಂಬುದು. ಜಾತಿಜಂಗಮರ ಪರೋಪಜೀವನದ ದಿವ್ಯೀಕರಣಕ್ಕಾಗಿ ಈ ವಚನ ಒಬ್ಬ ಜಾತಿಜಂಗಮನಿಂದಲೇ ಪ್ರಕ್ಷಿಪ್ತವಾಗಿದೆಯೆನ್ನಲಡ್ಡಿಯಿಲ್ಲ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು