•  
  •  
  •  
  •  
Index   ವಚನ - 524    Search  
 
ಭಕ್ತನ ಐಕ್ಯಸ್ಥಲ - ಭಕ್ತಿ
ಹರಿವ ನದಿಯ ತೆರನ ಹೋಲಬಲ್ಲರೆ ಭಕ್ತಿ; ಕೂಡಿ ಸುಯಿಧಾನವ ನೀಡಬಲ್ಲರೆ ಭಕ್ತಿ. ನೀಡಿ ಮಿಕ್ಕುದ ಕಾಯ್ದುಕೊಂಡಿರಬಲ್ಲರೆ ಕೂಡಿಕೊಂಡಿಪ್ಪ ನಮ್ಮ ಕೂಡಲಸಂಗಮದೇವ!
Transliteration Hariva nadiya terana hōlaballare bhakti; kūḍi suyidhānava nīḍaballare bhakti. Nīḍi mikkuda kāydukoṇḍiraballare kūḍikoṇḍippa nam'ma kūḍalasaṅgamadēva!
Manuscript
English Translation 2 This is devotion: to be like The channel of a flowing stream, To offer sacrificial gifts sincerely If, having offered, you can reserve What's left, Lord Kūḍala Saṅgama Will be one with you! Translated by: L M A Menezes, S M Angadi
Hindi Translation बहती नदी की भाँति हो, तो वह भक्ति है , मिलकर भोग समर्पित करे तो वह भक्ति है, अर्पित कर शेष की रखवालि करे तो हमारे कूडलसंगमदेव लीन होंगे ॥ Translated by: Banakara K Gowdappa
Telugu Translation పాఱునదికి బోల్పవచ్చునే భక్తి ? కూడు సంతృప్తికి సమమౌనె భక్తి ప్రసాదమునకై వేచియున్న సంగయ్య లోగూడునయ్యా! Translated by: Dr. Badala Ramaiah
Tamil Translation பாயும் நதியின் போக்கை உவமிக்க வியலின் அதுபக்தி. உடனடியாக சமைக்கும் பொருட்களை அளிக்கவியலின் அதுபக்தி. அளித்து எஞ்சியதை பிரசாதமாக ஏற்கவியலும் எனின் முக்தி நம் கூடல சங்கமதேவன் கூடிக் கொள்வான் ஐயனே. Translated by: Smt. Kalyani Venkataraman, Chennai
Marathi Translation वाहत्या नदीप्रमाणे असावी भक्ती. मनाने धन अर्पित करणे हीच भक्ती. अर्पण केल्यानंतर शेषप्रसाद सुरक्षित ठेवला तर आपलेसे करतील आमचे कूडलसंगमदेव. Translated by Shalini Sreeshaila Doddamani
ಶಬ್ದಾರ್ಥಗಳು ತೆರೆ = ; ಸಯಿಧಾನ = ; ಹರವ = ;
ಕನ್ನಡ ವ್ಯಾಖ್ಯಾನ ಭಕ್ತಿಯನ್ನು ಹರಿಯುವ ನದಿಗೆ ಹೋಲಿಸಲಾಗಿದೆ. ನದಿಯ ಲಕ್ಷಣವೇನು ? ಅದು ಸಮುದ್ರದ ಕಡೆಗೇ ಪ್ರವಹಿಸಿ ಅದರಲ್ಲೇ ಲೀನವಾಗುವುದು. ಆ ಮುನ್ನ ತಾನು ಹರಿಯುವ ಪಾತ್ರದುದ್ದಕ್ಕೂ ಇಕ್ಕೆಲದಲ್ಲೂ ಸಸ್ಯಸಮೃದ್ಧಿಗೆ ನೆರವಾಗಿ-ಭೂಚರ ಖೇಚರ ಜೀವಕೋಟಿಗೆ ಪ್ರಾಣಾಧಾರಾವಾಗುವುದು. ಭಕ್ತಿಯಾದರೋ ಶಿವನ ಕಡೆಗೇ ಗಮನಿಸಿ-ಅಲ್ಲಿ ಐಕ್ಯವಾಗುವ ಮುನ್ನ ತನ್ನ ಕಾರ್ಯಕ್ಷೇತ್ರದುದ್ದಕ್ಕೂ ಜೀವ ಜಾಲಕ್ಕೆ ಸಮೃದ್ಧಿದಾಯಕವಾಗಿರುವುದು. ಇಂಥ ಭಕ್ತಿವ್ಯವಹಾರವುಳ್ಳವನೇ ಭಕ್ತ. ಮೇಲೆಮೇಲೆ ತ್ಯಾಗ ಮಾಡುವುದಕ್ಕಾಗಿಯೇ ದಕ್ಷತೆಯಿಂದ ದುಡಿಯುತ್ತಿರುವ ಜೀವಕ್ಕೆ ಮತ್ತೊಂದು ಹೆಸರು “ಭಕ್ತ”ನೆಂಬುದು. ಈ ವಚನದಲ್ಲಿ “ನೀಡಿ ಮಿಕ್ಕುದ ಕಾಯ್ದುಕೊಂಡಿರುವ” ಮಾತು ಬಹಳ ಗಮನಾರ್ಹವಾದುದು, ಭಕ್ತನ ಆರ್ಜನೆ-ಸ್ವತ್ತು ಸಂಪತ್ತು ಏನಿದೆಯೋ ಅದೆಲ್ಲಾ ಪರಾರ್ಥಕ್ಕಾಗಿ ನಿಯೋಜಿಸಲ್ಪಡಬೇಕು. ಉಳಿದುದು ಕೂಡ-ತನ್ನದಲ್ಲ ಎಂದು, ಶಿವನ ಸೊಮ್ಮು ಎಂದು, ಎಲ್ಲವೂ ಆಖೈರಾಗಿ ಸಮಾಜಕ್ಕೇ ಸಲ್ಲಬೇಕಾದ ಆಸ್ತಿಯೆಂದು, ಅಪವ್ಯಯವಾಗದಂತೆ ಸಂರಕ್ಷಿಸಲ್ಪಡಬೇಕು. ಹೀಗಲ್ಲದೆ ಭಕ್ತನಾದವನು ಬರೀ ವಿಭೂತಿ ರುದ್ರಾಕ್ಷಿ ಮಂತ್ರ ಲಿಂಗವೆಂದು ಆಧ್ಯಾತ್ಮಿಕವಾಗಲಾರನು, ಭಕ್ತನು ಒಂದನೆಯದಾಗಿ-ದುಡಿಯಬೇಕು. ಎರಡನೆಯದಾಗಿ-ದುಡಿದುದನ್ನು ಭಕ್ತರಿಗೆ ತಲುಪುವಂತೆ ವಿತರಿಸಬೇಕು, ಮೂರನೆಯದಾಗಿ-ವಿತರಿಸಿ ಉಳಿದುದನ್ನು ಶಿವನ ಸೊಮ್ಮೆಂದು ರಕ್ಷಿಸಿಕೊಂಡಿರಬೇಕು. “ಶಿವನ ಸೊಮ್ಮ ಶಿವಂಗೆ ಮಾಡದೆ ಅನ್ಯಕ್ಕೆ ಮಾಡಿದರೆ ತನ್ನ ಭಕ್ತಿ ತನ್ನನೆ ಕೆಡಿಸುವುದು” (ನೋಡಿ ವಚನ 214). ಹೀಗೆ ಬಸವಣ್ಣನವರ ಅಭಿಪ್ರಾಯದಲ್ಲಿ-ಭಕ್ತಿಯೆಂದರೆ ನಮ್ಮ ಅರ್ಥವ್ಯವಸ್ಥೆಯಲ್ಲಿ ಆರ್ಜನೆ-ಶಿವಾರ್ಪಣೆ-ಸಂರಕ್ಷಣೆ ಎಂಬ ತತ್ತ್ವತ್ರಯಗಳ ಸಮನ್ವಯಶೀಲವುಳ್ಳದು. (ಸೈದಾನ : ಪಡಿಪದಾರ್ಥ). (ಕಾಯ್ದುಕೊಂಡಿರು : ಉಳಿಸಿ ಸಂರಕ್ಷಿಸಿಕೊಂಡಿರು).

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು