ಭಕ್ತನ ಐಕ್ಯಸ್ಥಲ - ಭಕ್ತಿಮಾರ್ಗ
ಏನು ಮಾಡುವೆ? ಎನ್ನ ಪುಣ್ಯದ ಫಲವು !
ಶಾಂತಿಯ ಮಾಡಹೋದರೆ, ಕೂಡೆ ಬೇತಾಳನಾಯಿತ್ತು!
ಕೂಡಲಸಂಗಮದೇವನ ಪೂಜಿಸಿಹೆನೆಂದರೆ
ಭಕ್ತಿಯೆಂಬ ಮೃಗವೆನ್ನನಟ್ಟಿ ಬಂದು ನುಂಗಿತ್ತಯ್ಯಾ!
Transliteration Ēnu māḍuve? Enna puṇyada phalavu!
Śāntiya māḍahōdare, kūḍe bētāḷanāyittu!
Kūḍalasaṅgamadēvana pūjisihenendare
bhaktiyemba mr̥gavennanaṭṭi bandu nuṅgittayyā!
Manuscript
English Translation 2 What can I do! It is my merits' fruit!
All efforts to propitiate become
A phantom suddenly! And when I would
Make my devotions to Lord Kūḍala Saṅgama,
This beast Devotion pursues me,
To swallow me!
Translated by: L M A Menezes, S M Angadi
Hindi Translation क्या करूँ मेरा पुण्य फल है
शांति करने जाऊँ तो प्रेत बनता है।
कूडलसंगमदेव पूजना चाहूँ
तो भक्ति मृग मेरा पीछा कर निगलता है ॥
Translated by: Banakara K Gowdappa
Telugu Translation ఏమిచేతు నా పుణ్యఫల మిట్లయ్యె:
శాంతి చేయబోవ భేతాళుడు పై బడె
సంగమస్వామిని పూజింతు నందున
భక్తి మృగము వెన్నంటి నన్ను మ్రింగెనయ్యా!
Translated by: Dr. Badala Ramaiah
Tamil Translation என்ன செய்வேன்? என் புண்ணிய பலன்
அமைதியாக இருக்கவிழையின் வேதாளமாயிற்று
கூடல சங்கமனைப் பூசிக்க விழையின்
பக்தி எனும் விலங்கு என்னைப் பின்தொடர்ந்து
வந்து விழுங்கியது ஐயனே.
Translated by: Smt. Kalyani Venkataraman, Chennai
Marathi Translation
काय करु ? माझ्या पुण्याचे फळ !
शांतीसाठी जवळ केली तर बेताल झाली भक्ती.
कूडलसंगमदेवाची पूजा करू लागलो तर
भक्तीरुपी मृगाने माझा पाठलाग करुन मलाच गिळले.
Translated by Shalini Sreeshaila Doddamani
ಶಬ್ದಾರ್ಥಗಳು ಬೇತಾಳ = ; ಮೃಗ = ;
ಕನ್ನಡ ವ್ಯಾಖ್ಯಾನ ಕೂಡಲ ಸಂಗಮದೇವನಲ್ಲಿ ಐಕ್ಯವಾಗಬೇಕೆಂದು ಸಾಧನೆ ಮಾಡುತ್ತಿದ್ದರೆ-ಭಕ್ತಿಯು ಅದಕ್ಕೆ ಅಡ್ಡಿಯಾಗಿ-ಅದು ತಮ್ಮನ್ನೇ ನುಂಗಿತು-ಎನ್ನುತ್ತಿರುವರು ಬಸವಣ್ಣನವರು. ಆಧ್ಯಾತ್ಮಿಕ ಸಿದ್ಧಿಗಾಗಿ ಸಾಧನೆಯಲ್ಲಿ ತೊಡಗಿದ ಬಸವಣ್ಣನವರಿಗೆ-ಆ ಮುಕ್ತಿಗಿಂತ ಭಕ್ತರ ನಡುವಿದ್ದು ಅವರ ಭಕ್ತಿ(ಸೇವೆ)ಮಾಡುವುದೇ ಉತ್ತಮ ಗತಿ, ಉತ್ತಮ ಪದವಿ ಎನಿಸಿತು. ಅಲ್ಲಿ ಶಿವೋಹಮೆಂಬ ಭಾವ ಮಾದು ದಾಸೋಹಂ ಎಂಬ ನಿರ್ಭಾವ ಅಳವಟ್ಟಿತು. ಅದೇ ಬಸವಣ್ಣನವರ “ನಿರ್ವಾಣ”
“ಭಕ್ತಿರ್ಮಹತ್ತರಾ ಶುದ್ಧಾ ಸುಸೂಕ್ಷ್ಮಾ ಶೋಭನಾ ಪರಾ | ಸಚ್ಚಿದಾನಂದ ರೂಪಾಖ್ಯಾ ಭಕ್ತಿರ್ಮುಕ್ತಿಫಲಪ್ರದಾ” (ಶಿವಾನುಭವ ಸೂತ್ರ 2-27). ಭಕ್ತಿಯು ಮುಕ್ತಿಯನ್ನು ಕೊಡುವುದೆಂಬ ಮಾತು ಹಾಗಿರಲಿ-ಆ ಭಕ್ತಿಯೇ ಸ್ವಯಂ ಸಚ್ಚಿದಾನಂದರೂಪವಾಗಿದೆ-ಎಂಬ ಅರ್ಥವು ಮೇಲೆ ಉಲ್ಲೇಖಿಸಿದ ಶಿವಾನುಭವಸೂತ್ರದಲ್ಲಿ ಅಡಗಿದೆಯೆಂಬುದನ್ನು ಗಮನಿಸಿರಿ.
ಈ ಲೋಕದ ಒಂದು ಜೀವವಾಗಲಿ ದುಃಖದಲ್ಲಿರುವವರಿಗೆ-ನನಗೆ ಮುಕ್ತಿ ಬೇಡ. ಆ ಜೀವಜಾಲದ ದುಃಖಪರಿಹಾರಕ್ಕಾಗಿ ಜನ್ಮಜನ್ಮಾಂತರ ಎತ್ತಿ ದುಡಿಯುವೆನೆಂಬ ಬೋಧಿಸತ್ವನ ಮಾತು ನೆನಪಾಗುವುದು ಬಸವಣ್ಣನವರ ಈ ವಚನದಿಂದ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು