ಮಾಹೇಶ್ವರನ ಜ್ಞಾನಿಸ್ಥಲ - ದೇವರು
ಉಪ್ಪರಗುಡಿ, ನಂದಿವಾಹನ ಸದ್ಯೋಜಾತನ
ಬಾಗಿಲ ಮುಂದೆ ಸಾರುತ್ತೈದಾವೆ, ನೋಡಾ:
ಶ್ರುತಿಗಳು ನಾಲ್ಕು ವೇದವೂ ಹುಸಿಯದೆ
`ಭರ್ಗೋದೇವಸ್ಯ ಧೀಮಹಿ' ಎಂದುದಾಗಿ,
ಕೂಡಲಸಂಗಮನಲ್ಲದಿಲ್ಲೆಂದುದು ವೇದ.
Transliteration Upparaguḍi, nandivāhana sadyōjātana
bāgila munde sāruttaidāve, nōḍā:
Śrutigaḷu nālku vēdavū husiyade
`bhargō dēvasya dhīmahi' endu,
kūḍalasaṅganalladillendu vēda.
Manuscript
English Translation 2 They came with shouts, before his door
The ever-born, Who has Nandi the carrier and the flag aloft:
As the scriptures and the four Vedas say
In very sooth, 'Let's meditate upon
The radiant God!'
The Veda says there's none except
Kūḍala Saṅgama!
Translated by: L M A Menezes, S M Angadi
Hindi Translation ऊध्र्व-ध्वजी, नंदीवाहन
सद्योजात के द्वार पर
श्रुतियाँ एवं चारों वेद निरंतर घोषणा करते हैं
‘भर्गो देवस्य धीमहि’
वेद कहता है कूडलसंगमदेव के सिवा
और कोई देव नहीं है ॥
Translated by: Banakara K Gowdappa
Telugu Translation గగన ధ్వజు; నంది వాహను సద్యోజాతుని
వాకిట చాటుచున్నవి తెలియుడో
శ్రుతులు నాల్గు వేదములు పొల్లుగాక
‘‘భర్గో దేవస్య ధీమహి ‘‘ అనుచుండె
సంగమదేవుడు లేనిదే లేదనే వేదము
Translated by: Dr. Badala Ramaiah
Tamil Translation நந்திவாகனம் பறக்கும்கொடியொடு
சத்யோஜாதனின் வாயிலின் முன்பு
உரைக்கின்றனர், கேளாய்
சுருதிகளும், நான்கு வேதங்களும் பொய்யின்றி
“பர்கோ தேவஸ்ய தீமஹி” என்று உரைப்பதால்
கூடல சங்கம தேவனன்றி வேறு இல்லை என்கிறது வேதம்.
Translated by: Smt. Kalyani Venkataraman, Chennai
Marathi Translation
उन्नत शिवमंदिरासमोर नंदी वाहनाचा
ध्वज फडकत आहे.
श्रुती चार वेद न चुकता गात आहेत पहा.
`भर्गोदेवस्य धिमही` घोषणा करती.
कूडलसंगाविना अन्य बोलत नाही वेद.
Translated by Shalini Sreeshaila Doddamani
ಶಬ್ದಾರ್ಥಗಳು ಅದ್ಯೋಜಾತ = ; ಉಪ್ಪರ = ; ಧೀಮ = ; ನಂದಿ = ; ಭರ್ಗೋ = ; ಶ್ರುತಿ = ; ಹುಸಿ = ;
ಕನ್ನಡ ವ್ಯಾಖ್ಯಾನ ಶಿವನು ಎಲ್ಲ ದೈವಗಳಿಗೂ ಅಧಿದೈವವೆಂಬುದನ್ನು ನಂದಿವಾಹನನಾದ ಸದ್ಯೋಜಾತಶಿವನ ದೇವಾಲಯಗಳ ಮುಂದಿರುವ ಎತ್ತರವಾದ(ನಂದೀ)ಧ್ವಜಗಳು ಸಾರಿ ಹೇಳುತ್ತವೆ. “ಭೂರ್ ಭುವಃ ಸ್ವಃ-ತತ್ ಸವಿತುರ್ವರೇಣ್ಯಂ | ಭರ್ಗೋ ದೇವಸ್ಯ ಧೀಮಹಿ | ಧಿಯೋ ಯೋ ನಃ ಪ್ರಚೋದಯಾತ್”-ಭೂಮಿ ಆಕಾಶ ಸ್ವರ್ಗಗಳಲ್ಲಿ ಪ್ರಕಾಶಮಾನವಾಗಿರುವ ಭರ್ಗೋದೇವ(ರುದ್ರಶಿವ)ನ ಮಹಿಮೆಯನ್ನು ಕುರಿತು ಧ್ಯಾನ ಮಾಡೋಣ. ಆ ಶಿವನು ನಮ್ಮ ಬುದ್ಧಿಯನ್ನು ಪ್ರಚೋದಿಸಲಿ-ಎಂದು ವೇದಗಳು ಘೋಷಿಸುತ್ತಿವೆ. ಶಿವನಲ್ಲದಿನ್ನೊಂದು ದೇವರಿಲ್ಲ.
ಮೇಲೆ ಉಲ್ಲೇಖಿಸಿರುವ ವೇದಭಾಗವನ್ನು ಗಾಯತ್ರೀ ಮಂತ್ರವೆನ್ನುವರು. ಇದು ಸವಿತಾರನನ್ನು ಕುರಿತಂತೆ ಪ್ರಸಿದ್ಧವಾಗಿದೆ : “ವೇದಾಹಮೇತಂ ಪುರುಷಂ ಮಹಂತಂ ಆದಿತ್ಯವರ್ಣಂ ತಮಸಃ ಪರಸ್ತಾತ್.”
ಉಲ್ಲೇಖಿತ ಗಾಯಿತ್ರೀಮಂತ್ರದ ಮೊದಲಿಗಿರುವ ಭೂರ್-ಭುವಃ-ಸ್ವಃ ಎಂಬ ಮೂರು ಪದಗಳು ಶುಕ್ಲಯಜುರ್ವೇದದ ಪ್ರಕಾರ ಸೇರಿಸಲ್ಪಟ್ಟುವು. ಮಿಕ್ಕಂತೆ ಓಂ ಎಂದು ಪ್ರಾರಂಭವಾಗುವುದು ಈ ಮಂತ್ರ ಇತರ ವೇದಗಳಲ್ಲಿ (565ನೇ ವಚನವನ್ನು ನೋಡಿ).
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು