•  
  •  
  •  
  •  
Index   ವಚನ - 530    Search  
 
ಮಾಹೇಶ್ವರನ ಜ್ಞಾನಿಸ್ಥಲ - ಲಿಂಗನಿಷ್ಠೆ
ವೇದ ಸ್ವಯಂಭುವೆಂಬ ವಾದಿ ನೀ ಕೇಳೆಲವೋ: `ಏಕೋ ದೇವ ರುದ್ರನದ್ವಿತೀಯʼನೆಂದು ನಂಬುವುದು ಕಾಣಿರಣ್ಣಾ. `ಓಂ ದ್ಯಾವಾ ಭೂಮೀಜನಯಂ ದೇವ ಏಕೋ ದೇವ ಏಕೋ ಹಿ ರುದ್ರೋನದ್ವಿತೀಯಾಯ ತಸ್ತುಃʼ ಎಂದು ನಂಬುವುದು ಕಾಣಿರಣ್ಣಾ. ʼಚಕಿತಮಭಿಧತ್ತೇ' ಎಂದು ಶ್ರುತಿ ಸಾರುತ್ತೈದಾವೆ. ಜಗದ ಕರ್ತ ಕೂಡಲಸಂಗಮದೇವನೊಬ್ಬನೇ ಕಾಣಿರಣ್ಣಾ:
Transliteration ʼvēda svayambhu'vemba vādi nī kēḷelavō: `Ēkō dēva rudranadvitīyaʼnendu nambuvudu kāṇiraṇṇā. `Ōṁ dyāvā bhūmījanayaṁ dēva ēkō dēva ēkō hi rudrōnadvitīyāya tastuḥ endu nambuvudu kāṇiraṇṇā. `Cakitamabhidhattē' endu śruti sāruttaidāve. Jagada karta kūḍalasaṅgamadēvanobbanē kāṇiraṇṇā:
Manuscript
English Translation 2 Listen, O, to the man who claims: 'Veda is self-begot'. Mark, brothers, you should believe 'One only, Without a second, God'; Ōṁ, God who created heaven and earth Is the only God! Mark, brothers, you should believe: Rudra is the only, without a second, One'. The Scriptures come proclaiming: 'In wonder they speak of Him'. Mark, Brothers, Lord Kūḍala Saṅgama alone Is creator of the world! Translated by: L M A Menezes, S M Angadi
Hindi Translation वेद स्वयंभू कहनेवालों सुनो देखो भाई, तुम विश्वास करो कि एको देवः रुद्रो न द्वितीयः तुम विश्वास करो श्रुतियाँ घोषणा करती हैं ‘चकितमभिदत्ते’ जगत्कर्ता केवल कूडलसंगमदेव ही है ॥ Translated by: Banakara K Gowdappa
Telugu Translation వేదము స్వయంభు వనువాదీ వినవోయీ రుద్రుడొకడేదేవు డద్వితీయుడని నమ్మదగునయ్యా ‘ఓం ద్యావా భూమీ జనయం దేవ ఏకోదేవ ఏకోహిరుద్రో నద్వీతీయాయతస్తుః ‘‘ యని నమ్మదగునయ్యా ‘‘చకితమభిధత్తే’’ యని శ్రుతులు ఘోషించుచుండె సంగమదేవు డొక్కడే జగద్కర్త తెలియుమన్నా Translated by: Dr. Badala Ramaiah
Tamil Translation “வேதம் சுயம்பு” எனும் வாதியே, கேட்பாய் “ஏகோ தேவோ ருத்ரோ ந த்விதீ:” என்று நம்புவதைக் காணீர் “சகிதமபிதத்தே” என்று சுருதி உரைக்கிறது உலகின் இறைவன் கூடல சங்கம தேவன் ஒருவனே, காணீர், அண்ணன்மீர் Translated by: Smt. Kalyani Venkataraman, Chennai
Marathi Translation वेद स्वयंभू` असे प्रतिपादनाऱ्यांनो ऐका `एको देवो रुद्रो न द्वितीयः` असे समजून विश्वास ठेवावा. `चकितमछिधत्ते` श्रुती घोषणा करीते. विश्वकर्ता कूडलसंगमदेव हा एकच देव आहे पहा. Translated by Shalini Sreeshaila Doddamani
ಶಬ್ದಾರ್ಥಗಳು ಅಭಿದತ್ತ = ; ಕರ್ತ = ; ಚಕಿತ = ; ಜಗ = ; ದ್ಯಾವಾ = ; ಪೃಥ್ವಿ = ; ರುದ್ರ = ; ವಾದಿ = ; ಶ್ರುತಿ = ; ಸ್ವಯಂಭು = ;
ಕನ್ನಡ ವ್ಯಾಖ್ಯಾನ ಈ ವಚನದ ಮೂಲಕ ಬಸವಣ್ಣನವರು ಮೀಮಾಂಸಕರ ನಿರೀಶ್ವರವಾದ(ಕರ್ಮವಾದ)ವನ್ನು ಖಂಡಿಸಿ-ಸೇಶ್ವರವಾದವನ್ನು ಶಿವನ ಹೆಸರಿನಲ್ಲಿ ಪ್ರತಿಪಾದಿಸುತ್ತಿರುವರು. ಶ್ರವ್ಯವಾದ ಶಬ್ದಗಳು ಅನಿತ್ಯವಾದುವಾದರೂ-ಅವಕ್ಕೂ ಮೂಲಭೂತವಾದ ಶಬ್ಧ(ದ್ರವ್ಯ)ವನ್ನು ನಿತ್ಯವೆನ್ನುವರು ಮೀಮಾಂಸಕರು. ಅವರ ಪ್ರಕಾರ ಈ ನಿತ್ಯವಾದ ಶಬ್ದಗಳ ಸಮೂಹವೇ ವೇದ. ಈ ವೇದ ತನಗೆ ತಾನೇ ಅನಾದಿಯಿಂದ ಇರುವುದು. ಅದು “ಸ್ವಯಂಭು”. ಹೀಗೆ ಅಪೌರುಷೇಯವಾದ ವೇದವನ್ನು ಪ್ರಾಚೀನ ಮೀಮಾಂಸಕರು ದೇವರ ಸ್ಥಾನದಲ್ಲಿರಿಸಿ-ಅದರಲ್ಲಿ ವಿಧಿಸಲಾಗಿರುವ ಕರ್ಮಗಳನ್ನು ಮಾಡುವುದೇ ಧರ್ಮವೆಂದೂ, ಮಾಡಿಸಿಕೊಂಡ ಆ ಕರ್ಮವೇ ಮಾಡಿದವರಿಗೆ ಉಚಿತಫಲಗಳನ್ನು ಕೊಡುವುದೆಂದೂ-ಈಶ್ವರನೊಬ್ಬನನ್ನು ಇಲ್ಲಗಳೆದಿರುವರು. ಕಮಾರಿಲನ ಪರಂಪರೆಯ ಈ ಮೀಮಾಂಸಕರ ನಿರೀಶ್ವರವಾದವನ್ನು (ಆ ಮೂಲಕವೇ ವೇದ ಅಪೌರುಷೇಯವೆಂಬ ವಾದವನ್ನೂ) ಬಸವಣ್ಣನವರು ಖಂಡಿಸುತ್ತಿರುವರು-ಅದೇ ವೇದೋಲ್ಲೋಖಗಳ ಮೂಲಕವಾಗಿ: ವಿಶ್ವತಶ್ಚಕ್ಷುರುತ ವಿಶ್ವತೋ ಮುಖೋ ವಿಶ್ವತೋ ಬಾಹುರುತ ವಿಶ್ವತಸ್ಪಾತ್|ಸಂಬಾಹುಭ್ಯಾಂಧಮತಿ ಸಂಪತತ್ರೈರ್ ದ್ಯಾವಾಭೂಮೀ ಜನಯನ್ ದೇವ ಏಕಃ” (ಶ್ವೇತಾಶ್ವತರ 3-3) : ಭೂಮಿ ಆಕಾಶಗಳನ್ನು ಸೃಷ್ಟಿಸಿದ ರುದ್ರಶಿವನು ಒಬ್ಬನೇ-ಎಲ್ಲ ಕಣ್ಣುಗಳೂ ಅವನವೇ, ಎಲ್ಲ ಮುಖಗಳೂ ಅವನವೇ, ಎಲ್ಲ ಕೈಗಳೂ ಅವನವೇ, ಎಲ್ಲ ಪಾದಗಳೂ ಅವನವೇ ಆಗಿವೆ. ಅವನು ತನ್ನ ಎರಡೂ ಬಾಹುಗಳ ತಿದಿಯೊತ್ತಿ ಈ (ಚರಾಚರ) ಜಗದ ಪ್ರಾಣಾಗ್ನಿಯನ್ನು ಪಟುಗೊಳಿಸುತ್ತಿದ್ದಾನೆ ಎಂದು ಮುಂತಾಗಿ. ಬಸವಣ್ಣನವರು ಇನ್ನಷ್ಟು ಉಗ್ರವಾಗಿ ಮೀಮಾಂಸಕರ ನಿರೀಶ್ವರವಾದವನ್ನು ಖಂಡಿಸಿರುವುದನ್ನು ಕಾಣಬೇಕಾದರೆ ನೋಡಿ ವಚನ 750. ಈ ವಚನದಲ್ಲಿನ “ಏಕೋ ಹಿ ರುದ್ರೋ” ಎಂಬ ಮತ್ತೊಂದು ಉಲ್ಲೇಖಕ್ಕೆ 529ನೇ ವಚನವನ್ನು ನೋಡಿ. “ಚಕಿತಮಭಿಧತ್ತೇ ಮತ್ತು ಶ್ರುತಿರಪಿ” ಎಂಬುದೆರಡೂ ಒಂದೇ ಉಲ್ಲೇಖ : ಶ್ರುತಿಗಳೂ ಚಕಿತಗೊಂಡು ಹೀಗೆ ಹೇಳುತ್ತವೆಂಬುದರ ಅರ್ಥ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು