•  
  •  
  •  
  •  
Index   ವಚನ - 531    Search  
 
ಮಾಹೇಶ್ವರನ ಜ್ಞಾನಿಸ್ಥಲ - ಅಸಹಾಯಕತೆ
ಶ್ರುತಿತ ಶಿಶಿರದ ಮೇಲೆ 'ಅತ್ಯತಿಷ್ಠದ್ದಶಾಂಗುಲ'ನ ನಾನೇನೆಂಬೆನಯ್ಯಾ, ಘನಕ್ಕೆ ಘನಮಹಿಮನ, ಮನಕ್ಕಗೋಚರನ? `ಅಣೋರಣೀಯಾನ್ ಮಹತೋ ಮಹೀಯಾನ್' ಮಹಾದಾನಿ ಕೂಡಲಸಂಗಮದೇವ.
Transliteration Śrutita śiśirada mēle'atyatiṣṭaddaśāṅgula'na nānēnembenayyā, ghanakke ghanamahimana, manakkagōcarana? `Aṇōraṇīyān mahatō mahīyān' mahādāni kūḍalasaṅgamadēva.
Manuscript
English Translation 2 What shall I say, O Lord, Of one who stands ten fingers above The heighest of the holy books- A glory greater than the great, Inscrutable to the intellect? O greater than the great, And subtler the subtlest, Thou Most bountiful Lord Kūḍala Saṅgama! Translated by: L M A Menezes, S M Angadi
Hindi Translation जो श्रुति के सिर से दस अंगुल पर स्थित हैं उनके संबंध में क्या कहूँ? महान से महान मन को अगोचर अणोरणीयान् महतोमहीयान् है महादानी कूडलसंगमदेव ॥ Translated by: Banakara K Gowdappa
Telugu Translation శ్రుతి తతి శిరంబుపై అత్యతి, దశాంగుళుని ఘనంబునకు ఘనమహిముని మనంబున కగోచరుని అణోరణీయుని మహతో మహీయుని మహాదాత కూడల సంగమదేవుని ఏమందునయ్యా? Translated by: Dr. Badala Ramaiah
Tamil Translation வேதம், சுருதியின் சிரத்தின்மீது “அத்யதிஷ்டத்த சாங்குல என்பதை நான் என்னென்பேன் ஐயனே? சீர்மைக்கு சீர்மையான மகிமை உடையவனை மனத்தால் உணரவியலாதவனன்றோ “அணோரணீயான், மஹதோ மஹீயான்” பெருவள்ளல் கூடலசங்கமதேவன். Translated by: Smt. Kalyani Venkataraman, Chennai
Marathi Translation श्रुतीच्या अतीत शिरावर `अत्यतिष्ठद्दशांगुला` चे वर्णन मी कसे करु ? घनाल श्रेष्ठ महिमा, मनाला अगोचर ! `अणोरणीयान् महतो महीयान` आहे महादानी कूडलसंगमदेव. Translated by Shalini Sreeshaila Doddamani
ಶಬ್ದಾರ್ಥಗಳು ಅಣೋರಣೆ = ; ಅತಿಷ್ಟ = ; ಅತ್ಯ = ; ಗೋಚರ = ; ಘನ = ; ತತಿ = ; ಮಹತೋ = ; ಮಹಿಮ = ; ಮಹೀ = ; ಶಾಂಗುಲ = ; ಶ್ರುತಿ = ;
ಕನ್ನಡ ವ್ಯಾಖ್ಯಾನ ಶಿವನು ಆ ವೇದಗಳಿಂದಾಚೆಗೂ ಎಟುಕದೆ ನಿಂತಿರುವನು. ಅವನು ಮಹತ್ತಿಗೆ ಮಹತ್ತಾಗಿ-ಜ್ಞಾನೇಂದ್ರಿಯಗಳಿರಲಿ-ಮನಸ್ಸಿಗೂ ಅಗೋಚರನಾಗಿರುವನು. ಅವನು ಅಣುವಿಗೂ ಅಣುಸ್ವರೂಪಿ-ಕೂಡಲ ಸಂಗಮದೇವನು ಕಣ್ಣು ಅಥವಾ ಕಲ್ಪನೆಗೆ ಈಡಾಗುವನೆಂದು ತಿಳಿದೆಯಾ-ಎನ್ನುತ್ತ ಬಸವಣ್ಣನವರು ಅನಾದ್ಯನಂತ ಶಿವನ ಅನುಭೂತಿ (ದಾಸೋಹದಿಂದಲ್ಲದೆ) ಅಗಮ್ಯವೆನ್ನುತ್ತಿರುವರು-“ಮಹಾದಾನಿ” ಎಂದು ಆ ಶಿವನನ್ನು ವಿಶೇಷಿಸುವುದರ ಮೂಲಕ. ಈ ವಚನದಲ್ಲಿ ಅವರು ಪ್ರಸ್ತಾಪಿಸಿರುವ ಉಪನಿಷದ್ ವಾಕ್ಯಗಳು ಈ ಮುಂದಿನಂತಿವೆ-“ಸಹಸ್ರ ಶೀರ್ಷೋಪುರಷಃ ಸಹಸ್ರಾಕ್ಷಃ ಸಹಸ್ರಪಾತ್ ಸ ಭೂಮಿಂ ವಿಶ್ವತೋ ವೃತ್ವಾ ಅತ್ಯತಿಷ್ಠದ್ದಶಾಂಗುಲಂ(ಶ್ವೇತಾಶ್ವತರ 3-14). “ಅಣೋರಣಿಯಾನ್ ಮಹತೋ ಮಹೀಯಾನಾತ್ಮಾ ಗುಹಾಯಾಂ ನಿಹಿತೋsಸ್ಯ ಜಂತೋಃ | ತಮಕ್ರತುಃ ಪಶ್ಯತಿ ವೀತಶೋಕೋ ಧಾತುಃ ಪ್ರಸಾದಾನ್ಮಮಿಮಾನಮೀಶಂ” (ಅದೇ. 3-20) ಇವುಗಳ ಸರಳಾನುವಾದ ಈ ಮುಂದಿನಂತೆ : ಶಿವನಿಗೆ ಸಾವಿರ ತಲೆ, ಸಾವಿರ ಕಣ್ಣು, ಸಾವಿರ ಕಾಲು. ಅವನು ಈ ವಿಶ್ವವನ್ನು ಎಲ್ಲ ಕಡೆಯಿಂದಲೂ ವ್ಯಾಪಿಸಿಕೊಂಡು ಅಲ್ಲಿಂದ ಮೇಲೆ ಹತ್ತುಂಗುಲದಾಚೆಗೂ ಇರುವನು. ಅಣುವಿಗೆ ಅಣು, ಮಹತ್ತಿಗೆ ಮಹತ್ತೂ ಆದ ಶಿವನು ಜೀವಿಗಳ ಹೃದಯ ಗುಹೆಯಲ್ಲಿ ನಿಹಿತವಾಗಿರುವನು. ಭಕ್ತನು ಶೋಕ ಮೋಹವಿಲ್ಲದವನಾಗಿ-ಶಿವನ ಪ್ರಸಾದಕ್ಕೆ ಪಾತ್ರನಾದಾಗ ಮಾತ್ರ-ಅಂಥವನಿಗೆ ಮಹಿಮಾನ್ವಿತನಾದ ಆ ಶಿವನ ದರ್ಶನವಾಗುವುದು.” ವಿ: ಅತ್ಯತಿಷ್ಠದ್ದಶಾಂಗುಲವೆಂದರೆ-ಹೊಕ್ಕುಳಿಂದ ಹತ್ತಂಗುಲ ಮೇಲಿರುವ ಹೃದಯ ಕಮಲದಲ್ಲಿ ಶಿವನಿರುವನೆಂದೂ-ಬ್ರಹ್ಮಾಂಡವನ್ನೆಲ್ಲ ವ್ಯಾಪಿಸಿಕೊಂಡಿರುವ ಅವನು ಪಿಂಡಾಂಡದಲ್ಲಿ ಆವಾಸವಾಗಿರುವನೆಂದೂ ಅರ್ಥೈಸಬಹುದು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು