ಮಾಹೇಶ್ವರನ ಜ್ಞಾನಿಸ್ಥಲ - ಏಕದೇವೋಪಾಸನೆ
ಸಕಲ ನಿಷ್ಕಲವ ಕೂಡಿಕೊಂಡಿಪ್ಪೆಯಾಗಿ
ಸಕಲ ನೀನೇ, ದೇವಾ; ನಿಷ್ಕಲ ನೀನೇ ಕಂಡಯ್ಯಾ.
`ವಿಶ್ವತಶ್ಚಕ್ಷು' ನೀನೇ, ದೇವಾ, `ವಿಶ್ವತೋಮುಖ' ನೀನೇ, ದೇವಾ,
`ವಿಶ್ವತೋಬಾಹು' ನೀನೇ ದೇವಾ,
ಕೂಡಲಸಂಗಮದೇವಾ.
Transliteration Sakala niṣkalava kūḍikoṇḍippeyāgi
sakala nīnē, dēvā; niṣkala nīnē kaṇḍayya.
`Viśvataścakṣu' nīnē, dēvā, `viśvatōmukha' nīnē, dēvā,
`viśvatōbāhu' nīnē dēvā,
kūḍalasaṅgamadēvā.
Manuscript
English Translation 2 Embracing form and formlessness,
Thou art the Form, O God; Thou art
Also the formlessness.
Thou art the universal eye, O God; Thou art
The universal face, Thou art
The arms of the universe, O Lord
Kūḍala Saṅgama!
Translated by: L M A Menezes, S M Angadi
Hindi Translation तुम सकल व निष्कल के संगम हो
सकल तुम ही हो, निष्कल तुम ही हो देव
विश्वतचुक्षु तुम ही हो देव,
विश्व्तोमुख तुम ही हो देव,
विश्वतःपाद तुम ही हो देव,
विश्व्तोबाहु तुम ही हो देव,
कूडलसंगमदेव ॥
Translated by: Banakara K Gowdappa
Telugu Translation కళా నిష్కళులు కూడిన కారణమును
సకళుడవు నిష్కళుడవు నీవేదేవా
విశ్వతశ్చక్షువీవే దేవా
విశ్వతోముఖుడ వీవేదేవా
విశ్శతో బాహు వీవే దేవా
మహాదేవా; సంగమ దేవా!
Translated by: Dr. Badala Ramaiah
Tamil Translation அகண்டமாக, முழுமையாக நீ இலங்குவதால்
அகண்டம் நீ முழுமையும் நீ காணாய்
“விச்வதசக்ஷு நீயே இறைவனே, விச்வதோமுக”
நீயே இறைவனே விச்வதோ பாஹு நீயே
இறைவனே, கூடல சங்கமதேவனே
Translated by: Smt. Kalyani Venkataraman, Chennai
Marathi Translation
सकल निष्कल तुमच्यात सामावले.
सकल, निष्कल तुम्हीच आहे पहा.
`विश्वतःश्चक्षु` तुम्हीच देवा. `विश्वतोमुख` तुम्हीच देवा.
`विश्वतोबाहु` तुम्हीच देवा. `विश्वतोपाद` तुम्हीच देवा.
कूडलसंगमदेवा.
Translated by Shalini Sreeshaila Doddamani
ಶಬ್ದಾರ್ಥಗಳು ತಶ್ಚಷು = ; ನಿಷ್ಕಲ = ; ಬಾಹ್ರ = ; ವಿಶ್ವ = ;
ಕನ್ನಡ ವ್ಯಾಖ್ಯಾನ ಶಿವನೇ, ನೀನು ಸಾಕಾರದಲ್ಲೂ ನಿರಾಕಾರದಲ್ಲೂ ಇರುವೆಯಾಗಿ-ನೀನು ಸಾಕಾರನೂ ಹೌದು, ನಿರಾಕಾರನೂ ಹೌದು, ಸಾಕಾರದ ಕಣ್ಣು ನೀನೇ, ನಿರಾಕಾರದ ಜ್ಞಾನ ನೀನೇ; ಸಾಕಾರದ ಮುಖ ನೀನೇ, ನಿರಾಕಾರದ ಪ್ರಾಣ ನೀನೇ; ಸಾಕಾರದ ಬಾಹು ನೀನೇ. ನಿರಾಕಾರದ ಶಕ್ತಿ ನೀನೇ. ಸಾಕಾರದ ಪಾದ ನೀನೇ. ನಿರಾಕಾರದ ಆಧಾರ ನೀನೇ; ವಿಶ್ವತಶ್ಚಕ್ಷುರುತ ವಿಶ್ವತೋಮುಖೋ ವಿಶ್ವತೋಬಾಹುರುತ ವಿಶ್ವತಸ್ಪಾತ್ ನೀನೆ ಶಿವನೇ-ಎಂದು ಬಸವಣ್ಣನವರು ಶಿವೋಪಾಸನೆಯ ಸಾಕಾರನಿರಾಕಾರ ಎರಡೂ ಮಾರ್ಗಗಳನ್ನು ಸಮಂಜಸವಾಗಿ ನಿರೂಪಿಸಿರುವರು.
ಇಸ್ಲಾಂ ಮುಂತಾದ ಕೆಲವು ಧರ್ಮಗಳಲ್ಲಿ-ಅಷ್ಟೇಕೆ ವೇದಗಳನ್ನೇ ಆಧಾರವಾಗಿ ಉಳ್ಳ ಆರ್ಯ ಸಮಾಜದ ಪ್ರಕಾರ ದೇವರಿರುವನಾದರೂ ಅವನು ನಿರಾಕಾರ-ಆ ಕುರಿತು ವಿಗ್ರಹಾರಾಧನೆ ನಿಷಿದ್ಧ. ಹತ್ತೊಂಬತ್ತನೇ ಶತಮಾನದಷ್ಟು ಈಚೆಗಿನ ಬ್ರಹ್ಮಸಮಾಜದಲ್ಲಿ ದೇವರು ನಿರಾಕಾರನೋ ಸಾಕಾರನೋ ಎಂಬ ಜಿಜ್ಞಾಸೆ ಹುಟ್ಟಿ-ಪೂಜಾವಿಧಾನದಲ್ಲಿ ಭಿನ್ನಾಭಿಪ್ರಾಯವೇರ್ಪಟ್ಟು-ಆ ಸಮಾಜ ಹಲವು ಶಾಖೆಗಳಾಗಿ ಒಡೆದು ಹೋಯಿತು. ಆ ಕಾಲಕ್ಕೆ ದೇವರು ನಿರಾಕಾರನೂ ಹೌದು ಸಾಕಾರನೂ ಹೌದು ಎಂದು ಸುವರ್ಣ ಮಧ್ಯಮ ಮಾರ್ಗವನ್ನು ಪುನಃ ಪ್ರವರ್ತಿಸಿದವರು ಶ್ರೀರಾಮಕೃಷ್ಣ ಪರಮಹಂಸರು. ಇಂಥದೊಂದು ಸಮನ್ವಯದೃಷ್ಟಿ ಬಸವಣ್ಣನವರಲ್ಲಿ ಸದೃಢವಾಗಿದ್ದುದು ಆದರಣೀಯವಾಗಿದೆ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು