MusicCourtesy:Vachananjali Part -1 Sri Taralabalu Jagadguru Brihanmath Sirigere, Music: H K Narayana Singer: Narasimha Nayak
English Translation 2Whichever way I look,
Thou only art, O Lord!
The form of all the circumbient space
Thou only art, O Lord!
Thou art the universal eye,
O Lord, and Thou the univesal face!
Thou art the arms of All, O Lord,
And Thou the feet O Kūḍala Saṅgama Lord!
Translated by: L M A Menezes, S M Angadi
Hindi Translationजहाँ देखूँ वहाँ तुम ही हो देव,
सकल विस्तार का रूप तुम ही देव,
विश्वतचक्षु तुम ही हो देव,
विश्वतोमुख तुम ही हो देव,
विश्वतोबाहु तुम ही हो देव,
विश्वतः पाद तुम ही हो देव,
कूडलसंगमदेव ॥
Translated by: Banakara K Gowdappa
Tamil Translationஎங்கெங்கு நோக்கினும் ஆங்காங்கு நீயே இறைவனே
அகன்ற வடிவினன் நீயே இறைவனே
விச்வதசக்ஷு உலகின் கண் நீயே இறைவனே
விச்வதோமுக உலகின் முகம் நீயே இறைவனே
விச்வதோ பாஹு உலகின் தோள் நீயே இறைவனே
விச்வத: பாத உலகின் பாதம நீயே இறைவனே
கூடல சங்கம தேவனே.
Translated by: Smt. Kalyani Venkataraman, Chennai
Marathi Translationजेथे पाहू तेथे, तूच दिसतोसी
सफल विस्तारासी, व्यापोनिया
विश्वचक्षू तूचि, विश्वपाद तूचि
विश्व बाहू तूचि, एकमेव
कूडलसंगमदेवा ! विश्वमुख तूचि
सर्व तुझ्यातचि, साठीयले
अर्थ - हे देवा ! मला जिकडे पाहावे तिकडे तूच दिसतो आहेस. सर्व जगात विस्तारलेले वृक्ष, पशू, पक्षी, वनस्पती, सौंदर्य......तुझेच रूप दिसत आहे. विश्वाचा डोळा, विश्वाचे मुख, बाहू, पाय तुझेच आहेत. असे म. बसवेश्वर वरील वचनात म्हणतात.
परमेश्वराचे व्यापक स्वरूप म. बसवेश्वरांच्या रोमरोमी कसे भिनले गेले होते हे वरील वचनातून स्पष्ट होते. ज्ञानाची दृष्टी जेव्हा व्यापकत्व घेते तेव्हा तो नयनाच्या क्षितिजापासून ते विश्वनयनाच्या क्षितिजापुढे जाते. त्यातूनच इष्टलिंग पूजेची एकाग्रता साधली जाते. त्यामुळे मन दृढ़ आणि शुद्ध होते अशा स्थितीत श्रेष्ठ ज्ञानाचा प्रकाश प्राप्त होतो. समाधान लाभते. यालाच शिवयोग दृष्टी संबोधतात हा अनुभव महात्मा बसवेश्वरांच्या वरील वचनातून व्यक्त होतो.
Translated by Rajendra Jirobe, Published by V B Patil, Hirabaug, Chembur, Mumbai, 1983जिकडे पहावे तिकडे तुम्हीच लिंगदेवा.
सकल विस्तार आपले रुप लिंगदेवा.
`विश्वतःश्चक्षु` तुम्हीच लिंगदेवा. `विश्वतोमुख` तुम्हीच लिंगदेवा.
`विश्वतोबाहु` तुम्हीच लिंगदेवा. `विश्वतोपाद` तुम्हीच लिंगदेवा.
कूडलसंगमदेवा.
Translated by Shalini Sreeshaila Doddamani
Urdu Translationمری نظرنےہرا ک سمت تجھ کوپایاہے
بس ایک توہےفقط توہی کائنات کی روح
ہیں کائنات میں آنکھیں،توتیری آنکھیں ہیں
ہےکائنات میں چہرہ تو تیراچہرہ ہے
جہاںمیں ہیںتوفقط تیرے دست وبازو ہیں
مرےعر یز مرے دیوا کوڈلا سنگم
ہیں کائنات میں پاؤں توتیرے پاؤں ہیں
Translated by: Hameed Almas
ಶಬ್ದಾರ್ಥಗಳುತಶ್ಚಷು = ; ಬಾಹು = ; ರೂಹು = ; ವಿಶ್ವ = ;
ಕನ್ನಡ ವ್ಯಾಖ್ಯಾನಎಲ್ಲೆಲ್ಲಿ ನೋಡಿದರಲ್ಲಲ್ಲಿ ನೀನೇ ಇರುವೆ, ದೃಶ್ಯವಾದ ಈ ವಿಶ್ವದ ಎಲ್ಲ ರೂಪವೂ ನೀನೇ ಆಗಿರುವೆ ; ಎಲ್ಲ ಮುಖದಲ್ಲಿ ನಿನ್ನ ಚೆಲುವಿದೆ, ಎಲ್ಲ ಬಾಹುಗಳಲ್ಲಿ ನಿನ್ನ ಬಲವಿದೆ. ಎಲ್ಲ ಪಾದಗಳಲ್ಲಿ ನಿನ್ನ ಚಲನವಿದೆ-ಎಂದು ಶಿವನು ಸರ್ವದಲ್ಲಿಯೂ ಅಂತರ್ಯಾಮಿಯಾಗಿರುವನೆಂಬುದನ್ನು ಬಸವಣ್ಣನವರು ಒಪ್ಪುತ್ತಿರುವರು. ಆದರೆ ಶಿವನ ಈ ಜಗನ್ಮಯ ಸ್ಥಿತಿಯನ್ನು ಕೆಲವು ಶಿವಶರಣರೇ ಒಪ್ಪುವುದಿಲ್ಲವೆಂಬಂತೆ-ಗಣಭಾಷಿತ ರತ್ನಮಾಲೆ ಮುಂತಾದ ಗ್ರಂಥಗಳಲ್ಲಿ-ಅಷ್ಟಮೂರ್ತಿನಿರಸನಸ್ಥಲ, ಸರ್ವಗತನಿರಸನಸ್ಥಲ ಎಂಬ ವಿಭಾಗಗಳಲ್ಲಿ- “ನ ಸರ್ವೋ ನ ಚ ಸರ್ವಗಃ” ಎಂದೂ ; ಮತ್ತು “ಪರಿಚ್ಛಿನ್ನಃ ಪ್ರಪಂಚೋSಯಂ ಶಿವಃ ಪರಮ ವೈಭವಃ | ಕಥಂ ನು ಶಕ್ಯತೇ ದ್ರಷ್ಟುಮತ್ರ ವಿಶ್ವಾಧಿಕಃ ಶಿವಃ” -ಎಂದು ಮುಂತಾಗಿ ಸಮರ್ಥಿಸಿರುವುದು ಬಸವಸಮ್ಮತವಲ್ಲ. ಎಲ್ಲ ರೂಪದಲ್ಲಿಯೂ ಶಿವನಿರುವನೆಂದರೆ-ಅದಕ್ಕೆ ಅವನು ಪರಿಮಿತನಲ್ಲ-ಆ ಎಲ್ಲದರಲ್ಲಿಯೂ ಶಿವನು ಚೈತನ್ಯಾತ್ಮಕನಾಗಿ ತುಂಬಿ ತುಳುಕಿರುವನೆಂಬುದು ಬಸವಣ್ಣನವರ ಅಭಿಪ್ರಾಯವೆಂಬುದರಲ್ಲಿ ಸಂಶಯವಿಲ್ಲ. ಬಸವಣ್ಣನವರ ಮೊದಲನೇ ವಚನವನ್ನು ನೋಡಿ.
ಮತ್ತು ಪಾಲ್ಕುರಿಕೆ ಸೋಮನಾಥನು ದೇವರ ದಾಸಿಮಯ್ಯನ ಬಾಯಲ್ಲಿ ಆಡಿಸಿರುವ ಈ ಮುಂದಿನ ಮಾತನ್ನು ಗಮನಿಸಿರಿ : “ಬೀಜದಲ್ಲಿ ವೃಕ್ಷದಂತೆ, ಶಬ್ದದಲ್ಲಿ ಅರ್ಥದಂತೆ, ಪರ್ವತದಲ್ಲಿ ಪ್ರತಿಧ್ವನಿಯಂತೆ ಸರ್ವದಲ್ಲಿಯೂ ಶಿವನಿರುವನು. ಮುಳ್ಳಿನ ಮೊನೆ ಕುತ್ತುವುದಕ್ಕೆ ತೆರಪಿಲ್ಲದಂತೆ ಎಲ್ಲೆಡೆಯೂ ತಾನೇ ತಾನಾಗಿರುವನು ಶಿವನು–ಈಶನೂ ಸಕಲ ಲೋಕೇಶನೂ ಕರ್ಮನಾಶನೂ ಆದವನು ನಮ್ಮ ರಾಮೇಶನು”(ಬಂಡಾರು ತಮ್ಮಯ್ಯಗಾರು ಸಂಪಾದಿತ ಬಸವಪುರಾಣಮು, ಪುಟ 433)
- ವ್ಯಾಖ್ಯಾನಕಾರರು ಡಾ.ಎಲ್. ಬಸವರಾಜು
ವಚನಕಾರ ಮಾಹಿತಿ
ಬಸವಣ್ಣ
ಅಂಕಿತನಾಮ:
ಕೂಡಲಸಂಗಮದೇವ
ವಚನಗಳು:
1409
ಕಾಲ:
12ನೆಯ ಶತಮಾನ
ಕಾಯಕ:
ಪ್ರಧಾನಮಂತ್ರಿ-ಶಿವಯೋಗ ಜೀವನ ಬೋಧನೆ
ಜನ್ಮಸ್ಥಳ:
ಇಂಗಳೇಶ್ವರ-ಬಾಗೇವಾಡಿ, ವಿಜಯಪುರ ಜಿಲ್ಲೆ.
ಕಾರ್ಯಕ್ಷೇತ್ರ:
ಕೂಡಲಸಂಗಮ-ಮಂಗಳವೇಢೆ-ಕಲ್ಯಾಣ
ತಂದೆ:
ಮಾದರಸ
ತಾಯಿ:
ಮಾದಲಾಂಬಿಕೆ
ಸತಿ/ಪತಿ:
ಗಂಗಾಂಬಿಕೆ ಮತ್ತು ನೀಲಾಂಬಿಕೆ
ಐಕ್ಯ ಸ್ಥಳ:
ಕೂಡಲಸಂಗಮ, ಹುನಗುಂದ ತಾಲ್ಲೂಕು, ಬಾಗಲಕೋಟೆ ಜಿಲ್ಲೆ.
ಪೂರ್ವಾಶ್ರಮ:
ಆಗಮಿಕ ಶೈವಬ್ರಾಹ್ಮಣ
ಸಂಕ್ಷಿಪ್ತ ಪರಿಚಯ:
ಬಸವಣ್ಣ ಭಾರತದ 12 ನೇ ಶತಮಾನದ ಧಾರ್ಮಿಕ ಕ್ರಾಂತಿ ಪುರುಷ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.