•  
  •  
  •  
  •  
Index   ವಚನ - 534    Search  
 
ಮಾಹೇಶ್ವರನ ಜ್ಞಾನಿಸ್ಥಲ - ದೇವರು
ಜಲಕೂರ್ಮನಾಗಮೇದಿನಿ ಸಪ್ತಸಾಗರ ಅಜಾಂಡಭಾಂಡ ಹರಿವಿರಂಚಿಗಳು ನಿಮ್ಮ ಉದರದ ಕೊನೆಯ ಪ್ರಾಣಿಗಳಯ್ಯಾ! ಕೂಡಲಸಂಗನ ಮಹಾಮನೆಯಲು ಅಸ್ತಿ ಗ್ರಾಹಕನೆಂಬ ಗಣೇಶ್ವರನ ಇಚ್ಛಾಮಾತ್ರದಿಂದ ಜಗಜುಗವಯ್ಯಾ?
Transliteration Jala kūrma nāga mēdini saptasāgara ajāṇḍa bhāṇḍa hariviran̄cigaḷu nim'ma udarada koneya prāṇigaḷayya! Kūḍalasaṅgana mahāmaneyalu asti grāhakanemba gaṇēśvarana icchāmātradinda jagajugavayyā?
Manuscript
English Translation 2 The ocean, tortoise, serpent, earth, The seven seas, The vessel of the unborn,s egg, Hari and Brahma and other gods Are the last creatures of Thy womb! In the great house of Kūḍala Saṅga, The worlds and ages have emerged At the mere wish of Gaṇēśvara Astigrāhaka by name! Translated by: L M A Menezes, S M Angadi
Hindi Translation जलकूर्म, नाग, मेदिनी, सप्तसागर, अजांड-कांड हरिविरंचि, तव उदर के अंतिम प्राणी हैं । अस्तिग्राहक नामक गणेश्वर की इच्छा मात्र से कूडलसंगमेश के महा गृह में जग और जुग उत्पन्न हुए ॥ Translated by: Banakara K Gowdappa
Telugu Translation జలకూర్మ నాగమేదినీ సప్తసాగర సహిత అజాండభాండ హరివిరించులు మీ పొట్ట కడనున్న ప్రాణులయ్యా! సంగమదేవా; మీ గృహమున అస్తిగ్రాహకుడను గణేశ్వరుడు తలచినంతనే యుగజగంబులు తలలెత్తునయ్యా! Translated by: Dr. Badala Ramaiah
Tamil Translation நீர், ஆமை, நாக உலகம், ஏழுகடல் உலகம், திருமால், பிரம்மன் போன்றோர் உம் வயிற்றின் இறுதியில் உறையும் உயிரினங்களாம் கூடல சங்கனின் பெருமனையில் அஸ்திகிராஹகன் என்னும் கணேசுவரனின் விருப்பத்தினால் மட்டுமே உலகம் உள்ளது ஐயனே Translated by: Smt. Kalyani Venkataraman, Chennai
Marathi Translation तुझिया उदरी, जल, कुर्म, नाग सप्तसागर, राग, मेदिनीही अजांड, भांड, हरि, विरंची आदि उदरी प्राणी परोपरी, देव देवा कूडलसंगमदेवा, तव महानिवासी अस्ती ग्राहक राशी, गणेश्वर तव इच्छा मात्रे, देश आणि काल ज्ञान हे विमल, प्राप्त झाले. अर्थ- हे कूडलसंगमदेवा ! ( परमेश्वरा ) तुझ्या महानिवासात जल, कासव नाग, सप्त सागर, राग, प्रधवी, अजांड, भांड, कांड, हरि विरंची (महादेव) इत्यादि अस्ती ग्राहक आहेत. किंबहूना तुझ्या इच्छेनुसार देश, काल, परिस्थिती, युग युग संभवते. तू सकल गणांचा ईश्वर आहेस. म्हणून तुझ्या चरणी विनम्र होत आहे. Translated by Rajendra Jirobe, Published by V B Patil, Hirabaug, Chembur, Mumbai, 1983 जल, कूर्म, नाग, मेदिनि, सप्तसागर, अजांड, हरि, विरंचि देवतागण तुमच्या उदरातील हे शेवटचे प्राणी देवा. कूडलसंगाच्या महानिवासातील अस्तिग्राहक नावाच्या गणेश्वराच्या इच्छेने मात्र हे जग युग झाले देवा. Translated by Shalini Sreeshaila Doddamani
ಶಬ್ದಾರ್ಥಗಳು ಅಜಾಂಡ = ಬ್ರಹ್ಮಾಂಡ; ಅಸ್ತಿ = ಇದೆ; ಉದರ = ; ಕೂರ್ಮ = ; ಗ್ರಾಹಕ = ; ಜಗಜಗ = ; ಭಾಂಡ = ; ಮೇದಿನಿ = ; ವಿರಂಚಿ = ; ಹರಿ = ;
ಕನ್ನಡ ವ್ಯಾಖ್ಯಾನ ಸಪ್ತಸಾಗರ, ಭೂಮಂಡಲ, ಹದಿನಾಲ್ಕು ಲೋಕಗಳು, ಚಂದ್ರಸೂರ್ಯರು, ರಾಹುಕೇತುಗಳು, ನಕ್ಷತ್ರವ್ಯೂಹಗಳು, ತಾರಾಪಥಗಳು, ಅಸಂಖ್ಯ ಆಕಾಶಗರ್ತಗಳು-ಈ ಬ್ರಹ್ಮಾಂಡವೆಲ್ಲ ಶಿವನ ಹೊಟ್ಟೆಯ ಒಂದು ಮೂಲೆಗೆ ಸಾಲವು-ಇವನ್ನೆಲ್ಲ ತನ್ನ ಇಚ್ಛಾಮಾತ್ರದಿಂದ ಸೃಷ್ಟಿಸಿದವನು ಶಿವನ ಮನೆಯ ಒಬ್ಬ ಸೇವಕ ಆಸ್ಥಿಗ್ರಾಹಕನೆಂಬವನೆನ್ನುತ್ತ-ಬಸವಣ್ಣನವರು ಆ ಶಿವನ ಭೂತಿಭೌಮವನ್ನು ಕಲ್ಪನೆಯೂ ತತ್ತರಿಸುವಂತೆ ವರ್ಣಿಸಿರುವರು. ವಿ : ಜಲವೆಂದರೆ ಆಧಾರಶಕ್ತಿ, ಅದರ ಮೇಲೆ ಒಂದು ಕೂರ್ಮ-ಅದರ ಬೆನ್ನ ಎಂಟು ಮೂಲೆಗೆ ಎಂಟು ದಿಗ್ಗಜ, ಅವುಗಳ ಮೇಲೆ ಎಂಟು ಕುಲಸರ್ಪಗಳು, ಆ ನಟ್ಟನಡುವೆ ಆ ಕೂರ್ಮನ ನಡುಬೆನ್ನಿಂದ ಕುಲಸರ್ಪಗಳ ಸರಿಸಕ್ಕೆ ಆದಿಶೇಷನ ಸಾವಿರ ಹೆಡೆಗಳು-ಇವುಗಳ ಮೇಲೆ ಭೂಮಿ ನಿಂತಿರುವುದೆಂದು ಒಂದು ಕಲ್ಪನೆಯಿದೆ. ಬ್ರಹ್ಮಾಂಡಗಳ ಅಸಂಖ್ಯಾತತೆ ಮತ್ತು ಅನಂತತೆಯನ್ನು ಕುರಿತ ಒಂದು ವಿವರವನ್ನು ಈ ಮುಂದೆ ನೋಡಿ : “ತತ್ತ್ವವೆಂಬ ಔದುಂಬರ ವೃಕ್ಷದೊಳ್ ಒಂದೇ ಸಮಯದಲ್ಲಿ ಜನಿಸುತ್ತಿರ್ದ, ಜನಿಸಿದ, ಜನಿಸಿ ಕೆಡುತ್ತಿರ್ದ-ತಮ್ಮೊಳ್ ಒಂದೊಂದರ ವೃತ್ತಾಂತವನ್ ಒಂದೊಂದರಿಯದಿರ್ಪ ಸಕಲ ಪ್ರಾಣಿಗಳೆಂಬ ಮಶಕವಿಸರಂಗಳೊಳಗೆ ಎಸೆವ ಅಜಾಂಡಗಳೆಂಬ ಫಲಂಗಳ್ ಅಸಂಖ್ಯಾತಂಗಳುಂಟು” (ವಿವೇಕಚಿಂತಾಮಣಿ ಪರಿಚ್ಛೇದ 6).

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು