ಮಾಹೇಶ್ವರನ ಜ್ಞಾನಿಸ್ಥಲ - ಸೃಷ್ಟಿ
ರುದ್ರ ಮುಖದಲ್ಲಿ, ವಿಷ್ಣು ಭುಜದಲ್ಲಿ, ಜಂಘೆಯಲ್ಲಿ ಅಜ ಜನನವು!
ಇಂದ್ರ ಪಾದದಲ್ಲಿ, ಚಂದ್ರ ಮನದಲ್ಲಿ, ಚಕ್ಷುವಿನಲ್ಲಿ ಸೂರ್ಯ ಜನನವು!
ಮುಖದಲ್ಲಿ ಅಗ್ನಿಯು, ಪ್ರಾಣದಲ್ಲಿ ವಾಯು,
ನಾಭಿಯಲ್ಲಿ ಅಂತರಿಕ್ಷವು.
ಶಿರದಲುದಯ ತೆತ್ತೀಸಕೋಟಿ ದೇವತೆಗಳು,
ಪಾದತಳದಲ್ಲಿ ಭೂಮಿ ಜನನವು!
ಶ್ರೋತ್ರದಲ್ಲಿ ದಶದಿಕ್ಕುವೂ!
ಜಗವ ನಿಕ್ಷೇಪಿಸಿದ ಕುಕ್ಷಿಯಲ್ಲಿ, ಅಕ್ಷಯನಗಣಿತನು!
ಸಾಸಿರ ತಲೆ, ಸಾಸಿರ ಕಣ್ಣು, ಸಾಸಿರ ಕೈ, ಸಾಸಿರ ಪಾದ.
ಸಾಸಿರ ಸನ್ನಿಹಿತ ನಮ್ಮ ಕೂಡಲಸಂಗಯ್ಯ!
Transliteration Rudra mukhadalli, viṣṇu bhujadalli, jaṅgheyalli aja jananavu!
Indra pādadalli, candra manadalli, cakṣuvinalli sūrya jananavu!
Mukhadalli agniyu, prāṇadalli vāyu,
nābhiyalli antarikṣavu.
Siradaludaya tettīsakōṭi dēvategaḷu,
pādataḷadalli bhūmi jananavu!
Śrōtradalli daśadikkuvū!
Jagava nikṣēpisida kukṣiyalli, akṣayanagaṇitanu!
Sāsira tale, sāsira kaṇṇu, sāsira kai, sāsira pāda.
Sāsira sannihita nam'ma kūḍalasaṅgayya!
Manuscript
English Translation 2 The birth of Rudra was from His face,
And from his shoulders,Viṣṇu's birth;
The Unborn's from his thigh;
From His feet Indra's, from his mind Moon's;
And from His eyes, the birth of the Sun!
Fire came from His mouth, wind from His breath;
And ether from his navel came!
The three-and-thirty crores of deities
Were born of His head, the earth of His sole;
The ten directions, of his ear!
He in His stomach has lodged the world-
The immutable and immeasurable,
Of the thousand heads and eyes,
Of the thousand hands and feet,
Abiding in a thousand spots-
Kūḍala Saṅga, our Lord!
Translated by: L M A Menezes, S M Angadi
Hindi Translation मुख से रुद्र, भुज से विष्णु,
जाँघ से अज उत्पन्न हुए ।
पाद से इंद्र, मन से चंद्र,
चक्षु से सूर्य उत्पन्न हुए।
मुख से अग्नि, श्वास से वायु
नाभि से अंतरिक्ष, सिर से त्रिंशत् कोटि देवता,
पदतल से पृथ्वी, श्रोत्र से दशोदिशाएँ उत्पन्न हुए ।-
अक्षयअगणित ने कुक्षि में जग को निक्षेप किया ।-
उनके सहस्र सिर, सहस्र नेत्र, सहस्र हस्त,
सहस्र पाद हैं, सहस्र स्थानों में विराजित् हैं
मम कूडलसंगमदेव ॥
Translated by: Banakara K Gowdappa
Telugu Translation ముఖమున రుద్రుడు భుజముల విష్ణువు
జంఘల అజుడు జననమైరి
పదముల యింద్రుడు మనసున చంద్రుడు
కన్నుల సూర్యుడు కలిగిరి
ముఖమున అగ్ని ప్రాణముల వాయువు
నాభిలో గగనము
శిరోజముల త్రింశత్కోటి దేవతలు
పాదముల భూమి ప్రభవమయ్యె
శ్రోత్రముల దశ దిశలు కుక్షిని జగము నిక్షేపించు
అక్షయు డగణితుడు; వేయితలలు
వేయి కన్నులు వేయి చేతులు వేయికాళ్ళు
వేయికి వియ్యంబురా మా కూడల సంగమదేవుడు
Translated by: Dr. Badala Ramaiah
Tamil Translation உருத்திரன் முகத்திலே விஷ்ணு புஜத்திலே
முழங்காலில் பிரம்மன் தோன்றினர்
இந்திரன் பாதத்திலே, சந்திரன் மனத்திலே
கண்ணிலே சூரியனும் தோன்றினர்
முகத்திலே தீ, மூக்கிலே வாயு
தொப்புளில் ஆகாயமாம்
தலையிலே முப்பத்து மூன்று கோடி தேவதைகள்
பாததலத்தில் பூமியின் தோற்றம்
காதிலே பத்து திசைகளின் தோற்றம்
வயிற்றில் உலகைப் புதைத்துக் கொண்டுள்ளான்
அழிவற்ற எல்லையற்றவன்
ஆயிரம் தலை, ஆயிரம் கண், ஆயிரம் கை
ஆயிரம் பாதம், அனைவருள்ளும் உறைபவன்
நம் கூடல சங்கமதேவன்.
Translated by: Smt. Kalyani Venkataraman, Chennai
Marathi Translation
मुखातून रुद्राचा, बाहूतून विष्णूचा, मांडीतून ब्रह्माचा जन्म झाला.
पायातून इंद्राचा, मनातून चंद्राचा, चक्षुतून सूर्याचा जन्म झाला.
मुखातून अग्नीचा, प्राणातून वायुचा,
नाभितून अंतरिक्षाचा जन्म झाला.
शिरातून तेहतीस कोटी देवांचा उदय झाला.
तळपायाखाली भूमीची उत्पत्ती झाली.
कानातून दशदिशा झाल्या.
जगाच्या कुशीत हे सर्व सामावले अक्षय अगणित
हजार शिर, हजार डोळे, हजार हात, हजार पाय.
आपली हजारो रुपे आहेत कूडलसंगमदेवा.
Translated by Shalini Sreeshaila Doddamani
ಶಬ್ದಾರ್ಥಗಳು ಅಂತರಿಕ್ಷ = ಆಕಾಶ ಕಾಯ; ಅಜ = ಬ್ರಹ್ಮ; ಚಷು = ; ಜಂಫೆ = ; ತೆತ್ತೀಸು = ; ನಾಭಿ = ; ರುದ್ರ = ;
ಕನ್ನಡ ವ್ಯಾಖ್ಯಾನ ಋಗ್ವೇದದ ಪುರುಸೂಕ್ತವು ವಿರಾಟ್ಟುರುಷಶಿವನಿಂದಾದ ಸೃಷ್ಟಿಯನ್ನು ಕುರಿತಿದೆ: “ಬ್ರಾಹ್ಮಣೋSಸ್ಯ ಮುಖಮಾಸೀತ್, ಬಾಹೂ ರಾಜನ್ಯಃ ಕೃತಃ | ಊರೂ ತದಸ್ಯ ಯದ್ವೈಶ್ಯಃ, ಪದ್ಭ್ಯಾಂ ಶೂದ್ರೋ ಅಜಾಯತ || ಚಂದ್ರಮಾ ಮನಸೋ ಜಾತಃ, ಚಕ್ಷೋಃ ಸೂರ್ಯೋ ಅಜಾಯತ | ಮುಖಾದಿಂದ್ರ ಶ್ಚಾಗ್ನಿಶ್ಚ, ಪ್ರಾಣಾದ್ ವಾಯುರಜಾಯತ || ನಾಭ್ಯಾಮಾಸೀದಂತರಿಕ್ಷಂ, ಶೀರ್ಷೋ ದ್ಯೌಃ ಸಮವರ್ತತ| ಪದ್ಭ್ಯಾಂ ಭೂಮಿರ್, ದಿಶಃ ಶ್ರೋತ್ರಾತ್-ತಥಾ ಲೋಕಾನಕಲ್ಪಯನ್ -ಎಂದು.
ವಿರಾಟ್ಪುರುಷ ಶಿವನ ಮುಖದಿಂದ ಬ್ರಾಹ್ಮಣನು, ಬಾಹುಗಳಿಂದ ಕ್ಷತ್ರಿಯನು, ತೊಡೆಗಳಿಂದ ವೈಶ್ಯನು, ಪಾದದಿಂದ ಶೂದ್ರನು ಹುಟ್ಟಿದರು. ಮನಸಿನಿಂದ ಚಂದ್ರ ಹುಟ್ಟಿದ, ಕಣ್ಣಿಂದ ಸೂರ್ಯ ಹುಟ್ಟಿದ, ಮುಖದಿಂದ (ಇಂದ್ರ ಮತ್ತು)ಅಗ್ನಿ, ಪ್ರಾಣದಿಂದ ವಾಯು ಹುಟ್ಟಿದರು. ನಾಭಿಯಿಂದ ಅಂತರಿಕ್ಷ, ತಲೆಯಿಂದ ದೇವಲೋಕ ಹುಟ್ಟಿತು. ಪಾದದಿಂದ ಭೂಮಿ, ಕಿವಿಯಿಂದ ದಶದಿಕ್ಕುಗಳು ಹುಟ್ಟಿದವು-ಎಂಬುದು ಮೇಲೆ ಉಲ್ಲಿಖಿತವಾಗಿರುವ ಪುರುಷಸೂಕ್ತ ಭಾಗದ ಸರಳಾನುವಾದ.
ಇದನ್ನೇ (ಕೊಂಚ ತಿದ್ದುಪಡಿಯಿಂದ ?) ಅಳವಡಿಸಿಕೊಂಡಿದ್ದಾರೆ ಬಸವಣ್ಣನವರು ತಮ್ಮ ಈ ವಚನದಲ್ಲಿ. ಈ ವಚನದ ಮುಖ್ಯ ಆಶಯ ಶಿವನ ವಿರಾಡ್ರೂಪದ ವರ್ಣನೆಯೇ ಆದರೂ-ಬಸವಣ್ಣನವರು ಆ ವರ್ಣನೆಯನ್ನು ಮಾಡಿರುವ ವೈಖರಿಯೇ ಬೇರೆಯಾಗಿದ್ದು-ವೇದಗಳ ಜಾತಿಯತೆಯಿಂದ ದೂರವಾಗಿದೆ.
ವೈದಿಕ ಪರಿಭಾಷೆಯಲ್ಲಿ ಬ್ರಾಹ್ಮಣ-ಕ್ಷತ್ರಿಯ-ವೈಶ್ಯ-ಶೂದ್ರ ಪದಗಳು ತಾರತಮ್ಯವಾಚಿಗಳಾಗಿ ಹಿಂದೂ ಸಮಾಜದ ಘನತೆಯನ್ನು ಹೇಗೆ ಹಾಳುಗೆಡವಿದ್ದವು-ಎಂಬುದನ್ನು ಮನಗಂಡಿದ್ದ ಬಸವಣ್ಣನವರು-ಆ ನಾಲ್ಕೂ ಪದಗಳನ್ನು ಕ್ರಮವಾಗಿ ರುದ್ರ-ವಿಷ್ಣು-ಬ್ರಹ್ಮ-ಇಂದ್ರ ಎಂದು ಭಾಷಾಂತರ ಮಾಡಿರುವರು, ಈ ಭಾಷಾಂತರಕ್ರಮದಲ್ಲಿ ವಿರಾಟ್ಪುರುಷನ ಅವಯವಗಳ ವಿವಿಧ ಶಕ್ತಿಗಳನ್ನು ಪ್ರತಿನಿಧಿಸುವ ದೇವತೆಗಳ ಆನುಪೂರ್ವಿಯಿದೆಯೇ ಹೊರತು-ಜನತೆಯಲ್ಲಿ ಒಡಕುಂಟುಮಾಡುವ ಜಾತಿಕಲ್ಪನೆಯಿಲ್ಲ. ಬಸವಣ್ಣನವರು ನಮ್ಮ ಆಚಾರ್ಯ ಪರಂಪರೆಯಲ್ಲಿ ಅತ್ಯಂತ ಮಾನವೀಯವಾದಿಗಳೂ ಮತ್ತು ಜಾತ್ಯತೀತ ಮನೋಭಾವದವರೂ ಆಗಿದ್ದರು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು