•  
  •  
  •  
  •  
Index   ವಚನ - 537    Search  
 
ಮಾಹೇಶ್ವರನ ಜ್ಞಾನಿಸ್ಥಲ - ಸೃಷ್ಟಿ
ಅಯ್ದುದೇ ಬ್ರಹ್ಮನ ಕಪಾಲ ಕರದಲ್ಲಿ: ಅಯ್ದುದೇ ವಿಷ್ಣುವಿನ ನಯನ ಪಾದದಲ್ಲಿ, ಅಯ್ದುದೇ ಕಾಮನ ಸುಟ್ಟ ಭಸ್ಮ ಮೈಯಲ್ಲಿ ಮುಖ ಮೂದಲೆಯೇಕಯ್ಯಾ, ಕೂಡಲಸಂಗಮದೇವಾ?
Transliteration Aydudē brāhmaṇa kapāla karadalli: Aydudē viṣṇuvina nayana pādadalli, aydudē kāmana suṭṭa bhasma maiyalli mukha mūḍaleyēkayyā, kūḍalasaṅgamadēvā?
Manuscript
English Translation 2 The skull of Brahma has come to Thy palm; The eyes of Viṣṇu have come to Thy feet; The ashes of Love burnt have come To Thy body: why, then, O Kūḍala Saṅgama Lord, This jeering, leering face? Translated by: L M A Menezes, S M Angadi
Hindi Translation ब्रह्म का कपाल कर में आया है, विष्णु के नयन चरण में आये हैं, कामदेव का दग्ध भस्म शरीर पर आया है ? मुख पर यह तिरस्कार क्यों कूडलसंगमदेव? Translated by: Banakara K Gowdappa
Telugu Translation అదే కరమున బ్రహ్మ కపాలము అదే పాదమున విష్ణునయనము అదే మేనెల్ల కాముని కాల్చిన బూది మోమోటమేటికయ్యా కూడల సంగయ్యా! Translated by: Dr. Badala Ramaiah
Tamil Translation பிரம்மனின் கபாலம் இவன் கையில் இல்லையோ? திருமாலின் கண் இவன் பாதத்தில் இல்லையோ? காமனைச் சுட்ட சாம்பல் இவன் மெய்மீது இல்லையோ முகத்தைத் திருப்பிக் கொள்வதேனோ கூடல சங்கமதேவனே. Translated by: Smt. Kalyani Venkataraman, Chennai
Marathi Translation ब्रह्माचे कपाल हातात आहे. विष्णूचे नयन चरणात आहे. कामाचे चिता भस्म शरीरावर आहे. अशा रुपाचा अनुमान का केला कूडलसंगमदेवा. Translated by Shalini Sreeshaila Doddamani
ಶಬ್ದಾರ್ಥಗಳು ಕಪಾಲ = ; ಕರ = ; ಕಾಮ = ; ನಯನ = ; ಬ್ರಹ್ಮ = ; ಭಸ್ಮ = ; ಮೂದಲೆ = ;
ಕನ್ನಡ ವ್ಯಾಖ್ಯಾನ ಶಿವನು ಬ್ರಹ್ಮನ ಅಹಂಕಾರವನ್ನು ಚಿವುಟಿ, ವಿಷ್ಣುವಿನ ಪಾದಪೂಜೆಯನ್ನು ಕೈಗೊಂಡು-ನಿಷ್ಕಾಮನಿಷ್ಠನಾಗಿ ಯಾವ ಅಧಿದೈವಪಟ್ಟಕ್ಕಾಗಲಿ ಆಶೆಪಟ್ಟವನಲ್ಲವೆಂಬುದನ್ನು ಕಾಮದಹನಲೀಲೆಯಿಂದ ಪ್ರಕಟಿಸಿ- ಆ ಕಾಮನನ್ನು ಸುಟ್ಟು ಉಳಿದ ಭಸ್ಮವನ್ನೇ ಮೈಗೆಲ್ಲಾ ಉದ್ಧೂಳನ ಮಾಡಿಕೊಂಡು ವಿರಾಗಮೂರ್ತಿಯಾಗಿ ಮಹಾದೇವನಾದನೆಂಬುದು ಈ ವಚನದ ಅರ್ಥ. ಈ ವಚನದಲ್ಲಿ ಶಿವನ ಜ್ಞಾನವನ್ನೂ ಐಶ್ವರ್ಯವನ್ನೂ ವೈರಾಗ್ಯವನ್ನೂ ತ್ರಿವರ್ಣರಂಜಿತವಾಗಿ ಬಣ್ಣಿಸಿರುವರು ಬಸವಣ್ಣನವರು. (ಪಂಪನು ಚಿತ್ರಿಸಿರುವ ಗೊಮ್ಮಟನ ಪಾತ್ರವನ್ನೇ ಹೋಲುವುದು ಬಸವಣ್ಣನವರ ಶಿವನ ಚಿತ್ರ. ವಿಜಯವು ವೈರಾಗ್ಯದಲ್ಲಿ ಪರಿಣಮಿಸಿತೆಂಬುದರಿಂದ). ಮುಂದೆ ಈ ವಚನದ ಸರಳಾನುವಾದವನ್ನು ನೋಡಿ : ಬಂದಿತಲ್ಲಾ ಬ್ರಹ್ಮನ ಕಪಾಲ ಕೈಗೆ, ಸಂದಿತಲ್ಲಾ ವಿಷ್ಣುವಿನ ನಯನ ಪಾದಪೂಜೆಗೆ, ಕಾಮನನ್ನು ಸುಟ್ಟ ಭಸ್ಮ ಹತ್ತಿತಲ್ಲವೆ ಮೈಗೆ-ಇನ್ನು ಈ ಶಿವನ ಸರ್ವೋತ್ತಮಿಕೆಗೆ ಮುಖತಿರುವುವುದೇಕೆ ?

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು