ಮಾಹೇಶ್ವರನ ಜ್ಞಾನಿಸ್ಥಲ - ದೇವರು
ಹರನ ಕೊರಳಲ್ಲಿಪ್ಪ ಕರೋಟಿಮಾಲೆಯ
ಶಿರದ ಲಿಖಿತವ ಕಂಡು, ಮರುಳತಂಡಗಳು ಓದಿ ನೋಡಲು,
ʼಇವನಜ, ಇವ ಹರಿ ಇವ ಸುರಪತಿ,
ಇವ ಧರಣೀಂದ್ರನಿವನಂತಕʼನೆಂದು
ಹರುಷದಿಂದ ಸರಸವಾಡಿತ್ತ ಕಂಡು,
ಹರ ಮುಕುಳಿತನಾಗಿ ನಸುನಕ್ಕನು,
ನಮ್ಮ ಕೂಡಲಸಂಗಮದೇವ.
Transliteration Harana koraḷalippa karōṭimāleya
śirada likhitava kaṇḍu, maruḷataṇḍagaḷu ōdi nōḍi,
ʼivanaja, iva hari iva surapati,
iva dharaṇēndranivanantakaʼnendu
haruṣadinda sarasavāḍitta kaṇḍu,
hara mukuḷitanāgi nasunakkanu,
nam'ma kūḍalasaṅgamadēva.
Manuscript
English Translation 2 The hosts of ghouls, when they had read
What's writ upon the brows of skulls
Which hang a garland round Hara's neck
Were crying, 'He is Brahma,
He's Hari, of the angels lord,
Lord of the earth, and lord of Death:'
When Hara, marking their pleasantries,
Was happy and smiled the faintest smile-
Our Lord Kūḍala Saṅgama!
Translated by: L M A Menezes, S M Angadi
Hindi Translation हर कंठ की कपालमाला के- लेख
जब प्रेतोंने पढ़ा कि ‘यह अज है,
यह हरि है, यह सुरपति है ।
यह धरणींद्र है, यह अंतक है’
तब आमोद प्रमोद में लीन हुए ।
यह देख कूडलसंगमदेव मंदस्मित हुए ॥
Translated by: Banakara K Gowdappa
Telugu Translation హరుని గళమున గల
కరోట మాలాశిరస్థ లిఖితములజూచి
వెడగులోకము చదువుకొనే
అజుడితడు; హరియితడు; సురపతి యితడు
ధరణీంద్రుడితడంచు హర్షమున
సరసమాడుట జూచి; అరమోడ్పు కనులతో
చిరునవ్వు నవ్వె మా కూడల సంగమదేవుడు
Translated by: Dr. Badala Ramaiah
Tamil Translation சிவனின் கழுத்திலுள்ள மண்டைஓட்டு மாலையின்
தலை எழுத்தைக் கண்டு, மருளுற்றோர்
ஓதிக்காண, இவன் பிரம்மன், இவன் திருமால்
இவன் இந்திரன், இவன் ஆதிசேடன்
இவன் கூற்றுவன் என மகிழ்ச்சியுடன்
உரையாடியதைக் கண்டு, சிவன்
புன்முறுவல் பூத்தனன், நம் கூடல சங்கமதேவன்
Translated by: Smt. Kalyani Venkataraman, Chennai
Marathi Translation
हराच्या गळ्यात, मुंडमाळ थोर
पहाती चतुर, कोण कोण
तयाशि तो तेथे दिसताति देव
अजदेव, हरिदेव आणि धरणींद्र
सुरपतिदेव आणि तो अंतक
ओळखुनी मुर्ख, नाचताती
चतुर हास्यांत तयांचा स्वभाव
पाहुनि कूडलसंगमदेव! हसतात.
अर्थ - महेशाच्या गळयातील मुंडमाळ पाहून देवतांचे भक्त त्या मुंडमाळात असलेल्या देवताना ओळखू पाहतात. त्या मुंडाच्या कपाळावरील नावे वाचून ते हर्षाने नाचतात. त्यांच्या हर्षकडे व नृत्याकडे पाहून माझ्या कूडलसंगमदेवास (परमेश्वरास) हसू येत आहे तसेच त्यांच्या मुर्खपणावर किव येते आहे. महात्मा बसवेश्वर वरील वचनात पुराणातील एक प्रसिद्ध कथेकडे सर्वांचे लक्ष वेधू इच्छितात की, ज्याच्या गळ्यात मुंडमाळ आहे असा तो महेश आणि त्याची शक्ती याकडे कोणानेही लक्ष गेलेले दिसत नाही म्हणून अशा पामराबद्दल काय बोलावे ? शेवटी मिश्किल हसत त्यांची किव करीत आहेत.
Translated by Rajendra Jirobe, Published by V B Patil, Hirabaug, Chembur, Mumbai, 1983
हराच्या गळ्यात रुंडगुंडाची माळा.
प्रत्येक रुंडाचे विधीलिखित भूतगण वाचू लागले.
हा विष्णू, हा हरि, हा सुरपती, हा धरणेंद्र,
हा अंतक म्हणून आनंदाने नाचू लागलेले पाहून
आमचा कूडलसंगमदेव हसू लागले.
Translated by Shalini Sreeshaila Doddamani
ಶಬ್ದಾರ್ಥಗಳು ಅಂತಕ = ಯಮ; ಇವನಜ = ; ಕರೋಟಿ = ; ಧರಣೇಂದ್ರ = ; ಮರುಳ = ; ಮುಕುಳಿತ = ; ಲಿಖಿತ = ; ಸರಸ = ; ಸುರಪತಿ = ; ಹರ = ; ಹರಿ = ;
ಕನ್ನಡ ವ್ಯಾಖ್ಯಾನ ಹರನ ಕೊರಳಲ್ಲಿ ತಲೆಯ ಬುರುಡೆಗಳ ಮಾಲೆಯಿದ್ದರೆ-ಸುತ್ತಲೂ ನೆರೆದ ಭೂತಗಳ ಆ ತಲೆಯ ಬುರುಡೆಗಳತ್ತ ಬಾಗಿ ನೋಡಿ ಅಲ್ಲಿ ಹಣೆಯ ಬರಹಗಳನ್ನು ಓದಿ ಓದಿ-ಇದು ಬ್ರಹ್ಮನದು, ಇದು ವಿಷ್ಣುವಿನದು, ಇದು ಇಂದ್ರನದು, ಇದು ಧರಣೀಂದ್ರ(ಆದಿಶೇಷ ?)ನದು ಎಂದು ಸರಸವಾಡುತ್ತಿದ್ದವು. ಕೇಳಿ ನಸುನಗುತ್ತಿದ್ದ ನಮ್ಮ ಶಿವನು ಎಂದು ಬಸವಣ್ಣನವರು ತಮ್ಮ ಆರಾಧ್ಯದೈವದ ಪಾರಮ್ಯವನ್ನು ಕೊಂಡಾಡುತ್ತಿರುವರು.
ಶಿವನು ಕರೋಟಿಮಾಲಾಧರ, ಭೂತಪತಿ ಎಂಬುದು ಪ್ರಸಿದ್ಧವೇ ಇದೆ. ಈ ಭಯಾನಕದ ಹಿನ್ನಲೆಯಲ್ಲಿ ಹಾಸ್ಯರಸವನ್ನು ಪುಟಿಸಿ-ಆ ಹರನ ಭಯಾನಕವು ಮತ್ತಷ್ಟು ಭಯಂಕರವಾಗುವಂತೆ ಚಿತ್ರಿಸಿರುವ ಬಸವಣ್ಣನವರ ಕಾವ್ಯಶಕ್ತಿ ಅಸದೃಶವಾದುದು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು