•  
  •  
  •  
  •  
Index   ವಚನ - 539    Search  
 
ಮಾಹೇಶ್ವರನ ಜ್ಞಾನಿಸ್ಥಲ - ದೇವರು
ಅದುರಿತು ಪಾದಾಘಾತದಿಂದ ಧರೆ: ಬಿದಿರಿದುವು ಮಕುಟ ತಾಗಿ ತಾರಕೆಗಳು; ಉದುರಿದವು ಕೈ ತಾಗಿ ಲೋಕಂಗಳೆಲ್ಲಾ! 'ಮಹೀಪಾದಾಘಾತಾದ್ ವ್ರಜತಿ ಸಹಸಾ ಸಂಶಯಪದಂ ಪದಂ ವಿಷ್ಣೋರ್ ರ್ಭ್ರಾಮ್ಯಾದ್ ಭುಜಪರಿಘರುಗ್ಣಗ್ರಹಗಣಂ ಮುಹುರ್ ದ್ಯೌರ್ ದೌಸ್ಥ್ಯಂ ಯಾತ್ಯನಿಭೃತಜಟಾತಾಡಿತತಟಾ ಜಗದ್ ರಕ್ಷಾಯೈ ತ್ವಂ ನಟಿಸಿ ನನು ವಾಮೈವ ವಿಭುತಾ'|| ನಮ್ಮ ಕೂಡಲಸಂಗಮದೇವನಿಂದು ನಾಟ್ಯವನಾಡೆ.
Transliteration Edurisitu pādāghātadinda dhare: Bidiriduvu makuṭa tāgi tārakegaḷu; uduridavu kai tāgi lōkaṅgaḷella! 'Mahīpādāghātād vrajati sahasā sanśayapadam padaṁ viṣṇōrbhrāmyad bhujaparigharugṇagrahagaṇam muhurdhyaurdausthyaṁ yātyanibhr̥tajaṭātāḍitataṭā jagadrakṣāyai tvaṁ naṭisi nanu vāmaiva vibhūtā'|| nam'ma kūḍalasaṅgamadēvanindu nāṇṭyavanāḍe.
Manuscript
Art
English Translation 2 Earth quaked beneath the tramping of His feet The stars were scattered, at contact of His crown; Worlds on world’s fell, touched by His hands; ‘ Suddenly the earth falters under His tread, The planet- clusters in the sky are bruised By His rotating arms! Oft, higher than the firmament, the banks when touched, Are tickled by the motion of His hair’, When, for protection of the world, you dance, Your mastery goes counter to your end: Our Lord KudalaSangama to day Sports in his dance! Translated by: L M A Menezes, S M Angadi
Hindi Translation पदाघात से धरा कंपित हुई; मुकुटस्पर्श से तारे छितराये-; हस्त – स्पर्श से समस्त लोक च्युत हुए। महीपादाघाताद् व्रजति सहसा संशयपदं । पदं विष्णोभ्र्राम्यद् भुजपरिघरूग्णग्रहगणं ॥ मुहुर्द्यर्डास्थपं यात्यनिभृत जटाताडिततटा । जगद्रक्षायै त्वं नटसि ननु वाचैव विभुता ॥ जब मम कूडलसंगमदेव तांडव नृत्य करने लगे ॥ Translated by: Banakara K Gowdappa
Telugu Translation అదరె ధర పాదాఘాతమున చెదరె తారలు మకుటాగ్రమొరసి ప్రిదిలె లోకములెల్ల కేల్దాకి ‘‘మహీపాదా ఘాతాద్ ప్రజతి సహసాసంశయపదం పదం విష్ణోర్ భ్రామ్యద్ భుజపరిఘరుగ్ణ గ్రహగణం ముహుర్ దౌర్దౌసంయాత్మ నిభృత జటా తాడితతటా జగద్ రక్షాjైుత్వం నటసిననువామైన విభుతా’’ మా కూడల సంగమ దేవుడు నిలచి నాట్యమాడ!! Translated by: Dr. Badala Ramaiah
Tamil Translation எடுத்த திருவடியால் நிலம் அதிர்ந்தது மகுடம் பட்டு நட்சத்திரங்கள் சிதறின உலகங்களனைத்தும் கைபட்டு உதிர்ந்தன மஹீபாதா காதாத் வ்ரஜதி ஸஹஸா ஸம்சயபதம் பதம் விஷ்ணோர்ப்ராம்யத் புஜபரிக ருக்ணக்ரஹகணம் ஜகத்ரக்ஷாயை த்வம் நடஸி நனு வாமைவ விபுதா நம் கூடல சங்கமதேவன் இன்று திருநடன மாடிய பொழுது Translated by: Smt. Kalyani Venkataraman, Chennai
Marathi Translation थरथरली धरणी पदाघाताने, मुकुटच्या स्पर्शाने तारे गळून पडले. हाताच्या स्पर्शाने गळाले लोकांचे हात, महीपादाघाताद् व्रजीत सहसा संशयपदं। पदं विष्णोभ्याम्यद् भुजपरिगरुग्णगेहणः। महौस्थ्यंयात्यनिभृतजटाताडिततटा जगद्रक्षायै त्वं नटसि ननु वाम्यैव विभुता। आमचे कूडलसंगमदेव आज तांडव नृत्य करु लागले. Translated by Shalini Sreeshaila Doddamani
ಶಬ್ದಾರ್ಥಗಳು ಅಘಾತ = ಹೊಡೆತ; ಉಗ್ಣ = ; ಗ್ರಹಗಣ = ; ಜಟಾ = ; ತಟ = ; ತಾಡಿತ = ; ತಾರಕ = ; ದಾಸ್ಥö್ಯಮ್ = ; ಧರೆ = ; ನಾಂಟ್ಯ = ; ನಿಭೃತ = ; ಪರಿಘರು = ; ಬಿದಿರಿ = ; ಭ್ರಾಮ್ಯ = ; ಮಕುಟ = ; ಮಹಿ = ; ಮುಹ್ರಿಕ್ದೌö್ಯ = ; ವಾಮ = ; ವಿಭು = ; ವ್ರಜ = ; ಸಂಶಯ = ;
ಕನ್ನಡ ವ್ಯಾಖ್ಯಾನ ನಟರಾಜನಾಗಿ ಶಿವನು ತಾಂಡವನೃತ್ಯವಾಡಿದಾಗ ಅವನ ಪಾದಾಘಾತದಿಂದ ಭೂಮಿ ನಡುಗಿತ್ತು, ಅವನ ಕಿರೀಟತಾಗಿ ನಕ್ಷತ್ರಗಳು ಉದುರಿದವು, ಉರ್ಧ್ವಲೋಕಗಳೇಳೂ ಚದುರಿಬಿದ್ದವು-ಎನ್ನುತ್ತ ಬಸವಣ್ಣನವರು ತಾವು ಭಾಗಶಃ ಭಾಷಾಂತರಿಸಿರುವ ಸಂಸ್ಕೃತವೃತ್ತವನ್ನು ಮುಂದೆ ಉಲ್ಲೇಖಿಸಿರುವರು. ಅದರ ಸರಳಾನುವಾದ ಮುಂದಿನಂತಿದೆ : ನಟರಾಜನೇ ನಿನ್ನ ಪಾದಗಳ ತುಳಿತಕ್ಕೆ ಸಿಕ್ಕಿ ಭೂಮಂಡಲವೇನಾಯಿತೆಂಬಂತೆ ಧೂಳೀಪಟವಾಯಿತು, ತಾಂಡವನೃತ್ಯದಲ್ಲಿ ಆಡುವ ನಿನ್ನ ಭುಜವೆಂಬ ಕೊಂತಗಳಿಂದ ಆಕಾಶದಲ್ಲಿದ್ದ ಗ್ರಹರಾಶಿಗಳೆಲ್ಲಾ ಚಕ್ಕೆಯೆದ್ದು ಚೂರಾದವು. ನಿನ್ನ ಚದುರಿದ ಜಟೆಯ ತಿರಿಗಳು ತಾಟಿಸಿ ದೇವಲೋಕವೆಲ್ಲಾ ಧ್ವಂಸವಾಯಿತು, ಎಲೆ ಶಿವನೆ, ನೀನು ಜಗತ್ತನ್ನು ರಕ್ಷಿಸಲೆಂದು ಕುಣಿಯುತ್ತಿರುವ ಅಂದವದೆಷ್ಟು ಚಂದ ! ನಿನ್ನ ಅನಂತರೂಪವು ಭೀಮಭೌಮವಾದರೂ ಅದೆಷ್ಟು ಸುಂದರ ಎನ್ನುತ್ತ -ಭಯಂಕರವನ್ನೂ ಶಂಕರವನ್ನೂ ಸಮರುಚಿಯಾಗಿ ಬೆರೆಸಿ ಸೌಂದರ್ಯವನ್ನು ಪುಟಿಸುತ್ತಿರುವ ಈ ವಚನದ ಕಾವ್ಯಗುಣ ಅಪೂರ್ವವಾದುದು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು