ಮಾಹೇಶ್ವರನ ಜ್ಞಾನಿಸ್ಥಲ - ಹರಿ-ಹರ
ಆರು ಕೋಟಿ ಬ್ರಹ್ಮರು ಮಡಿವಲ್ಲಿ ನಾರಾಯಣಗೆ ಒಂದು ದಿನವಾಯ್ತು.
ನಾರಾಯಣರೊಂದು ಕೋಟಿ ಮಡಿವಲ್ಲಿ ರುದ್ರನ ಕಣ್ಣೆವೆ ಹಳಚಿತ್ತು.
ರುದ್ರಾವತಾರ ಹಲವಳಿದಲ್ಲಿ
ನಮ್ಮ ಕೂಡಲಸಂಗಮದೇವನೇನೆಂದೂ ಅರಿಯನು.
Transliteration Āru kōṭi brahmaru maḍivalli nārāyaṇagondu dinavāyittu.
Nārāyaṇarondu kōṭi maḍivalli rudrana kaṇṇeve haḷacittu.
Rudrāvatāra halavaḷivalli
nam'ma kūḍalasaṅgamadēvanēnendū ariyanu.
Manuscript
English Translation 2 The while six billion Brahmas die,
It's only a day for Nārāyaṇa ;
The while a billion Nārāyaṇa die,
It is for Rudra an eylid's wink;
When many Rudra incarnations cease,
Our Lord Kūḍala Saṅgama
Knows nothing of it at all!
Translated by: L M A Menezes, S M Angadi
Hindi Translation छः करोड ब्रह्मों की मृत्यु हो,
तो नारायण के लिए एक दिन है।
एक करोड नारायणों की मृत्यु हो,
तो रूद्र केलिए एक निमिष है ।
कुछ रुद्रावतारों के समाप्त होने पर भी
कूडलसंगमदेव को इसका पता नहीं है ॥
Translated by: Banakara K Gowdappa
Telugu Translation ఆరుకోటి బ్రహ్మలణగార నారాయణునకొక్క దినమయ్యె!
నారాయణులొక కోటి మరణింప కనుటెప్ప కదిలె రుద్రునకు
రుద్రావతారములు
కొన్ని మఱుగయ్యె కాని మా
కూడల సంగమ దేవునకేదియూ లేదయ్యె!
Translated by: Dr. Badala Ramaiah
Tamil Translation ஆறுகோடி பிரம்மர் மடியும்பொழுது
நாராயணனுக்கு ஒரு நாளாம்
நாராயணர் ஒரு கோடி மடியும் பொழுது
உருத்திரனின் கண்ணிமை இமைத்தது
பல உருத்திர அவதாரம் அழியும் காலை
கூடல சங்கமதேவன் நிலைத்து விளங்குவான்.
Translated by: Smt. Kalyani Venkataraman, Chennai
Marathi Translation
सहा कोटी ब्रह्माचे वय ते
एक दिवस तो नारायणाचा
एक कोटी नारायण वय ते
एकच क्षण तो त्या रूद्राचा
अगणीत रूद्र आयुही देवा
तव दृष्टोत ती काहीच नाही
कूडलसंगमदेवाधि देवा
प्रमाणबद्ध अशी ही ग्वाही
अर्थ - देव काळाचे खाद्य आहेत. सहा कोटी ब्रह्माची आयु म्हणजे नारायणाचा एक दिवस आणि एक कोटी नारायणाची आयु म्हणजे रूद्राचा एक क्षण होय. आणि हे कूडलसंगमदेवा (परमेश्वरा) अनेक रुद्रावताराची अवधी ही तुझ्या दृष्टीत काहीच नाही असा तू व्यापक सर्वज्ञ आहेस. म्हणून तुझ्या चरणी मी सदैव नतमस्तक होत शाहे.
Translated by Rajendra Jirobe, Published by V B Patil, Hirabaug, Chembur, Mumbai, 1983
सहा कोटी ब्रह्माचे आयुष्य नारायणाचा एक दिवस झाला.
नारायणाचे एक कोटी आयुष्य रुद्राचा एक क्षण गेला.
अनेक रुद्रावताराचा अवधी होऊन गेला तरी
कूडलसंगमदेवाला जाणू शकले नाही.
Translated by Shalini Sreeshaila Doddamani
ಶಬ್ದಾರ್ಥಗಳು ಎವೆ = ; ನಾರಾಯಣ = ; ಮಡಿ = ; ರುದ್ರ = ; ಹಲವಳಿ = ; ಹಳಚು = ;
ಕನ್ನಡ ವ್ಯಾಖ್ಯಾನ ಮಾನವರ ಲೆಕ್ಕದಲ್ಲಿ ಕೋಟ್ಯಂತರ ವರ್ಷಗಳಾದರೆ ದೇವತೆಗಳಿಗೊಂದು ದಿವ್ಯವರ್ಷವಾಗುವುದು. ಆ ದಿವ್ಯವರ್ಷಗಳು ಸಾವಿರವಾದರೆ ಒಂದು ದಿವ್ಯ ಯುಗವಾಗುವುದು.
ಈ ದಿವ್ಯ ಯುಗಗಳು ಸಾವಿರವಾದರೆ ಬ್ರಹ್ಮನಿಗೊಂದು ಹಗಲು ಮುಗಿಯುವುದು. ಈ ಲೆಕ್ಕದಲ್ಲಿ ನೂರು ವರ್ಷವಾದರೆ (ಬ್ರಹ್ಮನ ಆಯುರವಧಿ ಮುಗಿದು) ವಿಷ್ಣುವಿಗೆ ಒಂದು ದಿನವಾಗುವುದು. ಅದು ನೂರು ವರ್ಷವಾದರೆ (ವಿಷ್ಣುವಿನ ಆಯುರವಧಿ ಮುಗಿದು) ರುದ್ರನಿಗೆ ಒಂದು ತಿಂಗಳಾಗುವುದು. ಅದು ನೂರು ವರ್ಷವಾದರೆ (ರುದ್ರನ ಆಯುರವಧಿ ಮುಗಿದು) ಈಶ್ವರ(=ಮಹೇಶ್ವರ)ನಿಗೆ ಒಂದು ದಿನವಾಗುವುದು. ಅದು ನೂರು ವರ್ಷವಾದರೆ (ಈಶ್ವರನ ಆಯುರವಧಿ ಮುಗಿದು)ಸದಾಶಿವನಿಗೆ ಒಂದು ನಿಮಿಷವಾಗುವುದು. ಅದು ನೂರು ವರ್ಷವಾದರೆ (ಸದಾಶಿವನ ಆಯುರವಧಿ ಮುಗಿದು) ಸಕಲಸೃಷ್ಟಿ ನಿಷ್ಕಲವಾಗುವುದು.
ಮರಳಿ ಶಿವನಿಗೆ ಲೀಲೆಯಾದರೆ-ಮತ್ತೆ ನಾದಬಿಂದುಕಲೆಗಳುತ್ಪತ್ತಿ-ಆ ಮೂಲಕ ಈ ಬ್ರಹ್ಮಾಂಡ ಕೋಟಿಯುತ್ಪತ್ತಿಯಾಗುವುದು. ಹೀಗೆ ಮಹಾಸೃಷ್ಟಿಯ ಪ್ರಾಚೀನತೆಯನ್ನು ಕುರಿತಂತೆ ಭಾರತೀಯರ ಈ ಕಲ್ಪನೆ ಬಹಳ ಅದ್ಭುತವಾಗಿದೆ.
ಹುಟ್ಟಿದುದಕ್ಕೆಲ್ಲ ಸಾವುಂಟು-ಆದಿಯುಂಟು ಅಂತ್ಯವುಂಟು. ಈ ಆದಿ ಅಂತ್ಯಗಳ ಮಧ್ಯಂತರ ಅವಧಿ ಅದರದರ ಆಯುರವಧಿ.
ಈ ದೃಷ್ಟಿಯಿಂದ ಬ್ರಹ್ಮ ವಿಷ್ಣು ರುದ್ರ ಮಹೇಶ್ವರ ಸದಾಶಿವರಿಗೂ ಆಯುರವಧಿಯುಂಟು. ಆದರೆ ಅವರೆಲ್ಲರಿಂದಾಚೆಗಿರುವ ನಿಷ್ಕಲಶಿವನಿಗೆ ಕಾಲದೇಶಾದಿ ಕಲ್ಪನೆಯೊಂದೂ ಇಲ್ಲ, ಎಲ್ಲ ಕಲ್ಪನೆಗಳೂ ಶಿವನಿಂದೀಚೆಗೇ ಹೊರತು ಆಚೆಗಿಲ್ಲ. ನಿತ್ಯ ನಿರ್ದ್ವಂದ್ವ ನಿರಾವರಣ ನಿರ್ಮಾಯ ನಿರ್ಗುಣ ನಿಷ್ಕರ್ಮ ನಿಷ್ಕಲ ನಿಷ್ಪ್ರಪಂಚ ನಿರವಧಿಗೆಲ್ಲಿಯದು ಕಾಲಕಲ್ಪಿತ?
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು