•  
  •  
  •  
  •  
Index   ವಚನ - 541    Search  
 
ಮಾಹೇಶ್ವರನ ಜ್ಞಾನಿಸ್ಥಲ - ಏಕದೇವೋಪಾಸನೆ
ಯುಗಜುಗಪ್ರಳಯವಹಂದೂ ಕಾಣೆನಿಂದೂ ಕಾಣೆ! ಧಿಗಿಲುಭುಗಿಲೆಂದುರಿವಂದೂ ಕಾಣೆನಿಂದೂ ಕಾಣೆ! ಕೂಡಲಸಂಗಮದೇವನಲ್ಲದೆ ತಲೆದೋರುವ ದೈವಂಗಳನಂದೂ ಕಾಣೆನಿಂದೂ ಕಾಣೆ!
Transliteration Yugajugapraḷayavahandū kāṇenindū kāṇe! Dhigilu bhugilendurivandū kāṇenindū kāṇe! Kūḍalasaṅgamadēvanallade taledōruva daivaṅgaḷanandū kāṇenindū kāṇe!
Manuscript
English Translation 2 I never see the ages and the aeons and The day of doom! I never See The conflaugrations that crackle and crash; Except Lord Kūḍala Saṅgama, I never see The deities that show their heads! Translated by: L M A Menezes, S M Angadi
Hindi Translation युग-युग का प्रलय तब भी नहीं देखा, अब भी नहीं देखा । धधकती प्रखर ज्वाला को तब भी नहीं देखा, अब भी नहीं देखा । कूडलसंगमदेव के अतिरिक्त प्रकटित अन्य देवो को तब भी नहीं देखा, अब भी नहीं देखा ॥ Translated by: Banakara K Gowdappa
Telugu Translation యుగయుగాల ప్రళయము నాడూ చూడ నేడూ చూడ; భుగ భుగమని రగలిమండుట నేడూ చూడ; నాడూ చూడ; కూడల సంగమదేవుడు దప్ప తలలెత్తు వారల నాటికీ చూడ; నేటికీ చూడ Translated by: Dr. Badala Ramaiah
Tamil Translation யுகம் யுகத்தின் அழிவில் அன்றும் காணேன் இன்றும் காணேன் தகதகவென எரிவதை அன்றும் காணேன், இன்றும் காணேன் கூடல சங்கமதேவனன்றி தலைகாட்டும் தெய்வங்களை அன்றும் காணேன், இன்றும் காணேன் Translated by: Smt. Kalyani Venkataraman, Chennai
Marathi Translation पूर्वीच्या युग युगांच्या प्रलयात पाहिले नाही. आजही पाहिले नाही! पूर्वीच्या धमधम जळणाऱ्या आगीत पाहिले नाही, आजही नाही! कूडलसंगमदेवा विना दुसरा कोणता देव पाहिला नाही, आजही पाहिला नाही. Translated by Shalini Sreeshaila Doddamani
ಶಬ್ದಾರ್ಥಗಳು ಜುಗ = ; ಧಗಿಲು = ; ಪ್ರಳಯ = ; ಭುಗಿಲು = ; ಯುಗ = ;
ಕನ್ನಡ ವ್ಯಾಖ್ಯಾನ ಯುಗಯುಗಾಂತರಗಳಿಂದ ಅಲ್ಲಲ್ಲಿಗೆ ದೇವತೆಗಳು ಪ್ರಳಯವಾದರಲ್ಲದೆ-ಏಕಪ್ರಕಾರವಾಗಿ ಉಳಿದು ಬಂದವನು ಶಿವನಲ್ಲದೆ ಇನ್ನೊಬ್ಬನಿಲ್ಲ. ಸಮುದ್ರಮಥನವಾದಾಗ ಹೊಗೆಯುಗುಳಿ ಉದ್ಭವಿಸಿದ ವಿಷವನ್ನು ಅಂಗೈಯಲ್ಲಿ ಅಧೀನಕ್ಕೆ ತಂದವನು, ಕಂಠದಲ್ಲಿ ಧರಿಸಿ ಅದರ ಮಿಡುಕಡಸಿಗಿದವನು ಶಿವಮಹಾದೇವನಲ್ಲದೆ ಮತ್ತೊಬ್ಬ ದೇವನಂದಿನಿಂದ ಇಂದಿನವರೆಗೆ ಕಾಣಲಿಲ್ಲ. ಕೂಡಲಸಂಗಮದೇವನೆತ್ತರಕ್ಕೆ ಸಾಹಸಕ್ಕೆ ಶಕ್ತಿಗೆ ಕೃಪೆಗೆ ಸರಿಮಿಗಿಲಾಗಿ ನಿಲ್ಲಬಲ್ಲ ದೇವರಿನ್ನೊಬ್ಬನಿಲ್ಲ. ಅಂದಿನಿಂದ ಇಂದಿನವರೆಗೆ ದೇವರಲ್ಲಿ ದೊಡ್ಡವರನ್ನು ಗಣನೆ ಮಡುವಾಗ ಶಿವನನ್ನೆಣಿಸಿ ಮಡಚಿದ ಕಿರುಬೆರಳಲ್ಲದೆ ಇನ್ನೊಂದು ಬೆರಳನ್ನು ಮಡಿಚಲಾಗಲೇ ಇಲ್ಲ. ಶಿವನ ಪಾರಮ್ಯವನ್ನು ಸ್ಥಾಪಿಸುವ ಬಸವಣ್ಣನವರ ಈ ಕಲ್ಪನೆ ಲಹರಿಲಹರಿಯಾಗಿ ವೈವಿಧ್ಯಮಯವಾಗಿ-ಅತ್ಯುನ್ನತ ಮಟ್ಟದ ಕಾವ್ಯಗುಣಗಳನ್ನು ಪಡೆದಿರುವುದು, ಇದಕ್ಕೆ ಸಮಾನವೆಂದು ಇನ್ನೊಂದು ನಿದರ್ಶನಕೊಡಲು ಉಪನಿಷತ್ತುಗಳಿಗೇ ಹೋಗಬೇಕು : ಸ ಏವ ಕಾಲೇ ಭುವನಸ್ಯ ಗೋಪ್ತಾ| ವಿಶ್ವಾಧಿಪಃ ಸರ್ವ ಭೂತೇಷು ಗೂಢಃ| ಯಸ್ಮಿನ್ಯುಕ್ತಾ ಬ್ರಹ್ಮರ್ಷಯೋ ದೇವತಾಶ್ಚ| ತಮೇವಂ ಜ್ಞಾತ್ವಾ ಮೃತುಪಾಶಾಂಶ್ಛಿನತ್ತಿ (ಶ್ವೇತಾಶ್ವತರೋಪನಿಷತ್ 4-15).

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು