ಮಾಹೇಶ್ವರನ ಜ್ಞಾನಿಸ್ಥಲ - ಜಾತಿ
ಒಬ್ಬ ಕೆಂಚನೊಬ್ಬ ಕರಿಕನೊಬ್ಬ ಶುದ್ಧಧವಳಿತನೆಂತಯ್ಯಾ ಲಿಂಗವೇ?
ಒಬ್ಬರಿಗೊಬ್ಬರು ಘನವೆಂಬರು: ಅದೆಂತಯ್ಯಾ?
ಒಬ್ಬರಿಗೊಬ್ಬರು ಹಿರಿದೆಂಬರು; ಎಂತಯ್ಯಾ?
ಬ್ರಹ್ಮಪ್ರಳಯ, ವಿಷ್ಣು ಮರಣ ಉಂಟು.
ನಮ್ಮ ಕೂಡಲಸಂಗಂಗಿಲ್ಲ!
Transliteration Obba ken̄canobba karikanobba śud'dhadhavaḷitanentayyā liṅgave?
Obbarigobbaru ghanavembaru: Adēntayyā?
Obbarigobbaru hiridembaru; entayyā?
Brahma praḷaya, viṣṇu maraṇa uṇṭu.
Nam'ma kūḍalasaṅgilla!
Manuscript
English Translation 2 O Liṅga Lord, how can there be
A red god and a dark and one pure white?
They say that each is
Greater: how can that be?
They say that each is
Pre-eminent: how, Sir?
There is end for Brahma, for Viṣṇu death,
But none for our Kūḍala Saṅga !
Translated by: L M A Menezes, S M Angadi
Hindi Translation एक लाल, एक काला और एक शुद्ध धवल
कैसे होंगे लिंगदेव?
वे एक दूसरे से महान कहते हैं, यह कैसे होगा?
एक दूसरे से श्रेष्ट कहते हैं, यह कैसे होगा?
ब्रह्म के लिए प्रलय है, विष्णु के लिए मृत्यु
मम कूडलसंगमदेव के लिए नहीं है ॥
Translated by: Banakara K Gowdappa
Telugu Translation ఎఱ్ఱనివాడొకడు నల్లని వాడొకడప్పటము తెల్లనివాడొక్కడు
ఒక్కని కంటే ఒక్కడు ఘనుడందురిది యెట్లయ్యా?
బ్రహ్మకు చావు హరికి మరణము కలదుకాని
మా కూడల సంగయ్య కేదీ లేదయ్యా
Translated by: Dr. Badala Ramaiah
Tamil Translation ஒருவன் சிகப்பன், ஒருவன் கரியன்
ஒருவன் வெண்மையானவன் எப்படி ஐயனே?
ஒருவருக்கொருவர் உயர்ந்தவர் என்பர், எப்படி ஐயனே?
ஒருவருக்கொருவர் சீர்மை என்பர், எப்படி ஐயனே?
பிரம்மனுக்கு அழிவு திருமாலிற்கு இறுதி உண்டு
கூடல சங்கம தேவனுக்கு இல்லை.
Translated by: Smt. Kalyani Venkataraman, Chennai
Marathi Translation
एक गोरा, एक काळा. एक शुध्द पांढराअसे कसे होईल लिंगदेवा?
एकाला दुसन्यापेक्षा मोठा म्हणती असे कसे होईल देवा?
एकाला दुराव्यापेक्षा महान म्हणती असे कसे होईल देवा?
ब्रह्मा प्रलयाधीन, विष्णू प्रलयाधीन आहे.
प्रलय मरणरहित कूडलसंगमदेव आहे.
Translated by Shalini Sreeshaila Doddamani
ಶಬ್ದಾರ್ಥಗಳು ಅವಳಿತ = ; ಕರಿಕ = ; ಘನ = ; ಪ್ರಳಯ = ;
ಕನ್ನಡ ವ್ಯಾಖ್ಯಾನ ತಾಮಸ-ರಾಜಸ-ಸ್ವಾತ್ವಿಕ ಗುಣಗಳು ಕ್ರಮವಾಗಿ ಅಶುದ್ಧ-ಮಧ್ಯಮ- ಶುದ್ಧವೆಂಬ ಅರ್ಥದಲ್ಲಿ ಕಪ್ಪೆಂದೂ ಕೆಂಪೆಂದೂ ಬಿಳುಪೆಂದೂ ವರ್ಣಿಸಲ್ಪಟ್ಟಿದೆ. ಈ ಮೂರೂ ಗುಣಗಳ ಮಿಶ್ರಣ ವೈವಿಧ್ಯದಿಂದಲೇ ಸಕಲವೂ ತಲೆದೋರುವುದು, ವರ್ಧಿಸುವುದು, ವಿಲಯವಾಗುವುದು, ಈ ಸೃಷ್ಟಿ-ಸ್ಥಿತಿ-ಲಯ ಕಾರ್ಯಗಳಿಗೆ ಅಧಿದೇವತೆಗಳು ಕ್ರಮವಾಗಿ ಬ್ರಹ್ಮ-ವಿಷ್ಣು-ರುದ್ರರು. ಇವರೆಲ್ಲರಿಗೂ ಪ್ರಳಯವುಂಟು-ಪ್ರಳಯವಿಲ್ಲದ ನಿತ್ಯನೆಂದರೆ- ಆ ಬ್ರಹ್ಮವಿಷ್ಣುರುದ್ರರಿಗೆ ಅತೀತನಾದ ಶಿವನೊಬ್ಬನೆ ಎಂಬುದು ಈ ವಚನದ ತಾತ್ಪರ್ಯವಿರುವಂತಿದೆ (?).
ಆದರೆ ಇಲ್ಲಿ ರುದ್ರನಿಗೆ ಪ್ರಳಯವಿಲ್ಲವೆಂಬಂತೆ ನಿರೂಪಣೆಯಾಗಿರುವುದಾದರೆ-ಅದು ಸರಿಯಲ್ಲ, ವಚನದ ಕೊನೆಗೆ “ರುದ್ರನಿಗೆ ಮರಣವುಂಟು ನಮ್ಮ ಕೂಡಲ ಸಂಗಮದೇವಂಗಿಲ್ಲ”ಎಂದಿರದೆ-ರುದ್ರನಿಗೆ ಪ್ರಳಯವಿಲ್ಲವೆಂಬಂತೆ ನಿರೂಪಣೆಯಾಗಿರುವುದು ಸರಿಯಲ್ಲ. “ರುದ್ರಾವತಾರ ಹಲವಳಿವಲ್ಲಿ ನಮ್ಮ ಕೂಡಲ ಸಂಗಮದೇವನೇನೆಂದೂ ಅರಿಯ”ನೆಂದು 541ನೇ ವಚನದಲ್ಲಿರುವುದನ್ನು ಗಮನಿಸಿ.
ಮತ್ತು ರುದ್ರನನ್ನು ಈ ವಚನದಲ್ಲಿ ಶಿವ(ಕೂಡಲ ಸಂಗಮದೇವ)ನೊಡನೆ ಸಮೀಕರಿಸಿದಂತಿರುವುದು ವೀರಶೈವದ ದೇವತಾನುಪೂರ್ವಿಗೆ ವಿರುದ್ಧವಾಗುವುದು: “ಪಶುಪತಿಯ ಸಹಸ್ರಾಂಶದಲ್ಲಿ ಸದಾಶಿವನು, ಸದಾಶಿವನ ಸಹಸ್ರಾಂಶದಲ್ಲಿ ಮಹೇಶ್ವರನು, ಮಹೇಶ್ವರನ ಸಹಸ್ರಕೋಟ್ಯಂಶದಲ್ಲಿ ರುದ್ರನು, ರುದ್ರನ ಸಹಸ್ರಕೋಟ್ಯಂಶದಲ್ಲಿ ವಿಷ್ಣು, ವಿಷ್ಣುವಿನ ಸಹಸ್ರಕೋಟ್ಯಂಶದಲ್ಲಿ ಬ್ರಹ್ಮನುದಯಿಸಿದನೆಂದರಿ” (ವೀರಶೈವತತ್ತ್ವ ಮತ್ತು ಆಚರಣೆ-ಪುಟ 50)
ಈ ಸೂಕ್ಷ್ಮಗಳನ್ನು ತಿಳಿದವನೊಬ್ಬನು ಬರೆದು ಸೇರಿಸಿದ ವಚನವಿದು-ಬಸವಣ್ಣನವರ ನಿಜ ವಚನವಲ್ಲ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು