ಮಾಹೇಶ್ವರನ ಜ್ಞಾನಿಸ್ಥಲ - ಹರಿ-ಹರ
ಹರಿ-ಹರನೊಂದೆ ಎಂದರೆ, ಸುರಿಯುವೆ ಬಾಯಿಲ್ಲಿ ಬಾಲಹುಳುಗಳು?
ಹರಿಗೆ ಹತ್ತು ಪ್ರಳಯ! ಬ್ರಹ್ಮಂಗನಂತಪ್ರಳಯ!
ಹರಂಗೆ ಪ್ರಳಯವುಂಟೆಂಬುದೆ ಬಲ್ಲರೆ ನೀವು ಹೇಳಿರೆ!
ಪ್ರಳಯ, ಪ್ರಳಯ ಅಂದಂದಿಂಗೆ!
ಹಳೆಯ, ಕೂಡಲಸಂಗಮದೇವ!!
Transliteration Hari-haranonde endare, suriyuve bāyiyalli bāḷahuḷugaḷu?
Harige hattu praḷaya! Brahmaṅgananta praḷaya!
Haraṅge praḷaya uṇṭembude ballare nīvu hēḷire!
Praḷaya, praḷaya andandiṅge!
Haḷeya, kūḍalasaṅgamadēva!!
Manuscript
English Translation 2 If you say Hari and Hara are one, will not
Moggots fall from your mouth?
There are ten deaths for Hari, and endless deaths
For Bramha! but if you know
Of any death for Hara, do tell us
Death, never a death for Him:
Ancient of days is Lord
Kūḍala Saṅga !
Translated by: L M A Menezes, S M Angadi
Hindi Translation हरिहर को एक कहो-,
तो मुँह से कीटाणु नहीं गिरते ?
हरि के लिऐ दस प्रलय हैं,
ब्रह्म के लिऐ अनंत प्रलय हैं
यदि तुम जानते हो तो कहो, कि हर केलिए प्रलय है?
समय समय पर प्रलय होते आये हैं,
कूडलसंगमदेव तो सनातन है ॥
Translated by: Banakara K Gowdappa
Telugu Translation హరిహరులొకటే యనునోట రాలవే తోకవురుగులు
హరి పదిసార్లు చచ్చె బ్రహ్మ చావుకు తుదిలేదు
హరుడెప్పుడైన చచ్చేనేమో! తెలిసిన చెప్పుడయ్యా
అప్పటప్పటికే ప్రళయంబుగాని
ప్రభుడు సనాతనుడు మా నంగమ దేవుడు
Translated by: Dr. Badala Ramaiah
Tamil Translation ஹரியும், ஹரனும் ஒன்றுதான் எனக்கூறின்
வாயில் நுண் புழுக்கள் சொரியாதோ?
ஹரிக்குப் பத்து பிரளயம், பிரம்மனுக்கு எண்ணற்ற பிரளயம்
ஹரனுக்குப் பிரளயம் உண்டு என வல்லீராயின் நீவிர் கூறுவீர்
அன்றன்று பிரளயம், பிரளயமாம்
நம் கூடல சங்கமதேவன் பழையவனன்றோ!
Translated by: Smt. Kalyani Venkataraman, Chennai
Marathi Translation
हरि हराला एक म्हणाला तर तोंडात किडे पडणार नाहीत?
हरिचे दहा प्रलय, ब्रह्माचे अनंत प्रलय
हराच्या प्रलयाविषयी तुम्हाला माहित असेल तर सांगा.
प्रलय प्रलय प्रलय,
प्रलय तेव्हाही आणि प्रलय आताही.
प्रलयाहून पुरातन आमचे कूडलसंगम.
Translated by Shalini Sreeshaila Doddamani
ಶಬ್ದಾರ್ಥಗಳು ಅಂದಿಗೆ = ; ಅನಂತ = ಅಂತ್ಯ ಇಲ್ಲದ; ಪ್ರಳಯ = ; ಬಾಲಹುಳು = ; ಹರಿಹರ = ;
ಕನ್ನಡ ವ್ಯಾಖ್ಯಾನ ಶಿವನ ಪಾದಪೂಜೆ ಮಾಡಿ ಅವನ ಕೃಪೆಗೆ ಪಾತ್ರನಾದ ಮಹಾಶಿವಭಕ್ತನು ವಿಷ್ಣು (ನೋಡಿ ವಚನ-538). ಅಂಥ ಶಿವಭಕ್ತವರೇಣ್ಯನ ಸಂಬಂಧವಾಗಿ “ಸುರಿಯವೇ ಬಾಯಲ್ಲಿ ಬಾಲಹುಳುಗಳು” ಎಂದು ಹೀನವಾಗಿ ನಿಂದಿಸುವಷ್ಟು ಅನಾಗರೀಕರಲ್ಲ ಬಸವಣ್ಣನವರು. ಹರನೇ ಎಲ್ಲ ದೇವರಿಗಿಂತ ಮಹಾದೇವನೆಂದು ಅವರು ಈವರೆಗೆ ಹಲವು ವಚನಗಳಲ್ಲಿ ಘನತೆಯಿಂದಲೇ ನಿರೂಪಿಸಿರುವುದನ್ನು ನೋಡಿದ್ದೇವೆ.
ಮತ್ತು ಪ್ರಳಯವಿಲ್ಲದ ಶಿವನಿಗೆ ಪರ್ಯಾಯವಾಗಿ “ಸದಾಶಿವ”ಶಬ್ದವನ್ನು ಬಳಸಿರುವುದು ಸಮಂಜಸವಲ್ಲ: “ಶಿವಸ್ವರೂಪನಾದ ಪರಶಿವಂಗೊಂದು ತೃಟಿಮಾತ್ರದನಿತೆಂದಾರೋಪಿತವಹುದನಿತರೊಳನಂತ ಸದಾಶಿವರ್ಗಧಿಕಾರ ಸಮಾಪ್ತಿಯಾಗಿ ಬೇರಧಿಕಾರಿಗಳುದಿಸುತ್ತಿರ್ಕುಂ”(ವಿವೇಕಚಿಂತಾಮಣಿ-ಪುಟ-264). “ಸದಾಶಿವ”ಶಬ್ದಕ್ಕೆ ಹರ ಎಂಬ ಪಾಠಾಂತರ ಸಿಗುವುದಾದರೂ -ಈ ವಚನದಲ್ಲಿ ತಿದ್ದುಪಡಿ ನಡೆದಿದೆಯೆಂಬುದನ್ನೇ ಸಮರ್ಥಿಸುವುದು. ಇದು ಬಸವಣ್ಣನವರ ನಿಜವಚನವಲ್ಲ. ನಿಜವಚನವೆಂಬಂತೆ ತೊರಲೋಸುಗವೆ ಹಳೆಯ (ನೋಡಿ ವಚನ 2) ಎಂಬ ಪದವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ. (ಇಂಥದೇ ಆದ 568ನೇ ವಚನವನ್ನೂ ನೋಡಿ)
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು