•  
  •  
  •  
  •  
Index   ವಚನ - 544    Search  
 
ಮಾಹೇಶ್ವರನ ಜ್ಞಾನಿಸ್ಥಲ - ಹರಿ-ಹರ
ವಿಷ್ಣು ಕರ್ಮಿ, ರುದ್ರ ನಿಷ್ಕರ್ಮಿ : ಕ್ರಮವನರಿಯದೆ ನುಡಿವಿರೋ! ವೇದಶ್ರುತಿಗಳ ತಿಳಿಯಲರಿಯದೆ ವಾದವ ಮಾಡುವರೆಲ್ಲಾ ಕೇಳಿ: ವಿಷ್ಣು ನಾನಾ ಯೋನಿಯಲ್ಲಿ ಬಾರದ ಭವಂಗಳಲ್ಲಿ ಬರುತಿಪ್ಪ: ರುದ್ರನಾವ ಯೋನಿಯಲ್ಲಿ ಬಂದನೆಂದು ನೀವು ಹೇಳಿರೊ! "ಓಂ ವಿಷ್ಣೋಃ ಕರ್ಮಾಣಿ ಪಶ್ಯತ ಯತೋ ವ್ರತಾನಿ ಪಸ್ಪಸೇ ಇಂದ್ರಸ್ಯ ಯುಜ್ಯಃ ಸಖಾ" "ತ್ರೀಣಿ ಪದಾ ವಿಚಕ್ರಮೇ ವಿಷ್ಣುರ್‌ಗೋಪಾ ಅದಾಭ್ಯಃ ಅತೋ ಧರ್ಮಾಣಿ ಧಾರಯಾನ್" "ತದ್ ವಿಪ್ರಾಸೋ ವಿಪನ್ಯವೋ ಜಾಗೃವಾಂಸಃ ಸಮಿಂಧತೇ! ವಿಷ್ಣೋರ್ ಯತ್ ಪರಮಂ ಪದಮ್'" ಎಂಬ ಶ್ರುತಿಯ ವಚನವ ತಿಳಿಯಿಂ ಭೋ! ವರ್ಮವನೆತ್ತಿ ನುಡಿದಲ್ಲದೆ ನಿಲ್ಲಿರಿ: ನಿಮ್ಮ ಕರ್ಮವು ಅತ್ಯತಿಷ್ಠದ್ ದಶಾಂಗುಲದಿಂದತ್ತತ್ತಲೆ! ಕೂಡಲಸಂಗಮದೇವಾ.
Transliteration Viṣṇu karmi, rudra niṣkarmi: Kramavanariyade nuḍivirō! Vēdaśrutigaḷa tiḷiyalariyade vādava māḍuvarellā kēḷi: Viṣṇu nānā yōniyalli bārada bhavaṅgaḷalli barutippa: Rudranāva yōniyalli bandanendu nīvu hēḷiro! "Ōṁ viṣṇōḥ karmāṇi paśyata yatō vratāni paspasē indrasya yujyaḥ sakhā" "trīṇi padā vicakramē viṣṇur‌gōpā adābhyaḥ atō dharmāṇi dhārayān" "Tad viprāsō vipan'yavō jāgr̥vānsaḥ samindhatē! Viṣṇōryatparamaṁ padam'" emba śrutiya vacanava tiḷiyiṁ bhō! Varmavanetti nuḍidallade nilliri: Nim'ma karmavu atyatiṣṭhaddaśāṅguladindattattale! Kūḍalasaṅgamadēvā.
Manuscript
English Translation 2 Vishnu is action-bound, Rudra is not : Do you, Dear Sirs, First know their ranking and then talk! Nor listen to the wranges that they make Unless you learn The meaning of Vedas!.... Viṣṇu has come Thro' several wombs, in more than lawful births: But, tell me, in what womb did Rudra come? 'Behold the deeds of Viṣṇu , wherethrough He hath accomplished pious acts: Lo, Indra is his dearest friend. Viṣṇu, the invulnerable, who protects The universe-he took three steps And so preserved the sacred laws. The supreme place that Viṣṇu holds Is glorified by those who are Vigilant and wise and apt to praise. Do you, O, understand What the Revelations say! Rest not content unless you speak He stands ten fingures above Your worldly lot- Lord Kūḍala Saṅgama! Translated by: L M A Menezes, S M Angadi
Hindi Translation क्रम बिना जाने बोलते हो विष्णु कर्मी है, रुद्र निष्कर्मी वेद-श्रुति बिना जाने वाद करनेवालों, सुनो विष्णु नाना योनियों में हीन भवों में आता रहा है; कहो कि रुद्र किस योनि से उप्तन्न हुआ ऊँ त्रीणि पादानि विचक्रमें विष्णुर्गोपा अदाभ्यः । अतो धर्माणि धारयन् ॥ विष्णोः कर्माणि पश्यत यतो व्रतानि पस्पशे । इंद्र्स्य युज्यः सखा ॥ तद् विष्णोः परमं पदं सदा पश्यंति सूरयः । दिवीव चक्षुरातंतम् ॥ तद् विप्रासो विपन्याओ जागृवां सः समिन्धते । विष्णोर्यत्परं पदम् ॥’ यह श्रुति वचन समझ लो । मर्म का प्रतिपादन किये बिना मत रहो कूडलसंगमदेव तव कर्म अत्यतिष्ठदशांगुल है ॥ Translated by: Banakara K Gowdappa
Telugu Translation విష్ణువు కర్మి; రుద్రుడు నిష్కర్మి : క్రమ మెరుగక పలికెదరే వేదశ్రుతులను తెలియక వాగెదరే వాదించు జనులారా వినుడో విష్ణువు నానాయోనులబడి రారాని జన్మల వచ్చుచుండె; రుద్రుడే గర్భమును బుట్టెనో; చెప్పుడయ్యా మీరె? ‘‘ఓం విష్ణోః కర్మాణి పశ్యత యతో వ్రతాని పస్పసే ఇంద్రస్య యుజ్యః సఖా’’ ‘‘త్రీణిపదా విచక్రమే విష్ణోర్ గోపా అదాభ్యః అతో ధర్మాణిధారయన్’’ ‘‘తద్ విప్రాసో విపన్యవో జాగృవాంసః సమింధతే విష్ణోర్యత్ పరమంపద’’ మ్మని శ్రుతి తెలియుడో! మర్మ మెలిగి మాటాడకున్న నిలువరు మీరు మీ కర్మ మత్యతిష్ట ద్దశాంగుళునకు దూరము దూర మేనయ్యా Translated by: Dr. Badala Ramaiah
Tamil Translation திருமால் கர்மி, உருத்திரன் கர்மியன்று முறையையறியாது கூறுவிரோ? வேதம், சுருதிகளை அறியாமல் வாதம் புரியும் அனைவரும் கேண்மின் திருமால் பல யோனிகளில், பிறவிகளில் வருவான் உருத்திரன் எந்தயோனியில் வந்தானென நீவிர் கூறுவீர் ஓம் விஷ்ணோ கர்மாணி பச்யத் யதோ வ்ரதானி இந்த்ரஸ்ய யுஜ்ஞ ஸகா தத் விஷ்ணோ பரமம் பதம் ஸதா பச்யந்தி ஸுர்ய திவீவ சக்ஷுராததம் தத் விப்ராஸோ விபன்யவோ ஜாக்ருவாம்ஸ ஸமிந்ததே விஷ்ணோர்ய தத்பரமம் பதம் என்னும் வேதவாக்கினை உணர்வீரோ! மறைப்பொருளை விளக்கமாகக் கூறுவீர் உங்கள் வினை பத்து விரற்கடையினை விட மிகுதியன்றோ கூடல சங்கமதேவனே. Translated by: Smt. Kalyani Venkataraman, Chennai
Marathi Translation विष्णु तोचि कर्मी, रूद्र तो निष्कर्मी कळल्याविण निकामी, सर्व चर्चा देव-श्रुति वाद, तोवरी तो खोल कर्म निष्कर्म बोल, जाण व्यर्थ अनेकदा विष्णु, जन्मासि तो आला रूद्र के जन्मला, सांगा पाहू ""ओम् त्रीणि पदानि विचक्रमे विष्णुर्गोपा अदाभ्य । अतो धर्माणि धारयन् ॥ विष्णोः कर्माणि पश्यत यतो व्रतानि पस्यशे । इंद्रस्य युज्यः सखा ॥ तद् विष्णोः परमं पदं सदा पश्यंति सूरयः । दिवो वचक्षुराततं ॥ तदूविप्रासो विपन्यवो जावूवांसः सर्मिघते । विष्णोर्यत्परमं पदं ॥"" दशांगुला आत, तुमचे ते कर्म जाणतसे मर्म, कूडलसंगमेश. अर्थ- वेद श्रुति यांचे पाठक विष्णु आणि रूद्र जन्मांवर वाद विवाद करतात. त्यांना वेद व श्रुतिवचनच कळलेले नसते. विष्णुचा जन्म अनेक वेळा झाला हे दशावतारामुळे सिद्ध झाले आहे. अर्थात तो योनिज होय. पण रूद्र अयोनिज संभव आहे. या वचनात ॠग्वेदातील उद्धरण देऊन महात्मा बसवेश्वर हे स्पष्ट करू इच्छितात की, कर्म हे बुद्धीच्या कक्षेतले आहे पण नैष्कर्म हे बुद्धी पलीकडील होय. म्हणून हे कूडलसंगमदेवा! (परमेश्वरा) तुझे शरण नित्य निष्कर्मी होत. कर्मठांना तू व तुझे शरण हे दोन्ही कळले नाहीत. Translated by Rajendra Jirobe, Published by V B Patil, Hirabaug, Chembur, Mumbai, 1983 विष्णू कर्मी, रुद्र निष्कर्मी, कर्म जाणल्याविना बोलता! वेद श्रुती जाणल्याविना वाद-विवाद करणाऱ्यांनो ऐका विष्णू नाना योनीमधून या जगी अवतार घेऊन आला. रुद्र कोणत्या योनीमधून आले ते तुम्हीच सांगा? ॐत्रीणि पदानिविचक्रमे विष्णुर्गोपाअदाभ्यः। अतो धर्माणि धारयन् ।। विष्णोः कमारणि पश्यत यतो व्रतानि पस्पशे । इंद्रस्य युज्यः सखा ।। तद् विष्णोः परमं पदंसदा पश्यंति सूरयः। दिवीव चक्षुराततं । तद् विप्रासो विपन्यवो जागृवां सःसर्मिधते विष्णोर्यत्परमं पदं ॥हे श्रृतिवचन जाणावे. मर्म जाणल्याविना राहू नको. कूडलसंगमदेवा, तुमचे कर्म अत्यत्तिष्ठद्दशांगुलच्या अलिकडेच आहे. Translated by Shalini Sreeshaila Doddamani
ಶಬ್ದಾರ್ಥಗಳು ಆತತ = ; ಕರ್ಮಿ = ; ಕ್ರಾ = ; ಚತುರ = ; ನಿಷ್ಕರ್ಮಿ = ; ಪಶ್ಯತ = ; ಪಸ್ಪ = ; ಭವ = ; ಯುಜ್ಯ: = ; ಯೋನಿಜ = ; ರುದ್ರ = ; ವ್ರತ = ; ಶ್ರುತಿ = ; ಸೂರ = ;
ಕನ್ನಡ ವ್ಯಾಖ್ಯಾನ ಬ್ರಹ್ಮನು ಸೃಷ್ಟಿಕರ್ಮವನ್ನು ಮಾತ್ರವೆ, ವಿಷ್ಣುವು ಸೃಷ್ಟಿ-ಸ್ಥಿತಿಯೆಂಬ ಎರಡು ಕರ್ಮಗಳನ್ನು, ರುದ್ರನಾದರೋ ಸೃಷ್ಟಿ-ಸ್ಥಿತಿ-ಲಯವೆಂಬ ಮೂರೂ ಕರ್ಮಗಳನ್ನು ಮಾಡುವನು (ನೋಡಿ ವೀರಶೈವ ತತ್ತ್ವ ಮತ್ತು ಆಚರಣೆ-ಪುಟ 51). ಈ ವಚನದಲ್ಲಿಯಾದರೋ ತಾತ್ತ್ವಿಕವಾಗಿ “ರುದ್ರ”ನ ಕಲ್ಪನೆಯೇ ದೋಷಪೂರ್ಣವಾಗಿದೆ. ಮತ್ತು ವೈಷ್ಣವರನ್ನು ಕುರಿತಂತೆ “ಮರ್ಮವನೆತ್ತಿ ನುಡಿದಲ್ಲದೆ ನಿಲ್ಲಿರಿ” ಎಂದು ವಿದ್ವೇಷವನ್ನು ತುಚ್ಛವಾಗಿ ಕಾರುವುದು ಬಸವಣ್ಣನವರ ಧಾಟಿಯಲ್ಲ. ಮತ್ತು ವೈಷ್ಣವರನ್ನು ಕುರಿತಂತೆ ಆಡಿರುವ “ನಿಮ್ಮ ಕರ್ಮವು ಅತ್ಯತಿಷ್ಠದ್ದಶಾಂಗುಲದಿಂದತ್ತತ್ತ” ಎಂಬ ಮಾತು ನಿರರ್ಥಕವಾಗಿ ಕೇವಲ ಟಠಡಢಣ ಶಬ್ದಾಯಮಾನ ಪೆದ್ದುಪಾಂಡಿತ್ಯದಿಂದ ಕೂಡಿದೆ (ನೋಡಿ ವಚನ-532) ಇದು ಬಸವಣ್ಣನವರ ನಿಜವಚನವಲ್ಲ-ಶ್ರುತಿಯಿಂದ ಇಲ್ಲಿ ಮಾಡಿರುವ ಉಲ್ಲೇಖವೂ ರೂಢಿಯಂತಿರದೆ ಅತ್ಯಂತ ದೀರ್ಘವಾಗಿರುವುದನ್ನೂ ಗಮನಿಸಿ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು