ಮಾಹೇಶ್ವರನ ಜ್ಞಾನಿಸ್ಥಲ - ದೇವರು
ಅಮೃತಮತಿ ಸೋಮಶಂಭುವಿಂಗೆ ಹುಟ್ಟಿದಾತ ಇಂದ್ರ;
ಸತ್ಯಋಷಿ ಜ್ಯೇಷ್ಠಾದೇವಿಗೆ ಹುಟ್ಟಿದಾತ ಬ್ರಹ್ಮ;
ವಸುದೇವ ದೇವಕಿಗೆ ಹುಟ್ಟಿದಾತ ವಿಷ್ಣು;
ನಾಭಿರಾಜ ಮರುತಾದೇವಿಗೆ ಹುಟ್ಟಿದಾತನರುಹ,
ಇವರೆಲ್ಲರೂ ಯೋನಿಜರೆಂಬುದ ತ್ರೈಜಗ ಬಲ್ಲುದು.
ಉತ್ಪತ್ತಿ ಸ್ಥಿತಿ ಪ್ರಳಯಕ್ಕೆ ಹೊರಗಾದ ಕೂಡಲಸಂಗಮದೇವಂಗೆ
ಮಾತಾಪಿತರುಳ್ಳರೆ ಹೇಳಿರೋ!
Transliteration Amr̥tamati sōmaśambhuvige huṭṭidāta indra;
satya'r̥ṣi jyēṣṭhādēvige huṭṭida brahma;
vasudēva dēvakige huṭṭida viṣṇu;
nābhirāja marutādēvige huṭṭidātanaruha,
ivarellarū yōnijarembuda traijaga balludu.
Utpatti sthiti praḷayakke horagāda kūḍalasaṅgamadēvaṅge
mātāpitaruḷḷare hēḷirō!
Manuscript
English Translation 2 He's Indra who was born
Of Amr̥tavati and Sōmaśambhu !
He's Bramha who was born
Of Satyar̥uṣi and Jyēṣṭādēvi ;
He is Viṣṇu who was born
Of Vāsudēva and Dēvaki;
He is Enlightened who was born
Of Nābhirāja and Marutādēvi !
The three worlds know all these
Were womb-born; but
If Lord Kūḍala Saṅgama, who is
Beyond birth, existence, death,
Lord Kūḍala Saṅgama!
Had any father or mother, say!
Translated by: L M A Menezes, S M Angadi
Hindi Translation अमृतमति – सोमशंभु से उत्पन्न हुआ इन्द्र
सत्यऋषि-ज्येष्टादेवी से उत्पन्न हुआ ब्रह्म।
वसुदेवदेवकी से उत्पन्न हुआ विष्णु ।-
नाभीराजमरुतादेवी से उत्पन्न हुआ अरूह ।-
तीनों लोक जानते हैं, ये सब योनिज हैं,
उत्पत्ति, स्थिति, प्रलय के परे कूडलसंगमदेव हैं;
उनके मातापिता हों-, तो बताओ ॥
Translated by: Banakara K Gowdappa
Telugu Translation అమృతవతి సోమశంభువులకు
పుట్టన వాడిరద్రుడు
సత్సఋషి జ్యేష్టాదేవులకు
జనియించిన వాడు బ్రహ్మ
దేవకీ వసుదేవుల నందనుడయ్యా విష్ణవు
నాభిరాజ మరుతాదేవులు
కనినవాడు జినుడు
వీరెల్లరూ యోనిజులనుట
మూడులోకములకే దెలుసు
ఉత్పత్తి స్థితిలయలకు వెలిjైున
కూడల సంగమ దేవునికి
మాతాపిత లెవ్వరో మాటాడుడో!
Translated by: Dr. Badala Ramaiah
Tamil Translation இந்திரன் அமிருதமதி ஸோமசம்புவிற்குப் பிறந்தவன்
ஸத்தியமுனிவர் ஜேஷ்டாதேவிக்குப் பிறந்தவன் பிரம்மன்
வசுதேவன் தேவகிக்குப் பிறந்தவன் திருமால்
நாபிராஜன் மருதாதேவிக்குப் பிறந்தவன் அருகன்
இவர்கள் அனைவரும் யோனியில் பிறந்தவர்கள்
என்பதை மூவுலகமும் அறியும்
தோற்றம், இருப்பு, அழிவிற்கு ஆட்படாத
கூடலசங்கம தேவனிற்கு
தாய் தந்தை இருப்பின் கூறுவீர்!
Translated by: Smt. Kalyani Venkataraman, Chennai
Marathi Translation
सोमशंभु व अमृतवतीचा सुत असे इंद्र
सत्यषि व ज्येष्ठादेवीचा सुत असे ब्रह्म
वासुदेव व देवकीचा सुत असे विष्णु
नाभिराज व मरुतादेवीचा सुत असे नरुह (अरहंत)
हे सारे योनिज आहेत हे त्रिलोकाला माहित
उत्पति- स्थिति प्रलय यापासून असे अतित
कूडलसंगमदेवा ! तव मातापिताचे ठाव कोणाला माहित ?
अर्थ - इंद्र, बह्म, विष्णु आणि नरूह या सर्व देव देवतांना आई- वडिल आहेत. अर्थात ते सर्व योनीतून जन्म घेतले आहेत. हे तिन्ही लोकाला माहित आहे. पण ज्याला जन्म नाही, मरण नाही, जगणे नाही वा मरण नाही कसलेही निमीत्य नाही अशा माझ्या कूडलसंगमदेवाला (परमेश्वराला) कोणी आई किंवा वडिल असल्याने कोणाला तरी माहित आहे ? नाही. कारण तो स्वयंभू आहे तो कुणाच्या उदरी जन्मला नाही. म्हणून अशा ईश्वराचा मी शरण आहे.
Translated by Rajendra Jirobe, Published by V B Patil, Hirabaug, Chembur, Mumbai, 1983
अमृतवती सोमशंबूला इंद्र जन्मला.
सत्यऋषी जेष्ठादेवीला ब्रह्म जन्मला.
वसुदेव देवकीला विष्णू जन्मला.
नाभिराज मरुतोदेवीला अरहत जन्मला.
हे सर्व योनीज, हे तीन लोकही जाणतात.
उत्पत्ती-स्थिती-प्रलय यांच्याहून भिन्न असलेल्या
कूडलसंगमदेवाचे माता-पिता कोण आहेत सांगावे !
Translated by Shalini Sreeshaila Doddamani
ಶಬ್ದಾರ್ಥಗಳು ಉತ್ಪತ್ತಿ = ; ಜೇಷ್ಠ = ; ತ್ರೈಜಗ = ; ಪ್ರಳಯ = ; ಮರುತ = ; ಯೋನಿಜ = ; ಶಂಭು = ;
ಕನ್ನಡ ವ್ಯಾಖ್ಯಾನ ಇಂದ್ರ-ಬ್ರಹ್ಮ-ವಿಷ್ಣು(ವಾಸುದೇವ) ಅರುಹ(ತೀರ್ಥಂಕರ)ರಿಗೆ ತಾಯಿತಂದೆಗಳಿದ್ದು ಅವರು ಯೋನಿಜರೆಂಬುದು ತಿಳಿದ ವಿಷಯವೇ ಆಗಿದೆ-ಆದರೆ ನಮ್ಮ ಶಿವನಿಗೆ ಯಾರಾದರೂ ತಂದೆತಾಯೆಂಬವರಿದ್ದರೆ ತಿಳಿದವರು ಹೇಳಿ ಎಂದು ಸವಾಲು ಹಾಕುತ್ತ-ಶಿವನು ಸೃಷ್ಟಿ ಸ್ಥಿತಿ ಲಯಕ್ಕೆ ಹೊರಗಾದವನು ಅಯೋನಿಜನು ಎಂದು ಘೋಷಿಸುತ್ತಿರುವಂತಿದೆ ಬಸವಣ್ಣನವರು.
ಈ ವಚನದಲ್ಲಿ ಪ್ರಸ್ತಾಪಿಸಲ್ಪಟ್ಟಿರುವ ವಿಷ್ಣು ಕೃಷ್ಣನೇ ಆಗಿರುವನು, ಅರುಹನು ವೃಷಭತೀರ್ಥಂಕರ.
(ಪರಧರ್ಮೀಯರ ದೇವರುಗಳನ್ನು ಇಷ್ಟು ಸರಳವಾಗಿ ಅಲ್ಲಗೆಳೆಯುತ್ತಿರುವ ಈ ವಚನ ಬಸವಣ್ಣನವರದೆಂಬುದರಲ್ಲಿ ಸಂಶಯವಿದೆ).
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು