ಮಾಹೇಶ್ವರನ ಜ್ಞಾನಿಸ್ಥಲ - ದೇವರು
ಹುಟ್ಟಿಸುವಾತ ಬ್ರಹ್ಮನೆಂಬರು, ರಕ್ಷಿಸುವಾತ ವಿಷ್ಣುವೆಂಬರು, ನೋಡಾ
ಬ್ರಹ್ಮ ತನ್ನ ಶಿರವನ್ನೇಕೆ ಹುಟ್ಟಿಸಲಾರ?
ವಿಷ್ಣು ತನ್ನ ಮಗನನ್ನೇಕೆ ರಕ್ಷಿಸಲಾರ?
ದುಷ್ಟನಿಗ್ರಹ ಶಿಷ್ಟಪರಿಪಾಲಕ
ನಮ್ಮ ಕೂಡಲಸಂಗಮದೇವ.
Transliteration Huṭṭisuvāta brahmanembaru, rakṣisuvāta viṣṇuvembaru, nōḍā
brahma tanna śiravanēke huṭṭisalāra?
Viṣṇu tanna maganannēke rakṣisalāra?
Duṣṭanigraha śiṣṭaparipālaka
nam'ma kūḍalasaṅgamadēva.
Manuscript
English Translation 2 They call him Brahma who creates,
Him Viṣṇu who protects:
Why, then, couldn't Brahma create his head,
Nor Viṣṇu could protect his son?
The punisher of the wicked and
Protector of the good
Is our Lord Kūḍala Saṅgama!
Translated by: L M A Menezes, S M Angadi
Hindi Translation ब्रह्म को सृष्टा कहते हैं,
विष्णु को रक्षक कहते हैं,
ब्रह्म अपने सिर की सृष्टि क्यों न कर सका?
विष्णु अपने पुत्र की रक्षा क्यों न कर सका?
दुष्ट निग्रह, शिष्ट परिपालक हैं, मम कूडलसंगमदेव ॥
Translated by: Banakara K Gowdappa
Telugu Translation పుట్టించువాడు బ్రహ్మ యందురు
రక్షించువాడు విష్ణువందురు
తన తలనేల పుట్టించుకొనడో బ్రహ్మ !
తన సుతు నేల దక్కించుకొనడో విష్ణువు?
దుష్ట శిక్షణ శిష్ట పాలన మా
కూడల సంగడు సేయునయ్యా
Translated by: Dr. Badala Ramaiah
Tamil Translation படைப்பவனைப் பிரம்மன் என்பர்
காப்பவனைத் திருமால் என்பர் காணாய்
பிரம்மன் தன் தலையை ஏன் தோற்றுவிக்கவில்லை?
திருமால் தன் மகனை ஏன் காப்பாற்றவில்லை?
நம் கூடலசங்கமதேவன், தீயோரைத் தண்டித்து
நல்லோரைக் காப்பவன் ஆவான்.
Translated by: Smt. Kalyani Venkataraman, Chennai
Marathi Translation
सृष्टीकर्ता ब्रह्म, पालन कर्ता विष्णु
कैसे थोर म्हणु, तथा लागे
ब्रह्माचे ते शिर, कापिताति अनूर
जोडू न शकला शिर ऐसा ब्रह्मा
अपुरा तो विष्णु, पुत्र रक्षणार्थ
ऐसा असमर्थ, देव कैसा
कूडलसंगमदेवा, दुष्ट संहारक
शिष्टांचा पालक, एकमेव
अर्थ - सृष्टी निर्माण करणारा ब्रह्मा, आणि सृष्टी पालनकर्ता विष्णु हे जर सत्य असेल तर, छाटलेले त्याचे मुडके ब्रह्माला परत बसविता कां आले नाही ? आणि स्वपुत्राचे रक्षण कां करू शकला नाही ? यास वेद साक्ष आहे. हे कूडलसंगमदेवा! (परमेश्वरा) दुष्टांचा संहारक व सज्जनांचा पालक असा एकमेव तूच आहेस.
Translated by Rajendra Jirobe, Published by V B Patil, Hirabaug, Chembur, Mumbai, 1983
सृष्टी निर्माता ब्रह्माला, पालनकर्ता विष्णूला म्हणतात.
ब्रह्माने आपले शिर निर्माण का केले नाही?
विष्णूने आपल्या पुत्राचे रक्षण का केले नाही?
दुष्ट निग्रह, शिष्ट प्रतिपालक आमचा कूडलसंगमदेव.
Translated by Shalini Sreeshaila Doddamani
ಶಬ್ದಾರ್ಥಗಳು ದುಷ್ಟ = ; ನಿಗ್ರಹ = ; ಪರಿಪಾಲಕ = ;
ಕನ್ನಡ ವ್ಯಾಖ್ಯಾನ ಈ ವಚನಧೋರಣೆ ಸಂಪೂರ್ಣವಾಗಿ ಪುರಾಣಾತ್ಮಕವಾದುದು. ಶಿವನು ಬ್ರಹ್ಮನ ಶಿರವನ್ನು ಚಿವುಟಿದಾಗ-ಅವನು ತನ್ನ ಶಿರವನ್ನು ಮರಳಿ ಸೃಷ್ಟಿಸಿಕೊಳ್ಳಲಾರದವನಾಗಿ-ಆ ಬ್ರಹ್ಮನು ಸೃಷ್ಟಿಕರ್ತನಲ್ಲ. ಶಿವನು ವಿಷ್ಣುವಿನ ಮಗನಾದ ಕಾಮನನ್ನು ಸುಟ್ಟಾಗ-ಅವನು ಆ ಮಗನನ್ನು ರಕ್ಷಿಸಿಕೊಳ್ಳಲಾರದವನಾಗಿ-ಆ ವಿಷ್ಣು ಸ್ಥಿತಿಕರ್ತನಲ್ಲ. ಆದ್ದರಿಂದ ಸೃಷ್ಟಿಕರ್ತನೆಂದು ಬ್ರಹ್ಮನನ್ನು. ಸ್ಥಿತಿಕರ್ತನೆಂದು ವಿಷ್ಣುವನ್ನು ಉಪಾಸಿಸಬೇಕಾಗಿಲ್ಲ. ಸರ್ವಕರ್ತನಾದ ಶಿವನೊಬ್ಬನೇ ಉಪಾಸ್ಯನು.
ವಿ : (1) ಕಾಮವಾಚ್ಯನಾದ ಮನ್ಮಥನು ಕೃಷ್ಣನ ಮಗನೆಂದು ಭಾಗವತ ಮುಂತಾದೆಡೆ ಹೇಳಿದೆ. ಕೃಷ್ಣನು ವಿಷ್ಣುವಿನ ಅವತಾರವೇ ಆಗಿ-ಮನ್ಮಥನು ವಿಷ್ಣುವಿನ ಮಗನೇ ಆಗುವನು. (2) ಬ್ರಹ್ಮನು ದುಷ್ಟನೆಂದೂ, ಕಾಮ(ಮನ್ಮಥ)ನು ಶಿಷ್ಟನೆಂದೂ ಈ ವಚನದಲ್ಲಿ ಅರ್ಥೈಸಿಕೊಳ್ಳಬೇಕಾಗಿರುವುದು ಒಂದು ವಿಪರ್ಯಾಸ. ಒಂದು ಪಕ್ಷ ಈ ವಚನ ಬಸವಣ್ಣನವರ ನಿಜವಚನವೇ ಆದರೆ-ಬ್ರಹ್ಮನು ಬುದ್ದಿಜೀವಿಯಾಗಿಯೂ ಶಿವನ ಪಾರಮ್ಯವನ್ನು ಮನಗಾಣಲಿಲ್ಲವಾದ್ದರಿಂದ ಅವನು ದುಷ್ಟ, ಮನ್ಮಥನು ಮುಗ್ಧನಾದ್ದರಿಂದ ಮತ್ತು ಜಗತ್ಕಲ್ಯಾಣಕ್ಕಾಗಿ ಶಿವನ ತಪೋಭಂಗಕ್ಕೆ ಯತ್ನಿಸಿ ಹುತಾತ್ಮನಾದುದರಿಂದ ಅವನು ಶಿಷ್ಟನು, ಆದ್ದರಿಂದಲೇ ಶಿವನು ಮನ್ಮಥನನ್ನು ಮೊದಲು ಸುಟ್ಟರೂ- ಆಮೇಲೆ ಅವನು ಮನಸಿಜನಾಗಿ ಉಳಿಯಲೆಂದು ರತಿಗೆ ವರವನ್ನು ಕೊಡುವನು. ಬ್ರಹ್ಮನು ದುಷ್ಟನಾದ್ದರಿಂದ ಅವನ ಐದನೇ ತಲೆಯನ್ನು ಕತ್ತರಿಸಿ ಅದನ್ನು ಮರಳಿ ಕೊಡಲಿಲ್ಲ ಶಿವ. ಹೀಗಾಗಿ ಶಿವನು ದುಷ್ಟನಿಗ್ರಹನು ಮತ್ತು ಶಿಷ್ಟಪರಿಪಾಲಕನು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು