ಮಾಹೇಶ್ವರನ ಜ್ಞಾನಿಸ್ಥಲ - ಹರಿ-ಹರ
ಕೇಶವನಲ್ಲದೆ ಅತಃಪರದೈವವಿಲ್ಲೆಂದು
ವೇದವ್ಯಾಸಮುನಿ ಭಂಗವಾದುದನರಿಯಿರೆ?
"ಅಹಮೇವ ಜಗತ್ ಕರ್ತಾ| ಮಮ ಕರ್ತಾ ಮಹೇಶ್ವರಃ"
ಎಂದು ವಿಷ್ಣು ಹೇಳಿದ ವಚನವ ಮರೆದಿರಲ್ಲಾ!
ಕೂಡಲಸಂಗಮದೇವನು
ದಕ್ಷ ಯಜ್ಞವ ಕೆಡಿಸಿದುದ ಮರೆದಿರಲ್ಲಾ!!
Transliteration ʼkēśavanallade ataḥparadaivavillenduʼ
vēdavyāsamuni bhaṅgavādudanariyire?
"Ahamēva jagatkartā. Mama kartā mahēśvaraḥ"
endu viṣṇu hēḷida vacanava maredirallā!
Kūḍalasaṅgamadēvanu
dakṣa yajñava keḍisiduda maredirallā!!
Manuscript
English Translation 2 Do you not know, good sirs,
How Vēdavyāsa , the sage,
For saying there is no god but Kēśava,was
Humbled to dust?
You have forgotten, alas,
The words Viṣṇu himself hath said,
'I am alone the maker of the world,
But Mahēśvara my master is.'
You have forgotten, alas,
That Lord Kūḍala Saṅgama
Frustrated Dakṣa's sacrifice!
Translated by: L M A Menezes, S M Angadi
Hindi Translation केशव के सिवा और कोई देव नहीं है
कहने से यह नहीं जानते
कि व्यास की क्या दुर्गति हुई?
“अहं सर्व जगत्कर्ता मम कर्ता महेश्वरः।“
विष्णु का यह वचन तुम भूल गये न!
कूडलसंगमदेव के दक्ष यज्ञ
नष्ट करने की बात भूल गये न!
Translated by: Banakara K Gowdappa
Telugu Translation కేశవుడు దప్ప మఱి వేఱె దైవము లేడను
వేదవ్యాసుని భంగపాటు తెలియుడో
‘‘అహ మేవ జగద్కర్తా; మమక ర్తా మహేశ్వరః’’
అని విష్ణుపు బల్కు బల్కు మఱచితిరే అయ్యా
సంగమదేవుడు దక్షయజ్ఞము చెఱచుట మఱచితిరే అయ్యా!
Translated by: Dr. Badala Ramaiah
Tamil Translation கேசவனின்றி வேறு கடவுள் இல்லை என்ற
வேதவியாசமுனிவர் பங்கமடைந்ததை அறியீரோ?
“அஹம் ஸர்வஜகத்கர்தா மம கர்தா மஹேச்வர
என திருமால் கூறிய கூற்றை மறந்தீரன்றோ!”
கூடல சங்கமதேவன் தட்சனின் வேள்வியைக்
கெடுத்ததை மறந்தீரன்றோ!
Translated by: Smt. Kalyani Venkataraman, Chennai
Marathi Translation
केशवाविण अन्य, देवतचि नाही
व्यासमुनी ध्वनि, व्यर्थ झाली
वेदव्यासा काय, नाही ती जाणीव
मंत्राचा आठव करूनि देऊ
अहं सर्व जगत् कर्ता मम कर्ता महेश्वराः।
ऐसी विष्णु वाणी, कूडलसंगमदेवा !
वेदव्यासा शिकवा, पुन्हा तुम्ही
दक्ष यज्ञ जेव्हा भंग केला तुम्ही
पराजित मुनि, वेदव्यास
अर्थ - केशवाशिवाय अन्य देव नाही. तोच एकमेव देव होय. या वेदव्यास वेदव्यासच्या उक्तिला महात्मा बसवेश्वरानी “अहं सर्व जगत् कर्ता मम कर्ता महेश्वराः” या विष्णु मुखातून निघालेल्या वाणीची आठवण करून देऊन मंत्रमुग्ध केले आहेत. हे कूडलसंगमदेवा ! (परमेश्वरा) तुम्हीच ना ते दक्ष यज्ञ भंग करणारे ! व्यासमुनीस त्याची तरी आठवण कशी राहिली नसावी ? म्हणून परमेश्वर एकमेव माझा निराकार कूडलसंगमदेव होय.
Translated by Rajendra Jirobe, Published by V B Patil, Hirabaug, Chembur, Mumbai, 1983
केशवाविना दुसरा देव नाही
म्हणणाऱ्यांनो वेदव्यास मुनीचा पराभव जाणत नाही का ?
`अहं सर्व जगत्कर्ता मम कर्ता महेश्वरा।`
हे विष्णूचे वचन तुम्ही विसरला ! कूडलसंगमदेवाने दक्षयज्ञ
नष्ट केला हे विसरला !
Translated by Shalini Sreeshaila Doddamani
ಶಬ್ದಾರ್ಥಗಳು ಅತ: = ; ಕರ್ತ = ; ಕೇಶವ = ; ಭಂಗಬಟ್ಟು = ; ಮಮ = ; ಯಜ್ಞ = ;
ಕನ್ನಡ ವ್ಯಾಖ್ಯಾನ ಪ್ರತಿಯೊಂದು ದ್ವಾಪರಯುಗದಲ್ಲಿ ಒಬ್ಬ ವ್ಯಾಸನು ಹುಟ್ಟುವನೆಂಬ ಪ್ರತೀತಿಯಿದೆ, ಈಗಿನ (ಕೃಷ್ಣದ್ವೈಪಾಯನ)ವ್ಯಾಸನು 28ನೆಯವನು. ಬಸವಣ್ಣನವರು ಈ ವಚನದಲ್ಲಿ ಪ್ರಸ್ತಾಪಿಸಿರುವುದು ಯಾವ ವ್ಯಾಸನೋ ತಿಳಿಯದು. ವಸಿಷ್ಠನೆಂಬ 8ನೆಯ ವ್ಯಾಸನೊಬ್ಬನಿದ್ದ. ಈವಚನದಲ್ಲಿ ಕುರಿತಿರುವುದು ಈ ವಾಸಿಷ್ಠವ್ಯಾಸನನ್ನೇ ಎಂಬಂತೆ-ಉತ್ತರದೇಶದ ಬಸವಲಿಂಗ ಬರೆದ ಬಸವೇಶ್ವರಪುರಾಣ ಕಥಾಸಾಗರದಲ್ಲಿ ಹೇಳಿದೆ. ಇವನಿಗೆ ಹತ್ತು ಸಾವಿರ ಜನ ಶಿಷ್ಯರು. ಇವನೊಮ್ಮೆ ವಿಷ್ಣುವೇ ಪರಮದೈವವೆಂದು ಘೋಷಿಸಿದ. ಋಷಿಗಳು ಅದನ್ನು ಆಕ್ಷೇಪಿಸಿ-ಕಾಶೀವಿಶ್ವನಾಥನ ಮುಂದೆ ಆ ವ್ಯಾಸನು ತನ್ನ ತೋಳೆತ್ತಿ ಕೇಶವನಲ್ಲದೆ ಅತಃಪರದೈವವಿಲ್ಲೆಂದು ಪ್ರತಿಜ್ಞೆ ಮಾಡಿದ್ದೇ ಆದರೆ ತಾವೂ ವಿಷ್ಣುಪಾರಮ್ಯವನ್ನು ಒಪ್ಪುವುದಾಗಿ ಆಗ್ರಹಪಡಿಸಿದರು.
ವ್ಯಾಸನು ಒಪ್ಪಿ ಆ ವಿಶ್ವನಾಥನ ಮುಂದೆ ತೋಳೆತ್ತಿ ವಿಷ್ಣುವೇ ಮಹಾದೈವವೆಂದು ಸಾರಿದ. ಆದರೆ ಅವನು ಹಾಗೆ ಸಾರಲು ಮೇಲಿತ್ತಿದ ತೋಳನ್ನು ಮರಳಿ ಕೆಳಗಿಳಿಸಲಾಗಲಿಲ್ಲ. (ಆಗ ನಂದೀಶ್ವರನು ಬಂದು ಪರಶುವಿಂದ ವ್ಯಾಸನ ಆ ತೋಳನ್ನು ಕಡಿದನೆಂದೂ ಕಥೆಯಿದೆ). ಇರಲಿ, ವ್ಯಾಸನು ತನ್ನ ತೋಳನ್ನು ಕೆಳಗಿಳಿಸಲಾಗದೆ ದುಃಖಿಸುತ್ತಿರಲು-ಅಲ್ಲಿಗೆ ವಿಷ್ಣು ಬಂದು-“ಯಜ್ಞಕರ್ತಾ ಚ ದೇವೇಂದ್ರಃ ವೇದಕರ್ತಾ ಚ ವಾಕ್ಪತಿಃ| ಅಹಮೇವ ಜಗತ್ಕರ್ತಾ ಮಮ ಕರ್ತಾ ಮಹೇಶ್ವರಃ” ಎಂದು ಬುದ್ಧಿ ಹೇಳಿದನಂತೆ. ಈ ಐತಿಹ್ಯವನ್ನು ಬಸವಣ್ಣನವರು ಪ್ರಸ್ತಾಪಿಸಿ ಶಿವಪಾರಮ್ಯವನ್ನು ಘೋಷಿಸುತ್ತಿರುವರು.
ಧಾರ್ಮಿಕ ಉತ್ಸವಗಳಾಗುವಾಗ ನಂದೀಧ್ವಜದಲ್ಲಿ ವ್ಯಾಸನ ತೋಳೆಂಬುದನ್ನು ಸಿಕ್ಕಿಸಿ ಕುಣಿಸುವುದು ವೀರಶೈವರಿಗೆ ಇಂದಿಗೂ ಒಂದು ಪ್ರತಿಷ್ಠೆಯ ಆಚರಣೆಯಾಗಿದೆ.
ಶಿವನನ್ನು ಧಿಃಕರಿಸಿ ವಿಷ್ಣುವನ್ನು ಮುಂದಿಟ್ಟುಕೊಂಡು ದಕ್ಷನು ಮಾಡುತ್ತಿದ್ದ ಯಾಗವನ್ನು ಶಿವನು ವೀರಭದ್ರನ ಮೂಲಕ ಕೆಡಿಸಿದ್ದು-ದಕ್ಷಾಧ್ವಂಧ್ವರಸವೆಂದು ಪ್ರಸಿದ್ಧವಾದ ಒಂದು ಶಿವಲೀಲೆಯೇ ಆಗಿದೆ. ಯಜ್ಞಯಾಗಾದಿಗಳನ್ನು ನಿಷೇಧಿಸುವ ವೀರಶೈವರಿಗೆ ಈ ಪ್ರಸಂಗ ಬಹಳ ಅರ್ಥಪೂರ್ಣವಾದುದು. ಮತ್ತು ಈ ದಕ್ಷಾಧ್ವರಧ್ವಂಸವು ಶಿವನನ್ನು ಮಹಾದೇವನನ್ನಾಗಿ ಪ್ರತಿಷ್ಠಿಸಿ ವೀರಶೈವ ಧರ್ಮಶಾಸ್ತ್ರದಲ್ಲಿ ಮಹಾಪ್ರಸ್ಥಾನವಾಗಿ ದಾಖಲಾಗಲೂ ಅರ್ಹವಾಗಿದೆ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು