ಮಾಹೇಶ್ವರನ ಜ್ಞಾನಿಸ್ಥಲ - ಹರಿ-ಹರ
ನಾರಾಯಣನೆಂಬವನ ಕಾಣೆ, ಗೀರಾಯಣನೆಂಬವನ ಕಾಣೆ!
ಬೊಮ್ಮನೆಂಬವನ ಕಾಣೆ, ಗಿಮ್ಮನೆಂಬವನ ಕಾಣೆ!
ವಿಷವಟ್ಟಿ ಸುಡುವಲ್ಲಿ, ವೀರಭದ್ರ ಕೊಲುವಲ್ಲಿ
ಕೂಡಲಸಂಗಯ್ಯಂಗೆ ಶರಣೆಂದು ಮೊರೆಯಿಟ್ಟರೆಲ್ಲರೂ.
Transliteration Nārāyaṇanembavana kāṇe, gīrāyaṇanembavana kāṇe!
Bom'manembavana kāṇe, gim'manembavana kāṇe!
Viṣavaṭṭi suḍuvalli, vīrabhadra koluvalli
kūḍalasaṅgayyaṅge śaraṇendu moreyiṭṭarellarū.
Manuscript
English Translation 2 I do not see him whom they call
Nārāyaṇa or Girāyaṇa !
I do not see him whom they call
Bomma or Gimma!
When poison chased and burnt,
When Vīrabhadra slew and slew,
It is to Lord Kūḍala Saṅga they cried,
'Save us! save us!'
Translated by: L M A Menezes, S M Angadi
Hindi Translation न मैं नारायण को देखता हूँ, न ऊरायण को!
न मैं बोम्म को देखता हूँ, न उम्म को!
विष पीछा कर जलाते समय,
वीरभद्र के संहार करते समय
सब कूडलसंगमदेव की शरण में गये ॥
Translated by: Banakara K Gowdappa
Telugu Translation నారాయణు గీరాయణుడెవడో చూడ!
బమ్మ యెవడో! గిమ్మ యెవడో చూడ!
విషము బుట్టి కాల్చుచుండగ
వీరభద్రుడు విఱుచుక పడుచుండ
సంగయ్య కడకేగి శరణంచు
మొఱపెట్టి రయ్యా వీరెల్లరూ!
Translated by: Dr. Badala Ramaiah
Tamil Translation நாராயணன் என்பவனைக் காணேன்
கீராயணன் என்பவனைக் காணேன்
பொம்மன் என்பவனைக் காணேன்
கிம்மன் என்பவனைக் காணேன்
நஞ்சு ஏறி சுட்டபொழுது வீரபத்திரன்
அடித்தபொழுது, கூடல சங்கமனுக்குத்
தஞ்சமென்று அனைவரும் முறையிட்டனரன்றோ!
Translated by: Smt. Kalyani Venkataraman, Chennai
Marathi Translation
नारायणाला जाणत नाही, गिरायणाला जाणत नाही.
बोम्माला जाणात नाही, गिम्माला जाणत नाही.
विषात जळत अ सताना, वीरभद्राकडून मारले जाताना
कूडलसंगला शरण जाऊन रक्षणाची प्रार्थना करीत होते.
Translated by Shalini Sreeshaila Doddamani
ಶಬ್ದಾರ್ಥಗಳು = ; ನÁರಾಯಣ = ; ಬಡಿ = ; ಮೊರೆ = ; ವಿಷವಟ್ಟು = ;
ಕನ್ನಡ ವ್ಯಾಖ್ಯಾನ “ನಾರಾಯಣನೆಂಬವನ ಕಾಣೆ ಗೀರಾಯಣನೆಂಬವನ ಕಾಣೆ”-ಮುಂತಾದ ಉಕ್ತಿಗಳು ವೈಚಾರಿಕವಾದುವಾಗಿರದೆ ಮತ್ಸರಗ್ರಸ್ತವೂ ಮತ್ಸರೋದ್ದೀಪಕವೂ ಆಗಿವೆ. ಈ ದುರ್ಲಕ್ಷಣ ಬಸವಣ್ಣನವರ ಮಾತಿನ ಲಕ್ಷಣವಲ್ಲ. ಹಾಲಾಹಲವಿಷಧಾರಣಪವಾಡವನ್ನು ಪ್ರಸ್ತಾಪಿಸಿರುವ 542ನೇ ವಚನವನ್ನೂ, ದಕ್ಷಯಾಗ ಧ್ವಂಸವನ್ನು ಪ್ರಸ್ತಾಪಿಸಿರುವ 549ನೇ ವಚನವನ್ನೂ ಬಳಸಿಕೊಂಡು ಯಾವನೋ ಒಬ್ಬ ಪ್ರಾಕೃತನು ಕಟ್ಟಿದ ವಚನವಿದು-ಬಸವಣ್ಣನವರ ನಿಜವಚನವಲ್ಲ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು