ಮಾಹೇಶ್ವರನ ಜ್ಞಾನಿಸ್ಥಲ - ದೇವರು
ಅಮೃತವ ಕಡೆವಲ್ಲಿ, ವಿಷವಟ್ಟಿ ಸುಡುವಲ್ಲಿ,
ದೇವರೆಂಬವರೆತ್ತ ಹೋದರೇನಿಂ ಭೋ!
ಅಂದೊಮ್ಮೆ ಓಡಿಹೋಗಿ ಆತನ ಮೊರೆಯ ಹೋಗುವಂದು
ದೇವರೆಂಬವರೆತ್ತ ಹೋದರೇನಿಂ ಭೋ?
ಕೂಡಲಸಂಗಯ್ಯ ದೇವರಿಗೆ ದೇವನು:
ನೀವೆಲ್ಲಾ ಆಳೆಂಬುದನರಿಯಿಂ ಭೋ!
Transliteration Amr̥tava kaḍevalli, viṣavaṭṭi suḍuvalli,
dēvarembavaretta hōdarēniṁ bhō!
Andom'me ōḍ'̔ihōgi ātana mareya hōguvandu
dēvarembavaretta hōdarēniṁ bhō?
Kūḍalasaṅgayya dēvarige dēvanu:
Nīvellā āḷembudanariṁ bhō!
Manuscript
English Translation 2 When nectar was being churned,
When poison burnt,
Where did they go, dear Sirs,
Who were styled gods?
The day they ran and ran
For shelter unto Him,
Where did they go, good Sirs,
Who were styled gods?
Lord Kūḍala Saṅga is the God of gods:
Know ye, you are his servants all!
Translated by: L M A Menezes, S M Angadi
Hindi Translation अमृत मंथन के समय
विष उत्पन्न होकर जलाते समय,
देव कहलानेवाले कहाँ गये?
उस दिन भागकर शिव की शरण जाते समय
देव कहलानेवाले कहाँ गये?
कूडलसंगमदेव देवाधिदेव है
जान लो तुम सब उनके दास हैं।
Translated by: Banakara K Gowdappa
Telugu Translation అమృతము చిల్కునాడు విషము పుట్టి
తెగకాల్ప దేవతల మను పెద్దలెల్ల యెటకేగిరో!
పరుగుపరుగున వచ్చి స్వామి మఱుగున జొచ్చు
దేవతల మనువారెల్ల యెటపోయిరో!
సంగడే దేవతలకు దేవుడయ్యా
మీరెల్లా పాలితులనుట తెలియుడో !
Translated by: Dr. Badala Ramaiah
Tamil Translation அமுதத்தைக் கடைந்தபொழுது நஞ்சுஏறிச்
சுட்டபொழுது, கடவுள் என்பவர் எங்கு
சென்றனரோ! அன்று ஒருமுறை ஓடிச்சென்று
சிவனிடம் தஞ்சமடைந்த பொழுது
கடவுள் என்பவர் எங்கு சென்றனரோ?
கூடல சங்கய்யன் கடவுளின் கடவுள்
இவர்களனைவரும் ஆள் என்பதை
அறியீரோ நீவிர்!
Translated by: Smt. Kalyani Venkataraman, Chennai
Marathi Translation
सांगा देव कुठे होते ?
अमृत मंथन संकट समयी
दग्ध विषयाने होते समयो
पळत कुणास्तव ते ॥१॥
याचक असुनो देव म्हणविता
स्वरक्षणार्थी पळून जाता
कूडलसंगमदेवाधिदेवा !
देवचि नव्हते ते ॥२॥
अर्थ - अमृत मंथन चालू असताना त्यातून निघालेल्या विषाला भिऊन पळत सुटलेले ते देव, देव कसे होऊ शकतात. विषाने दग्ध झाले असताना रक्षणार्थ परमेश्वराची प्रार्थना करीत, “रक्षमाम् रक्षमाम्” म्हणीत पळत सुटणारे देव! देव कसे होऊ शकतील. हे कूडलसंगमदेवा (परमेश्वरा) याचना करणारे भिकार असे देव! देव कसे होऊ शकतील.
Translated by Rajendra Jirobe, Published by V B Patil, Hirabaug, Chembur, Mumbai, 1983
अमृत मंथन करताना, विषात जळत
असता देव म्हणवून घेणारे कोठे होते?
तेव्हा घाबरुन शिवाला शरण जाताना,
देव म्हणवून घेणारे कोठे होते ?
कूडलसंगमदेव देवांचे देव आहेत.
इतर सर्व फक्त त्यांचे सेवक आहेत.
Translated by Shalini Sreeshaila Doddamani
ಶಬ್ದಾರ್ಥಗಳು ಕಡೆ = ; ವಿಷ = ;
ಕನ್ನಡ ವ್ಯಾಖ್ಯಾನ ದೇವತೆಗಳಿಗೆ ರಾಕ್ಷಸರಿಗೆ ಇಬ್ಬರಿಗೂ ಅಮೃತಬೇಕು. ಆದರೆ ಸಮುದ್ರಮಂಥನ ಮಾಡಿದಾಗ ಮೊದಲು ಬಂದುದು ವಿಷ. ಅದನ್ನು ನಿಗ್ರಹಿಸಬಲ್ಲವರು ಯಾರೂ ಇಲ್ಲ-ಅದರ ಸುರುಳಿಸುತ್ತಿದ ಹೊಗೆಯನ್ನು ಕಂಡೇ ಎಲ್ಲ ದೇವತೆಗಳೂ ಓಡಿಹೋದರು. ಹೋದಲ್ಲಿಗೆಲ್ಲಾ ಅದು ಅಟ್ಟಿಬಂದಿತು-ಶಿವನಲ್ಲಿ ಮೊರೆ ಹೊಕ್ಕರು. ಶಿವನಾದರೋ ಆ ವಿಷವನ್ನು ಕಂಠದಲ್ಲಿ ಧರಿಸಿ ದೇವತೆಗಳನ್ನೆಲ್ಲಾ ಸಾವಿನಿಂದ ಉದ್ಧರಿಸಿದ. ಆದ್ದರಿಂದ ಶಿವನೊಬ್ಬನೇ ದೇವಾಧಿದೇವನು ಉಳಿದವರೆಲ್ಲಾ ಶಿವನ ಆಳುಗಳು ಎಂದು ಎಲ್ಲ ದೇವತೆಗಳನ್ನೂ ಕುರಿತು ಛೇಡಿಸುವ ಧಾಟಿಯಲ್ಲಿದೆ ಈ ವಚನ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು