•  
  •  
  •  
  •  
Index   ವಚನ - 553    Search  
 
ಮಾಹೇಶ್ವರನ ಜ್ಞಾನಿಸ್ಥಲ - ಏಕದೇವೋಪಾಸನೆ
ಬಿದಿರೆಲೆಯ ಮೆಲಿದರೆ ಮೆಲಿದಂತಲ್ಲದೆ, ರಸವನು ಹಡೆಯಲು ಬಾರದು! ಮಳಲ ಹೊಸೆದರೆ ಹೊಸೆದಂತಲ್ಲದೆ, ಸರವಿಯ ಹಡೆಯಲು ಬಾರದು! ನೀರ ಕಡೆದರೆ ಕಡೆದಂತಲ್ಲದೆ, ಬೆಣ್ಣೆಯ ಹಡೆಯಲು ಬಾರದು! ನಮ್ಮ ಕೂಡಲಸಂಗಮದೇವನಲ್ಲದೆ, ಅನ್ಯದೈವಕ್ಕೆರಗಿದರೆ ಹೊಳ್ಳಕುಟ್ಟಿ ಕೈ ಹೊಟ್ಟೆಯಾದಂತಾಯಿತ್ತಯ್ಯಾ!
Transliteration Bidireleya melidare melidantallade, rasavanu haḍeyalubāradu! Maḷala hosedare hosedantallade, saraviya haḍeyalubāradu! Nīra kaḍedare kaḍedantallade, beṇṇeya haḍeyalu bāradu! Nam'ma kūḍalasaṅgamadēvanallade, an'yadaivakkeragidare hoḷḷa kuṭṭi kai hoṭṭeyādante āyittayyā!
Manuscript
Music Courtesy:
English Translation 2 Chewing a bamboo leaf, You chew it, that is all: You get no Juice! If you spin sand, You spin it, that is all: You get no rope; If you churn water, You churn it, that is all: No butter there! Bowing to any other god Than our Lord Kūḍala Saṅgama, It is as if, by pounding chaff, You get but swollen hands! Translated by: L M A Menezes, S M Angadi
Hindi Translation बाँस के पत्ते चबाने से चबाना मात्र होता है, रस प्राप्त नहीं हो सकता । बालू बटने से बटना मात्र होता है, रस्सी प्राप्त नहीं हो सकती । पानी मथने से मथना मात्र होता है, मक्खन प्राप्त नहीं होता । मम कूडलसंगमदेव के अतिरिक्त अन्य देवों को नमन करना भूसा कूटकर हाथ सुजा लेने की भाँति है ॥ Translated by: Banakara K Gowdappa
Telugu Translation వెదురు టాకుల నమల నమిలినట్లే కానీ రసము గ్రహియింపలేవుర ఇసుకను వేడిన పేడిపట్లే కాని త్రాడును చూడలేవురు నీరు చిలికిన చిలకినట్లేగాని వెన్న తీయగ లేవుర మా సంగమ దేవుని విడిచి పర దేవతలకు మొక్క పొట్టును దంచి చేతుల బొబ్బల బొందినట్లై పోవురా! Translated by: Dr. Badala Ramaiah
Tamil Translation மூங்கில் இலையை மென்றால் மெல்லலாமின்றி சாற்றைப் பெறவியலாது மணலைத் தூற்றினால், தூற்றலாமன்றி கயிறாகத் திரிக்கவியலாது நீரைக் கடைந்தால், கடையலாமன்றி வெண்ணையைப் பெறவியலாது நம் கூடலசங்கம தேவனின்றி வேறு கடவுளரை ஏற்பின் தவிட்டைக் குற்றி கை புண்ணானதனைய ஆயிற்று ஐயனே Translated by: Smt. Kalyani Venkataraman, Chennai
Marathi Translation बांबूची पाने चघळता येतील, त्यातून रस मिळणार नाही. वाळू वळवता येईल, त्याचा दोर करता येणार नाही. पाणी घुसळता येईल, त्यातून लोणी काढता येणार नाही. आमच्या कूडलसंगमदेवाविना अन्य देवांना शरण गेले तर भूसा कुटून कुटून हात दुखवून घेतल्यासम देवा. Translated by Shalini Sreeshaila Doddamani
ಶಬ್ದಾರ್ಥಗಳು ಎಂಗು = ; ಕಡೆ = ; ಮಳಲು = ; ಮೆಲು = ; ಸರವಿ = ; ಹಡೆ = ; ಹೊಸೆ = ;
ಕನ್ನಡ ವ್ಯಾಖ್ಯಾನ ಬಿದಿರೆಲೆಯನ್ನು ತಿಂದರೆ ರಸವಿಲ್ಲ, ಮರಳನ್ನು ಹೊಸೆದರೆ ಹಗ್ಗವಿಲ್ಲ,ನೀರನ್ನು ಕಡೆದರೆ ಬೆಣ್ಣೆಯಿಲ್ಲ-ಶಿವನಲ್ಲದನ್ಯದೈವಗಳನ್ನು ಪೂಜಿಸಿದರೆ ಮುಕ್ತಿಯಿಲ್ಲ. ಶಿವೇತರದೇವತೆಗಳನ್ನು ಮೋಕ್ಷದ ಆಶೆಯಿಂದ ಉಪಾಸನೆ ಮಾಡಿದರೆ-ಜೊಳ್ಳು ಭತ್ತವನ್ನು ಕುಟ್ಟಿದಂತೆ-ಅಕ್ಕಿ ಸಿಕ್ಕುವುದಿಲ್ಲವೆಂಬ ಇಷ್ಟನಷ್ಟವೇ ಅಲ್ಲ-ಕೈಯಲ್ಲ ಬೊಬ್ಬೆ ಬಂದು ಅನಿಷ್ಟಪ್ರಾಪ್ತಿಯೂ ಆಗುವುದೆನ್ನುವರು ಬಸವಣ್ಣನವರು. ಭಾಗವತದಲ್ಲಿ ಕೃಷ್ಣನು ಗೋಪಾಲಕರಿಗೆ ಇಂದ್ರಪೂಜೆಯನ್ನು ನಿಷೇಧಿಸಿದಂತೆ-ಬಸವಣ್ಣನವರು ಭಕ್ತರಿಗೆ ವಿಷ್ಣುಬ್ರಹ್ಮರ ಪೂಜೆಯನ್ನು ನಿಷೇಧಿಸುತ್ತಿರುವರು. ಬಸವಣ್ಣನವರು ಮಾರಿಮಸಣಿ ಮುಂತಾದ ಕ್ಷುದ್ರದೇವತೆಗಳನ್ನೂ, ವಿಷ್ಣು ಮುಂತಾದ ಯಜ್ಞದೇವತೆಗಳನ್ನೂ ಸಮಾನವಾಗಿ ವರ್ಜಿಸಿರುವರು. ಏಕೆಂದರೆ ಎರಡೂ-ಮಾನವರಲ್ಲಿ ಉದ್ದೀಪನಗೊಳ್ಳಬೇಕಾದ ಆತ್ಮಗೌರವಕ್ಕೆ ಮತ್ತು ಜೀವದಯೆಗೆ ಅತ್ಯಂತ ಮಾರಕವಾಗುವವು. ಈ ನಿಷೇಧಕ್ರಿಯೆ ಬಸವಣ್ಣನವರಿಗೆ 12ನೇ ಶತಮಾನದ ಒಂದು ಸಾಂಸ್ಕೃತಿಕ ಸಂದರ್ಭದಲ್ಲಿ ಅನಿವಾರ್ಯವಾಗಿತ್ತು. ಮತ್ತು ಅದಕ್ಕೆ ಗಂಭೀರವಾಗಿ ನೈಜವಾಗಿ ಪ್ರತಿಕ್ರಿಯಿಸುವ ಧೈರ್ಯವೂ ಇತ್ತು ಬಸವಣ್ಣನವರಿಗೆ. ವಿಜ್ಞಾನದ ಸಮ್ಮುಖದಲ್ಲಿ ಮಾರಿಮಸಣಿಗಳ ಕಲ್ಪನೆ ಎಷ್ಟು ಹಾಸ್ಯಾಸ್ಪದವಾಗಿದೆಯೆಂಬುದನ್ನು ಕ್ಷಣಕಾಲ ಪರಿಭಾವಿಸಿದ್ದೇ ಆದರೆ-ಬೆಂಕಿಯ ಮೂಲಕ ತುಪ್ಪ ತಿನ್ನುವ ವಿಷ್ಣು ಬ್ರಹ್ಮ ಮುಂತಾದ ದೇವತೆಗಳು ಬಸವಣ್ಣನವರಿಗೆ ಅಷ್ಟೇ ವಿದೂಷಕವಾಗಿ ಕಂಡಿರುವುದರಲ್ಲಿ ಆಶ್ಚರ್ಯವಿಲ್ಲ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು