ಮಾಹೇಶ್ವರನ ಜ್ಞಾನಿಸ್ಥಲ - ಮಾರಿಮಸಣೆ
ಅಗಳೂ ಲೋಗರ ಮನೆಯ ಬಾಗಿಲ ಕಾಯ್ದುಕೊಂಡಿಪ್ಪವು,
ಕೆಲವು ದೈವಂಗಳು;
ಹೋಗೆಂದರೆ ಹೋಗವು ಕೆಲವು ದೈವಂಗಳು;
ನಾಯಿಂದಲೂ ಕರಕಷ್ಟ ಕೆಲವು ದೈವಂಗಳು.
ಲೋಗರ ಬೇಡಿಕೊಂಡುಂಬ ದೈವಂಗಳು
ತಾವೇನ ಕೊಡುವುವು, ಕೂಡಲಸಂಗಮದೇವಾ?
Transliteration Agaḷū lōgara maneya bāgila kāydukoṇḍippavu,
kelavu daivagaḷu;
hōgendare hōgavu kelavu daivagaḷu;
nāyindalū karakaṣṭa kelavu daivagaḷu.
Lōgarikoṇḍu bēḍamba daivagaḷu
tāvēna koḍuvavu, kūḍalasaṅgamadēvā?
Manuscript
English Translation 2 Certain gods
always stand watch
at the doors of people.
Some will not go if you ask them to go.
Worse than dogs, some others.
What can they give,
these gods,
who live off the charity of people
O lord of the meeting rivers?
Translated by: A K Ramanujan
Book Name: Speaking Of Siva
Publisher: Penguin Books
----------------------------------
There be some gods who always haunt
The doors of people's homes;
There be some gods who do not quit
When you demand they quit;
There be some gods who are
Far worse than dogs...
O Kūḍala Saṅgama Lord,
What can those deities give
Who live of people's alms?
Translated by: L M A Menezes, S M Angadi
Hindi Translation सदैव लोगों के द्वारपालक बने रहते हैं कुछ देव;
‘जाओ’ कहने पर नहीं जाते कुछ देव;
श्वान से भी निकृष्ट हैं कुछ देव ।
लोगों से माँगकर खानेवाले देव
क्या दे सकते हैं, कूडलसंगमदेव?
Translated by: Banakara K Gowdappa
Tamil Translation இடையறாது எளியோரின் இல்ல வாயிலை
சில கடவுளர் காத்துக் கொண்டிருப்பர்
போவீர் எனின் போவதில்லை
நாயைவிட சில கடவுளர் கீழானவர்
எளியோரை வேண்டி உண்ணும் கடவுளர்
தாங்கள் எதை அளிப்பது கூடல சங்கமதேவனே.
Translated by: Smt. Kalyani Venkataraman, Chennai
Marathi Translation
सदा दुसऱ्याच्या घराची राखण करणारे काही देव आहेत.
जा म्हणाले तरी जात नाहीत.
कुत्र्यापेक्षा कष्टदायक आहेत काही देव.
दुसऱ्यांना मागणारे हे देव स्वतः काय देणार कूडलसंगमदेवा ?
Translated by Shalini Sreeshaila Doddamani
ಶಬ್ದಾರ್ಥಗಳು ಅಗಳು = ಆಹಾರದ ತುತ್ತು; ಕರಕಷ್ಟ = ; ಲೋಗರ = ;
ಕನ್ನಡ ವ್ಯಾಖ್ಯಾನ ಇಲ್ಲಿಂದ ಮುಂದೆ ಹತ್ತು ವಚನಗಳಲ್ಲಿ ಕ್ಷುದ್ರದೈವಗಳ ವಿಡಂಬನೆಯನ್ನು ಕಾಣಬಹುದು : ಈ ದೈವಗಳು ಬಡಬಗ್ಗರ ಮನೆಯ ಬಾಗಿಲಲ್ಲಿ ಅನ್ನರೊಟ್ಟಿಗಾಗಿ ಹಣ್ಣುಕಾಯಿಗಾಗಿ “ಕಾಣಿ”ಕೆಗಾಗಿ ಮೊಂಡುಬಿದ್ದು-ಹೋಗೆಂದರೂ ಹೋಗದೆ-ಭಕ್ತರು ತಮ್ಮಲ್ಲಿ ಕೊಡಲೇನೂ ಇಲ್ಲವೆಂದರೂ ಬಿಡದೆ ಕಾಡುತ್ತ ನಿಲ್ಲುವವು. ಇವಕ್ಕಿಂತ ನಾಯಾದರೂ ಎಷ್ಟೋ ಮೇಲು-ಓಡಿಸಿದರೆ ಹೋಗುತ್ತವೆ. ಈ ದೈವಗಳಾದರೋ ಆ ನಾಯಿಗಿಂತ ಹೀನ-ವಿಧವಿಧವಾಗಿ ಕೂಗುತ್ತ ಹೆದರಿಸುತ್ತ-ಆ ಮುಗ್ದಜನರನ್ನು ಸುಲಿದು ತಿನ್ನುವವು.
ಹೀಗೆ ಉಪದ್ರವಕಾರಿಯಾದ ಮಾರಮ್ಮ ಬೀರಯ್ಯಗಳು-ಜನರ ಆತ್ಮವನ್ನು ಉದಾತ್ತಗೊಳಿಸುವುದಿರಲಿ-ಲೌಕಿಕವಾಗಿಯಾದರೂ ಆ ಶ್ರೀಸಾಮಾನ್ಯರಿಗೇನು ಸುಖಸೌಭಾಗ್ಯಗಳನ್ನು ಕೊಟ್ಟಾವು ? ಎಂದು ಬಸವಣ್ಣನವರು ಬೇಸತ್ತು-ಬೇಡಿದ್ದನ್ನು ಕೊಡುವ ಶಿವನನ್ನು ಪೂಜಿಸಿರೆಂದು ಉಪದೇಶಿಸುತ್ತಿರುವರು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು