•  
  •  
  •  
  •  
Index   ವಚನ - 555    Search  
 
ಮಾಹೇಶ್ವರನ ಜ್ಞಾನಿಸ್ಥಲ - ಡಾಂಭಿಕತೆ
ಗಾಡಿಗ ಡಿಂಗು ಗಂಗೆ ಚಿಕ್ಕು ಮುಟ್ಟಿಗೆ, ಹಸು ರಂಬಲಿ ಮುಟ್ಟಿಗೆ ಹುರಿಬುತ್ತಿಯ ಬೇಡಿ, ಮನುಷ್ಯರ ಪಿಡಿದು ಪೀಡಿಸಿ, ತಮ್ಮ ಬಸುರ್ಗೆ ಕಾಣದೆ, ಈಡಾಡಿದ ಕೂಳಂಬಲಿಯನಾಯ್ದು ಕುರುಕುವ ಹೇಸಿ ದೈವಂಗಳ ಬೇಡಿ ಬೇಡಿ ನಿರರ್ಥ ಕೆಡಬೇಡ, ಎಲವೋ, ಕೂಡಲಸಂಗಮದೇವರ ನೆರೆ ನಂಬುವುದೆಲವೋ!
Transliteration Gāḍiga ḍiṅgugaṅge cikkumuṭṭige, hasurambali muṭṭige huributtiya bēḍa, manuṣyara piḍidu pīḍisi, tam'ma basurge kāṇade, īḍāḍida kūḷambaliyanāydu kurukuva hēsi daivaṅgaḷa bēḍa bēḍa nirartha keḍabēḍa, elavō, kūḍalasaṅgamadēvara nere nambuvudelavō!
Manuscript
English Translation 2 Do ye not court perdition,all in vain, Praying to juggling men Who flourish tapers made of rags ; Nor wild gods who themselves entreat for fistfuls of molasses,for gruel mixed with greens, Handfuls of puffed rice and rice with curds, Possessing humankind and plaguing it, Not finding aught to cram their bellies with, picking the scattered food and gruel Which they eat,crunch and crunch. Do you,instead,belive in Kūḍala Saṅgama,with perfect faith. Translated by: L M A Menezes, S M Angadi
Hindi Translation जादूगरों व लडकों से चिथडे, मुट्टी भर अन्न दही–भात , काँजी, भूने हुए दाने माँगते हुए मनुष्यों को पीडित कर अपने उदरार्थ कुछ न देखकर , क्षिप्त अन्न चुनकर खानेवाले कुत्सित देवों से याचना कर व्यर्थ नष्ट मत होओ । कूडलसंगमदेव पर संपूर्ण विश्वास रखो । Translated by: Banakara K Gowdappa
Telugu Translation వృథా మంత్ర జలముల మంట పసురుగంజి మండుదీపము గోరి మనుష్యులబట్టి పీడిరచి పొట్టకై బలి చల్లిన కూటి మెతుకుల వెదకి వెదకి కొఱకు క్షుద్రదేవతల కొలచి ఊరక చెడిపోకుర! కూడలసంగని నమ్మి బ్రతుకురా ! Translated by: Dr. Badala Ramaiah
Tamil Translation பலவகையான பூதங்கள், கீரைக்கஞ்சி வறுத்த உணவுகள் போன்றவற்றை வேண்டி மனிதரைப் பிடித்து, பீடித்து தம் வயிற்றிற்கு இல்லாது வீசி எறியப்பட்ட கஞ்சியைத்தேடி நொச்சுக் கொட்டும் இழிந்த கடவுளரை வேண்டி, வேண்டி பயனற்றுக் கெடாதீர் கூடல சங்கமதேவனை முற்றிலும் நம்புவாய் Translated by: Smt. Kalyani Venkataraman, Chennai
Marathi Translation गाडिग डिंबूग (भूत पिशाचाप्रमाणे) कानुले, गुळाची पोळी, दहीभात मागणाऱ्यांनो आपले उदरभरण करणारे, लोकांना त्रास देवून मृताचा आहार कावळा होऊन खाणाऱ्यांनो, मागून मागून आपले जीवन निरर्थक करु नको. कूडलसंगमावर दृढ विश्वास ठेव. Translated by Shalini Sreeshaila Doddamani
ಶಬ್ದಾರ್ಥಗಳು ಅಂಬಲಿ = ಗಂಜಿ; ಆಯ್ದು = ಆರಿಸಿದ; ಈಡಾಡು = ; ಕುರುಕು = ; ಕೂಳು = ; ದಿಂಬು = ; ನÉರೆ = ; ನಿರರ್ಥ = ; ಪೀಡಿಸು = ; ಬಸುರು = ; ಮುಟ್ಟಿಗೆ = ; ಹುರಿ = ; ಹೊಸಿ = ;
ಕನ್ನಡ ವ್ಯಾಖ್ಯಾನ ಡಿಂಬುಗನೆಂಬ ಗಾಡಿಗನೆಂಬ ಭೂತಗಳು ಜನರ ಮೈಮೇಲೆ ಬರುತ್ತವೆ-ನಮಗಿಂಥ ತಿಂಡಿತಿನಿಸುಬೇಕೆಂದು ಹೇಳುತ್ತವೆ. ಆಗ ಅದನ್ನು ದಿಕ್ಕುದಿಕ್ಕಿಗೆ ಬಲಿ ಎರಚಿದರೆ ಆಯ್ದು ತಿನ್ನುತ್ತವೆ-ಆಗ ಹಿಡಿದ ಭೂತಗಳು ಬಿಡುತ್ತವೆ. ಹೀಗೆ ಮನುಷ್ಯನನ್ನು ಮನೋರೋಗಿಯನ್ನಾಗಿ ಮಾಡುವ ಈ ಭೂತ(ದೆವ್ವ)ಗಳನ್ನು ಜನ ಪೂಜಿಸಿ ಆತ್ಮಾವಮಾನಪಟ್ಟು ವ್ಯರ್ಥಾಯಾಸಕ್ಕೆ ಒಳಗಾಗುತ್ತಿರುವರೆಂದು ಬಸವಣ್ಣನವರು ಕನಿಕರಿಸುತ್ತಿರುವರು. ಈ ಭೂತಗಳಿಗೆ ಪ್ರಿಯವಾದ್ದು ಕೆಚ್ಚುಮುಟ್ಟಿಗೆ, ಹಸುರಂಬಲಿಮುಟ್ಟಿಗೆ, ಹುರಿಬುತ್ತಿ, ಕೆಚ್ಚು ಮುಟ್ಟಿಗೆಯೆಂದರೆ-ಕಾಯಿಪಲ್ಲೆಗಳನ್ನು ಕೆಚ್ಚಿ ಬೇಯಿಸಿ ಕಟ್ಟಿದ ಪಿಡಿಚೆ, ಹಸುರಂಬಲಿಮುಟ್ಟಿಗೆಯೆಂದರೆ-ಹೆಸರುಕಾಳನ್ನು ಮೆತ್ತಗೆ ಬೇಯಿಸಿ ಕಟ್ಟಿದ ಪಿಡಿಚೆ, ಹುರಿಬುತ್ತಿಯೆಂದರೆ-ಹುರಿದ ಧಾನ್ಯಗಳ ಹಿಟ್ಟಿನಿಂದ ಕಟ್ಟಿದ ಹುರಿಟ್ಟು ಮತ್ತು ತಂಬಿಟ್ಟಿನ ಉಂಡೆಗಳು, ಕೂಳಂಬಲಿಯೆಂದರೆ-ಭತ್ತದ ಅಕ್ಕಿಯಿಂದ ಮಾಡಿದ ಗಂಜಿ. ಗಾಡಿಗ-ಡಿಂಬುಗನೆಂಬ ದೆವ್ವಗಳಿಗೆ-ಶಿವ ವಿಷ್ಣು ಮುಂತಾದ ದೇವರುಗಳಣ್ಣುವ ಹಾಲುಂಡೆ ಬೀಸಂಬೂರಿಗೆ ಪರಡಿಪಾಯಸ ಪಕ್ವಾನ್ನ ಮೊಸರೋಗರ ಮೇಲೋಗರಗಳೆಲ್ಲಿ ಲಭ್ಯ? ಇಂಥ ತಿಂದುಕಾಣದ ಹೇಸಿಗೆ ದೆವ್ವಗಳನ್ನು ಬೇಡಿದರೆ-ಅವೇನು ಕೊಟ್ಟಾವು? ಸಚ್ಚಿದಾನಂದಸ್ವರೂಪಿಯಾದ ಶಿವನನ್ನು ಬೇಡು ನಿತ್ಯತ್ವವನ್ನು ಕೊಡುವನೆಂದು ಬಸವಣ್ಣನವರು ಬುದ್ಧಿ ಹೇಳುತ್ತಿರುವರು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು