ಮಾಹೇಶ್ವರನ ಜ್ಞಾನಿಸ್ಥಲ - ಮಾರಿಮಸಣೆ
ಹಾಳು ಮೊರಡಿಗಳಲ್ಲಿ ಊರ ದಾರಿಗಳಲ್ಲಿ,
ಕೆರೆ ಬಾವಿ ಹೂಗಿಡುಮರಂಗಳಲ್ಲಿ,
ಗ್ರಾಮ ಮಧ್ಯಗಳಲ್ಲಿ, ಚೌಪಥ ಪಟ್ಟಣಪ್ರವೇಶದಲ್ಲಿ,
ಹಿರಿಯಾಲದ ಮರದಲ್ಲಿ ಮನೆಯ ಮಾಡಿ,
ಕರೆವೆಮ್ಮೆಯ, ಹಸುಗೂಸು ಬಸುರಿ ಬಾಣತಿ
ಕುಮಾರಿ ಕೊಡಗೂಸೆಂಬವರ ಹಿಡಿದು ತಿಂಬ, ತಿರಿದುಂಬ,
ಮಾರಯ್ಯ ಬೀರಯ್ಯ ಕೇಚರಗಾವಿಲ ಅಂತರ ಬೆಂತರ
ಕಾಳಯ್ಯ ಮಾರಯ್ಯ ದೂಳಯ್ಯ ಕೇತಯ್ಯಗಳೆಂಬ
ನೂರು ಮಡಕೆಗೆ
ನಮ್ಮ ಕೂಡಲಸಂಗಮದೇವ ಶರಣೆಂಬುದೊಂದು ದಡಿ ಸಾಲದೆ?
Transliteration Hāḷu moraḍigaḷalli iruva dārigaḷalli,
kere bāvi hūgiḍu maraṅgaḷalli,
grāmamadhyagaḷalli, caupatha paṭṭaṇapravēśadalli,
hiriyāḷada maradalli maneya māḍi,
karevem'meya, hasugūsu basuri bāṇati
kumāri koḍagūsembavara hiḍidu timba, tiridumba,
mārayya bīrayya khēcaragāvila antara bentara
kāḷayya mārayya dhūḷayya kētayyagaḷemba
nūru maḍakege
nam'ma kūḍalasaṅgamadēva śaraṇembudondu daḍi sālade?
Manuscript
English Translation 2 All those who make their home
In solitary hills, on hamlet roads,
In tanks and wells,
In flowering shrubs and trees,
At the heart of villages,
Wherever four roads meet,
In ancient banyan – trees :
Possessing milch buffaloes,
Babies or pregnant wives,
Or mother’s brought go bed,
Maidens and lads-
Or living off their prey,
Or begging for their food-
Those who are called
Mārayya Bīrayya, sylph,
Goblin or ghoul,
Kāḷayya, Māḷayya, Kētayya:
To all these one hundred pots
Is not one cudgel,
‘Our Lord KudalaSangama
Is the refuge’s Enough ?
Translated by: L M A Menezes, S M Angadi
Hindi Translation उजड़ी पहाडियों पर, ग्रामवीधियों पर-
ताल, कूप, फूल के पौधे और वृक्षों पर,
ग्राममध्य-, नगर- द्वार के चौराहों पर,
विशाल वट-वृक्ष पर घर बनाकर,
दुधारू भैसों, शिशुओं, गर्भिणियों, प्रसूताओं,
कन्याओं और शिशुओं को पकड खानेवाले,
माँगकर खानेवाले, मारय्या, बीरय्या, खेचर, गँवार,
भूत-पिशाच,काळय्या, दूळय्या, माळय्या,
केतय्या आदि सौ मटकों के लिए मम कूडलसंगमदेव को
दंडवत करने का एक डंडा पर्याप्त नहीं है?
Translated by: Banakara K Gowdappa
Telugu Translation పాడుగుడ్డల మథ్య ఊరిదారులనడుమ
చెఱువుబావుల విరిమొల్క మ్రాకుల
గ్రామ మధ్యాంతరముల పట్టణ చౌక ప్రదేశముల
పెనుమఱ్ఱి మ్రాకుల యిల్లుచేసి పాడియెనుము
పాప, బాలెంత, చూలాలు, కుమారి కన్నెలనువారిని
గావుకొనుచు తిరిపెము తిను మారయ్య వీరయ్య
భూత భేతాళ గ్రామదేవతల
కాళయ్య ధూళయ్య పోతయ్యలను
నూరుకుండలకు కూడలసంగమ దేవా!
శరణను యొక వ్రేటు చాలదే?
Translated by: Dr. Badala Ramaiah
Tamil Translation பாழடைந்த கரடுமுரடான இடங்களில் ஊரின் வழிகளில்
நதி, கிணறு, பூச்செடி மரங்களில்
கிராமத்தின் நடுவில், அருவி, நகரின் நுழைவில்
அமர்ந்த ஆலமரத்தில் வீட்டைக்கட்டி, எருமைக்கன்று
சூலுற்றவள், பெற்றவள், பெதும்பை, சிறுவன்
என்போரைப் பிடித்துண்ணும், இரந்துண்ணும்
மாரய்யன், வீரய்யன், கிராமதேவதை,
அந்தரம் பெந்தரம் எனும் பூதங்கள்
காளய்யன், மாரய்யன், மாளய்யன் என்னும்
நூறு பானைகளுக்கு நம் கூடல சங்கம தேவனுக்குத்
தஞ்சம் எனும் ஒரு தடி போதாதோ?
Translated by: Smt. Kalyani Venkataraman, Chennai
Marathi Translation
ओसाड प्रदेशात, गावाच्या वाटेवर,
तलाव, विहिर, फुल-झाडे, वृक्ष
इत्यादीमध्ये गावाच्या मध्यभागी,
नगरांच्या चौकामध्ये, जुन्या वटवृक्षात घर करुन राहणारे (भूत)
दुभती म्हैस, लहान मुले, गर्भवती, बाळंतीण,
कुमारी, कन्या यांच्या मानगुटीवर बसून मागून खाणारे
मारय्या, बीरय्य, केचर, गाविल, अंतरबेंतर, काळय्या, मारय्या,
माळय्या, के तय्या अशा शेकडो मडक्यांसाठी
कूडलसंगमदेव नावाचा एक सोटा पुरेसा होणार नाही का ?
Translated by Shalini Sreeshaila Doddamani
Urdu Translation قریب و دورکبھی خاردار راہوں میں
کبھی اُجاڑ سی بنجر زمین کےدامن میں
کبھی کنوئیں، کبھی پنگھٹ ، کبھی وہ گاؤں میں
عظیم شہرکی پرنورشاہراہوں میں
کبھی و ہ لالہ وگل کےحَسین کنجوں میں
کبھی و ہ برگدِ معصوم کی جٹاؤں میں
جوچھپ کے بھینس کو یا پھول جیسے بچوں کو
کبھی جوحاملہ عورت کو اور زچّہ کو
لہکتی کھیلتی کم عمرمہ جبینوں کو
حسین وشوخ گل اندام باکراؤں کو
تباہ کر تے ہیں ماریّا اور پیریّا
یہ جن یہ بھوت یہ کالیّا اور دھولیّا
نہ جانے اور بھی کتنے ہیں ا ن میں کیتیّا
جہاں میں ایسے شیاطین سینکڑوں ہیں مگر
وجود ان کا ہے مٹی کے برتنوں کی طرح
تمہیں سلام کروں تومرے سلام کےحرف
عصا بنیں گےانہیں توڑ پھوڑ ڈالیں گے
مرےعزیزمرے دیوا کوڈلا سنگم
Translated by: Hameed Almas
ಶಬ್ದಾರ್ಥಗಳು ಕೊಡಗೂಸು = ; ಗಾವಿಲ = ; ತಿರಿ = ; ಪಥ = ; ಬಸುರಿ = ; ಬಾಣತಿ = ; ಬೆಂತರ = ; ಮೊರಡಿ = ; ಹಸುಗೂಸು = ;
ಕನ್ನಡ ವ್ಯಾಖ್ಯಾನ ಹೀಗೆ ಜನರನ್ನು ಪೀಡಿಸುವ ಕ್ಷುದೈವಗಳು ಗಾಡಿಗನೆಂದು ಡಿಂಬುಗನೆಂದು ಎರಡೇ ಅಲ್ಲ-ಮಾರಯ್ಯ ಬೀರಯ್ಯ ಕೇಚರ ಗಾವಿಲ ಅಂತರಬೆಂತರ ಕಾಳಯ್ಯ ಮಾಳಯ್ಯ ಕೇತಯ್ಯ ಎಂದು ಮುಂತಾಗಿ ನೂರಾರಿವೆ. ಇವು ಹಾಳುಬಿದ್ದ ಕಲ್ಲುಗುಡ್ಡಗಳಲ್ಲಿ, ಊರ ದಾರಿಗಳಲ್ಲಿ, ಕೆರೆ ಬಾವಿಗಳ ಕಟ್ಟೆಯ ಮೇಲೆ, ಹೂಗಿಡು ಮರಗಳಡಿಯಲ್ಲಿ, ಗ್ರಾಮಮಧ್ಯದಲ್ಲಿ, ನಾಲ್ಕು ದಾರಿ ಕೂಡುವ ಪಟ್ಟಣಪ್ರದೇಶದಲ್ಲಿ, ದೊಡ್ಡ ದೊಡ್ಡ ಆಲದ ಮರಗಳಲ್ಲಿ ವಾಸಮಾಡುತ್ತವೆಂದೂ-ಮನೆಯಲ್ಲಿ ಎಮ್ಮೆ ಕರೆಯದಿದ್ದರೆ, ಮಗು ಆರೋಗ್ಯ ತಪ್ಪಿದರೆ, ಬಸುರಿಗೆ ಸುಖವಾಗಿ ಹೆರಿಗೆಯಾಗದಿದ್ದರೆ, ಬಾಣಂತಿಗೆ ಶೀತವಾದರೆ-ಈ ಮಾರಯ್ಯ ಬೀರಯ್ಯಗಳದೇ ಕಾಟವೆಂದೂ ಜನ ನಂಬುತ್ತಾರೆ. ಈ ದೆವ್ವಗಳು ಜನ ಎಲ್ಲಿ ಹೋದರಲ್ಲಿ ಎಣ್ಣೆ ಅರಿಸಿಣ ಕುಂಕುಮ ವಿಭೂತಿ ಗಂಧ ಬಳಿದ ಚೂಪುಕಲ್ಲುಗಳಾಗಿ ಕಾಣಿಸಿಕೊಂಡು ಅವರ ಮನಸ್ಸಿನಲ್ಲಿ ಆಳವಾಗಿ ಭಯಂಕರವಾಗಿ ನಟ್ಟಿರುತ್ತವೆ. ಅವಕ್ಕೆ ಎಡೆ ಇಡಬೇಕು. ಬಲಿ ಕೊಡಬೇಕು. ಪೂಜೆ ಮಾಡಬೇಕು. ಇಲ್ಲದಿದ್ದರೆ ದನಕರುಗಳ ಬಸುರಿಬಾಣಂತಿಯರ ಸಣ್ಣಪುಟ್ಟ ಹೆಣ್ಣುಮಕ್ಕಳ ಮೈಮೇಲೆ ಬಂದು ಅವರನ್ನೆಲ್ಲ ಮುರಿದುಕೊಂಡು ಹೋಗುತ್ತವೆ. ಹೀಗೆ ಅಂಜಿಸಿ ಹಿಡಿದು ತಿನ್ನುವ, ತಿರಿದು ತಿನ್ನುವ ಖೂಳದೈವಗಳಲ್ಲಿ ನಂಬಿಕೆಯಿಟ್ಟು ಸದಾ ದುಃಖಿಗಳಾಗದೆ-ಮಂಗಳಕರನಾದ ಮಹಾದೇವಶಿವನೊಬ್ಬನಿಗೇ ಶರಣಾಗತರಾಗಿ ಶಾಶ್ವತಸುಖಿಗಳಾಗಬೇಕೆಂದು ಹೇಳುತ್ತಿರುವರು ಬಸವಣ್ಣನವರು.
ಶಿವಶರಣೆಂಬ ಭಕ್ತಿಭಾವ ಅಂತರಂಗದಲ್ಲಿದ್ದರೆ ಈ ಎಲ್ಲ ಭೂತಗಳೂ ಎಲ್ಲ ದೆವ್ವಗಳೂ ದೊಣ್ಣೆಗೆ ಸಿಕ್ಕಿದ ಹಿಂಡುಮಡಕೆಯ ರಾಶಿಯಂತೆ ಬಿಕ್ಕನೆ ಬಿರಿದು ಚೂರಾಗಿ ಹೋಗುವವೆಂಬುದು ಬಸವಣ್ಣನವರ ಆಶ್ವಾಸನೆ, ಬಸವಣ್ಣನವರು ಜನಸಾಮಾನ್ಯರಿಗೆ ಕೊಟ್ಟ ಬಹಳ ದೊಡ್ಡ ಉಪದೇಶವಿದು. ಜನರ ಹೃದಯಂಗಳದಿಂದ ಭೀತಿಯನ್ನು ತೊಡೆದುಹಾಕಿ_ಭಕ್ತಿಪೀಠವನ್ನು ಹಾಸಿ ಅಲ್ಲಿ ಶಿವಶಂಕರನನ್ನು ಸ್ಥಾಪಿಸಿದ ಮಹತ್ಕಾರ್ಯವಿದು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು