•  
  •  
  •  
  •  
Index   ವಚನ - 557    Search  
 
ಮಾಹೇಶ್ವರನ ಜ್ಞಾನಿಸ್ಥಲ - ದೇವರು
ಅರಗು ತಿಂದು ಕರಗುವ ದೈವವ, ಉರಿಯ ಕಂಡರೆ ಮುರುಟುವ ದೈವವನೆಂತು ಸರಿಯೆಂಬೆನೆಯ್ಯಾ? ಅವಸರ ಬಂದರೆ ಮಾರುವ ದೈವವನೆಂತು ಸರಿಯೆಂಬೆನೆಯ್ಯಾ? ಅಂಜಿಕೆಯಾದರೆ ಹೂಳುವ ದೈವವನೆಂತು ಸರಿಯೆಂಬೆನೆಯ್ಯಾ? ಸಹಜಭಾವ ನಿಜೈಕ್ಯ ಕೂಡಲಸಂಗಮದೇವನೊಬ್ಬನೇ ದೇವ.
Transliteration Aragu tindu karaguva daivava, uriya kaṇḍare muruṭuva daivavanentu sariyembenayyā? Avasara bandare māruva daivavanentu sariyembenayyā? An̄jikeyādare hūḷuva daivavanentu sariyembenayyā? Sahajabhāva nijaikya kūḍalasaṅgamadēvanobbanē dēva।
Manuscript
English Translation 2 How can I feel right about a god who eats up lacquer and melts, who wilts when he sees fire? How can I feel right about gods you sell in your need, and gods you bury for fear of thieves? The lord of the meeting rivers, self-born, one with himself, he alone is the true god.

Translated by: A K Ramanujan
Book Name: Speaking Of Siva
Publisher: Penguin Books
----------------------------------
How can I admire The gods that wane bro eaten by lac; The gods that shrivel on seeing the flames? How can I admire The gods who are sold away if circumstances compel ; The gods who are buried if they are feared? KudalaSangama is the only God that is self existant and United with the very self. Translated by: L M A Menezes, S M Angadi

Hindi Translation लाख खाकर गलनेवाले देव को आग देखने पर सिकुडनेवाले देव को कैसे सत्य मानूँ? समय पड़ने पर बिक जानेवाले देवों को कैसे सत्य मानूँ? भय लगने पर गड़ जानेवाले देवों को कैसे सत्य मानूँ? स्वभावसिद्ध आत्मलीन कूडलसंगमदेव ही एक मात्र देव है ॥ Translated by: Banakara K Gowdappa
Telugu Translation లక్కతిని కరిగెడి దేవుని మంట చూచి ముదురుకొను దేవుని సరియను టెట్టులయ్యా? ఆపదవచ్చిన అమ్ముడుబడు దేవుని సరియను టెట్టులయ్యా? భయమున దిగజారు దేవుని యెట్లు సరియందునయ్యా! సహజభావ నిజై క్యుడు కూడల సంగమదేవుడొక్కడే దేవుడు Translated by: Dr. Badala Ramaiah
Tamil Translation அரக்கை உண்டு கரையும் கடவுளை எங்ஙனம் சரி என்பேன் ஐயனே? தீயைக் காணின் கரிந்துடபோகும் கடவுளை எங்ஙனம் சரி என்பேன் ஐயனே? அவசரம் எனின் விற்கும் கடவுளை எங்ஙனம் சரி என்பேன் ஐயனே? அச்சம் ஏற்படின் புதையும் கடவுளை எங்ஙனம் சரி என்பேன் ஐயனே உண்மையான பரம்பொருளான கூடல சங்கம தேவன் ஒருவனே கடவுள் Translated by: Smt. Kalyani Venkataraman, Chennai
Marathi Translation लाखाने घडली मूर्ति तो पघळे देवत्व कैसे अग्नीत वितळे गरजेनुसार जे जाती विकले सांगा तयाना का देव मानू ? भीतीने दडती मातीत लपती सोन्या चांदीच्या ऐशाच मूर्ती सहज भावे निर्जक्य असती कूडलसंगमदेव देवास मानू अर्थ - लाथ भरून केलेल्या मूर्त्या अग्नीत वितळून जातात. जातात. सोने चांदी इतर धातूच्या मूर्ति संकट काळी जमीनीत गाडल्या जातात. वा लपविल्या जातात. तसेच प्रसंगी त्या विकल्याही जातात. अशा मूर्तिना मी देव कसे मानू ? म्हणून सहज भावे नीजैक्य असणारा माझा कूडलसंगमदेवच मला वंदनीय व पूजनीय आहे. शिवाय तो निरवयव, निराकार व निर्विचार असा असल्यामुळे तो विकला किंवा लपविला जाऊ शकत नाही. Translated by Rajendra Jirobe, Published by V B Patil, Hirabaug, Chembur, Mumbai, 1983 लाख भरलेली वितळणारी देवमूर्ती, तुमच्या समान कशी म्हणावी देवा ? आगीत जळून जाणारी देवमूर्ती, तुमच्या समान कशी म्हणावी देवा ? वेळप्रसंगी विकली जाणारी देवमूर्ती तुमच्या समान कशी म्हणावी देवा? भिती वाटते म्हणून पुरली जाणारीदेवमूर्ती तुमच्या समान कशी म्हणावी देवा? सहजभाव निजैक्य कूडलसंगमदेव एकच देव आहे. Translated by Shalini Sreeshaila Doddamani
ಶಬ್ದಾರ್ಥಗಳು ಅಂಜಿಕೆ = ಹೆದರುವುದು, ಭಯ; ಅರಗು = ; ಭಾವ = ; ಮುರುಟು = ; ಹೂಳು = ;
ಕನ್ನಡ ವ್ಯಾಖ್ಯಾನ ಕ್ಷುದ್ರದೇವತೆಗಳ ಕುರಹಾಗಿ ಜನ ತಾಯತಗಳನ್ನು ಕೊರಳಿಗೆ ತೋಳಿಗೆ ಮುಂಗೈಗೆ ಕಟ್ಟಿಕೊಳ್ಳುವರು. ಅವನ್ನು ಕುರಿತಿಲ್ಲಿ ಬಸವಣ್ಣನವರು ಗೇಲಿಮಾಡುತ್ತಿರುವರು. ಅರಗು ತುಂಬಿದ ತಾಯತವಾದರೆ ಅರಗು ಸವೆದಂತೆಲ್ಲ ತಾಯತ ಜಜ್ಜಿ ಹೋಗುವುದು, ಮತ್ತೆ ಕೆಲವು ತಾಯತಗಳು ಓಲೆಗರಿಯದೋ ನೂಲಿನದೋ ಆದರೆ-ಬೆಂಕಿಯ ಶಾಖ ತಗುಲಿದಾಗ ಮುರುಟಿ ಹೋಗುವುವು, ಮತ್ತೆ ಕೆಲವು ತಾಯತ ಬೆಳ್ಳಿಯದೋ ಚಿನ್ನದ್ದೋ ಆದರೆ ಅವು ಸಾಲಕ್ಕೆ ಒತ್ತೆಯಾಗುವವು, ಬಡತನ ಬಂದರೆ ಮಾರಾಟವಾಗುವುವು, ಯಾರಾದರೂ ಕದ್ದಾರೆಂಬ ಭಯವಾದರೆ ನೆಲದಲ್ಲಿ ಹೂತುಹೋಗುವವು. “ನೈನಂ ಛಿಂದಂತಿ ಶಸ್ತ್ರಾಣಿ ನೈನಂ ದಹತಿ ಪಾವಕಃ| ನ ಚೈನಂಕ್ಲೇದಯತ್ಯಾಪಃ ನ ಶೋಷಯತಿ ಮಾರುತಃ”-ಎಂಬಂಥ ದಿವ್ಯಕಲ್ಪನೆಯ ಮುಂದೆ ಈ ಅಂತ್ರಯಂತ್ರದ ದೇವತೆಗಳು ಅಕ್ಷರಶಃ ಕ್ಷುದ್ರವಾಗಿ ಕಾಣುವವೆಂಬುದರಲ್ಲಿ ಆಶ್ಚರ್ಯವಿಲ್ಲ-ಕೃತ್ರಿಮವಿಲ್ಲದ ನಮ್ಮ ಭಾವದಲ್ಲಿ ಅಡಗಿ ಐಕ್ಯವಾಗಿರುವ ಶಿವಭಾವನೆಗೆ ಸಮಾನವಾದ ದೈವ ಮತ್ತೊಂದಿಲ್ಲವೆಂಬುದು ಬಸವಣ್ಣನವರ ಖಚಿತವಾದ ನಿಲವು. ಸಹಜಭಾವದಲ್ಲಿ ಶಾಂತವಾಗಿ ನಿಲ್ಲದೆ-ಭಯಭೀತಿಯ ವಿಸ್ತಾರದಲ್ಲಿ ಹಲ್ಲುಕಿರಿದು ಕಣ್ಣು ಕೆಂಪಗೆ ಮಾಡಿರುವ ದೈವ(ಭಾವ)ವು ದೆವ್ವವಲ್ಲದೆ ದಿವ್ಯವಲ್ಲ. ದೈವದ ಬಗೆಗಿರುವ ಬಸವಣ್ಣನವರ ಈ ನಿಲವು ತಾತ್ತ್ವಿಕವಾಗಿಯೂ ಸಾಮಾಜಿಕವಾಗಿಯೂ ಆಯಾಮಗಳನ್ನು ಪಡೆದು ಆದರಣೀಯವಾಗಿದೆ. ಶಿವನ ಪ್ರತಿಮೆಯಾದ ಲಿಂಗದ ಬಗೆಗೂ ಬಸವಣ್ಣನವರು ಕಟುವಾಗಿರಬಲ್ಲರು-ನೋಡಿ ವಚನ-195. ಈ ವಚನದಲ್ಲಿ-“ಅರಗುತಿಂದು ಕರುಗುವ ದೈವ”ವೆಂದು ಮುಂತಾಗಿ ಮಾತನಾಡುವ ಬಸವಣ್ಣನವರ ಮನಸ್ಸಿನಲ್ಲಿರುವುದು-ಅರಗಿನಲ್ಲಿ ಮರದಲ್ಲಿ ಲೋಹದಲ್ಲಿ ಮಾಡಿದ ಆ ಕ್ಷುದ್ರದೇವತೆಗಳ ಮುಖಾಕೃತಿಗಳೋ ವಿಗ್ರಹಗಳೋ ಆಗಿರಲೂ ಬಹುದು. ಮುಂದಿನ ವಚನವನ್ನು ಪರಿಶೀಲಿಸಿದರೆ-ಅವು ಕೊರಳಲ್ಲಿ ಕಟ್ಟಿಕೊಳ್ಳುವಂಥ ವಿವಿಧಾಕಾರದ ಮುಖಾಕೃತಿಗಳೇ ಇರಬೇಕೆನಿಸುವುದು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು